ಬೈರಪ್ಪನವರ ಜೊತೆ ಮಾತುಕತೆಯನ್ನು ನೆನ್ನೆಯ(೧೬ ನೇ ನವೆಂಬರ್ ೨೦೧೧) ಕನ್ನಡಪ್ರಬದಲ್ಲಿ ಬಂದಿದೆ - ಇದರ ಬಗ್ಗೆ ಎರಡು ಮಾತು.
ಮೊದಲಿಗೆ, ಬೈರಪ್ಪನವರ ಕಾದಂಬರಿಗಳನ್ನು(ನಾಯಿನೆರಳು, ಜಲಪಾತ.) ಮೆಚ್ಚಿಕೊಂಡವರಲ್ಲಿ ನಾನೂ ಒಬ್ಬ. ಆದರೆ ಈ ಮೇಲಿನ ಮಾತುಕತೆಯಲ್ಲಿ ಅವರ ನಿಲುವುಗಳಲ್ಲಿರುವ ಪೊಳ್ಳುತನದ ಬಗ್ಗೆ ನಾನು ಹೇಳಲೇಬೇಕಿದೆ.
ಕೇಳ್ವಿ.೫ ಕ್ಕೆ ಉತ್ತರಿಸುವಾಗ ಹೀಗೆ ಹೇಳಿದ್ದಾರೆ.- "ವಿಶಯ ಎಶ್ಟೆ ಗಾಡವಾಗಿರಲಿ ಬಾಶೆಯು ಬಾರವಾಗಿರುವುದು ನನಗೆ ಸೇರುವುದಿಲ್ಲ. ಶಬ್ದಗಳು ಕವಿಯನ್ನು ಸುತ್ತುವರೆದು ನನ್ನನ್ನು ಪ್ರಯೋಗಿಸು ಎಂದು ಓಲಿಡುತ್ತವೆ ಎಂದು ನಾನು ಕಾಲೇಜು ಓದುವಾಗ ಒಬ್ಬ ಕನ್ನಡ ಅದ್ಯಾಪಕರು ಪದೇ ಪದೇ ಹೇಳುತ್ತಿದ್ದರು..ನನಗೆ ಎಂದು ಹಾಗೆ ಆಗಿಲ್ಲ" - ಇಲ್ಲಿ ಹೀಗೆ ಹೇಳುವ ಬೈರಪ್ಪನವರು
ಕೇಳ್ವಿ ೧೪ ಕ್ಕೆ ಉತ್ತರಿಸುವಾಗ ಹೀಗೆ ಹೇಳಿದ್ದರೆ - "ಪಾರಿಬಾಶಿಕ ಶಬ್ದಗಳ ಕೈಪಿಡಿಯನ್ನು ಸಿದ್ದಪಡಿಸುವ ಒಮ್ದು ಸಮಿತಿಯಲ್ಲಿ ನಾನು ಸದಸ್ಯನಾಗಿದ್ದೆ. oxy+gen(=ಜನಕ). hydro(ನೀರು)+gen(ಜನಕ) - ಹೀಗೆ ಶಾಸ್ತ್ರ ಮತ್ತು ವಿಜ್ಞಾನದ ಪರಿಬಾಶೆಗಳು ಬಾರತದ ಎಲ್ಲ ಬಾಶೆಗಳಲ್ಲೂ ಬಹುತೇಕ ಒಂದೇ ಆಗಿರುವುದನ್ನು ಗಮನಿಸಿ. ಇಲ್ಲಿ ಬಾಶೆಗಳು ಸಾದ್ಯವಾದಶ್ಟು ಈ ಶಬ್ದಗಳನ್ನೇ ಇಟ್ಟುಕೊಳ್ಳಬೇಕು. ಇದರಿಂದ ಒಂದು ಬಾಶೆಯಲ್ಲಿ ಬರೆದ ವಿಗ್ನಾನ ಮತ್ತು ಶಾಸ್ತ್ರ ಗ್ರಂತಗಳನ್ನು ಇತರ ಬಾಶೆಗಳಿಗೆ ಅನುವಾದಿಸುವುದು ಸುಲಬವಾಗುತ್ತದೆ"
೫ ಮತ್ತು ೧೪ ರಲ್ಲಿರುವ ತನ್ನೆದುರನ್ನು(contradiction) ಯಾರು ಬೇಕಾದರೂ ಸುಳುವಾಗಿ ಗುರುತಿಸುಬಹುದು. ’೫’ರಲ್ಲಿ ಬಾಶೆ ಸರಳವಾಗಿರಬೇಕು ಮತ್ತು ಸರಳ ಬಾಶೆಯಲ್ಲಿ ಗಾಡವಾದ ವಿಚಾರವನ್ನು ತಿಳಿಸಬೇಕು ಎಂದು ಹೇಳುವ ಬೈರಪ್ಪ ’೧೫’ರಲ್ಲಿ ಬೇರೆ ಬಾಶೆಗೆ ಅನುವಾದ ಮಾಡಲು ಸುಲಬ ಮಾಡಲು ಸಂಸ್ಕ್ರುತದ ಕಟಿಣ ಪದಗಳಿಗೆ ಮೊರೆ ಹೋಗಬೇಕು ಎನ್ನುತ್ತಾರೆ. ಬೈರಪ್ಪನವರೆ, ನೀವು ನಿಮ್ಮ ಕಾದಂಬರಿಗಳಲ್ಲಿ ಹೀಗೆ ಯಾಕೆ ಮಾಡಲಿಲ್ಲ... ನೀವು ಹೆಚ್ಚು ಸಂಸ್ಕ್ರುತದ ಪದಗಳನ್ನು ಬಳಸಿದ್ದರೆ ಅದನ್ನು ಇತರ ಬಾಶೆಗಳಿಗೆ ಅನುವಾದ ಮಾಡುವುದು ಸುಳುವಾಗುತ್ತಿರಲಿಲ್ಲವೆ? ಹಾಸನದ ಆಡುನುಡಿಯನ್ನು ಯಾಕೆ ಹೆಚ್ಚು ಬಳಸಿದ್ದೀರಿ. ? ಇದು ನಿಮ್ಮ ಇಬ್ಬಂದಿತನವಲ್ಲವೆ?
