ಊಟ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಊಟ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಜೂನ್ 28, 2011

ಊಟದ ಹಾಡು

ಮಕ್ಕಳಿಗೆ ಊಟದ ಹಾಡು...ಚೆನ್ನಾಗಿರುತ್ತೆ. ನಾನು ಚಿಕ್ಕವನಾಗಿದ್ದಾಗ ಕೇಳಿದ್ದು/ಓದಿದ್ದು.

ಒಂದು ಎರಡು
ಬಾಳೆಲೆ ಹರಡು
ಮೂರು ನಾಕು
ಅನ್ನ ಹಾಕು
ಅಯ್ದು ಆರು
ಬೇಳೆ ಸಾರು
ಏಳು ಎಂಟು
ಪಲ್ಯಕೆ ದಂಟು
ಒಂಬತ್ತು ಹತ್ತು
ಉಂಡೆಲೆ ಎತ್ತು -> ಎಲೆ ಮುದಿರೆತ್ತು (ಈ ಸಾಲು ಸರಿಯಾಗಿದಿಯೋ ಇಲ್ವೊ ಗೊತ್ತಿಲ್ಲ)
ಒಂದರಿಂದ ಹತ್ತು (ಹೀಗಿತ್ತು)
ಊಟದ ಆಟವು ಮುಗಿದಿತ್ತು

ಅಂಕಿಗಳ ಜೊತೆಜೊತೆಗೆ ಒಳ್ಳೆಯ ಊಟದ ಪರಿಚಯವೂ ಮಕ್ಕಳಿಗೆ ಇದರ ಮೂಲಕ ಆಗುತೆ