ಮಂಗಳವಾರ, ಡಿಸೆಂಬರ್ 20, 2011

ಕನ್ನಡಿಗರು ಹಿಂದಿಯನ್ನು(ಸಂವಹನ ಬಾಶೆಯಾಗಿಯೂ ಕೂಡ) ಯಾಕೆ ಒಪ್ಪಬಾರದು?

ಮೊನ್ನೆ ಕನ್ನಡ ಪ್ರಭದಲ್ಲಿ ಚಂದ್ರಶೇಖರ ಕಂಬಾರರ ಬಗೆಗೆ ಮೂಡಿ ಬಂದ ವರದಿಯೊಂದರ ಬಗ್ಗೆ ನನ್ನ ಪ್ರತಿಕ್ರಿಯೆ:-

"ಬಾರತೀಯರು, ರಾಶ್ಟ್ರೀ ಯ ವಿಷಯಗಳು ಬಂದಾಗ ಹಿಂದಿ ಬಳಸಬೇಕು ಎಂಬುದು"-
ಹೀಗೆ ಹೇಳುವುದರಿಂದ ರಾಷ್ಟ್ರೀಯ ವಿಷಯಗಳನ್ನು ಕನ್ನಡದಲ್ಲಿ ಹೇಳಲಾಗದು ಎಂಬ ಕೀಳರಿಮೆಯನ್ನು ನಾವೇ ಕನ್ನಡದಲ್ಲಿ ಬಿತ್ತಿದಂತಾಗುವುದಿಲ್ಲವೆ? ಭಾರತದಲ್ಲಿದ್ದು, ಕನ್ನಡಿರಾಗಿದ್ದುಕೊಂಡು ಮತ್ತು ಕನ್ನಡದ ಹಿರಿಮೆಯನ್ನು ಬಲ್ಲ ಕನ್ನಡಿಗರು ಹಿಂದಿಯಲ್ಲಿ ಸಂವಹನ ಮಾಡುವುದು ಇಂಗ್ಲಿಶಿನಲ್ಲಿ ಸಂವಹನ ಮಾಡಿದಶ್ಟೆ ಕ್ರುತ್ರಿಮ ಮತ್ತು ಕೀಳ್ತನವಾಗುವುದಿಲ್ಲವೆ?. ಯಾವ ತರದಲ್ಲಿ ನೋಡಿದರೂ ಕನ್ನಡಕ್ಕಿಂತ ಹಿಂದಿ ಮಿಗಿಲಲ್ಲ. ಯಾವುದೇ ವಿಶಯವಲ್ಲಾಗಲಿ ಇಂತಹ ನುಡಿಯನ್ನು ಬಳಸಬೇಕೆಂದು ಹೇಳುವುದು ಮಂದಿಯಾಳ್ವಿಕೆಯ ಬಯಕೆಗಳಿಗೆ ವಿರೋಧವಾಗಿದೆ.

ಇನ್ನು ಶ್ರೀ ಸಿದ್ದಲಿಂಗ ಪಟ್ಟಣಶೆಟ್ಟಿಯವರು ಮುಂದೆ ಹೋಗಿ ಕನ್ನಡ ಸಾಹಿತ್ಯದ ಪ್ರಚಾರಕ್ಕೆ ಕನ್ನಡಿಗರು ಹಿಂದಿಯನ್ನು ಸಂವಹನ ಭಾಷೆಯಾಗಿ ಸ್ವೀಕರಿಸಲೇಬೆಕು ಎಂದು ಹೇಳಿದ್ದಾರೆ. ಹಿಂದಿಗೂ ಹಲವು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿವೆ. ಹಿಂದಿ ಸಾಹಿತ್ಯದ ಪ್ರಚಾರಕ್ಕಾಗಿ ಹಿಂದಿಗರು ಕನ್ನಡ ಕಲಿಯುತ್ತಿದಾರೆಯೆ? ನಾವೇ ಏಕೆ ಹಿಂದಿ ಕಲಿಯಬೇಕು? ಇಶ್ಟಕ್ಕೂ ಇಂತಹ ಸಾಹಿತ್ಯ ಪ್ರಚಾರಕ್ಕಾಗಿ ಹಿಂದಿ ಕಲಿಯಬೇಕಿರುವ ಕನ್ನಡಿಗರ ಎಣಿಕೆ ಎಶ್ಟಿರಬೇಕು? ತೀರ ಕಡಿಮೆ ಜನಕ್ಕೆ ಬೇಕಾದ ಈ ಅವಶ್ಯಕತೆಗೆ ಇಡೀ ಕನ್ನಡಿಗರೇ ಏಕೆ ಹಿಂದಿಯನ್ನು ಸ್ವೀಕರಿಸಬೇಕು? ಒಂದು ವೇಳೆ ಹೀಗೆ ಸ್ವೀಕರಿಸಿದರೆ ಕನ್ನಡಿಗರಿಗೆ ಮತ್ತು ಕನ್ನಡಕ್ಕೆ ಇದರಿಂದ ಆಗುವ ತೊಂದರೆಗಳ ಬಗ್ಗೆ ಇವರು ಚಿಂತಿಸಿದ್ದಾರೆಯೆ?

ಈ ಎಲ್ಲ ಕೇಳ್ವಿಗಳಿಗೆ ಉತ್ತರ ಹುಡುಕಲು ಹೊರಟಾಗ ಸಿಗುವುದು ಈ ಉತ್ತರಗಳು
* ೦.೦೧% ಮಂದಿಗೆ ಬೇಕಾದ ಈ ಸಾಹಿತ್ಯದ ಅನುವಾದದ ಕೆಲಸಕ್ಕೆ ಎಲ್ಲ ಕನ್ನಡಿಗರು ಹಿಂದಿಯನ್ನು ಸಂವಹನ ಬಾಶೆಯಾಗಿ ಒಪ್ಪುವುದು ಎಂದೂ ವೈಗ್ನಾಕವಲ್ಲ.
* ಈ ರೀತಿ ಸಂವಹನ ಬಾಶೆಯಾಗಿ ಹಿಂದಿ ನುಸುಳಿದರೆ ಇದರಿಂದ ಕನ್ನಡಕ್ಕೆ, ಕನ್ನಡಿಗರಿಗೆ ಮುಂದೆ ಅಪಾಯ ಕಾದಿದೆ. ಯಾಕಂದರೆ ಹಿಂದಿಯನ್ನು ಕನ್ನಡಿಗರು ಒಪ್ಪಿದರೆ ಇದು ತಂಡತಂಡವಾಗಿ ಹಿಂದಿಗರ ವಲಸೆಗೆ ಕಾರಣವಾಗಿ
ಕನ್ನಡಿಗರ ತಮ್ಮ ನಾಡಿನಲ್ಲೇ ತಬ್ಬಲಿಗಳಾಗಬಹುದು.
* ಈವತ್ತಿಗೂ ಉತ್ತರಬಾರತದಲ್ಲಿ ದಕ್ಶಿಣ ಬಾಶೆಗಳನ್ನು ಕಲಿಸಲಾಗುತ್ತಿಲ್ಲ. ಎಶ್ಟೊ ಉತ್ತರ ಬಾರತೀಯರಿಗೆ ದಕ್ಶಿಣ ಬಾಶೆಗಳ ಪರಿಚಯವೇ ಇಲ್ಲ. ನಾವೇ(ಕನ್ನಡಿಗರೇ) ಯಾಕೆ ಮೇಲೆ ಬಿದ್ದು ಹಿಂದಿ ಕಲಿತು ಅವರಿಗೆ (ಹಿಂದಿಗರಿಗೆ) ಅನುಕೂಲ ಮಾಡಿಕೊಡಬೇಕು.
* ಹಿಂದಿಯನ್ನು ಸಂವಹನ ಬಾಶೆಯಾಗಿ ಒಪ್ಪಿದರೆ ಕರ್ನಾಟಕದಲ್ಲಿ ಹಿಂದಿಗರು ಬಂದು "ನಿಮಗೆ ಹೇಗಿದ್ದರೂ ಹಿಂದಿ ಗೊತ್ತಿದೆಯಲ್ಲ, ಕರ್ನಾಟಕದಲ್ಲೂ ಹಿಂದಿಯಲ್ಲೇ ಮಾತನಾಡಿ" ಅಂದರೆ ಮುಗೀತು. ಅಲ್ಲಿಗೆ ಕನ್ನಡ, ಕರ್ನಾಟಕ ಅಳಿದು ಹಿಂದಿ ನಾಡಾಗುವುದರಲ್ಲಿ ಎರಡು ಮಾತಿಲ್ಲ.

ಕನ್ನಡಿಗರೆಲ್ಲರೂ ಹಿಂದಿಯನ್ನು(ಸಂವಹನಕ್ಕೆ)ಒಪ್ಪಬೇಕೆನ್ನುವುದು ಕನ್ನಡ ವಿರೋದಿ ನಿಲುವಲ್ಲದೆ ಮಂದಿಯಾಳ್ವಿಕೆಯ ವಿರೋಧಿ ನಿಲುವು ಕೂಡ ಎಂಬುದನ್ನು ಮಹನೀಯರು ಕನ್ನಡಿಗರು ಇನ್ನಾದರೂ ಅರಿಯಲಿ.

ಶನಿವಾರ, ಡಿಸೆಂಬರ್ 03, 2011

ಲಿಪಿ ಸರಳಿಸುವಿಕೆ - ಬಿಡಿ ೨




ಹೋದ ಭಾನುವಾರ(27 ನವೆಂಬರ್ 2011) ಸಾಪ್ತಾಹಿಕ ಲವಲvk ಯಲ್ಲಿ ಪ್ರಕಟಾವಾದ ಡಾ ಉದಯರವಿ ಶಾಸ್ತ್ರಿ ಅವರ ಬರಹಕ್ಕೆ ಪ್ರತಿಕ್ರಿಯೆ -

ಬರಹಗಾರರು ’ಇಂದಿನಿಂದ ಋ ಎಂಬ ಅಕ್ಷರವನ್ನು ಶಾಲೆಗಳಲ್ಲಿ ಬೋದಿಸಬಾರದು, ಪಠ್ಯದಲ್ಲಿ ಸೇರಿಸಬಾರದು’ ಎಂಬಂತಹ ಆಜ್ಞೆಗಳನ್ನು ಹೊರಡಿಸಲು ಬರುವುದಿಲ್ಲ’ ಎಂದು ಹೇಳುತ್ತಾರೆ.ಆದರೆ ಈಗ ಇರುವ ಹೊಸಗನ್ನಡದ ಅಕ್ಷರಮಾಲೆಯಲ್ಲಿ ಇಂತಿಶ್ಟೆ ಅಕ್ಷರಗಳು ಇರಬೇಕು. ಅದರಲ್ಲಿ ಇಶ್ಟೆ ಸ್ವರಗಳು, ಇಶ್ಟೆ ವ್ಯಂಜನಗಳು ಇರಬೇಕು ಎಂದು ಸೆಲವು/ಆಜ್ಞೆ ಹೊರಡಿಸಿದವರು ಯಾರು? ಹಳೆಗನ್ನಡದಲ್ಲಿರದ ’ಋ’, ’ಷ’ ಎಂಬ ಅಕ್ಷರಗಳನ್ನು ಹೊಸಗನ್ನಡಕ್ಕೆ ’ಯಾವುದೊ ಒಂದು ದಿನ’ ಆಜ್ಞೆ ಹೊರಡಿಸರಲೇ ಬೇಕಲ್ಲವೆ? ಹೊರಡಿಸಿದ್ದಾರೆ. ಅಂದ ಮೇಲೆ ಮಹಾಪ್ರಾಣ, ಋ, ಷ, ಃ - ಇವುಗಳನ್ನು ಕನ್ನಡ ಬರಹದಿಂದ ಕೈ ಬಿಡಿಲಾಗಿದೆ ಎಂದು ಆಜ್ಞೆ ಯಾಕೆ ಹೊರಡಿಸಲು ಬರುವುದಿಲ್ಲ ಎಂದು ಉದಯರವಿಯವರೇ ತಿಳಿಸಬೇಕು.
ದಿಟವಾಗಲೂ ಯಾವುದೇ ನುಡಿಗೆ ಆಗಲಿ ಯಾವುದೊ ಒಂದು ಕಾಲಗಟ್ಟದಲ್ಲಿ ಎಶ್ಟು ಅಕ್ಷರಗಳು ಆ ನುಡಿಗೆ ಬೇಕು. ಅದರ ರೂಪುರೇಶೆಗಳೇನು ಎಂದು ನಿಗದಿಪಡಿಸಲೇಬೇಕಾಗುತ್ತದೆ. ಇದು ಎಲ್ಲ ನುಡಿಗಳಲ್ಲೂ ನಡೆಯುತ್ತದೆ. ಪ್ರೆಂಚಿಗೆ ಅಕೆಡಿಮಿಯ ಪ್ರಾಂಕ್ ಇದೆ, ಬೇರೆ ಬೇರೆ ಭಾಷೆಗಳಿಗೆ ಅವುಗಳದೇ ಆದ ಭಾಷಾ ಸಂಬಂಧಿಸಿದ ಸಂಸ್ಥೆಗಳಿವೆ. ಆದರೆ ಆ ನುಡಿಯ ಮಾತು ಇಲ್ಲವೆ ಉಲಿಕೆಯರಿಮೆಯನ್ನು ಬಿಡಿಯರಸಿ ಒಂದು ಬರಹವನ್ನು ಸಿದ್ದಪಡಿಸಿದರೆ ಅದು(ಲಿಪಿ) ವೈಜ್ಞಾನಿಕವಾಗಿರುತ್ತದೆ. ಅಲ್ಲದೆ ಅಂತಹ ಬರಹ ಆ ನುಡಿಯಾಡುವ ಮಂದಿಗೆ ಹೆಚ್ಚು ಬಳಕೆಗೆ ಬರುತ್ತದೆ.

ಇನ್ನು ಲಿಪಿ ಸರಳಿಸುವಿಕೆಯನ್ನು ’ಪ್ರಿಸ್ಕ್ರಿಪ್ಟಿವ್’ ಎಂಬ ಆರೋಪ ಮಾಡಲಾಗುತ್ತಿದೆ. ಆದರೆ ದಿಟವಾಗಲು ನೋಡಿದರೆ ಲಿಪಿ ಸರಳಿಸುವಿಕೆ ಒಂದು ’ಡಿಸ್ಕ್ರಿಪ್ಟಿವ್’ ಪ್ರಯತ್ನವೇ ಹೊರತು ಪ್ರಿಸ್ಕ್ರಿಪ್ಟಿವ್ ಆಗಲಾರದು ಯಾಕಂದರೆ ಈಗಿರುವ ಬರಹದಲ್ಲಿರುವ ’ಷ’,ಮಹಾಪ್ರಾಣ, ಃ, ಋ ಇವುಗಳೆಲ್ಲ ಕನ್ನಡದ ಮಾತಿನಲ್ಲಿಲ್ಲ. ಆದರೂ ಅಕ್ಷರಮಾಲೆಯನ್ನು ಸಿದ್ದಪಡಿಸುವಾಗ ಇದನ್ನು ’ಪ್ರಿಸ್ಕ್ರಿಪ್ಟಿವ್’ ಆಗಿ ಹೇರಲಾಯಿತು. ಅಂದರೆ ಸಂಸ್ಕೃತದಲ್ಲಿರುವ ಋ, ಷ ಮತ್ತು ಮಹಾಪ್ರಾಣ ಕನ್ನಡದ್ದಲ್ಲಿರಲೇಬೇಕು ಎಂಬ ತಪ್ಪು ತಿಳುವಳಿಕೆಯೇ ಇದಕ್ಕೆ ಕಾರಣ. ಆದರೆ ಇದರಿಂದ ಕನ್ನಡ ಬರಹದಲ್ಲಿ ಗೊಂದಲ ಉಂಟಾಗಿದೆ. ಇದಕ್ಕೆ ಲಿಪಿ ಸರಳಿಸುವಿಕೆ ಬೇಕು. ಇನ್ನು ಗಣಿತದ ಲೆಕ್ಕಕ್ಕೆ ಅನುಗುಣವಾಗಿ ಕನ್ನಡ ಅಕ್ಷರಗಳಿರಬೇಕೆ? ಕಡಿಮೆ ಅಕ್ಷರಗಳು ಇಲ್ಲವೆ ಹೆಚ್ಚು ಅಕ್ಷರಗಳಿರಬೇಕು ಎನ್ನುವ ವಾದ ಸರಿಯಿಲ್ಲ. ಇದರಿಂದ ಕನ್ನಡ ಬರಹವನ್ನು ನಿರ್ದರಿಸಲಾಗುವುದಿಲ್ಲ. ನಿರ್ದರಿಸಲೂ ಬಾರದು. ಕನ್ನಡ ಉಲಿಕೆಯರಿಮೆಯೇ (phonetics) ಕನ್ನಡ ಬರಹಕ್ಕೆ ಅಡಿಪಾಯವಾಗಬೇಕು.
’ಭಾಷೆಗೆ ತನ್ನದೇ ಆದ ಧಾರಣ ಶಕ್ತಿ ಇರುತ್ತದೆ..ಅದು ತಾನಾಗಿಯೇ ಸ್ವೀಕಾರ -ತಿರಸ್ಕಾರಗಳನ್ನು ನಿರ್ದರಿಸುತ್ತದೆ" ಎಂದು ಅವರು ಹೇಳಿದ್ದಾರೆ. ಇದು ಅವರು ಭಾಷೆಯನ್ನು ಮಾತು ಎಂಬ ಅರ್ಥದಲ್ಲಿ ಹೇಳಿದ್ದರೆ ಸರಿ. ಆದರೆ ಭಾಷೆ ಎಂದರೆ ಬರಹ ಎಂಬ ಅರ್ಥವೂ ಇರುವುದರಿಂದ ಅದಕ್ಕೆ ಈ ಮೇಲಿನ ಹೇಳಿಕೆ ಹೊಂದುವುದಿಲ್ಲ. ಯಾವುದೇ ಭಾಷೆಗೆ ಒಂದು ಬರಹವನ್ನು ನಿರ್ಧರಿಸುವುದು/ನಿಗದಿಪಡಿಸುವುದು ಒಂದು ಗುಂಪೇ. ಈಗಿರುವ ಕನ್ನಡಕ್ಕೆ ಬರಹವನ್ನು ನಿಗದಿಪಡಿಸಿದ್ದು ಒಂದು ಗುಂಪೇ. ನಡುಗನ್ನಡ ಬರಹದಲ್ಲಿ ’ಱ’/ೞ ಎಂಬ ಅಕ್ಶರಗಳನ್ನು ಮೊದಲು ಬಿಟ್ಟಿದ್ದು ಹರಿಹರನೊಬ್ಬನೇ. ಆದರೆ ಮಾತಿನಲ್ಲಾಗುವ ಬದಲಾವಣೆಗೆ ಕಡಿವಾಣ ಹಾಕಲಾಗುವುದಿಲ್ಲ. ಸಾಮಾನ್ಯ ಮಂದಿಗೆ ಸಂಸ್ಕ್ರುತಜನ್ಯ ಮತ್ತು ಕನ್ನಡದ್ದೇ ಆದ ಪದಗಳಲ್ಲಿರುವ ಬೇರೆತನ ಗುರುತಿಸಲಾಗುವುದಿಲ್ಲ ಎಂದು ಅವರು ಹೇಳುತ್ತಾರೆ. ಆದರೆ ಸಂಸ್ಕ್ರುತಜನ್ಯ ಪದಗಳು ಸಂಸ್ಕ್ರುತದಲ್ಲಿರುವ ಹಾಗೆ ನಮ್ಮ ಕನ್ನಡ ಮಾತಿನಲ್ಲಿರುವುದಿಲ್ಲ. ಉದಾಹರಣೆಗೆ ಸಂಸ್ಕೃತದ ಮಹಾಪ್ರಾಣಗಳು ಕನ್ನಡಿಗರ ಮಾತಿನಲ್ಲಿ ಅಲ್ಪಪ್ರಾಣವಾಗುತ್ತದೆ. ಇದು ಕನ್ನಡದ ಮಾತಿನ ಹರಿವು.
ಕೊನೆಗೆ, ಕನ್ನಡದ ಒಳನುಡಿಗಳು ಕನ್ನಡವನ್ನು ಒಡೆಯುತ್ತವೆ ಎಂಬ ಅಭಿಪ್ರಾಯದಲ್ಲಿ ಅವರು ಹೇಳಿದ್ದಾರೆ. ಒಳನುಡಿಗಳಲ್ಲಿ ಬೇರೆತನವಿರುವುದು ಕೊರತೆಯಲ್ಲ ಇಲ್ಲವೆ ತಪ್ಪಲ್ಲ. ಇದೇ ಕಾರಣ ಒಡ್ಡಿ ಕನ್ನಡದ ಒಳನುಡಿಗಳಿಂದ ದೂರ ಸರಿಯುವುದು ಕೂಡ ಸರಿಯಿಲ್ಲ. ಎಲ್ಲ ಒಳನುಡಿಗಳಿಗೂ ಕಾಮನ್ ಆಗಿರುವ ಒಂದು ಕನ್ನಡ(ಬರಹಗನ್ನಡ) ನುಡಿ ಇದ್ದೇ ಇರುತ್ತದೆ. ಇದೆ. ಅದು ಕೆಲವರಿಗೆ ಹತ್ತಿರವಿರಬಹುದು ಕೆಲವರಿಗೆ ಸೊಲ್ಪ ದೂರವಿರಬಹುದು. ಆದರೆ ಸಂಸ್ಕೃತದ ಹಾಗೆ ಇಲ್ಲವೆ ಇಂಗ್ಲಿಶಿನ ಹಾಗೆ ತುಂಬ ದೂರವಿಲ್ಲ..... ನಮ್ಮ ನಮ್ಮ ಕನ್ನಡಗಳಲ್ಲಿ ಬೇರೆತನವಿದೆಯೆಂದು ತೀರ ದೂರದಲ್ಲಿರುವ ಸಂಸ್ಕೃತದ ಇಲ್ಲವೆ ಇಂಗ್ಲಿಶಿನ ಸೊಲ್ಲರಿಮೆ/ವ್ಯಾಕರಣವನ್ನು ಹೇರುವುದು ಎಶ್ಟು ಸರಿ? ಮೈಸೂರಿನವರಿಗೆ ಹುಬ್ಬಳ್ಳಿಯ ಕನ್ನಡದಲ್ಲಿ ಮಾತಾಡಿದರೆ ಅರ್ಥವಾಗುತ್ತದೆ. ಆದರೆ ಸಂಸ್ಕೃತದಲ್ಲಿ ಮಾತಾಡಿದರೆ ಮೈಸೂರಿನವರಿಗಾಗಲಿ , ಹುಬ್ಬಳ್ಳಿಯವರಿಗಾಗಲಿ ಅರ್ಥವಾಗುವುದೇ ಇಲ್ಲ. ಮೈಸೂರಿನವರಿಗೆ ಹುಬ್ಬಳ್ಳಿಯ ಕನ್ನಡ ಸಂಸ್ಕೃತಕ್ಕಿಂತ ಹತ್ತಿರವಿದೆ. ಹಾಗಾಗಿ ’ಕಾಮನ್’ ಆಗಿರುವ ಕನ್ನಡವನ್ನು ಹೆಚ್ಚು ಹೆಚ್ಚು ಕನ್ನಡದ ಒಳನುಡಿಗಳಿಗೆ ಒಗ್ಗಿಸುವುದೇ ನಮಗಿರುವ ದಾರಿ. ಅದಕ್ಕೆ ಹೆಚ್ಚು ಹೆಚ್ಚು ಕನ್ನಡದ ಒಳನುಡಿಗಳ ಸಂಶೋಧನೆ ಮತ್ತು ಓದು ನಡೆಯಬೇಕಿದೆ. ಈ ಸಂಶೋಧನೆಗಳಿಂದ ಕಲೆ ಹಾಕಿದ ಅರಿವನ್ನು ಮಕ್ಕಳ ಕಲಿಸುವಾಗ ಬಳಸಿಕೊಳ್ಳಬಹುದು. ಇದರಿಂದ ಕಲಿಕೆ ಹೆಚ್ಚು ಪರಿಣಾಮಕಾರಿಯಾಗುತ್ತದೆ.
ಮಾತಿನಲ್ಲಾಗುವ ಬದಲಾವಣೆಗೆ ಯಾರ ಹಿಡಿತವೂ ಇಲ್ಲ. ಆದರೆ ಬರಹದಲ್ಲಾಗುವ ಬದಲಾವಣೆಗೆ ಹಿಡಿತವಿದ್ದೇ ಇರುತ್ತದೆ. ಈಗ ಬಳಸುತ್ತಿರುವ ಬರಹಕ್ಕೂ ಒಂದು ಕಾಲಗಟ್ಟದಲ್ಲಿ ’ಲಿಪಿ’ಯನ್ನು ಯಾರೊ ಒಬ್ಬರು ಇಲ್ಲವೆ ಒಂದು ಚಿಕ್ಕ ಗುಂಪೇ ನಿರ್ದರಿಸಿದೆ.

ಭಾನುವಾರ, ನವೆಂಬರ್ 27, 2011

ಕನ್ನಡ ಲಿಪಿ ಸರಳಿಸುವಿಕೆ - ಒಂದು ಪ್ರತಿಕ್ರಿಯೆ



ವಿಜಯ ಕರ್ನಾಟಕದಲ್ಲಿ ೨೦ ನವೆಂಬರ್ ೨೦೧೧ ರಂದು ಪ್ರಕಟವಾದ ಶ್ರೀ ಎಮ್.ಆರ್.ಪಿ. ರವಿಕಿರಣ್ ಅವರ ’ಲಿಪಿ ಸರಳೀಕರಣ: ಅತಿರೇಕದ ಮುನ್ಸೂಚನೆ’(ಅದರ ಪ್ರತಿ ಈ ಮಿಂಚೆಯೊಂದಿಗೆ ಅಂಟಿಸಲಾಗಿದೆ) ಈ ಬರಹಕ್ಕೆ ಪ್ರತಿಕ್ರಿಯೆ.