ಯಾವುದೇ ನುಡಿಯಲ್ಲಿ ಪಾರಿಬಾಶಿಕ ಪದಗಳನ್ನು ಉಂಟು ಮಾಡುವಾಗ ಆಯ ನುಡಿ ಆಡುವ ಮಂದಿಗೆ ಸುಲಬವಾಗಿ ತಿಳಿಯುವಂತೆ ಪದವನ್ನು ಉಂಟು ಮಾಡಬೇಕು. ಇದರಿಂದ ಆ ನುಡಿಜನಾಂಗವು ಕಲಿಕೆಯಲ್ಲಿ ಮುನ್ನಡೆಯಬಹುದು. ಅದನ್ನು ಬಿಟ್ಟು ಬೇರೆ ಯಾವುದೋ ಬಾಶೆಗೆ ಅನುವಾದ ಮಾಡಲು ಅನುವಾಗುವಂತೆ ಪಾರಿಬಾಶಿಕ ಉಂಟುಮಾಡುವುದು ಎಶ್ಟು ಸರಿ? ಪಾರಿಬಾಶಿಕ ಪದಗಳ ಮೊದಲ ಗುರಿ ಆ ನುಡಿಜನಾಂಗಕ್ಕೆ ಯಾವುದೇ ಕಲಿಕೆಯನ್ನು ಸುಲಬಗೊಳಿಸುವುದು ಮತ್ತು ಕಲಿಕೆಯಲ್ಲಿ ಮುನ್ನಡೆಯುವಂತೆ ಮಾಡುವುದೇ ಆಗಿರಬೇಕು. ಹಾಗಾಗಿ ಆಯ ನುಡಿಯಲ್ಲಿರುವ ಸರಳ ಪದಗಳನ್ನು ಬಳಸಿ ಪಾರಿಬಾಶಿಕ ಪದನೆರಕೆಯನ್ನು ಕಟ್ಟಬೇಕು.
"ಕೇಳ್ವಿ ೧೪. ಈ ಹೊತ್ತು ಪ್ರಾದೇಶಿಕ ಭಾಶೆಗಳ, ಪ್ರಾಂತಗಳ ಮತ್ತು ಸಂಸ್ಕ್ರುತಿಗಳ ಬಗ್ಗೆ ಮಾತನಾಡುವುದು ಮನೋವೈಶಾಲ್ಯದ ಲಕ್ಶಣವೆನಿಸಿದೆ. ಆದರೆ, ಬಾರತದ ಬಗೆಗೆ ಮಾತನಾಡುವುದು ಸಂಕುಚಿತತೆ ಎನಿಸಿದೆ.ಏಕೆ?"
ಮತ್ತೆ ಕೇಳ್ವಿ೧೫ ಕ್ಕೆ ಹೀಗೆ ಉತ್ತರಿಸಿದ್ದಾರೆ:-
ಮೊದಲಿಗೆ ಈ ಕೇಳ್ವಿಯಲ್ಲೇ ಎಡವಟ್ಟಾಗಿದೆ. ಪ್ರಾದೇಶಿಕ ಬಾಶೆ ಎಂದರೇನು. ಬಾರತದ ಬಗೆಗೆ ಮಾತನಾಡುವುದು ಎಂದರೇನು. ಎರಡು ಬೇರೆ ಬೇರೆ ಹೇಗೆ? ನನಗೆ ಬಾರತ ಅಂದರೆ ಕರ್ನಾಟಕ; ನಾನು ಕನ್ನಡಿಗನಾಗಿರುವುದರಿಂದಲೇ ನಾನು ಬಾರತೀಯ. ಎರಡು ಬೇರೆ ಬೇರೆ ಅಲ್ಲ. ಕೇಳ್ವಿಯಲ್ಲಿ ಕನ್ನಡಿಗ ಮತ್ತು ಬಾರತೀಯ ಎಂಬುದನ್ನು ಬೇರೆ ಬೇರೆಯಾಗಿ ನೋಡುವ ಹುನ್ನಾರ ಅಡಗಿದೆ. ಅಲ್ಲದೆ ಈ ಕೇಳ್ವಿಯಲ್ಲಿ ’ಬಾರತೀಯತೆ ಮೇಲು ಕನ್ನಡತನ ಕೀಳು’ ಎನ್ನುವುದನ್ನು ಸೂಚ್ಯವಾಗಿ ಹೇಳುವಂತೆ ತೋರುತ್ತಿದೆ.
