ಹೊಳೆಯುತ್ತಿರು ಹೊಳೆಯುತ್ತಿರು
ಹೊಣೆಯ ಹೊತ್ತು ನೀನು
ಹಾಳೆಯ ಸಾಲು ಹೊಸದಾಗುವ ವರೆಗೆ
ಹೊಳೆಯ ಹೂಳು ಎತ್ತುವ ವರೆಗೆ
ಹೊಳೆಯುತ್ತಿರು ಹೊಳೆಯುತ್ತಿರು
ಹೊಣೆಯ ಹೊತ್ತು ನೀನು
ಹಾದಿಯೆಲ್ಲ ಬರಿದಾಗುವ ವರೆಗೆ
ಹೂವೆಲ್ಲ ಬಾಡುವ ವರೆಗೆ
ಹೊಳೆಯುತ್ತಿರು ಹೊಳೆಯುತ್ತಿರು
ಹೊಣೆಯ ಹೊತ್ತು ನೀನು
ಹಸಿದ ಹೊಟ್ಟೆ ಹೊರೆಯುವ ವರೆಗೆ
ಬಸಿದ ಬೆವರು ಆರುವ ವರೆಗೆ
ಹೊಳೆಯುತ್ತಿರು ಹೊಳೆಯುತ್ತಿರು
ಹೊಣೆಯ ಹೊತ್ತು ನೀನು
ಹೊಂಗದಿರಿಂದ ಹೊಳೆವೆ ನೀನು
ಇಳೆಯ ಇರುಳ ನುಂಗುವೆ ನೀನು
ಹೊಳೆಯುತ್ತಿರು ಹೊಳೆಯುತ್ತಿರು
ಹೊಣೆಯ ಹೊತ್ತು ನೀನು
ಹೇಗಾದರೇನು?! ಯಾರು ಏನಾದರೇನು!
ಹೂ! ಅದರಿಂದ ನಿನಗೇನು
ಓ ಹೊತ್ತೇ! ಈ ಹೂಟದ ಗುಟ್ಟೇನು?
ಹೊಣೆಯ ಹೊತ್ತು ನೀನು
ಹಾಳೆಯ ಸಾಲು ಹೊಸದಾಗುವ ವರೆಗೆ
ಹೊಳೆಯ ಹೂಳು ಎತ್ತುವ ವರೆಗೆ
ಹೊಳೆಯುತ್ತಿರು ಹೊಳೆಯುತ್ತಿರು
ಹೊಣೆಯ ಹೊತ್ತು ನೀನು
ಹಾದಿಯೆಲ್ಲ ಬರಿದಾಗುವ ವರೆಗೆ
ಹೂವೆಲ್ಲ ಬಾಡುವ ವರೆಗೆ
ಹೊಳೆಯುತ್ತಿರು ಹೊಳೆಯುತ್ತಿರು
ಹೊಣೆಯ ಹೊತ್ತು ನೀನು
ಹಸಿದ ಹೊಟ್ಟೆ ಹೊರೆಯುವ ವರೆಗೆ
ಬಸಿದ ಬೆವರು ಆರುವ ವರೆಗೆ
ಹೊಳೆಯುತ್ತಿರು ಹೊಳೆಯುತ್ತಿರು
ಹೊಣೆಯ ಹೊತ್ತು ನೀನು
ಹೊಂಗದಿರಿಂದ ಹೊಳೆವೆ ನೀನು
ಇಳೆಯ ಇರುಳ ನುಂಗುವೆ ನೀನು
ಹೊಳೆಯುತ್ತಿರು ಹೊಳೆಯುತ್ತಿರು
ಹೊಣೆಯ ಹೊತ್ತು ನೀನು
ಹೇಗಾದರೇನು?! ಯಾರು ಏನಾದರೇನು!
ಹೂ! ಅದರಿಂದ ನಿನಗೇನು
ಓ ಹೊತ್ತೇ! ಈ ಹೂಟದ ಗುಟ್ಟೇನು?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