ಶನಿವಾರ, ಜೂನ್ 12, 2010
ನಂದಿಬಟ್ಟಲು ಹೂವು
ಈ ಹೂವಿನಿಂದ ’ಕಾಡಿಗೆ’(ಕಣ್ಕಪ್ಪು)ಮಾಡುತ್ತಾರೆ.
ಈ ಹೂವಿನ ಎಸಳುಗಳನ್ನು ಬಿಡಿಸಿಕೊಂಡು ಚೆನ್ನಾಗಿ ಒಣಗಿಸಿ ಹತ್ತಿಯೊಂದಿಗೆ ಒಸೆದು ಬತ್ತಿಯಾ ಹಾಗೆ ಮಾಡಿಕೊಂಡು ಅದನ್ನು ಸೊಡರಿಗೆ/ದೀಪಕ್ಕೆ ಹೊಂದಿಸಿ ಹರಳೆಣ್ಣೆ ಹಾಕಿ ಬತ್ತಿಯನ್ನು ಹೊತ್ತಿಸಿಬೇಕು. ದೀಪದ ಮೇಲೆ ಕೆಲವು ಇಂಚುಗಳ ಅಂತರದಲ್ಲಿ ಒಂದು ಕಂಚಿನ ತಟ್ಟೆಯನ್ನು ಇಟ್ಟು ದೀಪದ ಉರಿಯಿಂದ ಬರುವ ಮಸಿಯನ್ನು ಕಲೆಹಾಕಿ. ಆಮೇಲೆ ಆ ಮಸಿಯನ್ನು ಒಂದು ಸಣ್ಣ ಬಟ್ಟಲಿಗೆ ಹಾಕಿ ಒಸಿ ಬೆಣ್ಣೆಯೊಂದಿಗೆ ಕಲಸಿದರೆ ಕಣ್ಣಿನ ಕಾಡಿಗೆ ಅಣಿ.
ಇದು ಕಣ್ಣಿಗೆ ತಂಪಲ್ಲದೆ ಎಳೆ ಮಕ್ಕಳಿಗೆ ಹಾಕಿದರೆ ಬಟ್ಟಲ ಹಾಗೆ ಕಣ್ಣು ಅಗಲವಾಗಿ ಚೆನ್ನಾಗಿ ಮೂಡುತ್ತದೆ.
ನಮ್ಮ ಕಡೆ ಒಂದು ಗಾದೆ ಇದೆ - ಬೆಟ್ ಆಡಿದ್ ಕಣ್ ಬಟ್ಲಂಗೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
1 ಕಾಮೆಂಟ್:
ಕಾಮೆಂಟ್ ಪೋಸ್ಟ್ ಮಾಡಿ