ಸರಿ ಈ ಕೇಳ್ವಿಗೆ ಬೈರಪ್ಪನವರು ಕೊಡುವ ಉತ್ತರದ ಬಗ್ಗೆ ನೋಡೋಣ. ಅವರು ಹೇಳುತ್ತಾರೆ:-
"ಈ ಬಾವನೆ ಪ್ರದಾನವಾಗಿ ಡಿಎಮ್ಕೆಯದು. ಅವರಿಂದ ಕರ್ನಾಟಕದ ಕೆಲವು ಅಕಾಡೆಮಿಕ್ ವಲಯಕ್ಕೆ ಹಬ್ಬಿದೆ. ಇದು ಮಹಾರಾಶ್ಟ್ರದಲ್ಲಿಲ್ಲ. ಗುಜರಾತಿನಲ್ಲಿಲ್ಲ. ಪಂಜಾಬಿನಲ್ಲಿಲ್ಲ. ನಾನು ತಿಳಿದಂತೆ ಆಂದ್ರದಲ್ಲಿಲ್ಲ. ಕರ್ನಾಟದಲ್ಲಿ ಯಾಕೆ ಬೆಳೆದಿದೆ. ಹಿಂದಿಯವರ ಪ್ರಾಬಲ್ಯ, ತಮಿಳು, ಮಲೆಯಾಳಗಳ ಒತ್ತುವರಿ ಕಾರಣವೆ."
ಇಲ್ಲಿ ಬೈರಪ್ಪನವರ ಅರಿಯಮಿಕೆ(ignorance) ಎದ್ದು ಕಾಣುತ್ತಿದೆ. ಪಂಜಾಬ್, ಆಂದ್ರದಲ್ಲಿ ಮೊದಲಿನಿಂದಲೂ ಆ ರಾಜ್ಯಗಳ ’ಪ್ರಾದೇಶಿಕ ಪಕ್ಶಗಳು’(ತೆಲುಗು ದೇಶಂ, ಅಕಾಲಿದಳ) ಹಿಂದಿನಿಂದಲೂ ಬಲವಾಗಿಯೇ ಇವೆ. ಅಲ್ಲದೇ ಪಂಜಾಬಿಗರು ’ಕಲಿಸ್ತಾನ” ಎಂಬ ಬೇರೆಯದೇ ಪಂಜಾಬಿ ದೇಶ ಮಾಡಲು ಹೊರಟಿದ್ದರು ಎಂಬುದನ್ನು ಬೈರಪ್ಪ ಮರೆತರೇಕೆ? ಇನ್ನು ಮಹಾರಾಶ್ಟ್ರದಲ್ಲಿ ’ಹೊರಬರ’ ವಿರುದ್ದ ಮರಾಟಿಗಳ ಕಾದಾಟ ಹೊತ್ತು ಹೊತ್ತಿಗೂ ಹೆಚ್ಚುತ್ತಿದೆ. ಅದಲ್ಲದೆ ’ಮಹಾರಾಶ್ಟ್ರ ನವನಿರ್ಮಾಣ ವೇದಿಕೆ’ ಮಹಾರಾಶ್ಟ್ರ ವಿದಾನಸಬೆಯಲ್ಲಿ ೧೩ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದಿದ್ದಾರೆ. ಅಲ್ಲದೆ ಬೈರಪ್ಪನವರು ಕವಿರಾಜಮಾರ್ಗ ಓದಿದ್ದರೆ(ಓದೂ ಜಾಣ ಮರೆವು ಇರಬಹುದು) ಹೀಗೆ ಹೇಳುತ್ತಿರಲಿಲ್ಲ. ಕನ್ನಡ ನಾಡು/ದೇಶ ಇರದಿದ್ದರೆ ೯ನೇ ನೂರೇಡಿನ ಕವಿರಾಜಮಾರ್ಗದಲ್ಲೇ ಕನ್ನಡ ನಾಡಿನ ಗಡಿಯನ್ನು ಯಾಕೆ ಗುರುತಿಸಬೇಕಿತ್ತು. ಇದು ತಿರುಳ್ಗನ್ನಡ ನಾಡಿನ ಗಡಿ ಅಂತ ಯಾಕೆ ಹೇಳಬೇಕಿತ್ತು. ೯ ನೇ ಶತಮಾನದಲ್ಲಿ ಯಾವ ಡಿಎಮ್ಕೆ ಇತ್ತು? ಇಲ್ದೇದ್ ಮೇಲೆ ಹೇಗೆ ತಮಿಳುನಾಡಿನಿಂದ ಹಬ್ಬಕ್ಕಾಗುತ್ತೆ?