ಮೊದಲಿಗೆ, ರವಿಕಿರಣ್ ಅವರೇ ಹೇಳುವಂತೆ ಅವರಿಗೆ ನುಡಿಯ ಬಗೆಗಿನ ಹುರುಪು, ಆಸಕ್ತಿ ತೀರ ಇತ್ತೀಚಿನದು. ಆದ್ದರಿಂದ ಅವರ ಬರಹದಲ್ಲಿ ತಾನಾಗಿಯೇ ಆಗಿರುವ ಹಲವು ತಪ್ಪುಗಳನ್ನು ಎತ್ತಿ ತೋರಬೇಕಾಗಿದೆ.
ಇದಲ್ಲದೆ ಅವರು ತಮ್ಮ ವಾದಗಳನ್ನು ಸಮರ್ಥಿಸಿಕೊಳ್ಳಲು ಯಾವ ನುಡಿಯರಿಗರ/ಭಾಷಾವಿಜ್ಞಾನಿಗಳ ಯಾವ ಕೆಲಸವನ್ನು ಉದಾಹರಿಸಿಲ್ಲ. ಇದರಿಂದಲೇ ಗೊತ್ತಾಗುವುದು ಅವರು ತಮ್ಮದೇ ಲೋಕದಲ್ಲಿ ಓಡಾಡುತ್ತಿದ್ದಾರೆ ಅಂತ.
ಇರಲಿ, ಕನ್ನಡದಲಿ ಲಿಪಿ ಸರಳಿಸುವಿಕೆಗೆ ತಮಿಳಿನ ’ಮಾದರಿ’ಯಾಗಿ ತೆಗೆದುಕೊಳ್ಳಲಾಗುವುದಿಲ್ಲ. ಲಿಪಿ ಸರಳ ಮಾಡಬೇಕೆನ್ನುವವರು ಕೂಡ ಅದನ್ನು ಯಾರೂ ಮಾದರಿಯಾಗಿ ತೆಗೆದುಕೊಂಡಿಲ್ಲ. ಯಾವುದೇ ಲಿಪಿ ಸರಳಿಸುವಿಕೆ ಆ ನುಡಿಯಾಡುವ ಮಂದಿಯ ’ಉಲಿಕೆ’ಯ ಓದಿನ ಮೇಲೆ ನಿಂತಿರುತ್ತದೆ. ಉಲಿಕೆಯಲ್ಲಿಲ್ಲದ/ಉಚ್ಚಾರಣೆಯಲ್ಲಿಲ್ಲದ ಆದರೆ ಬರವಣಿಗೆಯಲ್ಲಿರುವ ಅಕ್ಷರಗಳು ಹೊರೆಯಾಗುತ್ತದೆ. ಯಾಕಂದರೆ ಆ ನುಡಿಯಾಡುವವರು ಅದನ್ನು ಮಾತಿನಲ್ಲಿ ಎಂದು ಬಳಸುವುದೇ ಇಲ್ಲ. ಮೊದಲು ಹೊರೆಯಾಗಿ ಇದು ಕಂಡರೂ ಮುಂದೆ ಇದು ಹಲವು ಗೊಂದಲಕ್ಕೆಡೆ ಮಾಡುತ್ತವೆ. ಉದಾಹರಣೆಗೆ: ಕನ್ನಡಿಗರಲ್ಲಿ ಹೆಚ್ಚಿನವರು ಮಹಾಪ್ರಾಣ ಮತ್ತು ಅಲ್ಪಪ್ರಾಣವನ್ನು ತಮ್ಮ ಉಲಿಕೆಯಲ್ಲಿರುವ ಬೇರೆತನವನ್ನು ತೋರಿಸುವುದಿಲ್ಲ. ಆದ್ದರಿಂದ ಅವರ ಬರವಣಿಗೆಯಲ್ಲಿ ’ತಪ್ಪು’ಗಳು ಕಂಡುಬರುತ್ತದೆ. ಇದರಿಂದ ಹೆಚ್ಚಿನ ಕನ್ನಡಿಗರಿಗೆ ಇಂದಿನ ಬರಹವು ಕಬ್ಬಿಣದ ಕಡಲೆಯಾಗಿಯೇ ಉಳಿದಿದೆ. ಚೆನ್ನಾಗಿ ಮಾತು ಬಲ್ಲವರನ್ನು ಕೂಡ ’ಓಲೆ ಬರೆಯಿರಿ’ ಎಂದು ಹೇಳಿದಾಗ ದಿಗಿಲಿಗೆ ಒಳಗಾಗುತ್ತಾರೆ. ಇದಕ್ಕೆ ಈಗಿನ ಕನ್ನಡ ಬರಹದಲ್ಲಿರುವ ಹಲವು ಗೊಂದಲಗಳು ಮುಖ್ಯ ಕಾರಣ.

ಇನ್ನು ರವಿಕಿರಣ್ ಅವರು ಹೇಳುತ್ತಾರೆ: " ಸನ್ನಿಧಿ, ಮಂಟಪ, ಕೃಪಾನಿಧಿ, ಸೂರ್ಯ, ಸುಧಾ - ಇವುಗಳನ್ನು ಕನ್ನಡದಲ್ಲಿ ಹೇಗೆ ಉಚ್ಚರಿಸುತ್ತೇವೆಯೋ ಹಾಗೆ ಬರೆಯುತ್ತೇವೆ" - ಈ ವಾಕ್ಯದಲ್ಲಿ ತಪ್ಪಿದೆ. ದಿಟವಾಗಲೂ ಕನ್ನಡಿಗರೂ ಇದನ್ನು ಉಚ್ಚರಿಸುವುದು ಸನ್ನಿದಿ , ಮಣ್ಟಪ, ಕ್ರುಪಾನಿದಿ, ಸೂರ್-ಯ(ರ ಗೆ ಯ ಒತ್ತು), ಸುದಾ ಅಂತ. ಹಾಗಾಗಿ ನಾವು ಉಚ್ಚರಿಸಿದಂತೆ ಕನ್ನಡದಲ್ಲಿ ಬರೆಯುತ್ತಿಲ್ಲ. ಆದರೆ ಈ ತೊಂದರೆಯಿರುವುದು ಸಂಸ್ಕೃತ ಪದಗಳಿಗೆ ಮಾತ್ರ. ಕೆಲವು ಕಡೆ ಹೊರತುಪಡಿಸಿ ಕನ್ನಡದಲ್ಲಿ ಕನ್ನಡದ್ದೇ ಆದ ಪದಗಳನ್ನು ಉಚ್ಚರಿಸಿದಂತೆ ಬರೆಯಲಾಗುತ್ತಿದೆ. ಉದಾಹರಣೆಗೆ ಕನ್ನಡದಲ್ಲಿ ಅನುನಾಸಿಕಗಳನ್ನು ’೦’ ಗುರುತಿಸುವ ಅಭ್ಯಾಸ ಮೊದಲಿನಿಂದಲೂ ನಡೆದುಬಂದಿದೆ. ’ಗಣ್ಡ’ ಎಂದು ಉಲಿದರೂ ’ಗಂಡ’ ಎಂದೇ ಬರೆಯುವುದು. ’ಮಞ್ಚ’ ಎಂದು ಉಲಿದರೂ ’ಮಂಚ’ ಎಂದೇ ಬರೆಯುವುದು. ಆದರೆ ಇಲ್ಲಿ ಉಚ್ಚರಿಸದಂತೆ ಬರೆಯದಿರುವುದು, ಬರವಣಿಗೆಯನ್ನು ಸುಲಭ ಮಾಡುವುದೇ ಗುರಿಯಾಗಿದೆ. ಆದರೆ ಮಹಾಪ್ರಾಣಗಳು(ಖ,ಘ,ಛ,ಝ,ಠ,ಢ,ಥ,ಧ,ಫ,ಭ) ಮತ್ತು ಷ, ಃ, ಇವುಗಳು ಉಲಿಕೆಯಿಲ್ಲಿಲ್ಲದಿದ್ದರೂ ಅದನ್ನು ಬರವಣಿಗೆಯಲ್ಲಿ ಇಟ್ಟಿಕೊಂಡಿರುವುದೇಕೆ ಎಂಬ ಕೇಳ್ವಿ ಹಾಕಿಕೊಂಡರೆ, ಆಗ ತಿಳಿಯುವುದು ಇದು ಸಂಸ್ಕೃತ ಪದಗಳನ್ನು ಎರಡು ಸಾವಿರ ವರ್ಷಗಳ ಹಿಂದೆ ಹೇಗೆ ಬರೆಯಲಾಗುತ್ತಿತ್ತೊ ಅದನ್ನ ಹಾಗೆ ಉಳಿಸಿಕೊಳ್ಳಲು ಕನ್ನಡದ ಬರೆವಣಿಗೆಯ ಮೇಲೆ ಹೇರಿರುವ ಬೇಕಿಲ್ಲದ ಕಟ್ಟಲೆ ಎಂದು.

ಇನ್ನು " ೧. ತಮಿಳಿನಲ್ಲಿ ಮಹಾಪ್ರಾಣ ಬಿಟ್ಟರು. ನಾವು ಅದನ್ನೂ ಬಿಡಬಹುದು" ಎಂಬುದು ಹೇಗೆ ಹೇಳಿದರೊ ತಿಳಿದಿಲ್ಲ. ಕನ್ನಡದಲ್ಲೇ(ಮಾತಿನ) ಆಗಲಿ, ತಮಿಳಿನಲ್ಲೇ ಆಗಲಿ ಎಂದೂ ಮಹಾಪ್ರಾಣ ಇರಲಿಲ್ಲ, ಇನ್ನು ಬಿಡುವುದೆಲ್ಲಿಂದ ಬಂತು? ಇಲ್ಲಿ ಬರಹಗಾರರು ’ಮಾತು ಮತ್ತು ಬರಹ’ ನಡುವೆ ತುಂಬ ಗೊಂದಲಗೊಂಡಿದ್ದಾರೆ ಎನ್ನುವುದು ತಿಳಿಯದೇ ಇರದು. ಒಂದು ನುಡಿ/ಭಾಷೆಯೆಂದರೆ ಅದನ್ನ ’ಮಾತು’ ಎಂಬ ಅರ್ಥದಲ್ಲಿ ತೆಗೆದುಕೊಳ್ಳುವುದು ಸರಿ ಎಂದು ನುಡಿಯರಿಗರು ಹೇಳುತ್ತಾರೆ. ಮಾತಿಗೆ ಹೋಲಿಸಿದರೆ ’ಬರಹ’ ತೀರ ಇತ್ತೀಚಿನದು. ಅಲ್ಲದೆ ಮಾತಿಗಿರುವ ಸ್ವಾಭಾವಿಕತೆ ಬರಹಕ್ಕೆ ಇಲ್ಲ. ಬರಹ ಎಂದಿಗೂ ಕೃತಕ. ಹಾಗಾಗಿ ಒಂದು ನುಡಿಯನ್ನು ಚೆನ್ನಾಗಿ ಅರಿಯಬೇಕಿದ್ದರೆ ’ಮಾತಿನ’ ಬಗ್ಗೆ ಸಂಶೋಧನೆಗಳನ್ನು ಮಾಡಬೇಕಾಗುತ್ತದೆ. ಈ ಮಾತಿನ ಬಗೆಗಿನ ಸಂಶೋಧನೆಯಿಂದ ಹೊರ ಹೊಮ್ಮಿರುವುದೇ ಕನ್ನಡ ’ಲಿಪಿಕ್ರಾಂತಿ’ ಇಲ್ಲವೆ ’ಲಿಪಿ ಸರಳಿಸುವಿಕೆ’. ಲಿಪಿ ಸುದಾರಣೆ ಮಾಡಿದರೆ ಇವರು ಕೊಟ್ಟಿರುವ ಪದಗಳನ್ನು ಹೀಗೆ ಬರೆಯಬಹುದು :- ಸನ್ನಿದಿ, ಮಂಟಪ, ಕ್ರುಪಾನಿದಿ, ಸೂರ್-ಯ(ರ ಗೆ ಯ ಒತ್ತು), ಸುದಾ’. ಅದ್ದರಿಂದ ಇದು ಮಾತಿಗೆ ಹೆಚ್ಚು ಹತ್ತಿರವಾಗಿದೆಯಲ್ಲದೆ ಕೃತಕತೆಯು ಮಾಯವಾಗಿದೆ. ’೦’ ಅನ್ನು ಹೇಗೆ ಉಲಿಯಬೇಕೆಂಬುದು ಅದರ ಮುಂದಿನ ಅಕ್ಷರ ನಿರ್ಧರಿಸಿರುವುದರಿಂದ ಎಲ್ಲ ಅನುನಾಸಿಕ/ಮೂಗುಲಿಗಳಿಗೆ (ಪದದ ಮೊದಲು ಬರದಿದ್ದರೆ) ಅದನ್ನು ಬಳಸಲಾಗುತ್ತಿದೆ. (ಗಣ್ಡ = ಗಂಡ, ಹೆಞ್ಚು= ಹೆಂಚು, ಶಙ್ಕರ=ಶಂಕರ). ಈ ಸೊನ್ನೆಯನ್ನು (೦) ಹಾಗೆ ಉಳಿಸಿಕೊಳ್ಳಬೇಕೆಂದು ನುಡಿಯರಿಗರು ಹೇಳುತ್ತಾರೆ ಯಾಕಂದರೆ ಇದರಿಂದ ಕನ್ನಡ ಬರಹ ಸುಲಬವಾಗಿದೆ.
ಹಾಗೇನೆ ಮಹಾಪ್ರಾಣಗಳನ್ನು , ಷ, ಃ, ಇವುಗಳನ್ನು ಕೂಡ ಬಿಡಬಹುದು. ಇದರಿಂದ ಕನ್ನಡ ಬರಹ ಹೆಚ್ಚು ಸುಲಬ ಮತ್ತು ಗೊಂದಲರಹಿತವಾಗುತ್ತದೆ.


ಒತ್ತಕ್ಷರದ ಬಗ್ಗೆ ’ಲಿಪಿ ಸರಳಿಸುವಿಕೆ’ಯನ್ನು ಹಿಂದೆ ಬಿ.ಎಮ್.ಶ್ರೀಯವರು ಮೊದಲು ’ಕನ್ನಡ ಬಾವುಟ’ ಎಂಬ ಪುಸ್ತಕದಲ್ಲಿ ಬರೆದಿದ್ದರು. ಅದರ ಗುರಿ ಪುಸ್ತಕಗಳನ್ನು ’ಅಚ್ಚು’ ಮಾಡುವುದನ್ನು ಸುಲಬಗೊಳಿಸುವುದಲ್ಲದೇ ಬೇರೆ ಏನೂ ಇರಲಿಲ್ಲ. ಆದರೆ ಈಗ ಕಂಪ್ಯೂಟರ್ ಮತ್ತು ಪ್ರಿಂಟರ್ ತುಂಬ ಮುಂದುವರೆದಿರುವುದರಿಂದ ಆ ತೊಂದರೆಗಳಾವುವು ಇಲ್ಲ. ಹಾಗಾಗಿ ಒತ್ತಕ್ಷರಗಳನ್ನು ಉಳಿಸಿಕೊಳ್ಳುವುದಕ್ಕೇ ಯಾವುದೇ ಅಡ್ಡಿಯಿಲ್ಲ.

ಇನ್ನು ಕನ್ನಡ ತಮಿಳಿನಿಂದ ಬೇರ್ಪಟ್ಟು ಸಂಸ್ಕೃತದ ಕಡೆಗೆ ಹೋಗಿದೆ ಎನ್ನುವುದಕ್ಕೆ ಬರಹಗಾರರು ಯಾವುದೇ ಉಲಿಕೆಯರಿಮೆ(phonetics), ನುಡಿಯರಿಮೆ(Linguistics) ಮತ್ತು ಸೊಲ್ಲರಿಮೆ(grammar)ಗಳ ಪುರಾವೆಗಳನ್ನು ಒದಗಿಸಿಲ್ಲ. ಕೇವಲ ಕನ್ನಡ ಬರಹಗಳಲ್ಲಿ ಸಂಸ್ಕೃತ ಪದಗಳನ್ನು ಎರವಲು ಪಡೆದುದನ್ನು ನೋಡಿ ಹಾಗೆ ಅವರು ತಿಳಿದುಕೊಂಡಂತಿದೆ. ಮೊದಲೇ ಹೇಳಿದಂತೆ ಯಾವುದೇ ನುಡಿ/ಭಾಷೆಗೆ ’ಮಾತೇ’ ಆಧಾರ. ಹಾಗೆ ನೋಡಿದರೆ ಕನ್ನಡದ ಸೊಲ್ಲರಿಮೆ/ವ್ಯಾಕರಣ ಸಂಸ್ಕ್ರುತಕ್ಕಿಂತ ತಮಿಳಿಗೆ ಹತ್ತಿರವಾಗಿದೆ.

ಇಂಗ್ಲಿಶಿನಲ್ಲಿರುವ ’ಸ್ಪೆಲ್ಲಿಂಗ್’ ತೊಡಕು ಇಂದು ಆಳವಾಗಿ ಹಲವರನ್ನು ಕಾಡುತ್ತಿದೆ. ಅಮೆರಿಕಾದಲ್ಲಿ ಸ್ಪೆಲ್ಲಿಂಗ್ ಸಮಸ್ಯೆಯನ್ನು ಕಡಿಮೆ ಮಾಡಲು ಹಲವು ಸಂಶೋದನೆಗಳನ್ನು ಮಾಡಲಾಗುತ್ತಿದೆ. ಇವತ್ತು ಇಂಗ್ಲಿಶನ್ನು ಚೆನ್ನಾಗಿ ಓದಲು, ಬರೆಯಲು ಬೇಕೆಂದರೆ ಸುಮಾರು ೧೩೦೦೦ ಪದಗಳ ಸ್ಪೆಲ್ಲಿಂಗನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ ಆದರೆ ಫಿನ್ನಿಶ್(Finnish) ನುಡಿಯನ್ನು ಕಲಿಯಲು ಒಂದೇ ಒಂದು ಸ್ಪೆಲ್ಲಿಂಗ್ ನೆನಪಿಟ್ಟುಕೊಳ್ಳಬೇಕಾಗಿಲ್ಲ. ಅಶ್ಟು ಚೆನ್ನಾಗಿ ಫಿನ್ನಿಶ್ ಬರಹವನ್ನು ಮಾಡಲಾಗಿದೆ. ಈ ಕಾರಣದಿಂದ ಪಿನ್ ಲ್ಯಾಂಡಿನಲ್ಲಿ ಜಗತ್ತಿನಲ್ಲೇ ಅತ್ಯುತ್ತಮವಾದ ’ಕಲಿಕೆ ವ್ಯವಸ್ಥೆ’ ಇದೆ. ರಾಜಕೀಯ, ಸಾಮಾಜಿಕ ಕಾರಣಗಳಿಂದ ಇಂಗ್ಲಿಶ್ ಬರಹ ಇಂದು ಹೆಚ್ಚು ಚಲಾವಣೆಯಲ್ಲಿರುವ ನುಡಿಯಾಗಿದ್ದರೂ ಅದರ ಬರಹ ವೈಜ್ಞಾನಿಕವಾಗಿಲ್ಲ ಎಂದು ಇದರಿಂದ ತಿಳಿಯಬಹುದು.

ಕೊನೆಗೆ ಬರಹಗಾರರು ಕನ್ನಡವನ್ನು ಬಲಪಡಿಸಬೇಕೆಂದು ಹೇಳುತ್ತಾರೆ ಅಲ್ಲದೆ ಲಿಪಿ ಸರಳಗೊಳಿಸುವುದರಿಂದ ’ಘನ’ವಾದುದನ್ನು ಕಳೆದುಕೊಳ್ಳುತ್ತೇವೆ ಎನ್ನುತ್ತಾರೆ. ಆದರೆ ಹೇಗೆ ಬಲಪಡಿಸುವುದು ಎಂದು ಹೇಳುವುದಿಲ್ಲ. ಈಗಾಗಲೆ ಕನ್ನಡ ಬಲವಾಗಿದ್ದರೆ ಯಾಕೆ ಕನ್ನಡದಲ್ಲಿ ಹೊಸ ಅರಿವುಗಳು, ಹೊಸ ತಂತ್ರಜ್ಞಾನಗಳು ಹುಟ್ಟುತ್ತಿಲ್ಲ ? ಯಾವ ’ಘನ’ವನ್ನು ಕಳೆದುಕೊಳ್ಳುತ್ತೇವೆ ಎಂದು ಅವರು ಹೇಳುವುದಿಲ್ಲ. ಕನ್ನಡವನ್ನು ಬಲಪಡಿಸುವುದು ಅಂದರೆ ಕನ್ನಡದ್ದೇ ಸೊಗಡನ್ನು ಬಲಪಡಿಸುವುದು. ಕನ್ನಡದ್ದೇ ಆದ ಸೊಲ್ಲರಿಮೆಯನ್ನು/ವ್ಯಾಕರಣವನ್ನು ಗಮನಿಸಿವುದು ಮತ್ತು ಅದಕ್ಕೆ ಇಂಬು ಕೊಡುವುದು , ಹೊಸ ಹೊತ್ತಿಗೆ ಬೇಕಾದ ಕನ್ನಡದ್ದೇ ಆದ ಪದಗಳನ್ನುಂಟು ಮಾಡುವುದು ಅದರಿಂದ ಕಲಿಕೆಯನ್ನು ಇನ್ನು ಹೆಚ್ಚು ಚೆನ್ನಾಗಿ ಮಾಡುವುದು. ಕಲಿಕೆ ಚೆನ್ನಾಗಿ ಆದಾಗ ಜನರಿಗೂ ಕೂಡ ಹೊಸದನ್ನು ಸಾಧಿಸುವುದಕ್ಕಾಗುತ್ತದೆ. ಇದರಿಂದ ನಾಡ ಏಳಿಗೆ ಆಗುವುದರಲ್ಲಿ ಎರಡು ಮಾತಿಲ್ಲ.

ಗುರುವಾರ, ನವೆಂಬರ್ 17, 2011

ಬೈರಪ್ಪನವರು ಮತ್ತು ಪೊಳ್ಳು ಮಾತುಗಳು

ಬೈರಪ್ಪನವರ ಜೊತೆ ಮಾತುಕತೆಯನ್ನು ನೆನ್ನೆಯ(೧೬ ನೇ ನವೆಂಬರ್ ೨೦೧೧) ಕನ್ನಡಪ್ರಬದಲ್ಲಿ ಬಂದಿದೆ - ಇದರ ಬಗ್ಗೆ ಎರಡು ಮಾತು.

ಮೊದಲಿಗೆ, ಬೈರಪ್ಪನವರ ಕಾದಂಬರಿಗಳನ್ನು(ನಾಯಿನೆರಳು, ಜಲಪಾತ.) ಮೆಚ್ಚಿಕೊಂಡವರಲ್ಲಿ ನಾನೂ ಒಬ್ಬ. ಆದರೆ ಈ ಮೇಲಿನ ಮಾತುಕತೆಯಲ್ಲಿ ಅವರ ನಿಲುವುಗಳಲ್ಲಿರುವ ಪೊಳ್ಳುತನದ ಬಗ್ಗೆ ನಾನು ಹೇಳಲೇಬೇಕಿದೆ.

ಕೇಳ್ವಿ.೫ ಕ್ಕೆ ಉತ್ತರಿಸುವಾಗ ಹೀಗೆ ಹೇಳಿದ್ದಾರೆ.- "ವಿಶಯ ಎಶ್ಟೆ ಗಾಡವಾಗಿರಲಿ ಬಾಶೆಯು ಬಾರವಾಗಿರುವುದು ನನಗೆ ಸೇರುವುದಿಲ್ಲ. ಶಬ್ದಗಳು ಕವಿಯನ್ನು ಸುತ್ತುವರೆದು ನನ್ನನ್ನು ಪ್ರಯೋಗಿಸು ಎಂದು ಓಲಿಡುತ್ತವೆ ಎಂದು ನಾನು ಕಾಲೇಜು ಓದುವಾಗ ಒಬ್ಬ ಕನ್ನಡ ಅದ್ಯಾಪಕರು ಪದೇ ಪದೇ ಹೇಳುತ್ತಿದ್ದರು..ನನಗೆ ಎಂದು ಹಾಗೆ ಆಗಿಲ್ಲ" - ಇಲ್ಲಿ ಹೀಗೆ ಹೇಳುವ ಬೈರಪ್ಪನವರು

ಕೇಳ್ವಿ ೧೪ ಕ್ಕೆ ಉತ್ತರಿಸುವಾಗ ಹೀಗೆ ಹೇಳಿದ್ದರೆ - "ಪಾರಿಬಾಶಿಕ ಶಬ್ದಗಳ ಕೈಪಿಡಿಯನ್ನು ಸಿದ್ದಪಡಿಸುವ ಒಮ್ದು ಸಮಿತಿಯಲ್ಲಿ ನಾನು ಸದಸ್ಯನಾಗಿದ್ದೆ. oxy+gen(=ಜನಕ). hydro(ನೀರು)+gen(ಜನಕ) - ಹೀಗೆ ಶಾಸ್ತ್ರ ಮತ್ತು ವಿಜ್ಞಾನದ ಪರಿಬಾಶೆಗಳು ಬಾರತದ ಎಲ್ಲ ಬಾಶೆಗಳಲ್ಲೂ ಬಹುತೇಕ ಒಂದೇ ಆಗಿರುವುದನ್ನು ಗಮನಿಸಿ. ಇಲ್ಲಿ ಬಾಶೆಗಳು ಸಾದ್ಯವಾದಶ್ಟು ಈ ಶಬ್ದಗಳನ್ನೇ ಇಟ್ಟುಕೊಳ್ಳಬೇಕು. ಇದರಿಂದ ಒಂದು ಬಾಶೆಯಲ್ಲಿ ಬರೆದ ವಿಗ್ನಾನ ಮತ್ತು ಶಾಸ್ತ್ರ ಗ್ರಂತಗಳನ್ನು ಇತರ ಬಾಶೆಗಳಿಗೆ ಅನುವಾದಿಸುವುದು ಸುಲಬವಾಗುತ್ತದೆ"

೫ ಮತ್ತು ೧೪ ರಲ್ಲಿರುವ ತನ್ನೆದುರನ್ನು(contradiction) ಯಾರು ಬೇಕಾದರೂ ಸುಳುವಾಗಿ ಗುರುತಿಸುಬಹುದು. ’೫’ರಲ್ಲಿ ಬಾಶೆ ಸರಳವಾಗಿರಬೇಕು ಮತ್ತು ಸರಳ ಬಾಶೆಯಲ್ಲಿ ಗಾಡವಾದ ವಿಚಾರವನ್ನು ತಿಳಿಸಬೇಕು ಎಂದು ಹೇಳುವ ಬೈರಪ್ಪ ’೧೫’ರಲ್ಲಿ ಬೇರೆ ಬಾಶೆಗೆ ಅನುವಾದ ಮಾಡಲು ಸುಲಬ ಮಾಡಲು ಸಂಸ್ಕ್ರುತದ ಕಟಿಣ ಪದಗಳಿಗೆ ಮೊರೆ ಹೋಗಬೇಕು ಎನ್ನುತ್ತಾರೆ. ಬೈರಪ್ಪನವರೆ, ನೀವು ನಿಮ್ಮ ಕಾದಂಬರಿಗಳಲ್ಲಿ ಹೀಗೆ ಯಾಕೆ ಮಾಡಲಿಲ್ಲ... ನೀವು ಹೆಚ್ಚು ಸಂಸ್ಕ್ರುತದ ಪದಗಳನ್ನು ಬಳಸಿದ್ದರೆ ಅದನ್ನು ಇತರ ಬಾಶೆಗಳಿಗೆ ಅನುವಾದ ಮಾಡುವುದು ಸುಳುವಾಗುತ್ತಿರಲಿಲ್ಲವೆ? ಹಾಸನದ ಆಡುನುಡಿಯನ್ನು ಯಾಕೆ ಹೆಚ್ಚು ಬಳಸಿದ್ದೀರಿ. ? ಇದು ನಿಮ್ಮ ಇಬ್ಬಂದಿತನವಲ್ಲವೆ?
ಯಾವುದೇ ನುಡಿಯಲ್ಲಿ ಪಾರಿಬಾಶಿಕ ಪದಗಳನ್ನು ಉಂಟು ಮಾಡುವಾಗ ಆಯ ನುಡಿ ಆಡುವ ಮಂದಿಗೆ ಸುಲಬವಾಗಿ ತಿಳಿಯುವಂತೆ ಪದವನ್ನು ಉಂಟು ಮಾಡಬೇಕು. ಇದರಿಂದ ಆ ನುಡಿಜನಾಂಗವು ಕಲಿಕೆಯಲ್ಲಿ ಮುನ್ನಡೆಯಬಹುದು. ಅದನ್ನು ಬಿಟ್ಟು ಬೇರೆ ಯಾವುದೋ ಬಾಶೆಗೆ ಅನುವಾದ ಮಾಡಲು ಅನುವಾಗುವಂತೆ ಪಾರಿಬಾಶಿಕ ಉಂಟುಮಾಡುವುದು ಎಶ್ಟು ಸರಿ? ಪಾರಿಬಾಶಿಕ ಪದಗಳ ಮೊದಲ ಗುರಿ ಆ ನುಡಿಜನಾಂಗಕ್ಕೆ ಯಾವುದೇ ಕಲಿಕೆಯನ್ನು ಸುಲಬಗೊಳಿಸುವುದು ಮತ್ತು ಕಲಿಕೆಯಲ್ಲಿ ಮುನ್ನಡೆಯುವಂತೆ ಮಾಡುವುದೇ ಆಗಿರಬೇಕು. ಹಾಗಾಗಿ ಆಯ ನುಡಿಯಲ್ಲಿರುವ ಸರಳ ಪದಗಳನ್ನು ಬಳಸಿ ಪಾರಿಬಾಶಿಕ ಪದನೆರಕೆಯನ್ನು ಕಟ್ಟಬೇಕು.

