ಗುರುವಾರ, ಡಿಸೆಂಬರ್ 25, 2008

ಶಂಕರಬಟ್ಟರ ಹೊತ್ತಿಗೆಗಳು ಮತ್ತು ಕನ್ನಡ ಸೊಲ್ಲರಿಮೆ

ಇತ್ತೀಚೆಗೆ ಬೆಳಕಿಗೆ ಬಂದಿರುವ ಶಂಕರಬಟ್ಟರ ಹೊತ್ತಿಗೆಗಳು ಕನ್ನಡ ನುಡಿಹುರುಪಿಗರಲ್ಲಿ ಹೊಸ ಉಂಕುಗಳ ಅಲೆ ಎಬ್ಬಿಸಿದೆ ಎಂದು ಹೇಳಬಹುದು. ಇದುವರೆಗೆ ಕನ್ನಡದಲ್ಲಿ ಬಂದ ನುಡಿಯರಿಗರ ಸೊಲ್ಲರಿಮೆ(ವ್ಯಾಕರಣ,grammar)ಯಲ್ಲಿರುವ ಕೊರತೆಗಳು ಮತ್ತು ಗೊಂದಲಗಳನ್ನು ಎತ್ತಿಹಿಡಿಯುವಲ್ಲಿ ಡಾಡಿ.ಎನ್.ಶಂಕರಬಟ್ಟರು ಬಹಳ ಮಟ್ಟಿಗೆ ಗೆದ್ದಿದ್ದಾರೆ. ನಮ್ಮ ನುಡಿಯಲ್ಲಿರುವ ಹಲವು ತಲೆಮೆಯ ವಿಶಯಗಳು ಹಿಂದಿನ ನುಡಿಯರಿಗರಿಗೆ ತಿಳಿಯದೇ ಇರುವುದು ಅಚ್ಚರಿ ಮತ್ತು ಅವರ ಸಕ್ಕದದ(ಸಂಸ್ಕ್ರುತ) ಸೊಲ್ಲರಿಮೆಯ ಕುರುಡು-ಕುರುಡಾಗಿ ಹಿಂಬಾಲಿಸಿರುವುದು ನಾಚಿಕೆಗೇಡು. ಕನ್ನಡಿಗರ ಬಾಯಲ್ಲಿ ಪದಗಳ,ಸೊಲ್ಲುಗಳ ಒಳಯೇರ್ಪಾಡು ಆಳವಾಗಿ ತಿಳಿಯಲು ಶಂಕರಬಟ್ಟರ ಹೊತ್ತಿಗೆಗಳನ್ನು ಓದಬೇಕು. ಒಂದು ತಲೆಮೆಯ ವಿಶಯ ಗೊತ್ತಾಗುವುದು ಕನ್ನಡದಂತ ನುಡಿಯಲ್ಲಿ ಅದರ ಆಡುಗರ ಬಾಯಲ್ಲಿ ಅದು ಹೇಗೆ ನಲಿಯುತ್ತದೆ ಎಂಬುದರ ಮೇಲೆ ಅದರ ಸೊಲ್ಲರಿಮೆ ಉಂಟಾಗುತ್ತದೆಯೆ ಹೊರತು ಬೇರೆ ಯಾವುದೋ ನಂಟಿಲ್ಲದ ನುಡಿ(ಸಕ್ಕದ)ಯಿಂದಲ್ಲ. ಕನ್ನಡದಂತ ನುಡಿ ಎಲ್ಲ ವರ್ಗದವರ ಮಾತಿನಲ್ಲಿ ಹೆಚ್ಚು ಪಳಗಿದ ನುಡಿ ಆದರೆ ಸಕ್ಕದ ಹಾಗಲ್ಲ ಅದು ಹೆಚ್ಚು ಮೇಲ್ವರ್ಗದವರ ಬರಹದಲ್ಲಿ( ಮಾತಿನಲ್ಲಿ ಕಡಿಮೆ)ದ್ದ ನುಡಿ. ಮತ್ತು ಅದರ ಸೊಲ್ಲರಿಮೆ ಪಾಣಿನಿ ಎಂಬ ನುಡಿಯರಿಗನ ಕಟ್ಟಳೆಯ ಮೇಲೆ. ಕನ್ನಡ ಜನರಿಂದ ಜನಪರವಾದ ನುಡಿ ಆದರೆ ಸಕ್ಕದ ಒಬ್ಬ ಸೊಲ್ಲರಿಗನ ಕಟ್ಟಳೆಯ ಮೇಲೆ ನಿಂತ ನುಡಿ. ಇದರಲ್ಲಿ ಯಾವುದು ಹೆಚ್ಚು-ಕಡಿಮೆಯಿಲ್ಲ ಆದರೆ ಹಲವರು ಕನ್ನಡದ ಮೇಲೆ ಸಕ್ಕದದ ಸೊಲ್ಲರಿಮೆಯೆಂಬ 'ಗದಾ ಪ್ರಹಾರ' ಮಾಡುತ್ತಿದ್ದಾರೆ. ಮತ್ತು ಸಕ್ಕದದ ಪದಗಳು ಮತ್ತು ಸೊಲ್ಲರಿಮೆ ಮಾತಿನಲ್ಲಿ ಬಳಸದ ಕನ್ನಡವನ್ನು ಕೀಳು ಎಂಬ ತಪ್ಪು ಅರಿವನ್ನು ಹೊಂದಿದ್ದಾರೆ.

ಕನ್ನಡಿಗರ ಏಳಿಗೆ ದಿಟವಾದ ಕನ್ನಡದ ಏಳಿಗೆಯಿಂದ ಹೊರತು ಸಕ್ಕದದ ಏಳಿಗೆಯಿಂದಲ್ಲ. ಇದನ್ನು ನಾವು ಅರಿಯಬೇಕಿದೆ.

ಕಾಮೆಂಟ್‌ಗಳಿಲ್ಲ: