ಭಾನುವಾರ, ಜೂನ್ 20, 2010
ಕನ್ನಡದ ಓದು ಮತ್ತು ತಿಂಡಿ
ನೆನ್ನೆಯ ದಿನ ತುಂಬ ನಲಿವಿನಿಂದ ಕಳೆದೆ, ಯಾಕಂದ್ರೆ ಬಹಳ ದಿನಗಳಿಂದ ತಕಬೇಕು ಅಂದ್ಕೊಂಡಿದ್ದ ಹೊತ್ತಿಗೆಯನ್ನು ತಕೊಂಡಿದ್ದಾಯಿತು, ಸಪ್ನ ಹೊತ್ತಿಗೆಮನೆಗೆ ಹೋಗಿ ’ಕನ್ನಡ ವ್ಯಾಕರಣ ಯಾಕೆ ಬೇಕು?" ಎಂಬ ಹೊತ್ತಿಗೆ ತಗೆದುಕೊಂಡು ಓದಕ್ಕೆ ಸುರು ಮಾಡಿದ್ದಾಯಿತು. ಈ ಹೊತ್ತಿಗೆ, ದೊಡ್ಡವರು ಚಿಕ್ಕವರು ಕನ್ನಡ ವ್ಯಾಕರಣ ತಿಳಿಯುವುದರಿಂದ ಆಗುವ ಬಳಕೆಗಳೇನು ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತದೆ. ಅಲ್ಲದೆ ಯಾವ ತರ ಮಕ್ಕಳಿಗೆ ವ್ಯಾಕರಣ ಕಲಿಸಿದರೆ ಹೆಚ್ಚು ಅನುಕೂಲ ಇವೆಲ್ಲದರ ಬಗ್ಗೆ ಹೊತ್ತಿಗೆಯಲ್ಲಿ ಹೇಳಲ್ಲಾಗಿದೆ. ಕನ್ನಡದ ಮಟ್ಟಿಗೆ ಈ ಹೊತ್ತಿಗೆ ಹೊಸ ತರನಾದದ್ದು ಅನ್ನಬಹುದು.
ಹಾಗೆ ಬರುತ್ತಿರುವಾಗ ನ.ರಾ.ಕಾಲೋನಿಯ ನೆಟ್ಟಕಲ್ಲಪ್ಪ ಸರ್ಕಲ್ ಹತ್ತಿರವೆ ಇರುವ ಶ್ರೀ ಗುರು ಕೊಟ್ಟೊರೇಶ್ವರ ದಾವಣಗೆರೆ ಬೆಣ್ಣೆ ದೋಸೆ ತಿನ್-ಮನೆಗೆ ಹೋಗಿ ಪಡ್ಡು, ಗಿರ್ಮಿಟ್ ಇವುಗಳಿಂದ ನಾಲಿಗೆಯನ್ನು ತಣಿಸಿಕೊಂಡಿದ್ದು ಆಯಿತು. ಇದಲ್ಲದೆ ಅಲ್ಲಿ ಬೆಣ್ಣೆ ದೋಸೆ, ನರ್ಗೀಸ್, ಮಸಾಲೆ ಚಹ, ಮೆಣ್ಸಿನ್ ಕಾಯ್ ಬಜ್ಜಿ ಹಾಗು ಇತರೆ ಬಡಗು ಕರ್ನಾಟಕದ ತಿನಿಸುಗಳು ಸಿಗುತ್ತವೆ.
ಅಲ್ಲಿಂದ ನ.ರಾ.ಕಾಲೋನಿ ಹತ್ತಿರದಲ್ಲೆ ಇರುವ ರಾಮ ಮಂದಿರದ ಹತ್ತಿರವಿರುವ ’ಶ್ರೀನಿವಾಸ ಕಾಪಿ ಸಪ್ಲಯ್ಸ್’ನಲ್ಲಿ ಹಸನಾದ ’ರಾಗಿ ಹುರಿ ಹಿಟ್ಟು’ ತೆಗೆದುಕೊಂಡು ಬಂದು ಬೆಲ್ಲ, ಏಲಕ್ಕಿ ಮತ್ತು ಹಾಲಿನ ಜೊತೆ ಕಲಸಿ.. ಉಂಡೆ ಮಾಡಿ ತಿಂದಾಗ ಹೆನ್ನಲಿವೇ ನಲಿವು.