"ಕೇಳ್ವಿ ೧೪. ಈ ಹೊತ್ತು ಪ್ರಾದೇಶಿಕ ಭಾಶೆಗಳ, ಪ್ರಾಂತಗಳ ಮತ್ತು ಸಂಸ್ಕ್ರುತಿಗಳ ಬಗ್ಗೆ ಮಾತನಾಡುವುದು ಮನೋವೈಶಾಲ್ಯದ ಲಕ್ಶಣವೆನಿಸಿದೆ. ಆದರೆ, ಬಾರತದ ಬಗೆಗೆ ಮಾತನಾಡುವುದು ಸಂಕುಚಿತತೆ ಎನಿಸಿದೆ.ಏಕೆ?"
ಮತ್ತೆ ಕೇಳ್ವಿ೧೫ ಕ್ಕೆ ಹೀಗೆ ಉತ್ತರಿಸಿದ್ದಾರೆ:-

ಮೊದಲಿಗೆ ಈ ಕೇಳ್ವಿಯಲ್ಲೇ ಎಡವಟ್ಟಾಗಿದೆ. ಪ್ರಾದೇಶಿಕ ಬಾಶೆ ಎಂದರೇನು. ಬಾರತದ ಬಗೆಗೆ ಮಾತನಾಡುವುದು ಎಂದರೇನು. ಎರಡು ಬೇರೆ ಬೇರೆ ಹೇಗೆ? ನನಗೆ ಬಾರತ ಅಂದರೆ ಕರ್ನಾಟಕ; ನಾನು ಕನ್ನಡಿಗನಾಗಿರುವುದರಿಂದಲೇ ನಾನು ಬಾರತೀಯ. ಎರಡು ಬೇರೆ ಬೇರೆ ಅಲ್ಲ. ಕೇಳ್ವಿಯಲ್ಲಿ ಕನ್ನಡಿಗ ಮತ್ತು ಬಾರತೀಯ ಎಂಬುದನ್ನು ಬೇರೆ ಬೇರೆಯಾಗಿ ನೋಡುವ ಹುನ್ನಾರ ಅಡಗಿದೆ. ಅಲ್ಲದೆ ಈ ಕೇಳ್ವಿಯಲ್ಲಿ ’ಬಾರತೀಯತೆ ಮೇಲು ಕನ್ನಡತನ ಕೀಳು’ ಎನ್ನುವುದನ್ನು ಸೂಚ್ಯವಾಗಿ ಹೇಳುವಂತೆ ತೋರುತ್ತಿದೆ.

ಸರಿ ಈ ಕೇಳ್ವಿಗೆ ಬೈರಪ್ಪನವರು ಕೊಡುವ ಉತ್ತರದ ಬಗ್ಗೆ ನೋಡೋಣ. ಅವರು ಹೇಳುತ್ತಾರೆ:-
"ಈ ಬಾವನೆ ಪ್ರದಾನವಾಗಿ ಡಿಎಮ್ಕೆಯದು. ಅವರಿಂದ ಕರ್ನಾಟಕದ ಕೆಲವು ಅಕಾಡೆಮಿಕ್ ವಲಯಕ್ಕೆ ಹಬ್ಬಿದೆ. ಇದು ಮಹಾರಾಶ್ಟ್ರದಲ್ಲಿಲ್ಲ. ಗುಜರಾತಿನಲ್ಲಿಲ್ಲ. ಪಂಜಾಬಿನಲ್ಲಿಲ್ಲ. ನಾನು ತಿಳಿದಂತೆ ಆಂದ್ರದಲ್ಲಿಲ್ಲ. ಕರ್ನಾಟದಲ್ಲಿ ಯಾಕೆ ಬೆಳೆದಿದೆ. ಹಿಂದಿಯವರ ಪ್ರಾಬಲ್ಯ, ತಮಿಳು, ಮಲೆಯಾಳಗಳ ಒತ್ತುವರಿ ಕಾರಣವೆ."
ಇಲ್ಲಿ ಬೈರಪ್ಪನವರ ಅರಿಯಮಿಕೆ(ignorance) ಎದ್ದು ಕಾಣುತ್ತಿದೆ. ಪಂಜಾಬ್, ಆಂದ್ರದಲ್ಲಿ ಮೊದಲಿನಿಂದಲೂ ಆ ರಾಜ್ಯಗಳ ’ಪ್ರಾದೇಶಿಕ ಪಕ್ಶಗಳು’(ತೆಲುಗು ದೇಶಂ, ಅಕಾಲಿದಳ) ಹಿಂದಿನಿಂದಲೂ ಬಲವಾಗಿಯೇ ಇವೆ. ಅಲ್ಲದೇ ಪಂಜಾಬಿಗರು ’ಕಲಿಸ್ತಾನ” ಎಂಬ ಬೇರೆಯದೇ ಪಂಜಾಬಿ ದೇಶ ಮಾಡಲು ಹೊರಟಿದ್ದರು ಎಂಬುದನ್ನು ಬೈರಪ್ಪ ಮರೆತರೇಕೆ? ಇನ್ನು ಮಹಾರಾಶ್ಟ್ರದಲ್ಲಿ ’ಹೊರಬರ’ ವಿರುದ್ದ ಮರಾಟಿಗಳ ಕಾದಾಟ ಹೊತ್ತು ಹೊತ್ತಿಗೂ ಹೆಚ್ಚುತ್ತಿದೆ. ಅದಲ್ಲದೆ ’ಮಹಾರಾಶ್ಟ್ರ ನವನಿರ್ಮಾಣ ವೇದಿಕೆ’ ಮಹಾರಾಶ್ಟ್ರ ವಿದಾನಸಬೆಯಲ್ಲಿ ೧೩ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದಿದ್ದಾರೆ. ಅಲ್ಲದೆ ಬೈರಪ್ಪನವರು ಕವಿರಾಜಮಾರ್ಗ ಓದಿದ್ದರೆ(ಓದೂ ಜಾಣ ಮರೆವು ಇರಬಹುದು) ಹೀಗೆ ಹೇಳುತ್ತಿರಲಿಲ್ಲ. ಕನ್ನಡ ನಾಡು/ದೇಶ ಇರದಿದ್ದರೆ ೯ನೇ ನೂರೇಡಿನ ಕವಿರಾಜಮಾರ್ಗದಲ್ಲೇ ಕನ್ನಡ ನಾಡಿನ ಗಡಿಯನ್ನು ಯಾಕೆ ಗುರುತಿಸಬೇಕಿತ್ತು. ಇದು ತಿರುಳ್ಗನ್ನಡ ನಾಡಿನ ಗಡಿ ಅಂತ ಯಾಕೆ ಹೇಳಬೇಕಿತ್ತು. ೯ ನೇ ಶತಮಾನದಲ್ಲಿ ಯಾವ ಡಿಎಮ್ಕೆ ಇತ್ತು? ಇಲ್ದೇದ್ ಮೇಲೆ ಹೇಗೆ ತಮಿಳುನಾಡಿನಿಂದ ಹಬ್ಬಕ್ಕಾಗುತ್ತೆ?

ಮುಂದುವರೆದೂ ಬೈರಪ್ಪನವರು,
" ಭಾರತವನ್ನು ಒಡೆಯಲು ಬ್ರಿಟಿಶರು ಹುಟ್ಟುಹಾಕಿದ ಸಿದ್ದಾಂತಗಳ ಪರಿಣಾಮವೇ"ಬಾರತ ಅಂತ ಎಲ್ಲಿ ಇತ್ತು ಅದನ್ನ ಒಡೆಯಕ್ಕೆ? ಹಾಗೆ ನೋಡಿದರೆ ಬ್ರಿಟಿಶರೆ ಆಡಳಿತದ ಅನುಕೂಲಕ್ಕೆ ’ಇಂಡಿಯಾ’ ಅಂತ ಒಟ್ಟು ಮಾಡಿದ್ದು. ಅದಕ್ಕೂ ಮೊದಲು ಇದ್ದುದು ಕನ್ನಡ ನಾಡು, ತಮಿಳು ನಾಡು, ತೆಲುಗುನಾಡು ( Kannada Country, Tamil Country, Telugu Country...etc). ಆಯ ನಾಡುಗಳನ್ನು ಆಳಿದವರು ತಮ್ಮವೇ ಆದ ಪಡೆ/ಸೈನ್ಯವನ್ನು ಹೊಂದಿದ್ದರು. ಬ್ರಿಟಿಶರು ಬರುವ ಮುನ್ನ ’ಬಾರತ ಸೇನೆ’ ಅಂತ ಯಾವುದೂ ಇರಲಿಲ್ಲ.

ಇನ್ನು ಮುಂದೆ ಹೋಗಿ ,
" ನಾವು ಪ್ರಾದೇಶಿಕ ಬೇರನ್ನು ಅರಸಿ ಹೊರಟರೆ ಒಬ್ಬರ ಜೊತೆ ಬೆರೆಯದ ಜಾತಿ, ಉಪಜಾತಿಗಳಲ್ಲಿ ನಿಲ್ಲುತ್ತೇವೆ."
ಸರಿ, ಹಾಗಾದರೆ ’ಪ್ರಾದೇಶಿಕತೆ’ಯಿಂದ ಬಹುದೂರ ಸಾಗೋಣ. ಇಡೀ ಮಾನವರೆಲ್ಲ ಒಂದೇ. ಬಾರತ, ಪಾಕಿಸ್ತಾನ . ಯು ಎಸ್ ಎ ಅಂತ ಬೇರೆ ಬೇರೆ ದೇಶಗಳು ಯಾಕೆ ಬೇಕು ? ಎಲ್ಲರೂ ಒಂದೇ. ಎಲ್ಲವನ್ನು ಒಗ್ಗೂಡಿಸಲು ಆಗುತ್ತದೆಯೆ? ಅದಕ್ಕೆ ನಮ್ಮ ಹಿರಿಯರು ಬಾರತವನ್ನು ನುಡಿಯ ಮೇಲೆ ನಾಡುಗಳನ್ನಾಗಿ ವಿಂಗಡಣೆ ಮಾಡಿದ್ದಾರೆ . ಯಾಕಂದರೆ ನುಡಿಯ ಆದಾರದ ಮೇಲೆ ಪ್ರಪಂಚದಲ್ಲಿ ದೇಶಗಳಾಗಿವೆ. ಜಾತಿಯ ಆದಾರದ ಮೇಲೆ ದೇಶಗಳನ್ನು ಎಲ್ಲೂ ಮಾಡಿಲ್ಲ. ಆಯ ನುಡಿ ಆಯ ನುಡಿಜನಾಂಗದ ಜೀವನಾಡಿಯೇ ಆಗಿದೆ. ಇದರಿಂದಲೇ ಅವರ ಏಳಿಗೆ ಎಂಬುದನ್ನ ಹಲವು (ಯೂರೋಪಿನ)ನಾಡುಗಳನ್ನು ನೋಡಿ ಕಲಿತುಕೊಳ್ಳಬಹುದು.

ಕೊಸರು:-
ತಿಳಿದೊ ತಿಳಿಯದೆಯೋ ಬೈರಪ್ಪನವರು ಹಲವು ಪೊಳ್ಳು ವಾದಗಳನ್ನು ಮುಂದಿಟ್ಟಿದ್ದಾರೆ. ಇನ್ನಾದರೂ ಬೈರಪ್ಪನವರು ಅರಿತು ತಮ್ಮ ದೊಡ್ಡತನಕ್ಕೆ ತಕ್ಕಂತೆ ಮಾತನಾಡಲಿ ಎಂದು ಬಯಸುತ್ತೇನೆ. ಇಶ್ಟಾದರೂ ನಾನು ಅವರ ಕಾದಂಬರಿಯಾದ ’ನಾಯಿ-ನೆರಳು’ನ್ನು ಬಲು ಒಲವಿಂದ ಮೆಚ್ಚಿದ್ದೇನೆ ಯಾಕಂದರೆ ದಿಟವಾಗಲೂ ಬೈರಪ್ಪನವರಿಗೆ ನಮ್ಮ ನುಡಿಯ ಬಲ ಅರಿತುಕೊಂಡಿದ್ದಾರೆ ಅಂತ ಆಗ ನನಗನ್ನಿಸಿತ್ತು. ಆದರೆ ಈಗ ಅದು ಸುಳ್ಳು ಅಂತ ಬೈರಪ್ಪನವರೇ ತೋರಿಸಿಕೊಟ್ಟಿದ್ದಾರೆ. ಬೂಟಾಟಿಕೆಗೋಸ್ಕರ ಹಾಸನದ ಆಡುನುಡಿಯನ್ನು ತಮ್ಮ ಕಾದಂಬರಿಗಳಲ್ಲಿ ಬಳಸಿದ್ದಾರೇನೊ ಅಂತ ಈಗ ಅನ್ನಿಸತೊಡಿಗಿದೆ.

ಭಾನುವಾರ, ಅಕ್ಟೋಬರ್ 02, 2011

A Review of Book: Bipolar Identiy - Region , Nation and Kannada Language Film

A Review of Bipolar Identity - Region , Nation and Kannada Language Film - MK Raghavendra, Oxford University Press, 2011

This is probably the first book in English which analyses the Entire Kannada Cinema and make some significant conclusions applying the perspective of region and nation and their interaction with each other. Author has tried to assess the 'motifs' of the mainly 'popular' Kannada cinema although there is comparatively brief analysis about the 'Parallel'(Art) Cinema. He also seems to be determined to analyse only from the point of view of friction between region and nation, but at times he goes beyond his original intentions which is sort of breaks the monotony which one can experience while reading. The reason that the author has given more importance to the 'popular cinema' is probably because of the fact this genre of the cinema captures the pulse of the constituents of that Region and most likely to have the impact on society. Some of the main conclusions which author has tried to stress is the fact that National(Indian) identity tries to subsume the regional identity and its only proper that Region opposes it. The constituents(populace) of Kannada region tries to register the opposition to Nation State whenever the socio-political conditions are not so favourable to Kannada region, however when the region (or its people) get importance at National level, then Region tries to be loyal with nation state. Author illustrates this point with fact that how Kannada cinema reacts to Growth and Fall of Nijalingappa as national leader of INC to rationalise his conclusions.

Regions v/s Nation:-
Another important thread which Author tries to hang on is the fact that the Mysore Princely state had seen Modernity (thanks to Rajarshi Nalvadi Krishnaraja Wodeyar, Sir M. Vishweshwaraiah and Mirza Ismail) much before India started experiencing the modernity. This was registered in Kannada cinema through various Bond films and 'Kasthuri Nivasa'. 'Kasturi Nivasa' has been dealt with much detail because the author thinks that Rajkumar's role represents the Mysore Modernity(Pigeon Brand) and Rajanand's role, who raises beyond his master(Rajkumar) in the business, represents Indian Modernity(Eagle brand). In the last phase of the movie when the Rajanand tries to give back the 'bungalow' which was once owned by Rajkumar. Rajkumar rejects the offer and prefers to stay in small hut. This is definitely contest between Mysore and India and definitely Mysore(Region) tries to assert its superiority over India(Nation). In another movie Puttanna's 'Nagarahavu', one can notice the Photos of Vishweshwaraiah and Kannada cultural stalwarts in Chamaiah Master's (KS Ashwath) house who represents Mysorean Modernity whereas Photo of Nehru in College Principal's(Loknath) house. Again ultimately in the movie superiority or importance has been given to Mysorean Modernity Indian /Nehruvian Modernity is almost neglected or takes backstage. Author vindicates this point through several illustrations throughout the book.

Bengaluru's Role:-
Though the Kannada cinema industry is located in Bengaluru today, but the confused pereception about Bengaluru maintained in movies from 60's to very recent. Author thinks that its Mysore which is regarded as the true representation of Kannadigas than Bengaluru because of the 'cantonment' effect which it experienced during British rule. In fact in 'Sandhyaraaga', the joint family breaks off when it moves from village to Bengaluru. In 'pattanakke banda patniyaru', Bengaluru is almost projected as lawless space and in the end, sisters goes back to village to join their husbands after bitter experience in Bengaluru.

Kannada Language:-
Author is of the opinion is that 'Brahminical' Kannada actually raises the self esteem of Kannada in movies of 60s to 80s. 'Low Kannada' in 90s actually demeans the self Image of Kannada and Kannadigas. However, thankfully author observes that there was more passion among film makers towards 'realism' in 90s. New breed of film makers wanted to break the 'traditions' and also account of the other sections/communities of society and their dialect, which didn't get enough importance in the big screen in previous decades. Interestingly movies of 2000s' gives importance to 'Tribal'(Jogi) and Dalit(Duniya) as the protagonists and there dialectical Kannada, which is sort of oxymoron considering the onslaught of globalization during this decade. This perhaps points to the fact that, with globalisation there is increasing friction between 'natives' and 'outsiders' and natives trying to reach out to their nativity in a never before manner and scale. This of course is narrated in subtle way in this book rather than in a more pronounced manner.

Shortcomings or Limitations:-
Any kind of study of Kannada cinema cant be completed without giving importance to the role of Dr.Rajkumar and author is no different in his approach. He tries to catch on the popular perception as 'ethical super hero' of Kannada populace. Author goes on to say that Rajkumar was more popular than NTR in AP and also unlike NTR , Rajkumar never entered politics and his exit from the cinemas was gradual rather than abrupt. According to Author, throughout his career Rajkumar represented the characters which represents Regional Modernity/Mysorean Modernity or Regional/Mysorean Values except the dual role in 'Babruvahana' where he represented both Nation(Arjuna) and Region(Babruvahana). Author makes a factual error by saying that the Rajkumar never acted as 'God'(Nation) however the author has correctly recognized that he either plays roles as King(Arjuna) or Demon(Mahishasura, Hiranya Kashyapu). Rajkumar has actually acted as God "Srinivasa/Venkateshwara" in 'Shrinivasa Kalyana' and as God Shiva in 'Shiva meccida Kannappa', however he has played greater number of King/Demon roles than the 'God' roles. What is disappointing as a reader to me is that author misses three important as well as popular cinemas namely 'Kulavadhu', 'Mallammana Pawada' and 'Mayura'. Mayura especially, would have been very important in the wake of the techniques used by author to assess the motifs and milieu of Kannada Region. Also the movies like 'Gandhada Gudi' and 'Immadi pulakeshi' getting very less attention from the author also disappointing, with the former having long lasting impression of Kannada populace. The author never tries to bring in the points like upholding the Kannada culture and Language, which both the above movies vehemently tries to implicate on viewers. There are some of the factual errors in the names of Directors and moveis (V.Somashekhar's Shankar Guru whereas mentioned as K, Somashekar). Sometimes movie name is mentioned as 'Mungaru male' and sometimes 'Mungaru Maley'. There could also some other errors in the names of Directors or Movies. One can also provide the list of movies which either didn't get mentioned in the book or not dealt in detail.

Overall, the author is able to hit upon interesting findings both from viewer's and maker's perspective. There is enough matter in the book which could be useful to the movie makers, sociologists and in general to those who follow Kannada cinema.

ಭಾನುವಾರ, ಜುಲೈ 24, 2011

ಱೞ ಕುಳ ದ ಗುಟ್ಟು

ಱೞ ಕುಳ ದ ಗುಟ್ಟು ಈವೊತ್ತು ಗೊತ್ತಾಯಿತು.
೧. ಈ ಅಲುವಾಟ ಅಂದರೆ ಱೞ ಕುಳ ಅಂತ ಹೇಳುವುದು ಹಿಂದಿನಿಂದಲೂ ಕನ್ನಡದಲ್ಲಿ ಬಂದ ವಾಡಿಕೆ. ಈವೊತ್ತು ಸೇಡಿಯಾಪು ಅವರ ’ವಿಚಾರ ಪ್ರಪಂಚ’ ಓದುತ್ತಿರುವಾಗ ಇದು ತಿಳಿಯಿತು.. ಅವರು ಹೀಗೆ ಹೇಳಿದ್ದಾರೆ( ಸುಳುವಾಗಿ ತಿಳಿಯಲು ಸರಳಗೊಳಿಸಿರುವೆ)

ಱ - ೞ - ಇವೆರಡರ ಉಲಿಕೆಯನ್ನು ಬರವಣಿಗೆಯಲ್ಲಿ ತೋರಿಸುವುದು ಕಶ್ಟವೆನಿಸಿದಾಗ ಉಲಿಕೆಯ ಬದಲಾಗಿ ಬರಿಗೆ/ಗುರುತುಗಳಲ್ಲಿ ಇರುವ ಹೋಲಿಕೆಯನ್ನು ತೋರಿಸಿ ೞ ವನ್ನು ಱ ಜೊತೆ ಹೇಳಿದಾಗ ಮಂದಿಗೆ ಱ - ೞ ಎರಡನ್ನು ಒಂದೇ ತರ ಬರೆಯುವುದು ಎಂಬುದು ಗೊತ್ತಾಗುತ್ತಿತ್ತು.

ಕು-ಳ -- ಬಹಳ ಹಿಂದಿನ ಕನ್ನಡದ ಲಿಪಿ ಯಲ್ಲಿ ’ಕು’ -’ಳ’ ಗುರುತುಗಳಲ್ಲಿ ಹೋಲಿಕೆಯಾಗುತ್ತಿತ್ತು..

ಈ ವಾಡಿಕೆಯಿಂದ ಅವುಗಳ ಉಲಿಕೆ ಹೇಗೆ ಎಂಬುದನ್ನು ತಿಳಿಸಿಕೊಡುವುದು ಅದರ ಗುರಿಯಾಗಿರಲಿಲ್ಲ.. ಬದಲಿಗೆ ಕಣ್ಣಿಗೆ ಅದರ ಮೂಲಕ ಮೆದುಳಿಗೆ ೞ ಮತ್ತು ಳ ಇರುವ ಬೇರೆತನವನ್ನು ತಿಳಿಸಿಕೊಡುವುದು ಇದರ ಗುರಿಯಾಗಿದ್ದಿರಬಹುದು.

ಬುಧವಾರ, ಜೂನ್ 29, 2011

ಕರಿಯನ ನೆನೆ

ಕೂದಲನ್ ಇವ ತುರುಕಾರ್ತಿಯರ ಕಾದಲನ್
ಕೂರ್ಪನ್ ಇವ ತಾಯ(ಯಸೋದೆಯ) ಕಾಡುತಿರ್ಪನ್
ಕರುಗೊಲ್ಲನ್ ಇವನೇ ಇವನೇ ಕರಿಯನ್

ಮಂಗಳವಾರ, ಜೂನ್ 28, 2011

ಮೊರೆ- ಇದರಿಂದಾದ ಪದಗಳು

ಮದುಮೊರೆಗ = ಬೀಗ
ಮದುಮೊರೆಗ್ತಿ = ಬೀಗ್ತಿ
ಮದುಮೊರೆಯವರು = ಬೀಗರು
ಮದುಮೊರೆ(ಮೆ) = ಬೀಗತನ
ಮೊರೆ=ನಂಟು=ಸಂಬಂದ

ಕಬ್ಬಾಳಮ್ಮ - ಯಾರು?

ಎಶ್ಟೊಂದು ಟ್ಯಾಕ್ಸಿಗಳ ಮುಂದೆ ಕಡೆ ’ಕಬ್ಬಾಳಮ್ಮನ ಕ್ರುಪೆ’ ಅಂತ ಹಾಕಿಕೊಂಡಿರುತ್ತಾರೆ.

ಕಬ್ಬಾಳ = ಕರು+ಪಾಳಮ್ಮ = ಕರ್ಬಾಳಮ್ಮ = ಕಬ್ಬಾಳಮ್ಮ

ಕರು=ದೊಡ್ಡ, ಮಹಾ
ಪಾಳಮ್ಮ = ಪಾಳ್ಯದಮ್ಮ = ಹಳ್ಳಿಯಮ್ಮ = ಗ್ರಾಮದೇವತೆ

ಮಹಾ ಗ್ರಾಮದೇವತೆ = ಕಬ್ಬಾಳಮ್ಮ :)

’ಆಱಿಲ್’/ಆರಿಲ್ ಪದದ ಬೆನ್ನು ಹತ್ತಿ...

ನಾನು ಮೊದಲು ’ಅರಿಲ್’= ನಕ್ಶತ್ರ= star ಎಂಬ ಪದ ಆಂಡಯ್ಯನ ’ಕಬ್ಬಿಗರ ಕಾವನ್’ನಲ್ಲಿ ಕೇಳಿದಾಗ ಇದು ಹಳೆಗನ್ನಡದ ಪದ ಹೇಗೆ ಬಿಡಿಸುವುದು ಅಂತ ತುಂಬ ಒದ್ದಾಡಿದೆ.

