ಶನಿವಾರ, ಏಪ್ರಿಲ್ 14, 2012

'ದಶಮುಕ’ ಚೆನ್ನಾಗಿದೆ


ಇವತ್ ’ದಶಮುಕ’ ಸಿನಿಮಾ ನೋಡಿದೆ. ಸಿನಿಮಾ ತುಂಬ ಚೆನ್ನಾಗಿದೆ.ಏನ್ ಚೆನ್ನಾಗಿದೆ:-೧. ಕತೆ , ಅನಂತನಾಗ್ ಮತ್ತು ಅವಿನಾಶ್ ಅವರ ನಟನೆ೨. ರವಿಚಂದ್ರನ್ ತಾವು ತೆಗೆದುಕೊಂಡಿರುವ ಪಾತ್ರದಿಂದ ನಿಮಗೆ ಅಚ್ಚರಿ ಮೂಡಿಸುತ್ತಾರೆ.೩. ಅನಂತ್ ನಾಗ್- ಅಚ್ಯುತ್ ಅವರು ಅಲ್ಲಲ್ಲ್ ಕಚಗುಳಿ ಇಡುತ್ತಾರೆ....೪. ಚೇತನ್ ಮತ್ತು ಅವರ ಒಡನಟಿ ಅಲ್ಲಲ್ಲಿ ಮನಕ್ಕೆ ತಂಪನ್ನೀಯುತ್ತಾರೆ.೫. ಮಾತುಗಳು(ಸೂಳುನುಡಿ- dialogue) ಕಚಗುಳಿ ಕೊಡುವದಲ್ಲದೆ ಲಾಜಿಕ್ಕನ್ನು ಎತ್ತಿ ಹಿಡಿಯುತ್ತಾ ಹೋಗುತ್ತದೆ.೬. ಎಲ್ಲರಿಗೂ ಅವರಿಗೆ ಒಗ್ಗುವ ಪಾತ್ರವನ್ನು ಕೊಡಲಾಗಿದೆ. ಹಾಗಾಗಿ ಸೀನುಗಳು ಸರಾಗವಾಗಿ ಸಾಗುತ್ತವೆ.೭. ಅಶ್ಟೊಂದು ಪಾತ್ರಗಳನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ ತೂಗಿಸಿಕೊಂಡು ಹೋಗುವುದು ಸುಲಬವಲ್ಲ.. ಹಾಗಾಗಿ ನಿರ್ದೇಶಕರು ಒಳ್ಳೆ ಕೆಲಸ ಮಾಡಿದ್ದಾರೆ ಅಂತ ದಾರಾಳ್ವಾಗಿ ಹೇಳಬಹುದು.೮. ಕೊನೆಯಲ್ಲಿ ’ಕನ್ನಡ ನುಡಿ’ಯ ಬಗೆಗಿನ ಕಾಳಜಿ ತೋರುವ ಸಿನಿಮಾ ಹೇಗೆ ಕತೆಯನ್ನು ಕನ್ನಡತನಕ್ಕೆ ಜಾಣತನದಿಂದ ಒಗ್ಗಿಸಿದ್ದಾರೆ ಎಂಬುದು ಅರಿವಾದಾಗ ನಿಮಗೆ ಕುಶಿಯಾಗುತ್ತದೆ.ಕೊನೆಯದಾಗಿ. ಹೇಗೆ ನಾವು ಯಾವುದೇ ವಿಶ್ಯವನ್ನು ನಮ್ಮ ಅನುಬವಗಳಿಂದ ಹೊರತಾಗಿ ನೋಡಬೇಕು ಮತ್ತು ಹಾಗೆ ನೋಡಿದಾಗ ಆ ವಿಶ್ಯಕ್ಕೆ ನ್ಯಾಯ ಒದಗಿಸಬಹುದು ಎಂಬುದು ಈ ಸಿನಿಮಾ ನೋಡಿ ಕಲಿಯಬಹುದು.ತುಂಬಾ ಚೆನ್ನಾಗಿದೆ...ಇದಕ್ಕೆ ಹಲಚುಕ್ಕಿಗಳು****** ..ನೋಡಲೇಬೇಕಾದ ಸಿನಿಮಾ. dont miss it