ಮುಂದುವರೆದೂ ಬೈರಪ್ಪನವರು,
" ಭಾರತವನ್ನು ಒಡೆಯಲು ಬ್ರಿಟಿಶರು ಹುಟ್ಟುಹಾಕಿದ ಸಿದ್ದಾಂತಗಳ ಪರಿಣಾಮವೇ"ಬಾರತ ಅಂತ ಎಲ್ಲಿ ಇತ್ತು ಅದನ್ನ ಒಡೆಯಕ್ಕೆ? ಹಾಗೆ ನೋಡಿದರೆ ಬ್ರಿಟಿಶರೆ ಆಡಳಿತದ ಅನುಕೂಲಕ್ಕೆ ’ಇಂಡಿಯಾ’ ಅಂತ ಒಟ್ಟು ಮಾಡಿದ್ದು. ಅದಕ್ಕೂ ಮೊದಲು ಇದ್ದುದು ಕನ್ನಡ ನಾಡು, ತಮಿಳು ನಾಡು, ತೆಲುಗುನಾಡು ( Kannada Country, Tamil Country, Telugu Country...etc). ಆಯ ನಾಡುಗಳನ್ನು ಆಳಿದವರು ತಮ್ಮವೇ ಆದ ಪಡೆ/ಸೈನ್ಯವನ್ನು ಹೊಂದಿದ್ದರು. ಬ್ರಿಟಿಶರು ಬರುವ ಮುನ್ನ ’ಬಾರತ ಸೇನೆ’ ಅಂತ ಯಾವುದೂ ಇರಲಿಲ್ಲ.
ಇನ್ನು ಮುಂದೆ ಹೋಗಿ ,
" ನಾವು ಪ್ರಾದೇಶಿಕ ಬೇರನ್ನು ಅರಸಿ ಹೊರಟರೆ ಒಬ್ಬರ ಜೊತೆ ಬೆರೆಯದ ಜಾತಿ, ಉಪಜಾತಿಗಳಲ್ಲಿ ನಿಲ್ಲುತ್ತೇವೆ."
ಸರಿ, ಹಾಗಾದರೆ ’ಪ್ರಾದೇಶಿಕತೆ’ಯಿಂದ ಬಹುದೂರ ಸಾಗೋಣ. ಇಡೀ ಮಾನವರೆಲ್ಲ ಒಂದೇ. ಬಾರತ, ಪಾಕಿಸ್ತಾನ . ಯು ಎಸ್ ಎ ಅಂತ ಬೇರೆ ಬೇರೆ ದೇಶಗಳು ಯಾಕೆ ಬೇಕು ? ಎಲ್ಲರೂ ಒಂದೇ. ಎಲ್ಲವನ್ನು ಒಗ್ಗೂಡಿಸಲು ಆಗುತ್ತದೆಯೆ? ಅದಕ್ಕೆ ನಮ್ಮ ಹಿರಿಯರು ಬಾರತವನ್ನು ನುಡಿಯ ಮೇಲೆ ನಾಡುಗಳನ್ನಾಗಿ ವಿಂಗಡಣೆ ಮಾಡಿದ್ದಾರೆ . ಯಾಕಂದರೆ ನುಡಿಯ ಆದಾರದ ಮೇಲೆ ಪ್ರಪಂಚದಲ್ಲಿ ದೇಶಗಳಾಗಿವೆ. ಜಾತಿಯ ಆದಾರದ ಮೇಲೆ ದೇಶಗಳನ್ನು ಎಲ್ಲೂ ಮಾಡಿಲ್ಲ. ಆಯ ನುಡಿ ಆಯ ನುಡಿಜನಾಂಗದ ಜೀವನಾಡಿಯೇ ಆಗಿದೆ. ಇದರಿಂದಲೇ ಅವರ ಏಳಿಗೆ ಎಂಬುದನ್ನ ಹಲವು (ಯೂರೋಪಿನ)ನಾಡುಗಳನ್ನು ನೋಡಿ ಕಲಿತುಕೊಳ್ಳಬಹುದು.
ಕೊಸರು:-
ತಿಳಿದೊ ತಿಳಿಯದೆಯೋ ಬೈರಪ್ಪನವರು ಹಲವು ಪೊಳ್ಳು ವಾದಗಳನ್ನು ಮುಂದಿಟ್ಟಿದ್ದಾರೆ. ಇನ್ನಾದರೂ ಬೈರಪ್ಪನವರು ಅರಿತು ತಮ್ಮ ದೊಡ್ಡತನಕ್ಕೆ ತಕ್ಕಂತೆ ಮಾತನಾಡಲಿ ಎಂದು ಬಯಸುತ್ತೇನೆ. ಇಶ್ಟಾದರೂ ನಾನು ಅವರ ಕಾದಂಬರಿಯಾದ ’ನಾಯಿ-ನೆರಳು’ನ್ನು ಬಲು ಒಲವಿಂದ ಮೆಚ್ಚಿದ್ದೇನೆ ಯಾಕಂದರೆ ದಿಟವಾಗಲೂ ಬೈರಪ್ಪನವರಿಗೆ ನಮ್ಮ ನುಡಿಯ ಬಲ ಅರಿತುಕೊಂಡಿದ್ದಾರೆ ಅಂತ ಆಗ ನನಗನ್ನಿಸಿತ್ತು. ಆದರೆ ಈಗ ಅದು ಸುಳ್ಳು ಅಂತ ಬೈರಪ್ಪನವರೇ ತೋರಿಸಿಕೊಟ್ಟಿದ್ದಾರೆ. ಬೂಟಾಟಿಕೆಗೋಸ್ಕರ ಹಾಸನದ ಆಡುನುಡಿಯನ್ನು ತಮ್ಮ ಕಾದಂಬರಿಗಳಲ್ಲಿ ಬಳಸಿದ್ದಾರೇನೊ ಅಂತ ಈಗ ಅನ್ನಿಸತೊಡಿಗಿದೆ.