ಆದರೆ ನೆನ್ನೆ ’ಕಬ್ಬಿಗರ ಕಾವನ್’ ನ್ನು ಮತ್ತೆ ಓದುತ್ತಿದಾಗ ಆಂಡಯ್ಯ ಅದನ್ನು ಬಳಸಿರುವ ಪದಕಂತೆ ಹೀಗಿತ್ತು - ’ತಳ್ತಾಱಿಲ್’ (ತಳ್ತು + ಆರಿಲ್= ಹೊಳೆಯುವ ನಕ್ಶತ್ರ) ಹಾಗಾಗಿ ಅದು ’ಅರಿಲ್’ ಅಲ್ಲ ’ಆರಿಲ್’(ತಳ್ತಾ ಅಂತ ’ಆ’ ಬಂದಿರುವುದರಿಂದ) ಎಂಬುದು ಮನದಟ್ಟಾಯಿತು ಯಾಕಂದ್ರೆ ಕನ್ನಡದಲ್ಲಿರುವುದು ಲೋಪ ಸಂದಿ.( ’ಉ’ಕಾರ ಲೋಪವಾಗಿ ’ಆ’ ಕಾರ ಬಂದಿದೆ)

ಆಱ್(ಆರ್)= ಇದಕ್ಕಿರುವ ಅರ್ಥಗಳನ್ನು ಗಮನಿಸಿ, Ka. āṟ (ārt-) to be or become strong, be powerful, able, or competent, be possible, can, may, be adequate, be able for, be able to endure; āṟu power, daring, self-will; ārpu might, force, daring, valour; āke power, valour; āpa being strong, being able, being possible

ಆರ್(power, capable)+ಇಲ್(place, ಜಾಗ) = ಆರಿಲ್ ....ಇದೇ ಇದಕ್ಕೆ ಸರಿಯಾದ ಬಿಡಿಸಿಕೆ ಅಂತ ಅನ್ಕೊಂಡೆ. ಹಾಗಾಗಿ ಆರ್ ಗೆ ಇರುವ ಅರಿತಗಳೆಲ್ಲ ’power/energy/capable' ಹೀಗೆ...ಆಂಡಯ್ಯನು ಹುಟ್ಟಿಸಿರುವ ಈ ಪದ ವೈಜ್ಞಾನಿಕವಾಗಿಯೂ ಸರಿ ಯಾಕಂದ್ರೆ ಬರೀ ಆರಿಲ್ ಗಳು ಬೆಳೆಕನ್ನು ತನ್ನಿಂತಾನೆ ಉಂಟುಮಾಡಿಕೊಳ್ಳಬಲ್ಲವು. ಆದರೆ ಗ್ರಹಗಳಿಗೆ ಇದು ಆಗಲ್ಲ. ಹಾಗಾಗಿ ಆರಿಲ್ಗಳು ತಮ್ಮಿಂತಾನೆ ಮಿನುಗುತ್ತವೆ ಆದರೆ ಗ್ರಹಗಳು ತನ್ನಿಂತಾನೆ ಮಿನುಗುವುದಿಲ್ಲ, ಆರಿಲ್ಗಳ ಬೆಳಕನ್ನು ಮಾತ್ರ ಮಾರ್ಪೊಳೆಪಿ( ಪ್ರತಿಫಲನ)ಸುತ್ತವೆ.


ಸಂಸ್ಕ್ರುತದ ’ನಕ್ಷತ್ರ’ ಕೂಡ ಹೆಚ್ಚು ಕಡಿಮೆ ಇದೇ ಅರಿತ ಇದೆ ಅನ್ಸುತ್ತೆ. - ksatra (p. 077) [ ksha-trá ] n. sg. & pl. dominion, power; powers that be, ನ-ಕ್ಶತ್ರ ...Stars are celestial bodies whose power doesnt get exhausted ಅಂತ ಅನ್ಸುತ್ತೆ. ಸಂಸ್ಕ್ರುತದ ಬಿಡಿಸುವಿಕೆಗೆ ಸರಿಯೋ ತಪ್ಪೊ ನನಗೆ ಅಶ್ಟು ಸರಿಯಾಗಿ ಗೊತ್ತಿಲ್ಲ.

ಇಶ್ಟೆಲ್ಲಾ ಬರೆದುದರ ತಿರುಳೇನೆಂದರೆ ಆರಿಲ್ ಇವತ್ತಿಗೂ ಪ್ರಸ್ತುತವಾಗಿರುವ ಮತ್ತು ಸುಲಭವಾಗಿ ಅರ್ಥವಾಗುವ ಪದ..!!

Manjunatha K.S - ಒಳ್ಳೆಯ ಯೋಚನಾಧಾಟಿ. ಇಂಥ ಚರ್ಚೆ ಯಾವಾಗಲೂ ನುಡಿಯರಿಮೆಯನ್ನು ಹೆಚ್ಚುಹೆಚ್ಚು ಸೂಕ್ಷ್ಮಗೊಳಿಸುತ್ತದೆ.

ಆಱ್+ಇಲ್ = ಆಱಿಲ್ = ನಕ್ಷತ್ರ, being power-houses ಅನ್ನೋದು ಒಳ್ಳೆಯ ಪದವೇ. ನಕ್ಷತ್ರವನ್ನು ಹಾಗೆ ಕರೆಯಬಹುದೇನೋ (ಅಥವ ಅದಕ್ಕಿಂತ ಹೆಚ್ಚಾಗಿ ವಿದ್ಯುತ್ ಕಾರ್ಖಾನೆಗಳನ್ನು). ಆದರೆ ಆಂಡಯ್ಯ ಹೀಗೆ ಯೋಚಿಸಿ ಈ ಹೊಸಪದ ಹುಟ್ಟಿಹಾಕಿರಬಹುದೇ ಅನ್ನುವ ಊಹೆಗೆ ಅನೇಕ ಬಾಧೆಗಳಿವೆ. ಮೊದಲಾಗಿ ನಕ್ಷತ್ರಗಳಿಗೆ ಸ್ವಂತ ಬೆಳಕು/ಶಕ್ತಿಯಿದೆ ಆದರೆ ಗ್ರಹಗಳಿಗಿಲ್ಲ ಅನ್ನುವ ಅರಿವು ಇವತ್ತಿನದು, ಆಂಡಯ್ಯನ ಕಾಲದ್ದಲ್ಲ. ನಕ್ಷತ್ರಗಳು powerhouseಗಳೇ ಆದರೂ ನಮಗಲ್ಲ; ನಮ್ಮ powerhouse/ನಕ್ಷತ್ರವಾದ ಸೂರ್ಯನೂ (ಮತ್ತೆ ಉಪಗ್ರಹವಾದ ಚಂದ್ರನೂ) ನಮಗೆ ಗ್ರಹವೇ! ನಾವು ಗುರುತಿಸುವ ಇಪ್ಪತ್ತೇಳು ನಕ್ಷತ್ರಗಳಲ್ಲಿ ಸೂರ್ಯ ಒಂದಲ್ಲ. ಹೀಗಿರುವಾಗ ಅದೆಲ್ಲೋ ಮಿನುಗುವ ನಕ್ಷತ್ರಗಳು (ಸಾಮಾನ್ಯನ ಕಣ್ಣಿಗೆ ಅವು ಗ್ರಹಗಳೋ ನಕ್ಷತ್ರಗಳೋ ಅನ್ನೋದು ಕೂಡ ತಿಳಿಯದು), ಆಂಡಯ್ಯನಿಗೆ ಆರಿಲ್ಲುಗಳಾದುವೇ? ಯೋಚಿಸಬೇಕಾದ್ದು. ಹಾಗೊಂದುವೇಳೆ ಬಳಕೆಯಲ್ಲಿರುವ ಚುಕ್ಕೆಯೋ ಮತ್ತೊಂದೋ ಪದವನ್ನು ಬಿಟ್ಟು ಆರಿಲ್ ಎಂದೇ ಬಳಸಬೇಕಾದರೆ ಅದಕ್ಕೊಂದು ಕಾವ್ಯದ ಜರೂರು ಇರಬೇಕು. ನೀವು ತಿಳಿಸಿರುವ ಸಾಲಿನಲ್ಲಿ ನಕ್ಷತ್ರಗಳನ್ನು powerhouse ಅನ್ನುವ ಸಂದರ್ಭವೇನಾದರೂ ಇದೆಯೇ?

ಬದಲಿಗೆ, ಕವಿಯು ನಕ್ಷತ್ರಕ್ಕೆ ಅರಿಲ್ ಅನ್ನುವ ಬಳಕೆಯಲ್ಲಿರುವ ಪದವನ್ನೇ ಬಳಸಿದ್ದಾನೆ ಅನ್ನುವುದು ಸ್ಪಷ್ಟ. ಅಱಿಲ್ = ಅಱಲ್ = ಅಱಲು = ನಕ್ಷತ್ರ ಅನ್ನುತ್ತದೆ ಕಿಟೆಲ್ ನುಡಿಗಂಟು, ಮತ್ತು ಶಬ್ದಮಣಿದರ್ಪಣ (ಪ್ರಯೋಗಸಾರಂ).

ಮತ್ತೆ ಈ ಅಱಿಲ್ ಅನ್ನುವುದು ಆಱಿಲ್ ಅನ್ನುವುದರ ತಪ್ಪುರೂಪವಿರಬಹುದೇ ಎಂದರೆ ಅಲ್ಲವೆಂದೇ ಹೇಳಬೇಕಾಗುತ್ತದೆ, ಏಕೆಂದರೆ ಅಱಿಲ್ => ಅಱಲ್ ಅನ್ನುವುದಕ್ಕೂ ಬೇರನ್ನು ಹಿಡಿಯಬಹುದು, ಹೀಗೆ: ಅಱ ಎಂಬ ಪದಕ್ಕಿರುವ ಬಹು ಅರ್ಥಗಳಲ್ಲೊಂದು, ಅಂಬರ. ಅಂಬರಕ್ಕೆ ಬಟ್ಟೆ ಮತ್ತು ಆಕಾಶ ಎನ್ನುವ ಎರಡರ್ಥವಿದೆ. ಆಕಾಶ = ಅಲರ್ವಟ್ಟೆ - ಅಲರ್ ಬಟ್ಟೆ - (ಕಿಟ್ಟೆಲ್; ತೋಟಾದಾರ್ಯರ ಶಬ್ದಮಂಜರಿ). ಹೂವಿನ ಅರಳು (ಅರಲು) ಸುರಿದಂಥ ಬಟ್ಟೆಯಂತೆ (ಅಥವ ಹೂವಿನ ದಾರಿಯಂತೆ) ಆಕಾಶವು ತೋರುವುದು ಇದಕ್ಕೆ ಕಾರಣವಿರಬಹುದು. ಶಬ್ದಮಣಿದರ್ಪಣದ ಧಾತುಪ್ರಕರಣದಲ್ಲಿ ಅರಲ್ ಅನ್ನುವುದಕ್ಕೆ "ವಿಕಾಸೇ ಪುಷ್ಪೇ ಚ (ಹೂವು ಇತ್ಯಾದಿಗಳ ಅರಳುವಿಕೆ)" ಎಂಬ ನಿರ್ದೇಶನವಿದೆ. ಆದ್ದರಿಂದ ಅರಳ್ => ಅರಲ್ => ಅಱಲ್ => ಅಱಿಲ್ ಆಗಿರಬಹುದೆಂದು ಊಹಿಸಬಹುದು.

ಹೀಗೆ "ಅಱಿಲ್" ಎನ್ನುವುದು ಸರಿಯಾದ ಬಳಕೆಯೆಂದು ಗೊತ್ತುಪಡಿಸಿದಮೇಲೆ "ತಳ್ತಾಱಿಲ್" ಎಂಬುದರ ಸಂಧಿವಿಷಯವನ್ನು ತೀರ್ಮಾನಿಸಬೇಕಾಗುತ್ತದೆ. ನಿಮ್ಮ ಅನಿಸಿಕೆ ಸರಿ, ತಳ್ತು + ಅಱಿಲ್ ಅನ್ನುವುದು (ಅಥವ ತಳ್ತ + ಅಱಿಲ್ ಅಂದರೂ) "ತಳ್ತರಿಲ್" ಎಂಬ (ಉ ಅಥವ ಅಕಾರ) ಲೋಪಸಂಧಿಯೇ ಆಗಬೇಕಾಗುತ್ತದೆ. ಹಾಗಿದ್ದರೆ ಆಂಡಯ್ಯ ಛಂದಸ್ಸಿಗೋಸ್ಕರ ಸಂಧಿನಿಯಮವನ್ನು ಬಲಿಗೊಟ್ಟನೇ? ಬೇರುಪದಗಳ ವಿಷಯದಲ್ಲಿ ಕವಿ ಸಾಮಾನ್ಯವಾಗಿ ಈ ಸ್ವಾತಂತ್ರ್ಯವಹಿಸುತ್ತಾನೇನೋ (ವಿಠಲ = ವಿಠಲ್ಲ, ನಾರಾಯಣ = ನರಯಣ/ನಾರಯಣ ಇತ್ಯಾದಿ), ಆದರೆ ವ್ಯಾಕರಣದ ವಿಷಯದಲ್ಲಲ್ಲ - ಸಂಧಿಯ ವಿಷಯದಲ್ಲಂತೂ ಅಲ್ಲವೇ ಅಲ್ಲ. ಇಲ್ಲೂ ಕೂಡ ಲೋಪಸಂಧಿಯನ್ನು ಚಾಚೂತಪ್ಪದೆ ಪಾಲಿಸಲಾಗೇ ಇದೆ! ಅದನ್ನು ಬಿಡಿಸಬೇಕಾದ್ದು ಮಾತ್ರ ಹೀಗೆ:

ತಳ್ತ + ಆ + ಅಱಿಲ್ = ತಳ್ತಾಱಿಲ್.

ಇದೇ ರೀತಿ ಸೋಮೇಶ್ವರ ಶತಕದ ಈ ಸಾಲನ್ನು ಗಮನಿಸಿ:
"ಚರಿಪಾರಣ್ಯದ ಪಕ್ಷಿಗೊಂದು ತರು ಗೊಡ್ಡಾಗಲ್"
ಇಲ್ಲಿ ಚರಿಪ ಅರಣ್ಯದ ಪಕ್ಷಿ ಎಂದು ಬಿಡಿಸಿ ಚರಿಪರಣ್ಯ ಅಂದರೆ ಛಂದಸ್ಸು ಕೆಡುತ್ತದೆ. ಚರಿಪ ಅರಣ್ಯದ ಪಕ್ಷಿ = ಚರಿಪಾರಣ್ಯದ ಪಕ್ಷಿ ಅಂದರೆ ಸವರ್ಣದೀರ್ಘಸಂಧಿಯಾಗುತ್ತದೆ (ಅದು ತಪ್ಪು, ಏಕೆಂದರೆ ಚರಿಪ ಅನ್ನುವುದು ಕನ್ನಡ ಪದ). ಇಲ್ಲಿ ಚರಿಪ ಆ ಅರಣ್ಯದ ಪಕ್ಷಿ ಎಂದು ಬಿಡಿಸಿದರೆ ಪಕ್ಷಿಗೆ ಆ ಎನ್ನುವ ವಿಶೇಷಣ ಹೆಚ್ಚು ಅರ್ಥಕೊಡುತ್ತದೆ, ಅದೇ ಕವಿಯ ಉದ್ದೇಶ ಕೂಡ.6/6 (edited 6/6)DeleteUndo deleteReport spamNot spamHamsanandi ! - ಮೇಲಿನ ಎರಡೂ ಬರಹಗಳನ್ನು ನಿದಾನವಾಗಿ ಸ್ವಲ್ಪ ಓದಿ ಮನದಟ್ಟು ಮಾಡಿಕೊಳ್ಳುವ ಮೊದಲು, ತಕ್ಷಣ ಕಂಡುಬಂದ ಒಂದು ವಿಷಯದ ಬಗ್ಗೆ ಟಿಪ್ಪಣಿ ಅಷ್ಟೇ.

@ಮಂಜುನಾಥ

>>>ನಕ್ಷತ್ರಗಳಿಗೆ ಸ್ವಂತ ಬೆಳಕು/ಶಕ್ತಿಯಿದೆ ಆದರೆ ಗ್ರಹಗಳಿಗಿಲ್ಲ ಅನ್ನುವ ಅರಿವು ಇವತ್ತಿನದು, ಆಂಡಯ್ಯನ ಕಾಲದ್ದಲ್ಲ.

ಇದು ೧೦೦% ಸರಿ ಇಲ್ಲ - ಏಕೆಂದರೆ, ಆರ್ಯಭಟ, ವರಾಹ ಮಿಹಿರ ಮೊದಲಾದವರು "ಚಂದ್ರ" ಗ್ರಹವು ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತೆ ಅನ್ನುವುದನ್ನು ತಿಳಿದಿದ್ದರು. ಅವರು ಸೂರ್ಯನನ್ನೂ ಒಂದು ಗ್ರಹ ಎಂದು ಕರೆದಿದ್ದಾರೆ ಅನ್ನಿ. ಮತ್ತೆ ಬುಧ ಗುರು ಮೊದಲಾದ ಗ್ರಹಗಳಬಗ್ಗೆ ಅವರ ನಿಲುಮೆ ಏನಿತ್ತೋ ಎನ್ನುವುದು ಸ್ಪಷ್ಟವಾಗಿ ತಿಳಿವುದಿಲ್ಲ.

ಆದರೆ, ಕೆಲವು ಆಕಾಶಕಾಯಗಳಿಗೆ (ಉದಾ: ಸೂರ್ಯ, ಇತರ ತಾರೆಗಳು) ಸ್ವಂತ ಬೆಳಕಿರುವುದೂ, ಕೆಲವಕ್ಕೆ ಇಲ್ಲದಿರುವುದೂ (ಉ:ಚಂದ್ರ), ಆಂಡಯ್ಯನಿಗೆ ತಿಳಿದಿದ್ದಿರಬಹುದು.6/6DeleteUndo deleteReport spamNot spamBharath Kumar - ಹಂಸಾನಂದಿಯವರ ಹೇಳಿಕೆಗೆ ನನ್ನ ಒಪ್ಪಿಗೆಯಿದೆ. ವರಾಹ ಮಿಹಿರ, ಆರ್ಯಭಟ ಇವರುಗಳು ಆಂಡಯ್ಯನಿಗಿಂತ ಮೊದಲಿಗರು. ಅಂತ ನಾನು ತಿಳಿದಿದ್ದೇನೆ. ಆರಿಲ್ ಮತ್ತು ಗ್ರಹಗಳ ಇರುವ ಬೇರೆತನ ಗೊತ್ತಿಲ್ಲದಿದ್ದರೂ ಆಂಡಯ್ಯನಿಗೆ ಆರಿಲ್ ಗಳು ’energy centres' ಅನ್ನುವುದು ಗೊತ್ತಿತ್ತು ಅಂತ ಹೇಳುವುದರಲ್ಲಿ ಅಡ್ಡಿಯಿಲ್ಲ ಅಲ್ಲವೆ?Edit6/6 (edited 6/6)DeleteUndo deleteReport spamNot spamBharath Kumar - ಮಂಜುನಾಥರೆ,

ನನ್ನಿ,

ಮೊದಲಿಗೆ , ಕಬ್ಬಿಗರ ಕಾವನ್ ಪದ್ಯದ ೧೨೦ ನೇ ಪದ್ಯ ಈ ಎರಡು ಹೊತ್ತಗೆಗಳಿಂದ:-
೧. ಆಂಡಯ್ಯ ಕವಿಯ ಕಬ್ಬಿಗರ ಕಾವಂ (ಗದ್ಯಾನುವಾದ: ಆರ್. ವಿ. ಕುಲಕರ್ಣಿ) , ಕನ್ನಡ ಸಾಹಿತ್ಯ ಪರಿಷತ್ತು, ೨೦೦೯
೨. ಆಂಡಯ್ಯ ಮಹಾಕವಿ ಪ್ರಣೀತಂ ಕಬ್ಬಿಗರ ಕಾವಂ, ಪರಿಶ್ಕೃತ ತ್ರುತೀಯ ಮುದ್ರಣ, ಕರ್ನಾಟಕ ಕಾವ್ಯಮಂಜರಿಯ ಮತ್ತು ಕಾವ್ಯ ಕಲಾನಿದಿಯ ಪ್ರವರ್ತಕರೂ ರಾಮಾನುಜಯ್ಯಂಗಾರ್ಯರಿಂದ ಪರಿಶೋಧಿತವಾದುದು., ಮೈಸೂರು, ೧೯೩೦,

ಈ ಮೇಲಿನ ಎರಡು ಹೊತ್ತಗೆಗಳಲ್ಲಿ ’ತಳ್ತಾಱಿಲಂ" ಅಂತಾನೆ ಇದೆ.

ಜವನಂ ತುತ್ತುವೆನೊಂಬತುಂ ಗರಮನೆಣ್ಪುಂ ಗೊಂಟಿನೊಳ್ ಕಟ್ಟಿ ತೂ
ಗುವೆನ್ ಏೞುಂ ಕಡಲಂ ಕಡಂಗಿ ಕುಡಿವೆಂ ತಳ್ತಾಱಿಲಂ ಪೊಯ್ದುಂ ತೂ
ಱುವೆನ್ ಐದುಂ ಮೊಗಳ್ಳನಂ ಕೆಡಪುವೆಂ ನಾಲ್ಕುದೞಂ ನೂಂಕೆನ್
ಗುಣವೆನಾಂ ಮೂಱಡಿಯಿಟ್ಟ ನಚ್ಚಿಯರಡಂತೊಂದಾಗಿ ನೋೞ್ಪನ್ನೆಗಂ

ಇದಲ್ಲದೆ ೧ ನೇ ಪುಸ್ತಕದಲ್ಲಿ(ಆರ್. ವಿ.ಕುಲಕರ್ಣಿ) ಪುಟ ೯೭ ರಲ್ಲಿ ಕೊಟ್ಟಿರುವ ಅರ್ಥಕೋಶದಲ್ಲಿ ಹೀಗೆ ಕೊಟ್ಟಿದ್ದಾರೆ.
- *ಆ*ಱಿಲ್ = ನಕ್ಷತ್ರ, ತಾರೆ ಅಂದರೆ ’ಆ’- ಉದ್ದ ತೆರೆಯುಲಿಯನ್ನೇ ಕೊಟ್ಟಿದ್ದಾರೆ.

ಇಶ್ಟ್ರಾದರೂ ಬೇರೆ ಕೋಶಗಳಲ್ಲಿ (ಕಿಟ್ಟೆಲ್, DED) 'ಆಱಿಲ್’(ಉದ್ದ ತೆರೆಯುಲಿ) ಕೊಟ್ಟಿಲ್ಲದಿರುವುದರಿಂದ ಮತ್ತು ಅಱಿಲ್ (ಗಿಡ್ಡ ತೆರೆಯುಲಿಯೇ) ಕೊಟ್ಟಿರುವುದರಿಂದ ನೀವು ಹೇಳಿರುವ ತಳ್ತು+ಆ + ಅಱಿಲ್ = ತಳ್ತಾಱಿಲ್ ಒಪ್ಪಿಕೊಳ್ಳಬಹುದು.
ಆದರೂ ಮೂರು ಪದಗಳನ್ನು ಒಟ್ಟಿಗೆ ಸೇರಿಸುವ( ಸಂಧಿ ಮಾಡುವ) ಅಲುವಾಟ ಕನ್ನಡದ ಕಬ್ಬಗಳಲ್ಲಿ/ಮಾತಿನಲ್ಲಿ ತೀರ ಕಡಿಮೆಯೇ ಇರುವುದರಿಂದ ನಿಮ್ಮ ಬಿಡಿಸುವಿಕೆಯ ಮೇಲೆ ಅಯ್ಬು/ಅನುಮಾನ ಮುಂದುವರೆಯಬಹುದು.Edit6/6DeleteUndo deleteReport spamNot spamBharath Kumar - ಕುಲಕರ್ಣಿಯವರು ಕೊಟ್ಟಿರುವ ವಿವರಣೆ ಇದು:-
ಯಮನನ್ನೇ ನುಂಗುವೆನು, ಒಂಬತ್ತು ಗ್ರಹಗಳನ್ನು ಎಂಟು ದಿಕ್ಕುಗಳಿಗೆ ಕಟ್ಟಿ ತೂಗಿಬಿಡುವೆನ್, ಏಳು ಕಡಲುಗಳನ್ನು ರಬಸದಿಂದ ಕುಡಿದುಬಿಡುವೆನ್, (ಆಕಾಶದಲ್ಲಿ) ಹೊಂದಿಕೊಂಡ ನಕ್ಷತ್ರಗಳನ್ನು ಹೊಡೆದು ತೂರುವೆನು, ಐದು ಮೊಗವುಳ್ಳವನನ್ನು(ಶಿವನನ್ನು) ಕೆಡಹುವೆನು, ನನ್ನ ಚತುರಂಗ ಬಲ ನುಗ್ಗಲಾಗಿ ಮೂರು ಹೆಜ್ಜೆಯಿಟ್ಟವನ(ತ್ರಿವಿಕ್ರಮನ) ಕಣ್ಣುಗಳೆರಡು ಒಂದಾಗಿ ನೋಡುವಂತೆ ಮುನ್ನುಗ್ಗುವೆನು.Edit6/6DeleteUndo deleteReport spamNot spamManjunatha K.S - Hamsanandi ! ಆಸ್ಟ್ರಾನಮಿ ವಿಷಯಕ್ಕೆ ಬಂದಾಗ ನಿಮ್ಮಿಂದೊಂದು expert comment ಬರಬೇಕೆಂದು ನಿರೀಕ್ಷಿಸಿದ್ದೆ :)

ಕ್ಷಮಿಸಿ, ನನ್ನ ಕುಂದು. ಗ್ರಹ-ತಾರೆಗಳ ವ್ಯತ್ಯಾಸ ಸಾಮಾನ್ಯ ಅರಿವಿನ ಭಾಗವಾಗಿತ್ತೇ ಎಂದು ನನ್ನ ಪ್ರಶ್ನೆಯಿರಬೇಕಿತ್ತು; ವರಾಹಮಿಹಿರ ಇತ್ಯಾದಿಗಳ ವಿಜ್ಞಾನ ಅಂದಿಗೆ ವ್ಯವಹಾರ ಜ್ಞಾನದ ಮಟ್ಟಕ್ಕಿಳಿದಿತ್ತೇ; ಅದೊಂದು ಕವಿಸಮಯವಾಗುವಷ್ಟು? ಕವಿಯೊಬ್ಬ ಆ ಅರಿವಿನ ಆಧಾರದಮೇಲೆ ಹೊಸದೊಂದು ಪದವನ್ನು ಚಾಲ್ತಿಗೊಳಿಸಬೇಕಾದರೆ ಆ ಕಾನ್ಸೆಪ್ಟ್ ಜನಕ್ಕೆ ಬಹು ಪರಿಚಿತವಿರಬೇಕು, ಇಲ್ಲವೆಂದರೆ ಅಂಥಾ ಹೊಸಪದ ಕಾವ್ಯದಲ್ಲಿ ಸೋಲುತ್ತದೆ. ಆಂಡಯ್ಯ ಆರ್ ಇಲ್ ಎಂಬ ಹೊಸಪದವನ್ನು ಸೃಷ್ಟಿಸಿ ಅದು ಜನರಲ್ಲಿ ಅಭಿಪ್ರಾಯವಾಗಬೇಕೆಂದರೆ ಈ ಎರಡು ವಿಷಯಗಳು ಮೊದಲೇ ಸಿದ್ಧವಿರಬೇಕು:

