ಮಾನ್ಯ ಶ್ರೀ ಅನಂತ ಮೂರ್ತಿಯವರು ಇತ್ತೀಚೆಗೆ ನಡೆದ ರಾಜ್ಯಸಬೆಯ ಚುನಾವಣೆಯಲ್ಲಿ ಕೆ.ಮರುಳಸಿದ್ದಪ್ಪನವರು ಸ್ಪರ್ದಿಸಿದುದನ್ನು ಸೆಕ್ಯುಲರ್ ಮಚ್ಚೆ, ಮಂಕುಬೂದಿ, ಚೇಶ್ಟೆ ಅಂತ ಪ್ರಜಾವಾಣಿಯ ’ಅನುಸಂಧಾನ’ ಎಂಬ ಅಂಕಣದಲ್ಲಿ ಹೀಗಳೆದಿದ್ದಾರೆ
ಆದರೆ ಕೆ.ಮರುಳಸಿದ್ದಪ್ಪನವರು ಒಬ್ಬ ಪಕ್ಶೇತರ ಅಭ್ಯರ್ತಿಯಾಗಿ ಸ್ಪರ್ದಿಸಿದ್ದರೆ ಹೊರತು ಕಾಂಗ್ರೆಸ್-ಜೆಡಿಎಸ್ ಪಕ್ಶಗಳಿಂದಲ್ಲ ಎಂಬುದನ್ನ ನಾವು ಗಮನಿಸಬೇಕು. ಅಲ್ಲದೆ ಒಕ್ಕೂಟ ವ್ಯವಸ್ತೆಯನ್ನು ಒಪ್ಪಿರುವ ನಾವು ರಾಜ್ಯಸಭೆಗೆ ಆಯ್ಕೆಯಾಗುವವರು
ಆಯ ರಾಜ್ಯದವರೇ ಆದ ಬುದ್ದಿ ಜೀವಿಗಳು ಇಲ್ಲವೆ ಆಯ ರಾಜ್ಯದ ನುಡಿ, ಸಂಸ್ಕೃತಿ ಮತ್ತು ಸಮಸ್ಯೆಗಳನ್ನು ಚೆನ್ನಾಗಿ ಅರಿತವರು ಅಯ್ಕೆ ಆಗಿ ಬರಲಿ ಎಂಬುದು ಪ್ರಜಾಪ್ರಬುತ್ವದ ಸಿದ್ದಾಂತ ಮತ್ತು ಸಂವಿದಾನದ ಆಶಯ ಕೂಡ ಆಗಿರುವಾಗ ಮರುಳಸಿದ್ದಪ್ಪನವರು ಕಣಕ್ಕೆ ಇಳಿದದ್ದು ಸಮರ್ತನೀಯ. ರಾಶ್ಟ್ರೀಯ ಪಕ್ಶಗಳು ಒಕ್ಕೂಟ ವ್ಯವಸ್ತೆಯ ಆಶಯ ಮತ್ತು ಸಿದ್ದಾಂತಗಳಿಗೆ ವಿರುದ್ಧವಾಗಿ ನಡೆದಾಗ ಅದನ್ನು ವಿರೋದಿಸಿ ಮರುಳಸಿದ್ದಪ್ಪನವರು ಸೈದ್ದಾಂತಿಕ ನೆಲೆಯಲ್ಲಿ ಸ್ಪರ್ಧಿಸಿದರೆ ಹೊರತು ಚೇಶ್ಟೆಗಾಗಿ ಅಲ್ಲ. ಇಲ್ಲಿ ಸೋಲು-ಗೆಲುವು ಮುಕ್ಯವಲ್ಲ ಒಕ್ಕೂಟ ವ್ಯವಸ್ತೆಯ ಸೈದ್ದಾಂತಿಕ ನಿಲುವುಗಳನ್ನು ಎತ್ತಿ ಹಿಡಿಯುವ ಮತ್ತು ರಾಷ್ಟ್ರೀಯ ಪಕ್ಷಗಳ ’ಪ್ರಾದೇಶಿಕ ಆಶಯ’ಗಳ ವಿರೋಧಿ ನಿಲುವನ್ನು ಖಂಡಿಸುವ ವಿದಾನವಾಗಿ ಮರುಳಸಿದ್ದಪ್ಪನವರ ಸ್ಪರ್ಧೆಯನ್ನು ನಾವು ನೋಡಬೇಕಾಗುತ್ತದೆ. ಶಾಸಕರು ಕೂಡ ’ಮೊದಲು’ ಕನ್ನಡಿಗರೇ ಅಲ್ಲವೆ, ಆಮೇಲೆ ತಾನೆ ಬಿಜೆಪಿ ಇಲ್ಲವೆ ಕಾಂಗ್ರೆಸ್ಸಿನ ಪಕ್ಷದವರು; ಹಾಗಾಗಿ ’ಆತ್ಮಸಾಕ್ಶಿ’ ಆದಾರಿತ ವೋಟುಗಳನ್ನು ಕೇಳುವುದು ಕೆಟ್ಟ ರಾಜಕಾರಣವಾಗಲ್ಲ, ಅಲ್ಲದೆ ಇನ್ನೂ ’ಪ್ರಾದೇಶಿಕ ಆಶಯ’ದ ಮೇಲೆ ನಿಂತ ರಾಜಕಾರಣವಾಗಿ ಪ್ರಜಾಪ್ರಬುತ್ವದ ಮತ್ತು ಒಕ್ಕೂಟ ವ್ಯವಸ್ತೆಯ ಮೌಲ್ಯಗಳನ್ನು ಹೆಚ್ಚು ಗಟ್ಟಿಗೊಳಿಸುತ್ತದೆ.
ಇನ್ನು ಮುಂದಾದರೂ ರಾಶ್ಟ್ರೀಯ ಪಕ್ಶಗಳು ರಾಜ್ಯಸಬೆಗೆ ಅಭ್ಯರ್ತಿಗಳನ್ನು ಆರಿಸುವಾಗ ಎಚ್ಚರದಿಂದಿರಲಿ ಮತ್ತು ಒಕ್ಕೂಟ ವ್ಯವಸ್ತೆಗೆ ಬದ್ದವಾಗಿರಲಿ ಎನ್ನುವ ಎಚ್ಚರವನ್ನ ಮರುಳಸಿದ್ದಪ್ಪನವರು ಸ್ಪರ್ದಿಸುವ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಹೇಳಬಹುದು.
1 ಕಾಮೆಂಟ್:
ಬಹುಶಃ ಅನಂತಮೂರ್ತಿಯವರು ತಮಗೆ ಟಿಕೇಟ್ ಕೊಡಲಿಲ್ಲವಲ್ಲ ಅನ್ನೋ ಸಿಟ್ಟಿನಲ್ಲಿ ಹಾಗೆ ಹೇಳಿದ್ದಾರೆ ಬಿಡಿ ಪಾಪ!!
ಕಾಮೆಂಟ್ ಪೋಸ್ಟ್ ಮಾಡಿ