16 ಕಾಮೆಂಟ್‌ಗಳು:
Nimma ee barahadalli Mahapraana Akshararagalu sari bandilla.... I think its software error... Bharata, Bhaashe, Maharashtra---> dodda sha!!
ತುಂಬಾ ಒಳ್ಳೆಯ ಲೇಖನ.
ಭಾಷೆ ,ವಿಜ್ಞಾನ ,ವಿಷಯ , ಭಾರ ,ಪಾರಿಭಾಷಿಕ,ಸಾಧ್ಯವಾದಷ್ಟು,ಗ್ರಂಥ,ಸುಲಭ,ಕಠಿಣ,ಸಂಸ್ಕೃತ,ಎಷ್ಟು,ಭಾವನೆ,ಭಾರತೀಯತೆ ,ಮಹಾರಾಷ್ಟ್ರ,ಮರಾಠಿ ,ಇಷ್ಟಾದರೂ,
ನನಗೆ ತಿಳಿದ ಮಟ್ಟಿಗೆ ಮನುಷ್ಯ ದಿನನಿತ್ಯ ಮಾತನಾಡುವಾಗ ಮಹಾಪ್ರಾಣ ಅಕ್ಷರಗಳನ್ನು ಒತ್ತಿ(Stress)ಹೇಳುವುದಿಲ್ಲ. ಈ ಬರವಣಿಗೆ ನೈಜವಾಗಿ ಮತನಾಡುವ ಶೈಲಿಯಲ್ಲಿದೆ. ವೈಜ್ಞಾನಿಕವಾಗಿ ಈ ಲೇಖನ ಸರಿಯಾಗಿಯೇ ಇದೆ.
ಉತ್ತಮ ಲೇಕನ ಬರತ್
olle baraha....bhaaratanaadu bere-bere nade-nudi mattu gumpugala nela annodanna yaava balapantheeya prativaadigalu oppikkollodilla....
bhaaratadalli ellavu samskruta->samskruti endu heli namma nelada nudigalannu keelagi nodtaare...ee vishaya samskruta vishvavidyalaya tegeyuvagalu aagaga keli bandittu....ondu sanna udaharane kodtini.....
1) bhairappanavaru samskruta vv paravaagi vijayakarntakadalli ondu ankana barediddaru...kondi illide...
http://slbhyrappa.com/pages/articles.html
illi avaru keraligaru malayalam jothe samkruta kooda chennagi kalitiruttataare aaddarinda malayalam kannadakkinta hecchu baahulya saadhiside(newspaper,novels, etc...) endu heliddare...ondu reeti naavu avarinda kaliyabahudu anno 'hint' kottiddaare......aaythu sari
*
ide bhairappanavaru omme gohatye nisheda mandane paravagi patrikeyondaralli barediddaru(hasumaamsa arogyakke olledalla,aragisukolluvudakke kashta, etc...) !!
acchari enendare illi avaru malayaligala udaharane yaake togolilla ??
malayaligalalli hindugalu hasumaamsa tintaare, idu gottiro vishayane...avaru heLuva samskruta uddhaara maaduva ide malyaligalu hasumaamsa kooda tintaare, alva swami...
namma kannadiga yuvakarige idu gottagodilla...sumne hindutva,hindutva anta badkotirtaare....irli,sari idakke nanna 'objection' enu illa avaravara vyuktika vishaya anbodu...aadare dharmakke ondu alategolu(yardstick) bhaashegondu alategolu idre bootatike antha helbodalva...
(aangladalli bareyuttiruvudakke kshamisi)As usual seems to be this month's comedy article.
I could not see any sort of contradictions with 5th and 14th question. "Barata anta elli ittu adanna hoDeyakke" shows the author's ignorance on the subject.
Anyways i have to accept that i thoroughly enjoyed the comedy and creativity gone into this article :)
@Serendipity: Related to our comment on Sanskrit and cow slaughter of Kerala - Lets take only good from others. Learning few things from others need not mean to follow them in every aspect. Moreover saying all Hindus of Kerala eats cow-meat is nonsensical.
@Sunil,
ಹೇಳಕ್ಕೆ ಏನೂ ಗೊತ್ತಾಗಿಲ್ಲ ಅದಿಕ್ಕೆ, ಕಾಮೆಡಿ ಅಂತ ಬರ್ದಿದೀರಿ ಅಂತ ಕಾಣ್ಸುತ್ತೆ.
ಏನಾದರೂ ವಿಚಾರ ಇದ್ರೆ ಮಾತನಾಡಿ. ವಿಚಾರ ಇಲ್ಲದೇ ಸುಮ್ನೆ ಅದೇ 'ಕಾಮೆಡಿ' 'ಇಗ್ನೋರನ್ಸ್' ಅಂತ ಹೇಳುತ್ತಾ ನಿಮ್ಮ 'ಇಗ್ನೋರನ್ಸ್' ತೋರ್ಪಡಿಕೆ ಬೇಡ.