೧) ಜನಸಾಮಾನ್ಯರ ಮಟ್ಟದಲ್ಲಿ ಯಾವುದು "ಆರಿಲ್ಲು"ಗಳು, ಯಾವುದು "ಆರಿಲ್ಲ"ಗಳು :) ಎಂಬ ಸ್ಪಷ್ಟ ಅರಿವಿರಬೇಕು

೨) ಸಾಮಾನ್ಯರಿಗೆ ಆಕಾಶದಲ್ಲಿ ಮಿನುಗುವ ವಸ್ತುಗಳನ್ನೆಲ್ಲಾ ಗ್ರಹ-ತಾರೆಗಳೆಂದು ಭೇದಮಾಡಿ ನೋಡುವ ಪರಿಪಾಠ ಸರ್ವವ್ಯಾಪಿಯಾಗಿ ಚಾಲ್ತಿಯಿದ್ದಿರಬೇಕು. ಆದರೆ ಇವತ್ತೂ ನಾವು (ಸಾಮಾನ್ಯವ್ಯವಹಾರದಲ್ಲಿ) ಬಾನಿನಲ್ಲಿ ಕಾಣುವ ಎಲ್ಲ ಚುಕ್ಕೆಗಳನ್ನೂ ನಕ್ಷತ್ರ/ತಾರೆಯೆಂದೇ ಹೆಸರಿಸುವುದು. ಇವತ್ತು ಗ್ರಹ-ತಾರೆಗಳ ಭೇದ ಜನಸಾಮಾನ್ಯರಲ್ಲಿ ಹೆಚ್ಚು ಸ್ಪಷ್ಟವಾಗಿದ್ದರೂ ಅವತ್ತು ಅದು ಕೇವಲ ವಿಜ್ಞಾನವಷ್ಟೇ ಆಗಿತ್ತೆನ್ನಬೇಕು. ಹೀಗೆ ಜನಕ್ಕೆ ಹೊಗದ ಹೊಸಪದವೊಂದನ್ನು ಸೃಷ್ಟಿಸುವ ಜರೂರಾದರೂ ಕವಿಗೆ ಏನಿತ್ತು? (ಅದರಲ್ಲೂ, ಅರಿಲ್ ಅನ್ನುವ ಪದ ಮೊದಲೇ ಇರುವಾಗ), ಇದು ನನ್ನ ಪ್ರಶ್ನೆ.6/6DeleteUndo deleteReport spamNot spamManjunatha K.S - @ ಬರತ,

ನಿಮ್ಮ ಎತ್ತುಗೆಯ ಸ್ವಾರಸ್ಯವನ್ನು ಗಮನಿಸುವುದಾದರೆ ಅಲ್ಲಿ ಒಂಬತ್ತರಿಂದ ಹಿಂದುಹಿಂದಾಗಿ ಒಂದರವರೆಗೂ ಹೋಗುವ ಚಮತ್ಕಾರವನ್ನು ಕವಿ ಮಾಡಿದ್ದಾನೆ. ಈ ಚಮತ್ಕಾರಕ್ಕಾಗಿಯೇ ನಕ್ಷತ್ರದ ಜಾಗದಲ್ಲಿ specific ಆಗಿ ಆಱನ್ನು ಹೋಲುವ ಪದ ಬರಬೇಕಾಗಿದ್ದು. ಇಲ್ಲಿ ಆ + ಅರಿಲ್ = ಆರಿಲ್ ಎಂದು ಸುಲಭವಾಗಿ ಛಂದಸ್ಸಿಗೂ ಚಮತ್ಕಾರಕ್ಕೂ ಹೊಂದಿಸುವ ಸೌಲಭ್ಯವನ್ನು ಕವಿ ಬಳಸಿಕೊಂಡಿದ್ದಾನೆ ಅಷ್ಟೇ; ಅದು ಬಿಟ್ಟು ನಕ್ಷತ್ರಗಳನ್ನು powerhouse ಆಗಿ ಚಿತ್ರಿಸುವ ಯಾವ ಇರಾದೆಯೂ ಕವಿಗಿದ್ದಂತೆ ಕಂಡುಬರುವುದಿಲ್ಲ. ಇಲ್ಲಿ ಕೇವಲ ಅಱಿಲ್ ಎಂದು ಬಳಸಿದರೆ ಛಂದಸ್ಸಿಗೂ ಎರವು, ಚಮತ್ಕಾರಕ್ಕೂ ಎರವು. ಆದ್ದರಿಂದ ಅವೆರಡಕ್ಕೂ ಹೊಂದುವಂತೆ, ಮತ್ತು ಅಱಿಲ್ ಎಂಬುದಕ್ಕೆ ತುಸು ಒತ್ತು ನೀಡಲು ಆ ಎನ್ನುವ ವಿಶೇಷಣವನ್ನು ಬಳಸಿಕೊಂಡಿದ್ದಾನೆ. ಆದ್ದರಿಂದ ಆ + ಅಱಿಲ್ = ಆಱಿಲ್.

ಹಾಗಲದೇ, ಇದು ಕವಿಯ ಹೊಸ ಪದವೆಂದರೆ ಅದು ಮುಂದಿನ ನುಡಿಗಂಟುಗಳಲ್ಲಿ ಸೇರ್ಪಡೆಯಾಗಬೇಕಿತ್ತು, ಮುಂದೆ ಕೆಲವೆಡೆಯಲ್ಲಾದರೂ ಆ ವಿಶೇಷಾರ್ಥದಲ್ಲಿ ಬಳಕೆಗೆ ಬರಬೇಕಿತ್ತು (ಆಂಡಯ್ಯನೇ ಆಱಿಲ್ ಎಂಬ ಪದವನ್ನು ಅದೇ ವಿಶೇಷಾರ್ಥದಲ್ಲಿ ಮತ್ತೆಲ್ಲಾದರೂ ಬಳಸಿದ್ದಾನೆಯೇ? ತಿಳಿದಿಲ್ಲ). ನನಗೆ ತಿಳಿದ ಎಲ್ಲಾ ನುಡಿಗಂಟುಗಳಲ್ಲೂ ಅಱಿಲ್ ಎಂಬ ಪದವಿದೆಯೇ ಹೊರತು ಆಱಿಲ್ ಎಂಬ ಪದವಿಲ್ಲ. ಕೇವಲ ಕರ್ನಾಟಕ ಸಹಕಾರಿ ಪ್ರಕಾಶನ ಮಂದಿರದವರು ಪ್ರಕಾಶಿಸಿದ ಕಾವ್ಯಪದಮಂಜರಿಯಲ್ಲಿ ಮಾತ್ರ ಆಱಿಲ್, ಮತ್ತು ಅಱಿಲ್ ಎರಡೂ ಪದ ಒಟ್ಟಿಗಿದ್ದು ಅರ್ಥ ನಕ್ಷತ್ರವೆಂದು ನಿರ್ದೇಶಿಸಲ್ಪಟ್ಟಿದೆ, ಆದರೆ ಅಲ್ಲೂ ಯಾವುದೇ ಎತ್ತುಗೆಯಾಗಲೀ ಬೇರು ವಿವರಣೆಯಾಗಲಿ ಇಲ್ಲ. ಆದರೆ ಅಱಿಲ್ ಗೆ ಮಾತ್ರ ನಾನು ಮೊದಲು ತಿಳಿಸಿದ ಬೇರು ವಿವರಣೆಗಳು ಅನೇಕ ಕಡೆ ಕಂಡುಬರುತ್ತವೆ. ಹೊಸಪದವೊಂದನ್ನು, ಅದರಲ್ಲೂ ಕಬ್ಬಿಗರ ಕಾವಂನಂಥ ವಿಶಿಷ್ಟ (ಸಂಪೂರ್ಣ ಕನ್ನಡ) ಕಾವ್ಯವೊಂದರಲ್ಲಿ ಬಳಕೆಗೆ ತಂದಾಗ ಅದು ಮುಂದಿನ ಯಾವ ಪದಗಂಟಿನಲ್ಲೂ ಕಾಣಸಿಗದಿದ್ದುದು ವಿಚಿತ್ರವಲ್ಲವೇ? ಈ ಪ್ರಶ್ನೆಗಳಿದ್ದಾಗ ಆಱಿಲ್ ಅನ್ನುವುದೇ ಮೂಲಪ್ರಯೋಗವೆನ್ನುವುದು ಎಷ್ಟು ಸರಿ? ಇದೇ ಕಾರಣದಿಂದಲೇ ಮೇಲೆ ಹೇಳಿದ ಕಾವ್ಯಪದಮಂಜರಿಯಂತೆ ಅರ್. ವಿ. ಕುಲಕರ್ಣಿಯವರ ಅರ್ಥವಿವರಣೆಯನ್ನೂ ಕೈಬಿಡಬೇಕಾಗುತ್ತದೆ (ಅಥವಾ ಈ ಬಗ್ಗೆ ಶ್ರೀ ಕುಲಕರ್ಣಿಯವರ ಬೇರೇನಾದರೂ ವಿವರಣೆಯಿದ್ದರೆ, ಎಲ್ಲಾದರೂ, ಇದನ್ನು ಮತ್ತೆ ನೋಡಬಹುದು). ಅಥವಾ ಆಱಿಲ್ ಅನ್ನುವ ಪದವನ್ನು ಒಪ್ಪಿದರೂ ಅದಕ್ಕೆ ನೀವು ಹೇಳಿದ ಅರ್ಥವಿವರಣೆಯನ್ನು ಒಪ್ಪುವುದು ಕಷ್ಟವಾಗುತ್ತದೆ (ಆಂಡಯ್ಯನ ಸಂದರ್ಭದಲ್ಲಿ ಮಾತ್ರ). ಹೆಚ್ಚೆಂದರೆ ಆಱಿಲ್ <= ಅಱಿಲ್ <= ಅರಲ್ ಎಂದು ಅದರ ಬೇರು ವಿವರಣೆಯನ್ನು ನೀಡಬೇಕಾಗುತ್ತದೆ.

ಮೂರುಪದಗಳನ್ನು ಸೇರಿಸಿ ಸಂಧಿಮಾಡುವ ಬಳಕೆ ಕಾವ್ಯದಲ್ಲಿ ಕಡಿಮೆಯೇ ಇರಬಹುದು, ಆದರೆ ಹೊಸದೇನಲ್ಲ. ಅದಕ್ಕೆಂದೇ "ಚರಿಪಾರಣ್ಯದ ಪಕ್ಷಿ"ಯ ಉದಾಹರಣೆ. ಮತ್ತೂ ಅನೇಕ ಉದಾಹರಣೆಗಳಿರಬಹುದು, ಹುಡುಕಿದರೆ ಖಂಡಿತಾ ಸಿಗುತ್ತದೆ. ಅದೇನೇ ಇರಲಿ ಪ್ರಖ್ಯಾತವಾದ ನಾಮಪದದ ಹಿಂದೆ ಕಾವ್ಯದ ಸಂದರ್ಭದಲ್ಲಿ "ಆ" ವಿಶೇಷಣ ಬಳಸುವುದಂತೂ ತೀರ ಬಳಕೆಯೇ ಆಗಿದೆ - "ಆ ನೀರೊಳಗಿರ್ದುಂ", "ಹರಿಯುಂ ಮತ್ತಾ ಹರನಂ", "ವಧೂತ್ಕರಮಾ ಪುರುಷರ್ಗೆ" ಇತ್ಯಾದಿ. ಇಂಥೆಡೆಯಲ್ಲಿ ನೀರ್, ಹರನಂ, ಪುರುಷರ್ ಇತ್ಯಾದಿಗಳ ಬದಲಿಗೆ ಅಕಾರದಿಂದ ಮೊದಲಾಗುವ ಪದ ಬಂದರೆ ಅದರ ಲೋಪವಾಗುವುದು ಸಹಜವೇ ಆಗಿದೆ. ಆದ್ದರಿಂದ "ತಳ್ತ ಆ ಅಱಿಲಂ ಪೊಯ್ದು ತೂಱುವೆನ್" (ಆಕಾಶದಲ್ಲಿ ನೆಲೆಸಿದ ಆ ನಕ್ಷತ್ರಗಳನ್ನು ಒಡೆದು ತೂರುವೆ) ಎಂಬುದು ಸಹಜವಾಗೇ ಇದೆ.6/6 (edited 6/7)DeleteUndo deleteReport spamNot spamBharath Kumar - ನಿಮ್ಮ ವಿವರಣೆ ಸರಿಯಿದೆ ಅಂತ ಅನ್ನಿಸ್ತಾ ಇದೆ !! ಅದನ್ನ ನಾನು ಗಮನಿಸಿರಲಿಲ್ಲ!
ಒಂಬತ್ತು ಗ್ರಹ,
ಎಂಟು ದಿಕ್ಕು
ಏಳು ಕಡಲು,
ಆರು ಎಂಬುದಕ್ಕೆ ಆಂಡಯ್ಯನಿಗೆ ಯಾವುದು ಸಿಗಲಿಲ್ಲ ಅದಕ್ಕೆ ಆ +ಅರಿಲ್ ಅಂತ ಮಾಡಿರಲು ಸಾಕು
ಐದು ಮೊಗವುಳ್ಳವ
ನಾಲ್ಕು ದಳ (ಚತುರಂಗ)
ಮೂರು ಹೆಜ್ಜೆಯಿಟ್ಟವ( ತ್ರಿವಿಕ್ರಮ)
ಎರಡು ಕಣ್ಗಳ್
ಒಂದು ನೋಟ.

ಆಂಡಯ್ಯ ಸಕ್ಕತ್!

ಆದರೊ ಆರ್. ವಿ. ಕುಲಕರ್ಣಿಯವರೊ ಯಾಕೆ ’ಆಱಿಲ್’ ಅಂತ ಕೊಟ್ಟರೊ ತಿಳಿಯದು

ಆದರೂ ’ಆಱಿಲ್’ ಅಂತ ನಾನು ಪದವುಟ್ಟಿಸಿದರೆ ತಮಗೆ ಅದು ಒಪ್ಪಿಗೆಯಿದೆ ಅಂತ ಬಗೆದಿದ್ದೇನೆ.Edit6/7DeleteUndo deleteReport spamNot spamManjunatha K.S - ಆ ಸಂದರ್ಭಕ್ಕೆ ಆರು ಎಂಬ ದನಿ ಬೇಕಿತ್ತು, ಅರ್ಥವಿರಲೇಬೇಕಿಲ್ಲ, ಮತ್ತೆ ಮೊದಲೇ ಹೇಳಿದಂತೆ ಅದು ಆಱಿಲ್ ಅಲ್ಲ, ಆ ಅಱಿಲ್ (ಆರು ಅನ್ನುವ ಪದ ಕೊಡುತ್ತದಲ್ಲ), ಅಷ್ಟೇ.

ಮೊದಲೇ ಊಹಿಸಿದಂತೆ, ಕುಲಕರ್ಣಿಯವರು ಇದನ್ನು (ಆಱಿಲ್) ಗಮನಿಸಿರದಿರಬಹುದು, ಅಥವ ಅಱಿಲ್ => ಆಱಿಲ್ ಆಗಿರಬಹುದು; ಅವರ ಆಧಾರಗಳಾವುವೋ ತಿಳಿಯದು, ನಮಗಂತೂ ಆಧಾರಗಳಿಲ್ಲ, ಆಧಾರಗಳಿಲ್ಲದೇ ಬೇರುಪದಗಳನ್ನು ಒಪ್ಪುವಂತಿಲ್ಲ.

ನಿಮ್ಮ ಪದವುಟ್ಟು ಸರಿಯೇ, ಅದನ್ನು ಆಗಲೇ ಹೇಳಿದೆ. ನನ್ನ ತಕರಾರೇನಿದ್ದರೂ ಅದೇ ಆಂಡಯ್ಯನ ನೋಟವಾಗಿರಬಹುದು ಎಂಬುದಕ್ಕೆ.6/7DeleteUndo deleteReport spamNot spamHamsanandi ! - >> ಮೂರುಪದಗಳನ್ನು ಸೇರಿಸಿ ಸಂಧಿಮಾಡುವ ಬಳಕೆ ಕಾವ್ಯದಲ್ಲಿ ಕಡಿಮೆಯೇ ಇರಬಹುದು

ಕನ್ನಡಮೆನಿಪ್ಪಾನಾಡು ಚೆಲ್ವಾಯ್ತು - ಅನ್ನುವುದು ಇಂತಹ ಒಂದು ಉದಾಹರಣೆಯೇ?6/7DeleteUndo deleteReport spamNot spamManjunatha K.S - ಅದು ಎರಡು ಪದ "ಕನ್ನಡಮೆನಿಪ್ಪ ಆ"6/7DeleteUndo deleteReport spamNot spamPriyank Bhargav - ಮಂಜುನಾಥ ಅವರು ಮೊದಲ ಬಾರಿ ಹೇಳಿದ್ದು ಹೌದೆನ್ನಿಸಿತು.
ಆಮೇಲೆ ಹಂಸಾನಂದಿ ಅವರು ಹೇಳಿದ್ದೂ ಹೌದೆನ್ನಿಸಿತು :-)

ಆರ್ಯಬಟ ಅವರ ಅರಿಮೆ ಆಂಡಯ್ಯನವರಿಗೆ ಹರಿದು ಬಂದಿಲ್ಲದಿದ್ದರೂ, ಹೊಳೆಯುವ ಎಲ್ಲವಕ್ಕೂ ತನ್ನದೇ ಆದ ಶಕ್ತಿ ಇದೆ ಎನ್ನುವ ಅರಿಮೆ ಆಂಡಯ್ಯನವರಿಗೆ ಇದ್ದಿತು ಎಂದು ನಂಬಬಹುದು.
ಇರುಳು ಹೊತ್ತಿನಲ್ಲಿ ಗ್ರಹಗಳೂ ತುಸು ಹೊಳೆಯುವುದರಿಂದ, ಗ್ರಹಗಳೂ, ನಕ್ಷತ್ರಗಳೂ, ಎಲ್ಲವನ್ನೂ ಒಟ್ಟಾಗಿ 'ಆರಿಲ್' ಎಂದು ಕರೆದಿರಬಹುದಾ?6/7DeleteUndo deleteReport spamNot spamBharath Kumar - ಇದಲ್ಲದೆ ’ಮೀನ್’=star= ತಾರೆ... ಅನ್ನೊ ಪದವನ್ನು/ಅರಿತವನ್ನು ಕಿಟ್ಟೆಲ್ ನಿಗಂಟುವಿನಲ್ಲಿ ನಲ್ಲಿ ಕೊಡಲಾಗಿದೆ.Edit6/7DeleteUndo deleteReport spamNot spamManjunatha K.S - ಇದ್ದಿರಬಹುದು, ಆದರೆ ಯಾವ ಸಂದರ್ಭವೂ ಇಲ್ಲದೇ ಕೇವಲ ನಕ್ಷತ್ರಗಳು ಶಕ್ತಿಮೂಲಗಳೆನ್ನುವ ಕಾರಣಕ್ಕೆ ಹೊಸ ಪದವೊಂದನ್ನು ಹುಟ್ಟುಹಾಕುವ ಜರೂರು ಆ ಪದ್ಯದ ಸಂದರ್ಭದಲ್ಲಂತೂ ನನಗೆ ಕಾಣುತ್ತಿಲ್ಲ. ಹಾಗೊಂದುವೇಳೆ ಅದು ಆಂಡಯ್ಯನು ಹುಟ್ಟುಹಾಕಿದ ಪದವೇ ಆಗಿದ್ದರೆ, ಅದನ್ನವನು ಇದಕ್ಕೂ ಮೊದಲೇ ಬೇರೊಂದು ಕಾವ್ಯದ ಸಂದರ್ಭದಲ್ಲಿ ಹುಟ್ಟುಹಾಕಿದ್ದಿರಬೇಕು; ಮತ್ತು ಅದನ್ನು ಮತ್ತೆ ಹಲವೆಡೆ ಬಳಸಿರಬೇಕು. ಅದಿಲ್ಲದೇ ಕೇವಲ ಪ್ರಾಸ, ಎಣಿಕೆ, ಛಂದಸ್ಸಿಗೋಸ್ಕರವಷ್ಟೇ ಹೊಸಪದ ಹುಟ್ಟುತ್ತದೆಯೇ? ಇದು ಪ್ರಶ್ನೆ. ಸನ್ನಿವೇಶವನ್ನು ನೋಡಿ, ತರ್ಕಿಸಿ ಮುಡಿವುಮಾಡುವುದು ಕ್ರಮ; ಹಾಗಲ್ಲದೇ ಮೊದಲೇ ಮುಡಿವು ಮಾಡಿಕೊಂಡು, ಅನಂತರ ತರ್ಕಿಸಿ ಅದಕ್ಕೆ ತಕ್ಕ ಸನ್ನಿವೇಶವನ್ನು ಹುಡುಕುವುದೇ? ನಮ್ಮೆಲ್ಲ ಚರ್ಚೆಗಳೂ ಆರ್ ಇಲ್ ಆರಿಲ್ (ಶಕ್ತಿಮನೆ) = ನಕ್ಷತ್ರ ಎಂದು ಮುಡಿವು ಮಾಡಿಕೊಂಡು ಅದನ್ನು ಆಂಡಯ್ಯ ಸೃಷ್ಟಿಸಿದ್ದಾನೆಂದು ಸಾಧಿಸುತ್ತಿವೆಯಲ್ಲವೇ?6/7

- ಇಲ್ಲ ಮಂಜುನಾಥ್..... ಕುಲಕರ್ಣಿಯವರು ಹಾಗೆ ಕೊಟ್ಟಿದ್ದರಿಂದ ಆರಿಲ್ ಎಂಬ ಪದದ ಸಾದ್ಯತೆ ಬಂತೆ ಹೊರತು ನಮ್ಮ ಮುಡಿವನ್ನು ತುರುಕುವುದಕ್ಕಲ್ಲEdit6/7DeleteUndo deleteReport spamNot spamManjunatha K.S - ಕುಲಕರ್ಣಿಯವರು ಕೇವಲ ಪದದ ಅರ್ಥವನ್ನು ಕೊಟ್ಟಿದ್ದಾರೆಯೇ ಹೊರತು ಯಾವ ಆಕರ/ಎತ್ತುಗೆ/ವಿವರಗಳನ್ನೂ ಕೊಟ್ಟಿಲ್ಲ. ಆದರೆ ತಾರ್ಕಿಕವಾಗಿ ಅಱಿಲ್ ಅನ್ನುವ ಪದ ಸರಿಯಾಗಿಯೇ ಇರುವುದರಿಂದ (ಮತ್ತು ಅದಕ್ಕೆ ಬಳಕೆಯಲ್ಲಿರುವ ಎತ್ತುಗೆಗಳೂ ಇವೆ) ಈ ಸಂದರ್ಭಕ್ಕೆ ಕುಲಕರ್ಣಿಯವರ ವಿವರಣೆಯನ್ನು ಕಡೆಗಣಿಸಬಹುದೆಂದಿದ್ದು (ಅಥವ ಅವರ ವಿವರಣೆಯೇನಾದರೂ ಬೇರೆಡೆಯೆಲ್ಲಾದರೂ ದಕ್ಕಿದರೆ ಇದನ್ನು ಮತ್ತೆ ನೋಡಿದರಾಯಿತು

’ಆರ್ಯ’ ಪದ ಹೇಗೆ ಬಂತು?

1. Latin Canarese ( ಲತೀನ - ಕನ್ನಡ ನಿಗಂಟು 2010 - ಲೂಯಿ ಶಾರ್ಬೊನೊ) ನೋಡುತ್ತಾ ಇದ್ದೆ
ಈ ಪದಗಳು ಗಮನ ಸೆಳೆಯಿತು
೧. aratio (Latin) ಈ ಪದಕ್ಕೆ ಸಾಗುವಳಿ, ಉಳುವಿಕೆ
೨. arator (Latin) ಈ ಪದಕ್ಕೆ ಆರಂಬಕಾರ, ಒಕ್ಕಲಿಗ, ರೈತ, ಉಳುವವ
೩. aratr um(Latin) ಈ ಪದಕ್ಕೆ ಆರು, ಏರು, ನೇಗಿಲ್
- ಈ ಅರಿತಗಳನ್ನು ಕೊಟ್ಟಿದ್ದಾರೆ

2. ಇನ್ನೊಂದು ಹೊತ್ತಗೆ ಡಾ| ಎಸ್. ವೇಣುಗೋಪಾಲಾಚಾರ್ಯ ಎಂ.ಎ. ಪಿ.ಎಚ್.ಡಿ ಇವರು ಬರೆದಿರುವುದು- ’ವಿಶ್ವ ಕನ್ನಡ ತಮಿಳು ಮೂಲದ ಇಂಗ್ಲಿಶ್ ಮತ್ತು ಹಿನ್ದಿ ಚೀಣೀ ಸ್ವಬೋಧಿನಿ’(1983) - ಇದರ ಮುನ್ನುಡಿಯಲ್ಲಿ ಬರೆಯುತ್ತ " ಹಿಂದಿ, ಇಂಗ್ಲಿಶ್, ಲ್ಯಾಟಿನ್, ಸಂಸ್ಕ್ರುತ, ಮುಂತಾದುವು ಆರ್ಯ ಬಾಶೆಗಳೆಂದೂ ಆರ್ಯ ಎಂಬುದು ಲ್ಯಾಟಿನ್ನಿನಲ್ಲಿ ’ಉಳುವನೇಗಿಲು’ ಎಂಬರ್ತವುಳ್ಳ ’AR' ಪದಾಂಶದಿಂದ ರಚಿತವಾದುದೆಂದು, ಕನ್ನಡ ನಾಡಿನ ಹಳ್ಳಿಹಳ್ಳಿಯ ರೈತರು ಬೆಳಿಗ್ಗೆ ಎದ್ದೊಡನೆ, ಎತ್ತಿಗೆ ನೇಗಿಲನ್ನು ಸೇರಿಸುವಾಗ ’ಏರ್’ ಕಟ್ಟುವುದಿಲ್ಲವೆ? ’ಏರ್’ ನ ಲ್ಯಾಟಿನ್ ಸಮಪದವಾದ ’ಆರ್’ ದ್ರಾವಿಡ ಶಬ್ದವಲ್ಲವೆ?" ಅಂತ ಹೇಳಿದ್ದಾರೆ
3. ಸೇಡಿಯಾಪು ಅವರ ಹೊತ್ತಗೆ ’ ಶಬ್ದಾರ್ತಶೋದ’ ದಲ್ಲಿಯೂ ಕೂಡ ’ಆರ್ಯ’ ಎಂಬುದಕ್ಕೆ ಉಳುವವ, ಕ್ರುಶಿಕಾರ ಎಂಬ ಅರಿತವನ್ನೇ ಪದೇ ಪದೇ ಹೇಳಿದ್ದಾರೆ.

ಹಾಗಾದರೆ ’ಆರ್ಯ’ ಎಂಬ ಪದವೇ ದ್ರಾವಿಡ ಬೇರಿನ ಪದವೆ? ’ಬಗೆ’( ಯೋಚನೆ)ಯಬೇಕಾದ ವಿಚಾರ.!!!