ಒಟ್ಟಿನಲ್ಲಿ ಕನ್ನಡದ ಓದು, ತಿನಿಸುಗಳು ನನ್ನ ನೆನ್ನೆಯನ್ನು ಸಿರಿವಂತಗೊಳಿಸಿದವು.
ಹೆಸರು ಗೊತ್ತಿಲ್ಲದ ಹೂವು
ಶನಿವಾರ, ಜೂನ್ 12, 2010
ಮೆಂತ್ಯದ ಪಯಿರು
ಕಣಗಿಲೆ ಹೂವು
ಇದು ಕನ್ನಡ ನಾಡಿನಲ್ಲಿ ತುಂಬ ಹೆಚ್ಚು ಕಂಡು ಬರುತ್ತದೆ ಅನ್ಸುತ್ತೆ. ಅದಕ್ಕೆ ಇರಬೇಕು ಇದಕ್ಕೆ ಕನ್ನಡದಲ್ಲಿ ಹಲವು ಹೆಸರುಗಳಿವೆ :-
ಬರೊ,ಎಮನೊ ನುಡಿಗಂಟಿನಿಂದ
http://dsal1.uchicago.edu/cgi-bin/philologic/getobject.pl?c.0:1:1169.burrow
Ka. kaṇagil, kaṇagila, kaṇagala, kaṇagile, kaṇalige, kaṇigal, kaṇiginu, kaṇigil, kaṇigila, kaṇigili, kaṇigile, kaṇegile, gaṇigalu, gaṇigilu, gannēṟale
ನಂದಿಬಟ್ಟಲು ಹೂವು
ಈ ಹೂವಿನಿಂದ ’ಕಾಡಿಗೆ’(ಕಣ್ಕಪ್ಪು)ಮಾಡುತ್ತಾರೆ.
ಈ ಹೂವಿನ ಎಸಳುಗಳನ್ನು ಬಿಡಿಸಿಕೊಂಡು ಚೆನ್ನಾಗಿ ಒಣಗಿಸಿ ಹತ್ತಿಯೊಂದಿಗೆ ಒಸೆದು ಬತ್ತಿಯಾ ಹಾಗೆ ಮಾಡಿಕೊಂಡು ಅದನ್ನು ಸೊಡರಿಗೆ/ದೀಪಕ್ಕೆ ಹೊಂದಿಸಿ ಹರಳೆಣ್ಣೆ ಹಾಕಿ ಬತ್ತಿಯನ್ನು ಹೊತ್ತಿಸಿಬೇಕು. ದೀಪದ ಮೇಲೆ ಕೆಲವು ಇಂಚುಗಳ ಅಂತರದಲ್ಲಿ ಒಂದು ಕಂಚಿನ ತಟ್ಟೆಯನ್ನು ಇಟ್ಟು ದೀಪದ ಉರಿಯಿಂದ ಬರುವ ಮಸಿಯನ್ನು ಕಲೆಹಾಕಿ. ಆಮೇಲೆ ಆ ಮಸಿಯನ್ನು ಒಂದು ಸಣ್ಣ ಬಟ್ಟಲಿಗೆ ಹಾಕಿ ಒಸಿ ಬೆಣ್ಣೆಯೊಂದಿಗೆ ಕಲಸಿದರೆ ಕಣ್ಣಿನ ಕಾಡಿಗೆ ಅಣಿ.
ಇದು ಕಣ್ಣಿಗೆ ತಂಪಲ್ಲದೆ ಎಳೆ ಮಕ್ಕಳಿಗೆ ಹಾಕಿದರೆ ಬಟ್ಟಲ ಹಾಗೆ ಕಣ್ಣು ಅಗಲವಾಗಿ ಚೆನ್ನಾಗಿ ಮೂಡುತ್ತದೆ.