ಭೈರಪ್ಪನವರೇ, ಈ ಬರಹ ಓದಿದರೆ ಬಹುಶ ನಿಮ್ಮಂತಹ ಮಾತುಗಳು ಆಡಲ್ಲ. ಆಲೋಚನೆ ಮಾಡಿ, ತಮ್ಮ ನಿಲುವನ್ನ ಹೇಳ್ತಾರೆ.
Sunil, I laugh at your ignorance. Due to my father's bank job, I was in 2 cities of Kerala for close to 6 years and I was amazed at how huge chunk of Hindus eat Cow meat in that state. They don't need a certificate from Mr Bhairappa or others about their hindutva. For people like you, it's only your way of living that is hindutva. Other communities like madiga, holeya, vokkaliga, chammara, kumbara are all shudras or whatever crap. Thu.. :(
Sunil,
Who are you to decide what is good and what is bad? If hindus in Kerala eat cow meat, it is their food choice. Who are you to intervene in their food cycle and conclude it's right or wrong? Typical right wing rhetoric I must say.
All these years, people from the upper class had complete control in the society. The poor, downtrodden dalits and other castes which were deprived the opportunity to get educated. In order to keep them away from the mainstream educational system, over usage of Sanskrit was in effect. Also, to cut down the regionalism and to prove their right wing agenda that Nationality is the greatest and the only thing to attain salvation, the regional feeling has been shown the step motherly treatment by these folks.
Mr Bharath in this article has very nicely dissected the falsely preached theories of Nationalism and the way they try to show the regional feeling low.
@sunil
ಸ್ವಾಮಿ ನಾನು ಒಂದ್ ವರ್ಷ ಕೇರಳದ ತಿರುವನಂತಪುರಂನಲ್ಲಿ ಇದ್ದೆ . ಅಲ್ಲಿ ಎಲ್ಲ ಹಿಂದೂಗಳು ಹಸುಮಾಂಸ ತಿಂತಾರೆ. ಇಲ್ಲಿ ವಿಷಯ ಅದಲ್ಲ.ನಾನ್ ಹೇಳ್ತಿರೋದು ನಮ್ಮ 'ಬಲಪಂಥೀಯ' ಬುದ್ದಿಜೀವಿಗಳ ಬೂಟಾಟಿಕೆ(hypocrisy) ಬಗ್ಗೆ.
ಇವರು ನಮ್ಮ ಹರೆಯ ಕನ್ನಡಿಗರನ್ನು ತಪ್ಪು ದಾರಿಯಲ್ಲಿ ಕೊಂಡೊಯ್ಯುತ್ತಿದ್ದಾರೆ ಅನ್ನೋದು ನನ್ನ ಅಂಬೋಣ.ನಮ್ಮ ಯುವ ಕನ್ನಡಿಗರ misplaced priorities ಬಗ್ಗೆ ಕಳವಳವಾಗಿದೆ. ಸಂಸ್ಕೃತದ ಹೇರಿಕೆ ಹಿಂದಿ ಹೇರಿಕೆಗಿಂತ ತುಂಬಾ ಹಳೆಯದಾದದ್ದು ಮತ್ತು ಹಿಂದಿ ಹೇರಿಕೆಗಿಂತ ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ನಡೆಯುತ್ತಿದೆ. ಇವತ್ತು ನೀವು ಯಾವದೇ online forum ಗೆ ಹೋದರು ಹಿಂದುತ್ವದ ಬಗ್ಗೆ ಮಾತಾಡೋರು ನಾರ್ತಿಗಳು ಮತ್ತು ಕನ್ನಡದವರು. ಇದು ತಪ್ಪು ಅಂತ ಅಲ್ಲ ,ಆದರೆ ಅದೇ ಕಿಚ್ಚು ಕನ್ನಡದ ಬಗ್ಗೆ ಹೋರಾಡಬೇಕಾದರೆ ಇರೋದಿಲ್ಲ ! ಸುದ್ದಿಹಾಳೆಗಳಲ್ಲು ಕೂಡ ಕನ್ನಡ ನುಡಿ ಬಗ್ಗೆ ಬರೆಯೋರು ಬರಿ ವಯಸ್ಸಾದವರು ( ಚಿದಾನಂದ ಮೂರ್ತಿ,ಕಾಮತ,ಚಂಪಾ ,,,ಹೀಗೆ) ಆದರೆ ಹಿಂದುತ್ವದ ಬಗ್ಗೆ ಸಾಕಷ್ಟು ಯುವಕರು ಅಂಕಣಗಳನ್ನ ಬರೆಯುತ್ತಾರೆ. Sheldon Pollock ಅವರ ಈ ಬರಹ ಓದಿದರೆ ಗೊತ್ತಾಗುತ್ತೆ.
http://www.hindu.com/2008/11/27/stories/2008112753100900.html
ಅಲ್ಲಿ ಆರನೇ paragraph ನಲ್ಲಿ ಹೀಗಿದೆ ...During all my time in Karnataka I did not encounter a single young scholar who had command over the great texts of classical Kannada — Pampa, Ranna, Ponna — to say nothing of reading knowledgeably in the extraordinary inscriptional treasure house that is Karnataka.
ಇದಕ್ಕೆಏನು ಕಾರಣ ?