’ಆರಂಬ’ ಎಂಬ ಪದ ಹೇಗೆ ಬಂತು?

’ಆರಂಬ’ ಎಂಬ ಪದಬಳಕೆ ನಮ್ಮ(ಮಂಡ್ಯ, ಮೈಸೂರು) ಕಡೆ ಇದೆ.
ಏರಂಬ =ಆರಂಬ = ಉಳುಮೆ= ಬೇಸಾಯ
ಕನ್ನಡದಲ್ಲಿ *ಆರ್*/ಆರು (ಹಾಸನದ ಕಡೆ) ಮತ್ತು *ಏರ್*(ಮಂಡ್ಯ, ಮೈಸೂರು ಕಡೆ) ಪದಬಳಕೆಯೂ ಕೂಡ ಇನ್ನು ಇದೆ. ಇದಕ್ಕೆ ದ್ರಾವಿಡ ನಿಘಂಟಿನಲ್ಲಿ ಈ ಅರ್ಥ ಕೊಡಲಾಗಿದೆ. Ka. ēru, ār pair of oxen yoked to a plough.

ಇದನ್ನು ಬಿಡಿಸಲು ತಲೆಗೆ ಹುಳ ಬಿಟ್ಟುಕೊಂಡಾಗ ನನ್ನ ಚಿಕ್ಕ ತಿಳಿವಿಗೆ ಎಟಕಿದ್ದು ಇಶ್ಟು.
ಏರ್ಂ+ಪು = ಏರಂಪು =ಏರಂಬ
ಆರ್ಂ+ಪು = ಆರಂಪು =ಆರಂಬ

ಯಾಕಂದರೆ,
ತೆನ್=> ತೆನ್ಪು= ತೆಂಪು = ತೆಂಬು( ದಕ್ಷಿಣ)
ತೆಂಬು +ಎಲರ್ = ತೆಂಬೆಲರ್ = ತೆಂಕಣ ಗಾಳಿ ( ಮಲಯ ಮಾರುತ, ದಕ್ಷಿಣದಿಂದ ಬೀಸುವ ಗಾಳಿ)

ತೆಂಬೆಲರ್ ಎಂಬ ಪದ ಬಳಕೆ ಪಂಪನಿಂದ ಹಿಡಿದು ಆಂಡಯ್ಯನವರೆಗೂ ಹಲವು ಹಳಗನ್ನಡದ ಬರಹಗಳಲ್ಲಿ ಬಳಕೆಯಾಗಿದೆ

ನಮ್ಮ ಮನೆಯ ಹೂಗಳು/ಗಿಡಗಳು

ನಮ್ಮ ಮನೆಯ ಗಡಿಗೋಡೆಯ(compound) ಒಳಗೆ ಬೆಳೆಯುತ್ತಿರುವ ಗಿಡಗಳು/ಹೂವುಗಳ ಸರ್ವೆ /ಲೆಕ್ಕ ಮಾಡಿದಾಗ ಹೆಮ್ಮೆಯಾಯಿತು
೧. ಮಲ್ಲಿಗೆ
೨. ಸೂಜಿಮಲ್ಲಿಗೆ
೩. ಬಿಳಿ ಲಿಲ್ಲಿ
೪. ದೇವ ಕಣಗಿಲೆ
೫. ಬಿಳಿ ದಾಸವಾಳ
೬. ಕೆಂಪು ದಾಸವಾಳ
೭. ಕಡುಗೆಂಪು ಗುಲಾಬಿ
೮. ಹಳದಿ ಗುಲಾಬಿ
೯. ಪನ್ನೀರ್ ಗುಲಾಬಿ ( ಪಾಟಿಯಲ್ಲಿ/ಗಾತ್ರದಲ್ಲಿ ಚಿಕ್ಕದು)
೧೦. ನಸುಗೆಂಪು(ಪಿಂಕ್) ಗುಲಾಬಿ
೧೧. ತುಂಬೆ
೧೨. ಕನಕಾಂಬ್ರ
೧೩. ಆನ್ತೋರಿಯಂ
೧೪. ನಂದಿಬಟ್ಟಲು
೧೫. ಮೇ ಹೂವು ( may flower)
೧೬. ಕಾಡುಮಲ್ಲಿಗೆ ( ಕಂಪಿಲ್ಲದಿರುವುದು ಬಿಳಿ ಹೂವು)
೧೭. ಕಾಕಡ
೧೮. ಚೆಂಡು ಮಲ್ಲಿಗೆ
೧೯. ಕೆಂಪು ಹೂವು ( ಹೆಸರು ಗೊತ್ತಿಲ್ಲ)
೨೦. ಬ್ರೌನ್ ಬಣ್ಣದ ಹೂವು( ಹೆಸರು ಗೊತ್ತಿಲ್ಲ)
೨೧. ಗಂಟೆ ದಾಸವಾಳ

ಇದಲ್ಲದೆ ಟೊಮಾಟೊ ಹೂವು, ತೆಂಗಿನ ಹೂವು( ಹೊಂಬಾಳೆ) ಕಾಣಸಿಗುತ್ತವೆ. ಇದಲ್ಲದೆ ಗಡಿಗೋಡೆಯಿಂದ ಮಗ್ಗುಲಿನಲ್ಲಿ ಆಚೆಗೆ ಕಣಗಿಲೆ, ಸಂಪಿಗೆ, ಹೊಂಗೆ, ಬೇವಿನ ಗಿಡಮರಗಳಿವೆ.

ಅಚ್ಚಚ್ಚು ಬೆಲದಚ್ಚು...

ಇದು ಚಿಕ್ಕಂದಿನಲ್ಲಿ ನಾವು ಹಾಡುತ್ತಿದ್ದ ಹಾಡು

ಅಚ್ಚಚ್ಚು ಬೆಲದಚ್ಚು
ಅಲ್ಲಿ ನೋಡು ಕಾಗೆ ಗುಂಪು
ಇಲ್ಲಿ ನೋಡು ಕಾಗೆ ಗುಂಪು
ಯಾವ ಕಾಗೆ
ಕಪ್ಪು ಕಾಗೆ
ಯಾವ ಕಪ್ಪು
ಇಜ್ಜಿಲು ಕಪ್ಪು
ಯಾವ ಇಜ್ಜಿಲು
ಸವ್ದೆ ಇಜ್ಜಿಲು
ಯಾವ ಸವ್ದೆ
ಕಾಡು ಸವ್ದೆ
ಯಾವ ಕಾಡು
ಸುಡುಗಾಡು
ಯಾವ ಸೂಡು
ರೊಟ್ಟಿ ಸೂಡು
ಯಾವ ರೊಟ್ಟಿ
ತಿನ್ನೊ ರೊಟ್ಟಿ
ಯಾವ ತಿನ್ನ
ಏಟು ತಿನ್ನ
ಯಾವ ಏಟು
ದೊಣ್ಣೆ ಏಟು
ಯಾವ ದೊಣ್ಣೆ
ದಪ್ಪ ದೊಣ್ಣೆ
ಯಾವ ದಪ್ಪ
ನಿನ್ನೊಟ್ಟೆ ದಪ್ಪ ..!!!!!

ಒಂದಕ್ಕೊಂದು ಒಂದಕ್ಕೊಂದು ಪದಗಳನ್ನು ಮತ್ತು ಸುತ್ತಲಿರುವ ಪರಿಸರವನ್ನು ಬೆಸೆಯುವ ಈ ಹಾಡು ’ಕಾವ್ಯಪ್ರಯೋಗಮತಿಗಳ್’ ಎಂಬುದಕ್ಕೆ ಒಂದು ಒಳ್ಳೆಯ ಎತ್ತುಗೆ.

ಊಟದ ಹಾಡು

ಮಕ್ಕಳಿಗೆ ಊಟದ ಹಾಡು...ಚೆನ್ನಾಗಿರುತ್ತೆ. ನಾನು ಚಿಕ್ಕವನಾಗಿದ್ದಾಗ ಕೇಳಿದ್ದು/ಓದಿದ್ದು.

ಒಂದು ಎರಡು
ಬಾಳೆಲೆ ಹರಡು
ಮೂರು ನಾಕು
ಅನ್ನ ಹಾಕು
ಅಯ್ದು ಆರು
ಬೇಳೆ ಸಾರು
ಏಳು ಎಂಟು
ಪಲ್ಯಕೆ ದಂಟು
ಒಂಬತ್ತು ಹತ್ತು
ಉಂಡೆಲೆ ಎತ್ತು -> ಎಲೆ ಮುದಿರೆತ್ತು (ಈ ಸಾಲು ಸರಿಯಾಗಿದಿಯೋ ಇಲ್ವೊ ಗೊತ್ತಿಲ್ಲ)
ಒಂದರಿಂದ ಹತ್ತು (ಹೀಗಿತ್ತು)
ಊಟದ ಆಟವು ಮುಗಿದಿತ್ತು

ಅಂಕಿಗಳ ಜೊತೆಜೊತೆಗೆ ಒಳ್ಳೆಯ ಊಟದ ಪರಿಚಯವೂ ಮಕ್ಕಳಿಗೆ ಇದರ ಮೂಲಕ ಆಗುತೆ

ಡಾ| ಡಿ.ಎಸ್. ಶಿವಪ್ಪನವರ ಹೊತ್ತಗೆಗಳ ಬಗ್ಗೆ

ಕೆಲವು ದಿನಗಳ ಹಿಂದೆ ಬೆಂಗಳೂರು ಪ್ರಸರಾಂಗದ ಮಳಿಗೆ(ಸೆಂಟ್ರಲ್ ಕಾಲೇಜು)ಗಳಿಂದ ಕೆಲವು ಹೊತ್ತಗೆಗಳನ್ನು ಕೊಂಡ್ಕೊಂಡೆ.

೧. ವೈದ್ಯಕ ಪದಗಳ ಹುಟ್ಟು ಮತ್ತು ರಚನೆ - ಡಾ ಡಿ.ಎಸ್. ಶಿವಪ್ಪ
೨. ವೈದ್ಯರನ್ನು ಯಾವಾಗ ಕಾಣಬೇಕು - ಡಾ ಡಿ.ಎಸ್. ಶಿವಪ್ಪ
೩. ಮೊಳೆ ರೋಗ ಮತ್ತು ಗುದದ ಇತರ ಕಾಯಿಲೆಗಳು - ಡಾ ಡಿ.ಎಸ್. ಶಿವಪ್ಪ

(೧) ನೇ ಹೊತ್ತಗೆಯ ಮುನ್ನುಡಿಯಲ್ಲಿ ಡಾಶಿವಪ್ಪನವರು ಬರೆದಿರುವ ಸಾಲುಗಳು ನನ್ನ ಗಮನ ಸೆಳೆದವು:-

" ಅರೆ ಶತಮಾನಕ್ಕೂ ಹಿಂದೆ ಮೈಸೂರು ವೈದ್ಯ ಕಾಲೇಜಿನಲ್ಲಿ ನಾನು ಅಂಗಕ್ರಿಯೆ ಶಾಸ್ತ್ರದ ವಿದ್ಯಾರ್ಥಿಯಾಗಿದ್ದಾಗ ಆ ವಿಷಯದ ಪರೀಕ್ಷೆ ಹತ್ತಿರವಾದಾಗ ಪ್ರಶ್ನೆಪತ್ರಿಕೆಯಲ್ಲಿ ಸಂಕ್ಷಿಪ್ತ ಟಿಪ್ಪಣಿಗಾಗಿ oestrogen, progesterone ಬರುವ ಸಂಭವದ ಸುಳಿವು ಸಿಕ್ಕಿತು. ನಾನು ಕೂಡಲೇ ಪುಸ್ತಕದಿಂದ ಅವುಗಳ ವಿಚಾರವಾಗಿ ವಿವರಗಳನ್ನು ಸಂಗ್ರಹಿಸಿದೆ. ಭರವಸೆಗಾಗಿ ನಮ್ಮ ತರಗತಿಯಲ್ಲಿ ಅತ್ಯಂತ ಮೇಧಾವಿ ಎನಿಸಿಕೊಂಡ ಸಹಪಾಠಿಗೆ ತೋರಿಸಿದಾಗ, ಎಲ್ಲ ಸರಿಯಾಗಿದೆ, ಆದರ ತಲೆಬರಹಗಳು ಅದಲುಬದಲಾಗಿವೆ ಎಂದಾಗ,
ನಾನು ಕೂಡಲೇ ಬದಲಾಯಿಸಿಬಿಟ್ಟೆ. ಏಕೆಂದರೆ ಆ ತಾಂತ್ರಿಕ ಪದಗಳು ನನಗೆ ಏನೂ ಅರ್ಥ ಕೊಡಲಿಲ್ಲ. ಆದರೀಗ ಗ್ರೀಕ್ oestrus ಅಂದರೆ ಬೆದೆಯಿಂದ oestrogen ಬೆದೆಜನಕವೆಂದೂ, ಲ್ಯಾಟಿನ್ನಿನ gestare ಅಂದರೆ (ಗರ್ಭದಲ್ಲಿ ಕೂಸನ್ನು) ಹೊರು ಎನ್ನುವುದಕ್ಕೆ
ಬಸಿರಿಗೆ ಅಣಿ ಮಾಡುವುದರಿಂದ progesterone ಬಸಿರಣಿಕವೆಂದೂ ಅಂದು ನನಗೆ ಗೊತ್ತಿದ್ದರೆ ನಾನು ಹಾಗೆ ಅದಲು ಬದಲು ಮಾಡುತ್ತಿರಲಿಲ್ಲ"

ಇದು ಓದಿದ ಮೇಲೆ ಶಿವಪ್ಪನವರು ಹೇಳಿರುವ ಹಾಗೆ ಬೆದೆಜನಕ ಮತ್ತು ಬಸಿರಣಿಕ ತೆರದ ಪದಗಳನ್ನು ಹುಟ್ಟಿಸಿ ಕನ್ನಡದಲ್ಲೇ MBBS ಮಾಡುವ ಹಾಗಿದ್ದರೆ ಎಶ್ಟು ಚೆನಾಗಿರುತ್ತಿತ್ತು ಅಂತ ಅನ್ನಿಸಿತು. ಹೇಗೆ ಪಾರಿಭಾಶಿಕ ಪದಗಳನ್ನು ಸುಲಬಗೊಳಿಸಿಕೊಳ್ಳುವುದರಿಂದ ಕಲಿಕೆಯ ವೇಗ ಮತ್ತು ಗುಣಮಟ್ಟ ಹೆಚ್ಚುತ್ತದೆ ಎಂಬುದಕ್ಕೆ ಶಿವಪ್ಪನವರ ಈ ಮೇಲಿನ ಪ್ರಸಂಗವೇ ಉದಾಹರಣೆಯಾಗಿದೆ ಎಂಬುದನ್ನ ನಾವು ಇದರಿಂದ ಅರಿತುಕೊಳ್ಳಬಹುದು.

ಅಲ್ಲಿ ಮಳಿಗೆಯವರನ್ನು ವಿಚಾರಿಸಿದಾಗ "ವೈದ್ಯಕ ಪದಗಳ ಹುಟ್ಟು ಮತ್ತು ರಚನೆ" -- ಈ ಹೊತ್ತಗೆಯನ್ನು ಮೈಸೂರಿನಿಂದ ಹಲವು ವೈದ್ಯರಗಳು ಬಂದು ೨೦-೩೦ ಹೊತ್ತಗೆಗಳನ್ನು ಒಮ್ಮೆಲೆ ಕೊಂಡು ಹೋಗುತ್ತಾರೆ ಮತ್ತು ಅವುಗಳನ್ನು ಆರೈಕೆಗಾರ್ತಿಯರಿಗೆ ಹಂಚುತ್ತಾರೆಂದು ತಿಳಿಸಿದರು

ಬೆಂಗಳೂರಿನ ತಿಂಡಿಗಳು

ಬನಶಂಕರಿಯ ಎಸ್ಸೆಲ್ವಿ ಮೆತ್ತಗಿರುವ ಅಕ್ಕಿ ಇಡ್ಲಿ ಚೆಂದ
ರಾಗಿಗುಡ್ಡದ ಎಸ್ಸೆಲ್ವಿಯ ರವೆ ಇಡ್ಲಿ ಅಂದ
ಕಾಮಾಕ್ಯದ ’ಮನೆತಿಂಡಿ’ಯ ತೆರೆದ(ಓಪನ್) ದೋಸೆ ಚೆಂದ
ಚಾಮ್ರಾಜ್ ಪೇಟೆಯ ’ಬಿಕೆಬಿ’ಯ ಅಕ್ಕಿ ಇಡ್ಲಿ ಬಲ್ ಮೆದು
ನರಸಿಂಹರಾಜ ಕಾಲೋನಿಯ ಕೊಟ್ಟೂರ್ ಬೆಣ್ಣೆ ಮಸಾಲೆ ಬಲು ಅಂದ
ವಿದ್ಯಾರ್ತಿ ಬವನದ ತುಪ್ಪದ ದೋಸೆ ಚೆಂದ
ಬಸವನಗುಡಿಯ ’ಹಳ್ಳಿತಿಂಡಿ’ಯ ಗಸಗಸೆ ಪಾಯಸ ಬಲ್ ಜೋರು

ಇವೆಲ್ಲಕ್ಕಿಂತ ನಮ್ ಮನೆ ಚಿಬ್ಲು ಇಡ್ಲಿ ಇನ್ನು ಚೆಂದ
ರಾಗಿ ಮುದ್ದೆ ಉಪ್ಪೇಸ್ರು ಬಲು ಮಹದಾನಂದ :)

ಆರನೇ ತರಗತಿಯಿಂದ ಕಲಿಕೆಯಲ್ಲಿ ಇಂಗ್ಲಿಶ್ ಮಾಧ್ಯಮ- ಇದರ ಬಗ್ಗೆ

ಇಂದಿನ ಪ್ರಜಾವಾಣಿಯಲ್ಲಿ ಬಂದ ಡಾ ನಿರಂಜನಾರಾಧ್ಯ ಅವರ ’ಆಂಗ್ಲಭಾಷಾ ಭ್ರಮೆ ಮತ್ತು ಆಳುವ ಸರ್ಕಾರ ’ ಎಂಬ ಬರಹವನ್ನು ಬೆಂಬಲಿಸಿ ಈ ಪ್ರತಿಕ್ರಿಯೆ.
ತಾಯ್ನುಡಿಯಲ್ಲೆ ಎಲ್ಲ ಮಟ್ಟದ ಕಲಿಕೆಯೇ ಹೆಚ್ಚು ಪರಿಣಾಮಾಕಾರಿ ಎಂದು ಶಿಕ್ಷಣತಜ್ಞರು ಮತ್ತು ಭಾಷಾವಿಜ್ಞಾನಿಗಳು ಹೇಳಿರುವಾಗ ಕರ್ನಾಟಕ ಸರಕಾರ ಇಂಗ್ಲಿಶಿನಿಂದ ಮಾತ್ರ ಏಳಿಗೆ ಎಂದು ನಂಬಿರುವುದು ಮತ್ತು ಜನತೆಯನ್ನು ನಂಬಿಸುತ್ತಿರುವುದು ದುರಂತವೇ ಸರಿ. ಇಂಗ್ಲಿಶ್ ನುಡಿಯನ್ನು ಚೆನ್ನಾಗಿ ಕಲಿಯಬೇಕೆಂಬುದರಲ್ಲಿ ಎರಡು ಮಾತಿಲ್ಲ ಆದರೆ ಹೋಬಳಿ ಮಟ್ಟದಲ್ಲಿ ತಮ್ಮ ಪರಿಸರದಲ್ಲಿದ ಇಂಗ್ಲಿಶ್ ಮಾಧ್ಯಮದ ಮೂಲಕ ಕಲಿಕೆಯೇರ್ಪಾಡು ಮಾಡುವುದು ಅವೈಜ್ಞಾನಿಕ ಮಾತ್ರವಲ್ಲದೇ ಆಘಾತಕಾರಿಯೂ ಕೂಡ. ಯೂರೋಪಿನ ನಾಡುಗಳಲ್ಲಿ ಮೊದಲ ಕಲಿಕೆಯಲ್ಲದ ಉನ್ನತ ಮಟ್ಟದ ಕಲಿಕೆಯು(ಅಂದರೆ ಇಂಜಿನಿಯರಿಂಗ್ ಮತ್ತು ಮೆಡಿಕಲ್) ಕೂಡ ಅವರವರ ತಾಯ್ನುಡಿಯಲ್ಲೇ ಮಾಡುವ ಏರ್ಪಾಟು ಮಾಡಿಕೊಂಡಿರುವುದರಿಂದ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅವರು ಬಹಳ ಮುಂದುವರೆದಿದ್ದಾರೆ. ಇದಕ್ಕೇ ಜರ್ಮನಿ, ಫಿನ್-ಲ್ಯಾಂಡ್, ಫ್ರಾನ್ಸ್ ದೇಶಗಳೇ ಅತ್ಯುತ್ತಮ ಉದಾಹರಣೆ.. ಪದೇ ಪದೇ ಕನ್ನಡ ಪರ ಸರ್ಕಾರ ಎಂದು ಘೋಷಿಸಿಕೊಳ್ಳುವ ಸರಕಾರವು ಮಾಧ್ಯಮಿಕ ಶಾಲೆಗಳನ್ನು ಆಂಗ್ಲ ಮಾಧ್ಯಮ ಮಾಡುವುದು ಯಾವ ’ಕನ್ನಡ ಪರ’ ನಡೆ ಎಂಬುದನ್ನು ಜನತೆಗೆ ತಿಳಿಯಪಡಿಸಲಿ. ಅಲ್ಲದೆ ಪಕ್ಕದ ತಮಿಳು ನಾಡಿನಲ್ಲೇ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಲಿಕೆಯನ್ನು ತಮಿಳು ಮಾಧ್ಯಮದಲ್ಲೇ ಮಾಡಲು ಮುಂದಾಗಿರುವಾಗ ಕರ್ನಾಟಕದ ಸರ್ಕಾರದ ಈ ನಡೆ ಅಚ್ಚರಿ ತಂದಿದೆ. ತಮಿಳುನಾಡು ಮಾದರಿಯಲ್ಲಿ ಕರ್ನಾಟಕದಲ್ಲೂ ಉನ್ನತ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ನಡೆಯಬೇಕೆಂಬ ತೀರ್ಮಾನ ತೆಗೆದುಕೊಳ್ಳುವುದನ್ನ ಬಿಟ್ಟು ಮಾಧ್ಯಮಿಕ ಶಿಕ್ಷಣದಲ್ಲಿ ಇಂಗ್ಲಿಶ್ ಮಾಧ್ಯಮ ಹೇರುತ್ತಿರುವುದು ನಮ್ಮನ್ನು ಹಿಂದಕ್ಕೆ ತೆಗೆದುಕೊಂಡು ಹೋಗುವುದಲ್ಲದೆ ಏಳೆಗೆಯೆಡೆಗೆ ಕೊಂಡೊಯ್ಯುವುದಿಲ್ಲ. ಇಂಗ್ಲಿಶ್ ಪರಿಸರವಿಲ್ಲದ ಕಡೆ ಇಂಗ್ಲಿಶ್ ಮಾಧ್ಯಮದಿಂದ ನಯಾಪೈಸೆ ಉಪಯೋಗವಾಗಲಿ ಮತ್ತು ಏಳಿಗೆಯಾಗಲಿ ಆಗುವುದಿಲ್ಲ ಎಂಬುದನ್ನು ಸರ್ಕಾರವು ಇನ್ನಾದರೂ ಅರಿಯಬೇಕು. ಈಗಾಗಲೆ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಕೆಯೇರ್ಪಾಡು ಸರಿಯಿಲ್ಲದಿದ್ದರೆ ಅದನ್ನ ಮೇಲಕ್ಕೆ ಎತ್ತುವ ಮತ್ತು ಗುಣಮಟ್ಟವನ್ನು ಸುಧಾರಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕೆ ಹೊರತು ಇಂಗ್ಲಿಶ್ ಮಾಧ್ಯಮಕ್ಕೆ ಜೋತು ಬೀಳುವುದು ಎಷ್ಟು ಸರಿ? ಕನ್ನಡ ಮಾಧ್ಯಮದ ಕಲಿಕೆಯಲ್ಲಿ ನಂಬಿಕೆಯಿಲ್ಲದಿದ್ದ ಮೇಲೆ ಮಾನ್ಯ ಕಲಿಕೆಯ ಸಚಿವರಾದ ಶ್ರೀ ವಿಶ್ವೇಶ್ವರ ಹೆಗ್ಗಡೆ ಕಾಗೇರಿಯವರು ತಮ್ಮ ಮಕ್ಕಳನ್ನೇ ಹತ್ತನೇ ತರಗತಿಯವರಿಗೆ ಕನ್ನಡ ಮಾಧ್ಯಮದಲ್ಲಿ ಓದಿಸಿದ್ದಾದರೂ ಏತಕ್ಕೆ? ಎಂಬುದನ್ನು ಮಾನ್ಯ ಸಚಿವರು ಜನತೆಗೆ ತಿಳಿಯಪಡಿಸಲಿ

ಮಂಗಳವಾರ, ಏಪ್ರಿಲ್ 12, 2011

ಕಾವನ ಗೆಲ್ಲಂ ಮೆರೆಯುತಿರ್ಪುದು

ಹಸುಳೆ ಬಿಸಿಲ ಮಸಕದಿಂದ ಹೊಸ ತಾವರೆಯ ಎಸಳ್ ಮಿಸುಪ
ಅಸದಳಂ ಹಸೆಯೊಳ್ ಎಸೆವ ಸರಸತಿಯ ಅಡಿಗಳಿಗೆ ತಲೆದುಡುಗೆಯೆನ್ ಎ
ಹೆಸರ್ ಪಡೆವ ಬಿಜ್ಜೆವಳದಿಂ ಸಮೆದ ಕಾವನ ಗೆಲ್ಲಂ ಮೆಱೆಯುತಿರ್ಪುದು
- ಆಂಡಯ್ಯ

Rough translation to English :-

Shining Petals of Lotus basking in Sunlight of dawn ,
Stands the most beautiful Goddess Saraswati',
I put my cap to her feet, with my power of knowledge,
time tested "Kaavana Gellan"(Victory of Kaava) glitters forever