ನಮ್ಮ ಕಡೆ ಒಂದು ಗಾದೆ ಇದೆ - ಬೆಟ್ ಆಡಿದ್ ಕಣ್ ಬಟ್ಲಂಗೆ
Labels:
ನಂದಿಬಟ್ಟಲು,
ಬಿಳಿ,
ಹೂವು,
crape jasmine,
Flower,
White
ಶುಕ್ರವಾರ, ಜೂನ್ 11, 2010
ಟಹೊ ಕೆರೆಯ ಹತ್ತಿರ ಕೋನಿಪರಸ್ ಮರ
Labels:
ಕೋನಿಪರಸ್,
ಮರ,
California,
Coniferous,
Lake,
Lake Tahoe,
Tree
ಬುಧವಾರ, ಜೂನ್ 09, 2010
ಭಾನುವಾರ, ಜೂನ್ 06, 2010
ಸಿಕ್ಕಾಪಟ್ಟೆ ಸೀತಾಪಲ
ಗೆಳೆಯ ಅರವಿಂದ ಕಾರಂತನ ಮನೆಯಲ್ಲಿ ನೋಡಿದ್ದು.
For more info see this
http://en.wikipedia.org/wiki/Annona_squamosa
ನವಿರು ನವಿರಾದ ನಸುಗೆಂಪು ಗುಲಾಬಿ
ನಸುಗೆಂಪು ಗುಲಾಬಿಯ ಮೇಲಿನ ನೀರಿನ ಹನಿಮುತ್ತುಗಳು ಎಳೆನೇಸರನ ಬೆಳಕಿನೊಂದಿಗೆ ಸೇರಿ ಒಂದು ಹೊಸ ಹುರುಪನ್ನು ನೀಡುತ್ತಿರುವುದಂತು ದಿಟ.
ಚೆಂದ,ಚೆನ್ನ,ನಲಿವು ಅಂದರೆ ಇದೇ ಇರಬೇಕು.
ಶನಿವಾರ, ಜೂನ್ 05, 2010
ಕೆಸವಿನ ಎಲೆ
ಇದನ್ನ ಬಳಸಿ ಪತ್ರೊಡೆ ಮಾಡುತ್ತಾರೆ.
http://dsal1.uchicago.edu/cgi-bin/philologic/getobject.pl?c.0:1:2012.burrow
Ka. kēsave, kē̆su, kesa, kesavu taro, Colocasia antiquorum
Skt. kemuka-, kecuka-, kevūka, kacu-, kacvī-
ದೇವಗಣಗಿಲೆ ಮೇಣ್ ದೇವ ಕಣಗಿಲೆ ಹೂವು ಮತ್ತು ಎಲೆ
ದೇವ ಗಣಗಿಲೆ ಕಣಗಿಲೆ ಜಾತಿಯಲ್ಲೇ ಮೇಲ್ಮಟ್ಟದ್ದು ಅನ್ಸುತ್ತೆ. ಈ ಹೂವು ಪಿಂಕು,ಬಿಳಿ ಮತ್ತು ಹಳದಿ ಬಣ್ಣಗಳಿಂದ ಕೂಡಿದೆಯಲ್ಲದೆ ಒಳ್ಳೆ ಸುವಾಸನೆ ಕೂಡ ಇದೆ.
ಸಂಸ್ಕ್ರುತದಲ್ಲಿ ಕರ್ಣಿಕಾರ, ಕರವೀರ,
Fragrant Oleander in English
Nerium odorum is the Botanical Name
ಇದು ಕನ್ನಡ ನಾಡಿನಲ್ಲಿ ತುಂಬ ಹೆಚ್ಚು ಕಂಡು ಬರುತ್ತದೆ ಅನ್ಸುತ್ತೆ. ಅದಕ್ಕೆ ಇರಬೇಕು ಇದಕ್ಕೆ ಕನ್ನಡದಲ್ಲಿ ಹಲವು ಹೆಸರುಗಳಿವೆ :-
ಬರೊ,ಎಮನೊ ನುಡಿಗಂಟಿನಿಂದ
http://dsal1.uchicago.edu/cgi-bin/philologic/getobject.pl?c.0:1:1169.burrow
Ka. kaṇagil, kaṇagila, kaṇagala, kaṇagile, kaṇalige, kaṇigal, kaṇiginu, kaṇigil, kaṇigila, kaṇigili, kaṇigile, kaṇegile, gaṇigalu, gaṇigilu, gannēṟale
ಶುಕ್ರವಾರ, ಜೂನ್ 04, 2010
ಬುಧವಾರ, ಜೂನ್ 02, 2010
ಸಂತ ಕ್ಲಾರದ ಹಕ್ಕಿ
ಚಿತ್ರದುರ್ಗದ ಕೋಟೆಯ ಒಂದು ಗೋಡೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)