ಈ ಪರಿಯ ಬೂಟಾಟಿಕೆಗಳಿಗೆ ಇನ್ನು ಬೇಕಾದಷ್ಟು ಉದಾಹರಣೆಗಳಿವೆ....
-- ನಮ್ಮ ಬಲಪಂಥೀಯರಿಗೆ ನರೇಂದ್ರ ಮೋದಿ ಅಂದ್ರೆ ದೇವ್ರಿದ್ದಂಗೆ.ಕಾರಣ ಏನು ಅಂತ ಹೇಳಬೇಕಾಗಿಲ್ಲ ಅನ್ಕೊತಿನಿ. ಹೌದು ಅವರು ಒಳ್ಳೆಯ ಮುಖ್ಯಮಂತ್ರಿ. ಎರಡನೆ ಮಾತಿಲ್ಲ . ಗುಜರಾತ ಇವತ್ತು ದೇಶದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಅವರ ಕೊಡುಗೆ ತುಂಬಾ ಇದೇ.ಆದ್ದರಿಂದ ಅವರಿಗೆ ಬೆಂಬಲಿಗರು ಕೂಡ ಹೆಚ್ಚೇ.ಆದರೆ ಇದೇ ಬೆಂಬಲಿಗರು ರಾಜ್ ತಾಕ್ರೆ ಮತ್ತು ನಮ್ಮ ಕರವೆ ಬಗ್ಗೆ ಕೆಟ್ಟದಾಗಿ ಮಾತಾಡ್ತಾರೆ !!ಅವರು ದೇಶವನ್ನು ಓಡಿತ ಇದಾರೆ ಅಂತ ಹೇಳ್ತಾರೆ . ಇದನ್ನೇ ಎರಡು ಬಗೆಯೋದು ಅನ್ನೋದು. ಮೊದಿಗು ತಾಕ್ರೆಗೂ fundamentally ಏನು ವ್ಯತ್ಯಾಸ ಇಲ್ಲ ಅಲ್ವ. ಧರ್ಮದಲ್ಲಿ pluralism ಬೇಡ ಅಂದ್ರೆ ಭಾಷೆನಲ್ಲು ಅದನ್ನ ಒಪ್ಪಬಾರದು ತಾನೇ ?
ಧರ್ಮಕ್ಕೆ ಒಂದು ನೀತಿ ಭಾಷೆಗೆ ಒಂದು ನೀತಿ ಆದ್ರೆ ಹೇಗೆ ??
ನಿಮ್ಮೆಲ್ಲರ ಜವಾಬು ಹೀಗೆ ಇರತ್ತೆಂದು ಅಂದುಕೊಂಡಿದ್ದೆ. ಹಾಗಾಗಿ ಬೇಜಾರೇನಿಲ್ಲ ಬಿಡಿ. ನನ್ನ ಉದ್ದೇಶ ಈ ಅಂಕಣಕ್ಕೆ "-೧" ಕೊಡಬೇಕು ಅನ್ನುವುದಷ್ಟೆ. ಯಾರೊ ಮಹಾನುಭಾವರು 'ವಿಚಾರ' ಮಾತಾಡಿ ಎಂದಿದ್ದಾರೆ. ನಿಮ್ಮ ಈ ಗುಂಪು ಹೇಗೆ 'ವಿಚಾರ' ಮಾಡ್ತೀರ ಎಂದು ಗೊತ್ತು. ಇಗಾಗಲೆ Google Buzzನಲ್ಲಿ ನಿಮ್ಮ ಸಾಕಷ್ಟು 'ಪಲಾಯನ'ವಾದಗಳನ್ನು ನೋಡಿದ್ದೇನೆ. ಹಾಗಾಗಿ ಇಲ್ಲಿ ಪ್ರತಿವಿಚಾರ ಮಾಡಿ ಸಮಯ ಹಾಳು ಮಾಡಿಕೊಳ್ಳುವ ಸಾಹಸಕ್ಕೆ ಹೋಗುವುದಿಲ್ಲ. ಆಗಲೆ ಹೇಳಿದಂತೆ, ನಿಮ್ಮ ವಿಚಾರಕ್ಕೆ ನನ್ನ ಸಹಮತಿಯಿಲ್ಲವೆಂದು ತಿಳಿಸುವುದಕ್ಕೆ ಮಾತ್ರ 'ಟೀಕೆ'ಯನ್ನು ಹಾಕಿದ್ದೇನೆ.
ಕೆಲವು ಪುಸ್ತಕಗಳು ನಿಮ್ಮ ಮಾಹಿತಿಗಾಗಿ:
(ಇಲ್ಲಿ ಇರೊ ಕೆಲ 'ಕನ್ನಡೋದ್ದಾರಕ'ರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ಇವುಗಳಲ್ಲಿದೆ. ಯಾರದು 'ಪೊಳ್ಳು', 'ಬೂಟಾಟಿಕೆ'ಯೆಂದು ತಿಳಿಯುತ್ತದೆ.)
1) "Beautiful Tree" - Dharampal.
2) Michel Danino's books.
3) "ಹಾಸು ಬೀಸು" - ಶತಾವಧಾನಿ ಡಾ. ರ. ಗಣೇಶ್. ('ಕನ್ನಡಕ್ಕೆ ಇದು ಬೇಕಾ' ಅಂಕಣ)
4) Lectures given by ಶತಾವಧಾನಿ ಡಾ. ರ. ಗಣೇಶ್ (Few are available online and few are available at Gokhale Institute).