- Aandayya

ಮಂಗಳವಾರ, ಮಾರ್ಚ್ 22, 2011

ಆಂಡಯ್ಯನ ಕಬ್ಬಿಗರ ಕಾವನ್-ಇದರಲ್ಲಿ ಬಳಕೆಯಾಗಿರುವ ಅಣ್ಣೆಗನ್ನಡ ಪದಗಳು

ಮಿಳಿರ್ = flourish, prosper = ಏಳಿಗೆ, ಬಲ
ಜಗುೞ್ (ಜಗುಳ್) = slip, move off, slip, drop down,= ಜಾರು,
ಚೂಟಿ = ಸೂಟಿ = quick,smart
ನೀರಾ = Handsome Man
ನೀರೆ = beautiful woman, ಕಡುನೀಱೆ ( most beautiful woman)
ಪೊಣೆ = bond, bail
ಸುಸಿಲ್ = sexual embrace
ಸುಂದು = to lie down, repose, sleep
ಕಣ್ಮಲರ್ = ಕಣ್+ಮಲರ್ = ಕಣ್+ಹೂವು = ಹೂವಿನಂತ ಕಣ್ಣುಗಳು,
ಪೊಣರ್ = union
ದುಗುಲ = ನೆಯ್ದ ರೇಶಿಮೆ, woven silk, or fine cloth
ಅೞವೆ = mouth of a river in which the tide ebbs and flows, bar ( ತುಳು: ಅಲುವೆ )
ಸೇಸೆ = ಅಕ್ಶತೆ
ಮೇಲೂರ್ = ಸ್ವರ್ಗ
ಸಿರಿವೆಣ್ = ಲಕುಮಿ
ಬೆಂಚೆ = ಚಿಕ್ಕ ಕೊಳ
ಓವು = to take care of, protect
ಇರ್ಕೆವನೆ =ವಾಸದ ಮನೆ
ಪಗಲಾಣ್ಮ = ನೇಸರ, ಸೂರ್ಯ, sun
ಪಾಂಗು = ರೀತಿ
ಮಸಕ = passion, vehement emotion
ಮುನ್ನೀರ್ = ಕಡಲು

ಮಂಗಳವಾರ, ಮಾರ್ಚ್ 15, 2011

ಯಾವ ಬಾಶೆಯೂ ಕೊಲೆಗಡುಕ ಅಲ್ಲ

ಶ್ರೀ ಜಿ.ವೆಂಕಟಸುಬ್ಬಯ್ಯನವರು ಪದೆ ಪದೆ ಇಂಗ್ಲಿಶ್ ’ಕೊಲೆಗಡುಕ’(ಇವತ್ತಿನ, ೧೫-೩-೨೦೧೧ ವರದಿಯ ಕೊಂಡಿ) ಭಾಷೆ ಎಂದು ಹೇಳುತ್ತಿರುವುದು ಸರಿಯಲ್ಲ. ಯಾಕಂದರೆ:-

ದಿಟವಾಗಲೂ ಯಾವುದೇ ನುಡಿ ತನ್ನಿಂತಾನೆ ಕೊಲೆಗಡುಕ ಬಾಶೆ ಆಗುವುದಿಲ್ಲ. ಈವೊತ್ತು ಇಂಗ್ಲಿಶಿಗೆ ಹೆಚ್ಚಿನ ಗೌರವ, ಮನ್ನಣೆ ಸಿಗುತ್ತಿರುವುದು ಕೇವಲ ಆ ಬಾಶೆಯಿಂದಲ್ಲ ಬದಲಾಗಿ ಅದರ ಮೂಲಕ ಹುಟ್ಟುತ್ತಿರುವ ಹೊಸ ಹೊಸ ಅರಿವಿನ ಪ್ರಕಾರಗಳಿಂದ.
ಇಂದು ಅರಿಮೆ ಮತ್ತು ಹೊಚ್ಚ ಹೊಸ ತಂತ್ರದರಿಮೆಗಳು ಹೆಚ್ಚಿನವು ಇಂಗ್ಲಿಶಿನಲ್ಲಿವೆ, ಹಾಗಾಗಿ ಈ ಆದುನಿಕ ಯುಗದಲ್ಲಿ ಇಂಗ್ಲಿಶ್ ಕಲಿತರೆ ಸುಲಬವಾಗಿ ಕೆಲಸ ಸಿಗುತ್ತದೆ ಮತ್ತು ಅದರಿಂದ ಗುಣಮಟ್ಟದ ಬದುಕನ್ನು ಕಟ್ಟಿಕೊಳ್ಳಬಹುದು. ಇದೊಂದೆ ಅಲ್ಲದೆ ಕೆಲವರಲ್ಲಿರುವ ತಪ್ಪು ತಿಳುವಳಿಕೆಯಿಂದಾಗಿ ಇಂಗ್ಲಿಶ್ ಬಾಶೆ ಗೊತ್ತಿರುವವರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಮತ್ತು ಹೊಗಳಿಕೆ ದೊರೆಯುತ್ತಿದೆ. ನಾವು ನಮ್ಮ ಕನ್ನಡ ನುಡಿಯಲ್ಲಿ ಇವತ್ತಿನ ಜಗತ್ತಿಗೆ ಬೇಕಾದ ಹೊಸ ಹೊಸ ಅರಿವಿನ ಪ್ರಕಾರಗಳನ್ನು ಹುಟ್ಟು ಹಾಕದೆ ಇನ್ನು ಸಾಹಿತ್ಯ ಮತ್ತು ಕವನಕ್ಕೆ ಕನ್ನಡವನ್ನು ಸೀಮಿತಗೊಳಿಸಿ ತಪ್ಪು ಮಾಡುತ್ತಿದ್ದೇವೆ. ಹಾಗಾಗಿ ಇಂಗ್ಲಿಶ್ ನಮ್ಮ ಬದುಕಿನಲ್ಲಿ ಹೆಚ್ಚಿನ ಮಹತ್ವವನ್ನು ಪಡೆಯುತ್ತಾ ಇದೆ. ಇದಕ್ಕಿರುವ ಉಪಾಯವೆಂದರೆ ಕನ್ನಡವನ್ನು ತಂತ್ರಗ್ನಾನದ ಮತ್ತು ಮಾರುಕಟ್ಟೆಯ ನುಡಿಯಾಗಿ ನಾವು ಬೆಳಸಬೇಕಾಗಿದೆ. ಹೊಸ ಜಗತ್ತಿನ ’ಬೇಕು’(ಅಗತ್ಯ)ಗಳಿಗೆ ನಾವು ಕನ್ನಡವನ್ನು ಅಣಿಗೊಳಿಸದೆ ಬರಿ ಇಂಗ್ಲಿಶನ್ನು ದೂರುವುದು ಸರಿಯಲ್ಲ. ನಾವು ಮಾಡಿದ ತಪ್ಪುಗಳಿಗೆಲ್ಲಾ ಇಂಗ್ಲಿಶನ್ನು ಹೊಣೆಯಾಗಿಸಿ ಅದರ ಮೇಲೆ ಗೂಬೆ ಕೂರಿಸುವುದು ಯಾವ ರೀತಿಯಲ್ಲೂ ಒಪ್ಪತಕ್ಕದ್ದಲ್ಲ.

[ಇದೇ ಬರಹ ಓಲೆಯಾಗಿ ೧೮ ಮಾರ್ಚ್ ೨೦೧೧ ಪ್ರಜಾವಾಣಿಯ ’ವಾಚಕರವಾಣಿ’ಯಲ್ಲಿ ಬಂದಿದೆ]

ಮಿಂಬಲೆ

internet ಎಂಬ ಪದಕ್ಕೆ ಈಗ ಕನ್ನಡದಲ್ಲಿ ಬಳಕೆಯಲ್ಲಿರುವ ಪದ ’ಅಂತರ್ಜಾಲ’/ಅಂತರಜಾಲ. ಇದು ಸಂಸ್ಕ್ರುತ ಪದ.ಅದರ ಬದಲು ಕನ್ನಡದ್ದೇ ಆದ ’ಮಿಂಬಲೆ’ ಎಂಬ ಪದ ಬಳಸಬಹುದು. ಈಗಾಗಲೆ ಅದನ್ನ ಕೆಲವರು ಬಳಸುತ್ತಿದ್ದಾರೆ.

ಅದೇನೆಂದರೆ
ಮಿನ್+ಬಲೆ = ಮಿಂಬಲೆ

ಯಾಕಂದ್ರೆ
ಮಿನ್ ಎಂಬ ಪದದಿಂದ ಮಿಂ-ಚು, ಮಿನು-ಗು (ಮಿನ್ ಅಂದರೆ ಹೊಳೆಯುವುದು ಎಂಬ ತಿರುಳಿದೆ)
ಕೆನ್ ಎಂಬ ಪದದಿಂದ ಕೆಂ-ಚು (ಕೆನ್ ಅಂದರೆ ಕೆಂಪು)
ಹೆಣೆ ಎಂಬ ಪದದಿಂದ ಹೆಂ-ಚು (ಹೆಂಚುಗಳು ಒಂದಕ್ಕೊಂದು ಹೆಣೆದುಕೊಂಡಿರುವುದರಿಂದಲೇ ಅದಕ್ಕೆ ಆ ಪದ ಹುಟ್ಟಿರುವುದು)
ಕೀರ್ ಎಂಬ ಪದದಿಂದ್ ಕಿರ್-ಚು=ಕಿಚ್ಚು (ಬೆಂಕಿ) ಬಳಕೆ: ಕಡ್ಡಿ ಕೀರಿ ಒಲೆ ಹಚ್ಚಿದಳು

ತುಳುವಿನ ಕೆಲವು ನಿಬ್ಬರಗಳು

ತುಳುವಿನ ಕೆಲವು ನಿಬ್ಬರಗಳು:-
ತುಳುನಾಡಿನಲ್ಲಿ ಸೇಡಿಯಾಪು ಎಂಬ ಊರಿದೆ ಅನ್ಸುತ್ತೆ ( ’ಸೇಡಿಯಾಪು ಕೃಷ್ಣಬಟ್ಟ’ರು ಹೆಸರಿನಲ್ಲಿರುವಂತೆ)
ಸೇಡಿಯಾಪು = ಸೇಡಿ+ಕಾಪು = ಜೇಡಿ+ಕಾಪು ಅಂದರೆ ಜೇಡಿ ಮಣ್ಣಿನಿಂದ ಮಾಡಿದ ಕಾವಲು/ತಡೆ.

ಇಲ್ಲಿ ಪದಗಳ ಸೇರಿಕೆಯಾದ ಮೇಲೆ ’ಕ’ ಕಾರ ’ಯ’ಕಾರ ವಾಗಿರುವುದನ್ನ ಗಮನಿಸಿ. ಇದು ತುಳುವಿನ ನಿಬ್ಬರ.
ಕನ್ನಡದ ಸೇರಿಕೆ ಕಟ್ಟಿನ ಪ್ರಕಾರ ಅದು ಸೇಡಿಗಾಪು ಆಗಬೇಕಿತ್ತು.

ಅದೇ ತರ ತುಳುವಿನಲ್ಲಿ ಮಳೆ(ರೆ)+ಕಾಲ => ಮರ್ಯಾಲ ಆಗುತ್ತೆ ಹೊರತು ಮಳೆಗಾಲ ಆಗಲ್ಲ.

ತುಳು ಗೊತ್ತಿರುವವರು ಈ ತರ ಹೆಚ್ಚಿನ ಪದಗಳು ಗೊತ್ತಿದ್ದರೆ ತಿಳಿಸಿ

ಭಾನುವಾರ, ಮಾರ್ಚ್ 06, 2011

ಮರುಸೊಳ್ಳು/ಮರುಸೊಡರು ಅಂದರೇನು?

’ಮರ್ಸೊಳ್ಳು’, ’ಮರುಸೊಳ್ಳು’, ’ಮರುಸೊಡರು’ ಎಂಬ ಪದ ನಮ್ಮ ಕಡೆ ( ಮಯ್ಸೂರ್, ಮಂಡ್ಯ, ಚಾ.ನಗರ) ಬಳಕೆಯಲ್ಲಿದೆ.
ಮೊದಲೆಲ್ಲ ಮದುವೆ, ಹೆಸರಿಡುವುದು,ತೊಟ್ಟಿಲು ತರುವುದು ಮತ್ತಿತರ ಒಳ್ಳೆ ಕೆಲಸಗಳನ್ನು ಮನೆಯಲ್ಲೇ ನಡೆಸಲಾಗುತ್ತಿತ್ತು. ಆಗ ಮನೆಯಲ್ಲೇ ಆ ಹಬ್ಬದ ಇಲ್ಲವೆ ಒಳ್ಳೆಯ ಕೆಲಸದ ಹಗಲಿನಲ್ಲೂ ’ಸೊಡರು’/ದೀಪವನ್ನು (ಇದನ್ನು ದೀಪಾಲೆ ಕಂಬ ಅಂತನೂ ಹೇಳುತ್ತಾರೆ)ಹಚ್ಚಲಾಗುತ್ತಿತ್ತು.

ಒಳ್ಳೆ ದಿನದ(ಮದುವೆ ಇಲ್ಲವೆ ಹೆಸರಿಡುವುದು ಇಲ್ಲವೆ ತೊಟ್ಟಿಲು ತರುವುದು) ಮರುದಿನ ಕೆಲವು ಕಟ್ಟುಪಾಡುಗಳನ್ನು ನಮ್ಮ ಹಳ್ಳಿಯ ಮಂದಿ ಪಾಲಿಸುತ್ತಾರೆ. ಅವುಗಳಲ್ಲಿ
೧. ಆ ಒಳ್ಳೆಯ ಕೆಲಸದ ಮುಕ್ಯವಾದ ವ್ಯಕ್ತಿಗಳು ಅಂದರೆ ಮದುಮಕ್ಕಳು
೨. ತೊಟ್ಟಿಲು ತಂದ ಹಬ್ಬವಾದರೆ ಆ ಮಗುವು

’ಮರುಸೊಡರ’ನ್ನು ನೋಡಬಾರದು ಎಂಬ ನಂಬಿಕೆ ಇದೆ. ಅಂದರೆ ಸೊಡರು ಹಚ್ಚಿದ ದಿನದ ಮಾರನೆ ದಿನ ಆ ಸೊಡರು ಹಚ್ಚಿದ ಮನೆಯಲ್ಲಿ ಇರಬಾರದು ಅಂತ. ಹಾಗಾಗಿ ’ಮರುಸೊಡರು ನಾಳು’/ ಮರುಸೊಳ್ಳು/ಮರ್ಸೊಳ್ಳು ಎಂಬ ಪದ ಬಳಕೆಯಲ್ಲಿದೆ.

ಈವೊತ್ತಿನ ಸಾಪ್ತಾಹಿಕ ಪುರವಣಿಯಲ್ಲಿರುವ ತಪ್ಪುಗಳು/ಗೊಂದಲಗಳು

ಈವೊತ್ತಿನ((೬-೩-೨೦೧೧) ಸಾಪ್ತಾಹಿಕ ಪುರವಣಿಯಲ್ಲಿ ಬಂದಿರುವ ಬರಹಗಳಲ್ಲಿ ಆಗಿರುವ ತಪ್ಪುಗಳು ಮತ್ತು ಗೊಂದಲಗಳು ಎತ್ತಿ ತೋರಿಸುವ ಪ್ರಯತ್ನವನ್ನು ನಾನು ಮಾಡಿದ್ದೇನೆ.

ಯು.ಬಿ.ಪವನಜ ಅವರ ಬರಹ(ನಮ್ಮ ಭಾಷೆಗೆ e ಭಾಷ್ಯ)ದಲ್ಲಿ " ಒಂದು ಭಾಷೆಯನ್ನು ವೈಜ್ಞಾನಿಕವಾಗಿ ವಿಂಗಡಿಸುವ ಸೂತ್ರವನ್ನು ಪ್ರಪಂಚದ ಯಾವುದೇ ಭಾಷೆಗೆ ಪ್ರಪ್ರಥಮ ಬಾರಿಗೆ ನಿರ್ಮಿಸಿದವನು ಪಾಣಿನಿ."
ಮೊದಲಿಗೆ, ಇಲ್ಲಿ ’ಪ್ರಪ್ರಥಮ’ ಎಂಬ ಪದದ ಬಳಕೆಯೇ ತಪ್ಪು ಯಾಕಂದರೆ ’ಪ್ರಥಮ’ ಇದು ಸಂಸ್ಕೃತ ಮೂಲದ ಪದ. ಕನ್ನಡದಲ್ಲಿ ಇರುವ ಪದಬಳಕೆಗಳಾದ ’ಮೊತ್ತಮೊದಲು’, ’ತುತ್ತತುದಿ’, ’ಕಟ್ಟಕಡೆ’ ಇವುಗಳಲ್ಲಿರುವ ಮೊದಲು, ಕಡೆ, ತುದಿ ಇವೆಲ್ಲ ಕನ್ನಡ ಬೇರಿನ ಪದಗಳು ಅದರ ನಿರುಕ್ತವನ್ನು ಹೀಗೆ ಬಿಡಿಸಬಹುದು.
ಮೊದಲು + ಮೊದಲು = ಮೊದಮೊದಲು ( ಇದನ್ನೇ ಒತ್ತಿ ಹೇಳಬೇಕಾದರೆ) => ಮೊತ್-ಮೊದಲು= ಮೊತ್ತಮೊದಲು. ಇಲ್ಲಿ ’ದ್’(ಕೊರಲಿಸಿದ)ಕ್ಕೆ ಬದಲಾಗಿ ಅದೇ ಗುಂಪಿನ ’ತ್’(ಕೊರಲಿಸದ) ಅಕ್ಷರವು ಬಂದಿದೆ. ಇದು ಕನ್ನಡದ್ದೇ ಆದ ಪದಗಳಿಗೆ ಒಗ್ಗುವ ಪದಬಳಕೆ. ಆದರೆ ಈ ಚಳಕ ಸಂಸ್ಕೃತ ಪದಗಳಾದ ’ಪ್ರಥಮ’ ಎಂಬುದಕ್ಕೆ ಒಗ್ಗುವುದಿಲ್ಲ. ಒಂದು ವೇಳೆ ಅದನ್ನ ಬಳಸಿದರೆ ಕನ್ನಡವೂ ಅಲ್ಲದ ಸಂಸ್ಕೃತವೂ ಅಲ್ಲದ ’ಎಡಬಿಡಂಗಿ’/’ತ್ರಿಶಂಕು’ ಪದಗಳೆಂದು ಕರೆಯಬೇಕಾಗುತ್ತದೆ.

ಎರಡನೆಯದಾಗಿ, ಇಲ್ಲಿ ’ವೈಙ್ಞಾನಿಕ ವಿಂಗಡಣೆ’ ಅಂದರೆ ಏನು ಎಂಬುದನ್ನ ಬರಹಗಾರರು ಹೇಳಿಲ್ಲ. ವೈಙ್ಞಾನಿಕವಾಗಿ ನೋಡಿದರೆ ಪಾಣಿನಿಯು ಬರೆದಿರುವ ವ್ಯಾಕರಣದಲ್ಲಿ ಲಿಂಗ ನಿರ್ಧರಿಸುವ ವಿಧಾನ ಸರಿಯಿಲ್ಲ. ದಾರಾ( ಹೆಂಡತಿ) ಎಂಬ ಪದ ’ಪುಲ್ಲಿಂಗ’ ಎಂದು ಹೇಳಲಾಗಿದೆ. (dara (p. 115) [ 2. dârá ] m. (gnly.) pl. wife: dârân pra kri, marry a wife). ಇದೇ ರೀತಿ ಸಂಸ್ಕೃತದ ವ್ಯಾಕರಣದಲ್ಲಿ ಆಗಿರುವ ಎಡವಟ್ಟುಗಳು ಹಲವಿವೆ. ಯಾವ ರೀತಿಯಲ್ಲಿ ಇದು ವೈಙ್ಞಾನಿಕ ?
ಹಾಗಾಗಿ ಆಯ ಭಾಷೆಯ ವ್ಯಾಕರಣ ಆ ಭಾಷೆಯ ಮಟ್ಟಿಗೆ ಸರಿಯಿರಬಹುದು. ಆದ್ದರಿಂದ ’ಒಂದು ಭಾಷೆಯನ್ನು ವೈಙ್ಜಾನಿಕವಾಗಿ ವಿಂಗಡಿಸುವ ಸೂತ್ರವನ್ನು ಯಾವುದೇ ಭಾಷೆಗೆ ಪ್ರಥಮ ಬಾರಿಗೆ ನಿರ್ಮಿಸಿದವನು ಪಾಣಿನಿ’ ಎಂದು ಹೇಳುವುದು ತಪ್ಪಾಗುತ್ತದೆ ಮತ್ತು ಹಲವು ಗೊಂದಲಗಳಿಗೆ ಎಡೆಮಾಡಿಕೊಡುತ್ತದೆ.

ಮೂರನಯದಾಗಿ, "ಆತನಿಗೆ ‘ಸಹಜಭಾಷಾ ಸಂಸ್ಕರಣೆ ಕ್ಷೇತ್ರದ ಜನಕ’ ಎಂಬ ಹೆಸರೂ ಇದೆ. "
ಪಾಣಿನಿಗೆ Natural Language Processing ಎಂದರೇನು ಎಂಬುದೇ ಗೊತ್ತಿರಲಿಲ್ಲ. ಇತ್ತೀಚೆಗೆ ಸುಮಾರು ೧೯೫೦ ರ ದಶಕದಲ್ಲಿ ಈ ಅರಿಮೆಯು ಅಂಬೆಗಾಲಿಡುತ್ತಿದ್ದುದನ್ನು ನಾವು wiki (http://en.wikipedia.org/wiki/Natural_language_processing) ಯಿಂದ ತಿಳಿದುಕೊಳ್ಳಬಹುದು. ಬರಹಗಾರರು ಹೇಗೆ ಪಾಣಿನಿಯನ್ನು ’ಸಂಸ್ಕರಣೆ ಕ್ಷೇತ್ರದ ಜನಕ’ ಎಂದು ಹೇಳಿದ್ದಾರೊ ತಿಳಿಯದು. ಇದಕ್ಕೆ ಅವರು ತಕ್ಕ ಪುರಾವೆಗಳನ್ನು ನೀಡಿಲ್ಲ.
ಇನ್ನು ಡಾ ಎ. ಸತ್ಯನಾರಾಯಣ ಅವರ ’ ಕನ್ನಡೀಕರಣ: ಆಗಿರುವುದೇನು? ಆಗಬೇಕಿರುವುದೇನು?’ ಎಂಬ ತಲೆಬರಹದಲ್ಲಿರುವ ’ಕನ್ನಡೀಕರಣ’ ಎಂಬ ಪದವೂ ತ್ರಿಶಂಕು/ಎಡಬಿಡಂಗಿ ಪದವಾಗಿದೆ.

ಕನ್ನಡ (ಕನ್ನಡದ್ದೇ ಆದ ಪದ) + ಕರಣ (ಸಂಸ್ಕೃತದ್ದೇ ಆದ ಪದ) => ಕನ್ನಡೀಕರಣ ಹೇಗೆ ಆಗುತ್ತದೆ? ಇದು ಯಾವ ಸಂಧಿ ಯಾರಿಗೆ ಗೊತ್ತು? ಇದರ ಬದಲು ಕನ್ನಡ+ಇಸು = ಕನ್ನಡಯಿಸು => ಕನ್ನಡಯ್ಸು=>ಕನ್ನಡಸು ಎಂಬ ಕನ್ನಡಕ್ಕೆ ಒಗ್ಗುವ ಪದವನ್ನು ಬಳಸಬಹುದು.
ಇದೇ ರೀತಿ ಇನ್ನೊಂದು ಪದ ಈಗಾಗಲೆ ಕನ್ನಡದಲ್ಲಿ ಬಳಕೆಯಲ್ಲಿದೆ , ಉದಾ: ಸೊಗ+ಇಸು = ಸೊಗಯಿಸು = ಸೊಗಸು

ಅನಂತ ಮೂರ್ತಿಯವರ ’ಅನುಸಂಧಾನ’ಕ್ಕೆ ಮಾರುಲಿ

ಮಾನ್ಯ ಶ್ರೀ ಅನಂತ ಮೂರ್ತಿಯವರು ಇತ್ತೀಚೆಗೆ ನಡೆದ ರಾಜ್ಯಸಬೆಯ ಚುನಾವಣೆಯಲ್ಲಿ ಕೆ.ಮರುಳಸಿದ್ದಪ್ಪನವರು ಸ್ಪರ್ದಿಸಿದುದನ್ನು ಸೆಕ್ಯುಲರ್ ಮಚ್ಚೆ, ಮಂಕುಬೂದಿ, ಚೇಶ್ಟೆ ಅಂತ ಪ್ರಜಾವಾಣಿಯ ’ಅನುಸಂಧಾನ’ ಎಂಬ ಅಂಕಣದಲ್ಲಿ ಹೀಗಳೆದಿದ್ದಾರೆ

ಆದರೆ ಕೆ.ಮರುಳಸಿದ್ದಪ್ಪನವರು ಒಬ್ಬ ಪಕ್ಶೇತರ ಅಭ್ಯರ್ತಿಯಾಗಿ ಸ್ಪರ್ದಿಸಿದ್ದರೆ ಹೊರತು ಕಾಂಗ್ರೆಸ್-ಜೆಡಿಎಸ್ ಪಕ್ಶಗಳಿಂದಲ್ಲ ಎಂಬುದನ್ನ ನಾವು ಗಮನಿಸಬೇಕು. ಅಲ್ಲದೆ ಒಕ್ಕೂಟ ವ್ಯವಸ್ತೆಯನ್ನು ಒಪ್ಪಿರುವ ನಾವು ರಾಜ್ಯಸಭೆಗೆ ಆಯ್ಕೆಯಾಗುವವರು
ಆಯ ರಾಜ್ಯದವರೇ ಆದ ಬುದ್ದಿ ಜೀವಿಗಳು ಇಲ್ಲವೆ ಆಯ ರಾಜ್ಯದ ನುಡಿ, ಸಂಸ್ಕೃತಿ ಮತ್ತು ಸಮಸ್ಯೆಗಳನ್ನು ಚೆನ್ನಾಗಿ ಅರಿತವರು ಅಯ್ಕೆ ಆಗಿ ಬರಲಿ ಎಂಬುದು ಪ್ರಜಾಪ್ರಬುತ್ವದ ಸಿದ್ದಾಂತ ಮತ್ತು ಸಂವಿದಾನದ ಆಶಯ ಕೂಡ ಆಗಿರುವಾಗ ಮರುಳಸಿದ್ದಪ್ಪನವರು ಕಣಕ್ಕೆ ಇಳಿದದ್ದು ಸಮರ್ತನೀಯ. ರಾಶ್ಟ್ರೀಯ ಪಕ್ಶಗಳು ಒಕ್ಕೂಟ ವ್ಯವಸ್ತೆಯ ಆಶಯ ಮತ್ತು ಸಿದ್ದಾಂತಗಳಿಗೆ ವಿರುದ್ಧವಾಗಿ ನಡೆದಾಗ ಅದನ್ನು ವಿರೋದಿಸಿ ಮರುಳಸಿದ್ದಪ್ಪನವರು ಸೈದ್ದಾಂತಿಕ ನೆಲೆಯಲ್ಲಿ ಸ್ಪರ್ಧಿಸಿದರೆ ಹೊರತು ಚೇಶ್ಟೆಗಾಗಿ ಅಲ್ಲ. ಇಲ್ಲಿ ಸೋಲು-ಗೆಲುವು ಮುಕ್ಯವಲ್ಲ ಒಕ್ಕೂಟ ವ್ಯವಸ್ತೆಯ ಸೈದ್ದಾಂತಿಕ ನಿಲುವುಗಳನ್ನು ಎತ್ತಿ ಹಿಡಿಯುವ ಮತ್ತು ರಾಷ್ಟ್ರೀಯ ಪಕ್ಷಗಳ ’ಪ್ರಾದೇಶಿಕ ಆಶಯ’ಗಳ ವಿರೋಧಿ ನಿಲುವನ್ನು ಖಂಡಿಸುವ ವಿದಾನವಾಗಿ ಮರುಳಸಿದ್ದಪ್ಪನವರ ಸ್ಪರ್ಧೆಯನ್ನು ನಾವು ನೋಡಬೇಕಾಗುತ್ತದೆ. ಶಾಸಕರು ಕೂಡ ’ಮೊದಲು’ ಕನ್ನಡಿಗರೇ ಅಲ್ಲವೆ, ಆಮೇಲೆ ತಾನೆ ಬಿಜೆಪಿ ಇಲ್ಲವೆ ಕಾಂಗ್ರೆಸ್ಸಿನ ಪಕ್ಷದವರು; ಹಾಗಾಗಿ ’ಆತ್ಮಸಾಕ್ಶಿ’ ಆದಾರಿತ ವೋಟುಗಳನ್ನು ಕೇಳುವುದು ಕೆಟ್ಟ ರಾಜಕಾರಣವಾಗಲ್ಲ, ಅಲ್ಲದೆ ಇನ್ನೂ ’ಪ್ರಾದೇಶಿಕ ಆಶಯ’ದ ಮೇಲೆ ನಿಂತ ರಾಜಕಾರಣವಾಗಿ ಪ್ರಜಾಪ್ರಬುತ್ವದ ಮತ್ತು ಒಕ್ಕೂಟ ವ್ಯವಸ್ತೆಯ ಮೌಲ್ಯಗಳನ್ನು ಹೆಚ್ಚು ಗಟ್ಟಿಗೊಳಿಸುತ್ತದೆ.
ಇನ್ನು ಮುಂದಾದರೂ ರಾಶ್ಟ್ರೀಯ ಪಕ್ಶಗಳು ರಾಜ್ಯಸಬೆಗೆ ಅಭ್ಯರ್ತಿಗಳನ್ನು ಆರಿಸುವಾಗ ಎಚ್ಚರದಿಂದಿರಲಿ ಮತ್ತು ಒಕ್ಕೂಟ ವ್ಯವಸ್ತೆಗೆ ಬದ್ದವಾಗಿರಲಿ ಎನ್ನುವ ಎಚ್ಚರವನ್ನ ಮರುಳಸಿದ್ದಪ್ಪನವರು ಸ್ಪರ್ದಿಸುವ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಹೇಳಬಹುದು.

