ಗುರುವಾರ, ಜನವರಿ 01, 2009

ಕಣ್ ಸನ್ನೆಯಲಿ...

ಕಣ್ ಸನ್ನೆಯಲಿ ನೀ ಕೊಂದುಬಿಡುವೆ
ಎಣಿಸಲು ಆಗದು ನಿನ್ನಾ ಒಲುಮೆ
ಬರೆದು ಕೊಡಲೆ ನನ್ನೆನಾ
ಕಟ್ಟ ಬೇಡ ಇದಕೆ ಬೆಲೆಯ

ತೊರೆದು ಹೋದರೆ ನೀ ನನ್ನ
ಮೊರೆತ ಕೇಳುವರ್ ಯಾರೆನ್ನ
ಬರಿದು ಮಾಡಬೇಡ ಬದುಕ
ತೆರೆದು ನೋಡಬೇಡ ಕೆದುಕಿ

ಪಾರು ಮಾಡೆನ್ನ ಈ ತೊಡರಿಂದ
ಸೊರಗುತಿದೆ ಈ ನನ್ನೊಡಲು
ಎಳಸುತಿದೆ ನಿನ್ನ ಆ ನಗೆಯು
ಬಳಸಬಿಡು ನನ್ನ ಎದೆಯನ್ನು

1 ಕಾಮೆಂಟ್‌:

Khavi ಹೇಳಿದರು...

ಇದಕ್ಕೆ ನಾನು ಹೊಂದಿಸಿದ ಇನಿ ಚೆನ್ನಾಗಿದೆ ಅಂದಿದ್ದಕ್ಕೆ ನನ್ನಿ..