ಸುನಿಲ್,
ವಿಚಾರ ಇಷ್ಟ ಆಗಲಿಲ್ಲ ಅಂದ ತಕ್ಷಣ, ಇದರಲ್ಲಿ ತಿರುಳೇ ಇಲ್ಲ ಎನ್ನಲಾಗದು.
ನೀವು ಹೆಸರಿಸಿದ ಹೊತ್ತಗೆಗಳನ್ನೆಲ್ಲಾ ನಾನು ಓದಿದ್ದೇನೆ.
ಆದರೆ, "ದ್ಯುತಿ ಸಂಶ್ಲೇಷಣ ಕ್ರಿಯೆ", "ಮತ್ತೇಭವಿಕ್ರೀಡನ", "ಅಪವರ್ತನ/ಅಪವರ್ತ್ಯ" ಇಂತಹ ಪದಗಳಿಂದ ಕಲಿಕೆಯು ಕಬ್ಬಿಣದ ಕಡಲೆಯೇ ಆಗುತ್ತದೆ.
ಇವುಗಳನ್ನು ಕೈ ಬಿಟ್ಟು, ಆಡುಗನ್ನಡದಲ್ಲೇ ಇರುವ ಪದಗಳನ್ನು ಬಳಸೋಣ, ಅತವಾ ಆಡುಗನ್ನಡದಲ್ಲೇ ಇರುವ ಪದಗಳನ್ನು ಸೇರಿಸಿ ಕಟ್ಟೋಣ ಎಂದಾಕ್ಷಣ ನಿಮಗೆ ಮೈ ಉರಿ ಏಕೆ?
ಯಾರಿಗೆ ಎಷ್ಟೇ ಕಷ್ಟವಾದರೂ, ಸಂಸ್ಕೃತ ಬೇರಿನ ಪದಗಳನ್ನೇ ಬಳಸೋಣ ಅನ್ನುವ ಹಠ ನಿಮ್ಮಲ್ಲಿ ಇದೆಯಾ?
ಅರ್ಥವಾಗುವ ಸಂಸ್ಕೃತ ಬೇರಿನ ಪದಗಳನ್ನು ಬಳಸಬೇಡಿ ಅಂತ ಯಾರೂ ಹೇಳಿಲ್ಲವಲ್ಲ !
Mr Sunil should read this:
How beautiful the tree anyways?
http://karnatique.blogspot.com/2009/11/how-beautiful-was-tree-anyway.html
Sunil should also read:
Campbell's letter to Munro dated 17th August 1823
http://karnatique.blogspot.com/2009/11/campbells-letter-to-munro-dated-17th.html
"ಬಾರತ ಅಂತ ಎಲ್ಲಿ ಇತ್ತು ಅದನ್ನ ಒಡೆಯಕ್ಕೆ? ಹಾಗೆ ನೋಡಿದರೆ ಬ್ರಿಟಿಶರೆ ಆಡಳಿತದ ಅನುಕೂಲಕ್ಕೆ ’ಇಂಡಿಯಾ’ ಅಂತ ಒಟ್ಟು ಮಾಡಿದ್ದು. ಅದಕ್ಕೂ ಮೊದಲು ಇದ್ದುದು ಕನ್ನಡ ನಾಡು, ತಮಿಳು ನಾಡು, ತೆಲುಗುನಾಡು ( Kannada Country, Tamil Country, Telugu Country...etc). ಆಯ ನಾಡುಗಳನ್ನು ಆಳಿದವರು ತಮ್ಮವೇ ಆದ ಪಡೆ/ಸೈನ್ಯವನ್ನು ಹೊಂದಿದ್ದರು. ಬ್ರಿಟಿಶರು ಬರುವ ಮುನ್ನ ’ಬಾರತ ಸೇನೆ’ ಅಂತ ಯಾವುದೂ ಇರಲಿಲ್ಲ."
ಉತ್ತರ:
ಭಾರತವೆಂಬ ಸಾಂಸ್ಕೃತಿಕ ರಾಷ್ಟ್ರದ ಚರಿತ್ರೆಯ ಕಲ್ಪನೆ ಎಷ್ಟು ಅಮೂರ್ತವೋ ಕನ್ನಡವೆಂಬ ಒಂದು ಅಖಂಡ ರಾಷ್ಟ್ರದ ಕುರಿತಾದುದೂ ಹಾಗೆಯೇ. "ಕನ್ನಡ ದೇಶ" ಎಂಬ ದೇಶ ಅಸ್ತಿತ್ವದಲ್ಲಿ ಇತ್ತೆನ್ನಲು ಸಾಧ್ಯವಿಲ್ಲ. ಕವಿರಾಜಮಾರ್ಗದಲ್ಲಿ ಹೇಳಿರುವುದು ಸಾಂಸ್ಕೃತಿಕ ಸರಹದ್ದು, ಅದು ರಾಜನೈತಿಕ ಸರಹದ್ದಿನ ಕುರಿತಾಗಿ ಹೇಳುವಂಥ ಮಾತಲ್ಲ.
ಕಾಮೆಂಟ್ ಪೋಸ್ಟ್ ಮಾಡಿ