’ಪಡೆ’ದದ್ದು ಸಾಕು ಇನ್ಮೇಲೆ ’ಕೊಡೋ’ಣ

’ಇನ್ಪೋಸಿಸ್’ ಕಟ್ಟಿದ ಶ್ರೀ ನಾರಾಯಣ ಮೂರ್ತಿಯವರನ್ನು ’ವಿಶ್ವ ಕನ್ನಡ ಸಮ್ಮೇಳನ’ವನ್ನು ಉದ್ಘಾಟಕರನ್ನಾಗಿಸಿದ ವಿಷಯವನ್ನು ಇತ್ತೀಚೆಗೆ ತೀವ್ರ ಚರ್ಚೆಗೆ ಒಡ್ದಲಾಗಿದೆ. ಇದರ ಬಗ್ಗೆ ಒಂದೆರಡು ಮಾತು. ಮೂರ್ತಿಯವರು ಜಾಗತೀಕರಣದಿಂದಾಗುವ ಹೊಸ ಸಾಧ್ಯತೆಗಳನ್ನು ಚೆನ್ನಾಗಿ ಬಳಸಿಕೊಂಡು ಅರಿವಿನ ಮೇಲೆ(knowledge based) ಕಂಪನಿಗಳನ್ನ ಕಟ್ಟಿಜನರ ಹಣಕಾಸಿನ ಮಟ್ಟವನ್ನ ಹೆಚ್ಚಿಸಬಹುದೆಂದೂ ಅದರ ಮೂಲಕ ಬದುಕಿನ ಮಟ್ಟವನ್ನು ಸುಧಾರಿಸಬಹುದೆಂದು ತೋರಿಸಿಕೊಟ್ಟವರಲ್ಲಿ ಪ್ರಮುಖರು. ಇದಕ್ಕಾಗಿ ಅವರು ಅಬಿನಂದನಾರ್ಹರಲ್ಲದೆ ಇತರರಿಗೂ ಸ್ಪೂರ್ತಿಯ ಸೆಲೆಯಾಗಬಲ್ಲವರು. ಇದರಿಂದಾಗಿಯೇ ಮೂರ್ತಿಯವರು ಜಾಗತೀಕರಣದಿಂದ ಏನೆಲ್ಲ ’ಪಡೆ’ದು(ಇಂಗ್ಲಿಶ್, ಸಾಪ್ಟ್ ವೇರ್, ತಾಂತ್ರಿಕತೆ ಬಗೆಗಿನ ಅರಿವು ಇತ್ಯಾದಿ) ಕೊಳ್ಳಬಹುದೆಂದು ಚೆನ್ನಾಗಿ ತೋರಿಸಿಕೊಟ್ಟರು. ಈಗಲೂ ಹೆಚ್ಚಿನ ಜನರೂ ಜಾಗತೀಕರಣದಿಂದ ಆಗುವ ಬಳಕೆ ಇದೊಂದೆ ಅಂದರೆ ’ಪಡೆ’ಯುವುದೊಂದೇ ಎಂದು ತಿಳಿದಿದ್ದಾರೆ. ಅಂದರೆ ಇಂಗ್ಲಿಶಿನಿಂದಲೇ ನಮ್ಮ ಏಳಿಗೆ ಇಲ್ಲದಿದ್ದರೆ ನಾವು ಏಳಿಗೆ ಹೊಂದಲಾರೆವು ಎಂಬುದನ್ನ ’ಪಡೆ’ಯುವ ಗುಂಪಿನವರು ತಿಳಿದಿರುವಂತಿದೆ. ಆದರೆ ಜಾಗತೀಕರಣದಲ್ಲಿ ’ಕೊಡು’ವುದಕ್ಕೂ ಅಶ್ಟೆ ಅವಕಾಶಗಳಿವೆ ಎಂಬುದನ್ನ ನಾವು ಹೆಚ್ಚಾಗಿ ಗುರುತಿಸಿಲ್ಲ. ಇವತ್ತಿಗೂ ಜರ್ಮನಿ, ಜಪಾನ್ ಮತ್ತು ಇಸ್ರೇಲ ದೇಶಗಳು ತಮ್ಮಲ್ಲಿರುವ ಅರಿವನ್ನು ಇಂಗ್ಲಿಶಿನ ನೆರವಿಲ್ಲದೆ ತಮ್ಮ ತಮ್ಮ ತಾಯ್ನುಡಿಗಳ ಮೂಲಕ ಕಲಿತು
ಹೆಚ್ಚಿಸಿಕೊಂಡು ಇಡೀ ಪ್ರಪಂಚಕ್ಕೆ ಹೊಸ ಹೊಸ ಉತ್ಪನ್ನಗಳನ್ನ ’ಕೊಟ್ಟು’ ತಾಂತ್ರಿಕ ಹೆಚ್ಚುಗಾರಿಕೆಯನ್ನು ತೋರುತ್ತಿವೆ. ನಾವು (ಬಾರತ) ಇನ್ನು ಜಾಗತೀಕರಣದಿಂದ ’ಪಡೆ’ದುಕೊಳ್ಳುವುದರಲ್ಲಿ ಇದ್ದೀವೆಯೆ ಹೊರತು ’ಕೊಡು’ವುದಕ್ಕೆ ಮನಸ್ಸು ಮಾಡಿಲ್ಲ. ಹಾಗಾಗಿ ಮೂರ್ತಿಯವರು ಸಮ್ಮೇಳನದ ಉದ್ಗಾಟನೆ ಮಾಡುವ ನೆಪದಲ್ಲಾದರೂ ಸಾರ್ವಜನಿಕ ವಲಯದಲ್ಲಿ ಜಾಗತೀಕರಣಕ್ಕೆ ’ಕೊಡು’ವುದರ ಬಗ್ಗೆ ಹೆಚ್ಚು ಚರ್ಚೆಗಳು ನಡೆಯಲಿ ಬಯಸುತ್ತೇನೆ

ಗುರುವಾರ, ಫೆಬ್ರವರಿ 10, 2011

ಒಂಬತ್ತು(೯) ಅನ್ನುವುದು ಏತಕ್ಕೆ?

ಒನ್(ದು)+ಪತ್ತು = ಒಂಬತ್ತು (ಅಂದರೆ ೧೦ಕ್ಕೆ ೧ ಕಡಿಮೆ. ಕೆಲವರು ತಪ್ಪಾಗಿ ’ಒಂಭತ್ತು’ ಎಂದು ಉಲಿಯುತ್ತಾರೆ. !!)
’ಒನ್’ ಪದದಲ್ಲಿರುವ ’ನ್’ ಮೂಗಿಲಿಯಾಗಿರುವುದರಿಂದ ’ಪತ್ತು’ ಪದದಲ್ಲಿರುವ ’ಪ’ -> ’ಬ’ ಆಗುತ್ತದೆ. ಇದು ಕನ್ನಡದ ಕಟ್ಟಳೆ.
ಪತ್ತು +ಒಂದು(10+1) = ಪತ್+ಒಂದು=> ಪನ್+ಒಂದು= ಪನ್ನೊಂದು (ಪತ್ ಪದದಲ್ಲಿ ’ತ’ಕಾರಕ್ಕೆ ’ನ’ಕಾರ ಆದೇಶವಾಗಿ ಬಂದು ’ಪನ್’ ಅಂತಾಗಿದೆ).


ಒಂದು ವೇಳೆ ಅಲ್ಲಿ ಮೂಗುಲಿ ಇಲ್ಲದಿದ್ದರೆ ಅದು ’ಪ್’->’ವ್’ ಆಗುತ್ತದೆ. ಎತ್ತುಗೆಗೆ: ಬೆರೆಸಿದ+ಪೋಲ್= ಬೆರೆಸಿದವೋಲ್

ಕನ್ನಡದ ಕಟ್ಟಳೆಯ ಪ್ರಕಾರ ಎಲ್ಲೆಲ್ಲಿ ’ೞ’ ಬರಬೇಕು?

ಉತ್ತರ: ಅದರ ಮುಂದೆ ’ಲ್’ಕಾರ ಇದ್ದರೆ ಅಲ್ಲೆಲ್ಲ ’ೞ’ಕಾರ ಬರುತ್ತೆ.

ಎತ್ತುಗೆಗಾಗಿ:-
ಅೞಲ್ =cry
ಕೞಲ್, ಕೞಲೆ( anklet)
ಕೞಲ್ = buttermilk
ಕೞಲ್ = two or three of the upper joints of a sugar-cane that are insipid.
ಕೊೞಲ್ = flute
ತೊೞಲ್ = go around, suffering
ನೆೞಲ್ = ನೆರಳು,shade
ಪೊೞಲ್ = ಹೊಳಲು, town,city
ಬೞಲ್ = ಸುಸ್ತು, tired
ಬಿೞಿಲ್ = ಒಂದು ಗಿಡದ ಹೆಸರು
ಬೀೞಲ್ = ಊಡೆ = root that grows downwards from the branches of a banyan and other trees, pendent root; ūḍe pendent root of a banyan tree
ಉೞಲ್(ಉೞುವಿಕೆ)
ಏೞಲ್(ಏಳಿಗೆ)
ಮೞಲ್(ಮೞ್ಗಣ್) the eyes to become dim


ಆದರೆ ಇದಕ್ಕೆ ಹೊರತಾದ ಪದಗಳು ಇವೆ:
ಅಳಿಲ್
ಮಳಲ್
References: ಎಮನೊ ಮತ್ತು ಬರೊಅವರ ದ್ರಾವಿಡ ನುಡಿಗಂಟು (http://dsal.uchicago.edu/cgi-bin/philologic/search3advanced?dbname=burrow&query=bir%CC%A4al&matchtype=exact&display=utf8)

ಬುಧವಾರ, ಫೆಬ್ರವರಿ 09, 2011

ಮೊಗೇರ/ಮೊಗವೀರ ಅಂದರೆ ಏನು?

ಮೊಗೆ = ನೀರನ್ನು ಒಂದು ಹಿಡಿಯಲ್ಲಿ/ಚೆಂಬಿನಲ್ಲಿ ಕೊಳದಿಂದಲೊ, ಹೊಳೆಯಿಂದಲೊ, ಕಡಲಿನಿಂದಲೊ ತೆಗೆದುಕೊಳ್ಳುವುದು.

ಎಮನೊ ಮತ್ತು ಬರೊ ನುಡಿಗಂಟಿನಿಂದ:-

Ka. moge to take water with a vessel out of a pond, tank or stream for one's use, ladle out (any fluid with a small vessel out of a larger one), scoop, bale; n. state of (water) being sufficient to be taken (out of a pond, etc.);

ಹೀಗೆ ಮೊಗೆದು ಮೀನನ್ನು ಹಿಡಿಯಬಹುದು. ಹಾಗಾಗಿ ಮೀನುಗಾರರಿಗೆ ಮೊಗೆಯುವವರು=>ಮೊಗೆಯರು => ಮೊಗೇರರು ಎಂಬ ಹೆಸರು ಬಂದಿದೆ. ಮೊಗೇರ/ಮೊಗವೀರ ಎಂಬ ಜಾತಿಯು ಕರ್ನಾಟಕದ ಕರಾವಳಿಯಲ್ಲಿದೆ.

ಮುಂಬಯ್ ಅಂದರೆ ಏನು?

ಮುನ್+ ಪಾಯ್ = ಮುಂಬಾಯ್ = ಮುಂಬಯ್
ಪಾಯ್= ಹಾಯ್ = ತೇಲ್ (sail), ಬಳಕೆ : ಹಾಯಿದೋಣಿ

ತೇಲುವುದಕ್ಕೆ ಮುಂಚೆ ಸಿಗುವ ತಾವು(ಜಾಗ) -ಮುಂಬಯ್

ಬರ್ತನ ಪದಗೊಳ್

ಬರ್ತನ ಪದಗೊಳ್!

ಕಾಪಿ ಕನ್ನಡ ಕಯ್ಯಿಡದೋಳ್
ಅಂದ್ರೆ ಬರ್ತಂಗ್ ಪ್ರಾಣ
ಲೋಟಾನ್ ಎತ್ತ್ ಕುಡ್ಬುಟ್ಟಂದ್ರೆ
ತಕ್ಕೊ! ಪದಗೊಳ್ ಬಾಣ :)
---
ರತ್ನನ ಪದಗಳ್ ಒಂದು ಪದ್ಯದ ಅಣುಕುಪದ್ಯEdit

ಹೊಳಲು ಅಂತ ಯಾಕೆ ಬಂತು?

ಪೊಳಲ್ = ಹೊಳಲ್ = ಪುರ( city)= ನಗರ, ಇದನ್ನ ಈ ರೀತಿ ಪೊೞೆ+ಅಲ್=>ಪೊೞೆಯಲ್=>ಹೊಳೆಯಲ್(ಹೊಸಗನ್ನಡ)=> ಹೊಳಲ್ ಅಂದ್ರೆ ಹೊಳೆ ಹತ್ರ, ಹೊಳೆಯಲ್ಲಿ, ಮೊದಲೆಲ್ಲ ಹೊಳೆಯ ದಡದಲ್ಲಿ/ಹತ್ತಿರ ನಗರಗಳು ಹುಟ್ಟಿಕೊಳ್ಳುತ್ತಿದ್ದವು. ಯಾಕಂದರೆ ಹೊಳೆಯ ನೀರಿಂದನೇ ಬದುಕು/ದುಡಿಮೆ/ನಡಾವಳಿ ನಡೀತಾ ಇತ್ತು. ಎತ್ತುಗೆಗೆ ನೈಲ್,ಗಂಗೆ,ಕಾವೇರಿ(ಶ್ರೀರಂಗಪಟ್ಟಣ)

ಇನ್ನೊಂದು ವಿಶೇಶ ಅಂದ್ರೆ ಚಾಲುಕ್ಯರು ಬಾದಾಮಿಯಲ್ಲಿ ಕಲ್ಗುಡಿ, ಕೋಟೆಗಳನ್ನು ಕಟ್ಟಿಸಿದರೂ ಪಟ್ಟ ಮಾಡ್ಕೊಳ್ಳಕೆ ಕಿಸುವೊಳಲಿಗೆ(ಪಟ್ಟದ ಕಲ್ಲಿಗೆ) ಬರಬೇಕಾಗಿತ್ತು ಯಾಕಂದ್ರೆ ಅಲ್ಲೇ ಮಲಪ್ರಬೆ(?)ಹರಿಯೋದು. ಹಾಗಾಗಿ ಬಾದಾಮಿ ಎಂದು ಹೊಳಲಾಗಲಿಲ್ಲ. ಕಿಸುವೊಳಲು ಹೊಳಲಾಗಿಯೇ ಉಳಿಯಿತು.
ದ್ರಾವಿಡ ನುಡಿಗಂಟಿನಿಂದ
Ka. por̤e river
Ka. por̤al town, city.

ಮಂಗಳವಾರ, ಜನವರಿ 04, 2011

’ಕೊಂಕಣ’ ಕನ್ನಡದ ಪದವೇ?

ಇತ್ತೀಚೆಗೆ ಗೋವಾದ ಮಂತ್ರಿಯೊಬ್ಬರು ಕಾರವಾರದ ಕೆಲವು ಬಾಗಗಳನ್ನ ಗೋವಾಗೆ ಸೇರಿಸ್ಬೇಕು ಅಂತ ಹೇಳಿಕೆ ಕೊಟ್ಟಿದ್ರು.
ಆದರೆ ’ಗೋವೆ’ಯೇ ಕನ್ನಡದ ಹೆಸರು ಆಗಿರುವಾಗ ಅದನ್ನ ಕರ್ನಾಟಕಕ್ಕೆ ಸೇರಿಸ್ಬೇಕು ಅಂತ ನಾವು ಹೇಳ್ಬೋದು...
ಹೇಗೆ?

ಕನ್ನಡದಲ್ಲಿ(ಮತ್ತು ಇತರ ದ್ರಾವಿಡ ನುಡಿಗಳಲ್ಲಿ) ಕೊಂಕ, ಕೊಂಕು, ಕೊಕ್ಕೆ, ಕೊಂಡ(ಕುಂದ) ಎಂಬ ಪದಗಳಿವೆ. ಅದರಲ್ಲಿ ಕೊಂಕ ಅನ್ನುವ ಪದಕ್ಕೆ ವಕ್ರ, ಡೊಂಕ ಅಂತಲೂ ಕೊಂಡ/ಕುಂದ ಅನ್ನುವ ಪದಕ್ಕೆ ಬೆಟ್ಟ ಅನ್ನುವ ಅರ್ಥಗಳುವೆ.
Ka. kokki, kokke crookedness, perverseness, a crook, bend, hook; kogga, kokkari, koṅga, koṅgari crookedness; koṅki a hook, fish-hook, angle; koṅku to be bent, get crooked, curved, distorted, deformed, or curled, become perverse, untrue, etc.; n. (also koṅgu) state of being bent, crooked, etc.; koṅkisu to make crooked

Ka. koṇḍa,kunda hill, mountain

ನಮ್ಮ ತೆಂಕುಭಾರತದ ಪಡುವಲ ತೀರದುದ್ದಕ್ಕೂ ಇರುವ ಅಂಕು ಡೊಂಕಾದ ಬೆಟ್ಟಗಳ ಉದ್ದ ಸಾಲಿನಲ್ಲಿರುವ ನಾಡೇ ’ಕೊಂಕ್’ಣ. ತೆಂಕಲ್, ಬಡಗಲ್, ಪಡುವಲ್, ಮೂಡಲ್ ಇವುಗಳು ತೆಂಕಣ, ಬಡಗಣ, ಪಡುವಣ, ಮೂಡಣ ಆದ ಹಾಗೆ ಕೊಂಕಲ್ -> ಕೊಂಕಣ ಆಗಿರಬಹುದು.

ಕೊಂಕಣ (ಸಂಸ್ಕೃತೀಕರಿಸಿದರೆ)-> ಕೋಂಕಣ (ಕೊರಲಿಸದ -> ಕೊರಲಿಸಿದ)-> ಗೋಂಕಣ (ಪ್ರಾಕ್ರುತದಲ್ಲಾಗುವ ಮೊಟಕಿಸುವಿಕೆ)--> ಗೋಂ -> ಗೋಮ್ -> ಗೋಮೆ(ಮ->ವ) -> ಗೋವೆ -> ಗೋವಾ

ಇನ್ನು ಕರ್ನಾಟಕದ ಉತ್ತರಕನ್ನಡದಲ್ಲಿರುವ ಗೋಕರ್ಣದಲ್ಲಿರುವ ’ರ’ಕಾರ ತೆಗೆದುಹಾಕಿದರೆ ಗೋಕಣ - ಇದಕ್ಕು ಮೇಲೆ ಹೇಳಿರುವ ’ಪದವುಟ್ಟು’ ಒಪ್ಪುತ್ತದೆ.

[ ಸೇಡಿಯಾಪು ಕ್ರುಶ್ಣಬಟ್ಟರವರ ’ಶಬ್ದಾರ್ಥಕೋಶ’ ದಿಂದ ಇಲ್ಲಿ ಕೆಲವು ಅಂಶಗಳನ್ನು ಹಾಕಿದ್ದೇನೆ.]

ಭಾನುವಾರ, ಜನವರಿ 02, 2011

ಸಲ್ಮೊಱೆ(ಸಲ್ಮೊರೆ) ಅಂದ್ರೇನು?

ಸಲ್ಮೊಱೆ (ಸಲ್+ಮೊಱೆ) - ?

ನಮ್ಮ ಕಡೆ ಈ ಪದ ಬಳಕೆಯಲ್ಲಿದೆ....ಹಿಂದಿನಿಂದಲೂ, ಹೆಣ್ಣು ಮದುವೆಯಾಗುವಾಗ ಈಗಿರುವ ಸಂಬಂಧದ ಒಳಗೆ ಅಂದರೆ ಸೋದರ ಮಾವನನ್ನೊ ಇಲ್ಲವೆ ಸೋದರಮಾವನ/ಸೋದರತ್ತೆ ಮಗನನ್ನೊ ಮದುಯಾಗುವುದುಂಟು. ಇದಕ್ಕೆ ’ಸಲ್ಮೊರೆ ಸರಿಯಾಗಿದೆ’ ಅಂತ ಹೇಳ್ತಾರೆ ಅಂದರೆ ಅವರಲ್ಲಿ ಅಣ್ಣ-ತಂಗಿಯ ಸಂಬಂಧವಿಲ್ಲ ಗಂಡ-ಹೆಂಡಿರಾಗಬಹುದು ಅಂತ ಅರ್ಥ. ಆದರೆ ಹೆಣ್ಣಿಗೆ/ಗಂಡಿಗೆ ದೂರದ ಸಂಬಂಧದವರ ಜೊತೆ ಮದುವೆಯಾಗುವ ಪ್ರಸಂಗ ಒದಗಿ ಬಂದಾಗ ಇದು ಗೋಜಲಾಗುವುದರಿಂದ ಇದನ್ನ ದೊಡ್ಡವರು ಸರಿಯಾಗಿ ಅನಲೈಸ್ ಮಾಡಿ ಆಮೇಲೆ ’ಸಲ್ಮೊರೆ’ ಸರಿಯಾಗಿದಿಯೊ ಇಲ್ಲವೊ ಅಂತ ಹೇಳ್ತಾರೆ.

ಸಲ್ಲುವ ’ಮೊಱೆ’ಯೇ ಸಲ್ಮೊಱೆ. ಅಂದರೆ ’ಸಲ್ಲುವ ನಂಟು’/ಸಲ್ಲುವ ಸಂಬಂಧ/ಒಪ್ಪತಕ್ಕ ಸಂಬಂಧ ಅಂತ ಅರ್ಥ.
( Ka. moṟe a turn, time, (K.2) propriety, virtue; relationship)

’ಮೊಱೆ’ಯ ಬಳಕೆಗಳು
೧. ಅವನು ಮೊಱೆಯಲ್ಲಿ ನನಗೆ ಮೊಮ್ಮಗನಾದರೂ ನನಗಿಂತ ಹೆಚ್ಚು ಬುದ್ದಿವಂತ.
೨. ನಮ್ಮ ಮೊಱೆಯವರಲ್ಲೇ ನಮ್ಮನ್ನು ಕಂಡರೆ ಹೆಚ್ಚು ಹೊಟ್ಟೆಕಿಚ್ಚು.

ಕನ್ನಡ-ತುಳು

ಕನ್ನಡ ತುಳು ಮತ್ತು ತಮಿಳಿನಲ್ಲಿ (ಱ್ ಅಕ್ಕರ ಕೊನೆಯಲ್ಲಿ ಬರುವಾಗ)ಆಗುವ ಬದಲಾವಣೆಗಳು.
ಕನ್ನಡ - ತಮಿಳು - ತುಳು
-------------------------------------------------
ಒನ್ದು - ಒನ್ಱು - ಒಂಜಿ
ಮೂಱು - ಮೂನ್ಱು - ಮೂಜಿ
ಆಱು - ಆಱು - ಆಜಿ
ತೊಱೆ -ತುಱೈ - ತುದೆ
ನೂಱು - ನೂಱು - ನೂದು
ಮಱೆ - ಮಱ - ಮದೆ

ತಮಿಳಿನಲ್ಲಿ ’ಱ್’ ಇದ್ದ ಕಡೆ ಹೆಚ್ಚು ಕಡೆ ಕನ್ನಡದಲ್ಲೂ ಹಾಗೆ ಇದೆ. ಆದರೆ ಕೆಲವು ಕಡೆ ತುಳುವಿನ ತರ ’ದ್’ ಬಂದಿದೆ. ಆದರೆ ತುಳುವಿನಲ್ಲಿ ’ಱ್’ ಕಾರದ ಬದಲು ’ದ್’ ಇಲ್ಲವೆ ’ಜ್’ ಬರುತ್ತದೆ.

’ಒನ್-ಱು’ ಕನ್ನಡದಲ್ಲಿ ’ಒಱು’(ಮೂಱು ತರ) ಆಗಬೇಕಿತ್ತು ಆದರೆ ಒನ್-ದು ಆಗಿರುವುದು ತುಳಿವಿನ ನಿಯಮ ಪಾಲಿಸಿದಂತೆ ಇದೆ. ಆದ್ದರಿಂದ ತುಳುವಿನ ಒರೆಕಟ್ಟುಗಳನ್ನು ನಾವು ಹೆಚ್ಚು ಆಳವಾಗಿ ಓದಬೇಕಾಗಿದೆ. ಇದರಿಂದ ಕನ್ನಡದ ಹಲವು ಒರೆಕಟ್ಟುವಿಕೆಗಳ ಒಳಗುಟ್ಟುಗಳು ಬಯಲಾಗಬಹುದು