ಮಂಗಳವಾರ, ನವೆಂಬರ್ 03, 2015

'ತಿರುಕ್ಕುರಳ್’ ನಲ್ಲಿ ಕನ್ನಡದ ಆಡುನುಡಿ

ತಮಿಳಿನ ’ತಿರುಕ್ಕುರಳ್’ ನಲ್ಲಿ ಕನ್ನಡದ ಆಡುನುಡಿಯಲ್ಲಿರುವ ಹಲವು ಪದಗಳು ಅದೇ ಹುರುಳಿನಲ್ಲಿ ಬಳಕೆಯಾಗಿವೆ. ಆದರೆ ಅಲ್ಲೆಲ್ಲ ತಮಿಳಿನ ಆಡುನುಡಿಯಲ್ಲಿರುವ ಪದಗಳು ಬಳಕೆಯಾಗಿಲ್ಲ. ತಮಿಳಿನ ಮೇಲೆ ಹಳಗನ್ನಡ ಒತ್ತು(influence) ಇತ್ತೇ ಎಂಬ ಕೇಳ್ವಿ ಇದರಿಂದ ಏಳುವುದು.
ಎತ್ತುಗೆಗೆ (ನನಗೆ ಕಂಡವು ಇಶ್ಟು..ಹುಡುಕಿದರೆ ಇನ್ನೂ ಸಿಗಬಹುದು):-
೧. ಮಕ್ಕಳ್ - ಇಂದಿನ ಕನ್ನಡದ ಆಡುನುಡಿಯಲ್ಲಿ ಇದನ್ನು ’children' ಎಂಬ ಹುರುಳಲ್ಲಿ ಬಳಸಲಾಗುತ್ತದೆ. ಇದೇ ಪದ ತಮಿಳಿನಲ್ಲಿ ’people' ಎಂಬ ಹುರುಳಿನಲ್ಲಿ ಇಂದು ಬಳಕೆಯಾಗುತ್ತಿದೆ. ಆದರೆ ತಿರುವಳ್ಳುವರ್ ಚಿಕ್ಕಮಕ್ಕಳ ಬಗ್ಗೆ ಮಾತು ಬಂದಾಗಲೆಲ್ಲಾ ಬಳಸುವುದು ’ಮಕ್ಕಳ್’ ಎಂದೇ.
೨ ಮನೆ - ಇಂದಿಗೂ ಕನ್ನಡದಲ್ಲಿ ’house/home' ಎಂಬ ಹುರುಳಿನಲ್ಲಿ ಬಳಕೆಯಲ್ಲಿದೆ. ಆದರೆ ತಮಿಳಿನ ಆಡುನುಡಿಯಲ್ಲಿ ’ವೀಟ್ಟು’ ಬಳಕೆಯಲ್ಲಿದೆ. ಆದರೆ ತಿರುವಳ್ಳುವರ್ ಬಳಸುವುದು ’ಮನೈ’ ಎಂದೇ.
೩. ನೀರ್ - ಇಂದಿಗೂ ಕನ್ನಡದಲ್ಲಿ ’water' ಎಂಬ ಹುರುಳಿನಲಿ ಬಳಕೆಯಲ್ಲಿದೆ. ಆದರೆ ತಮಿಳಿನಲ್ಲಿ ಇದಕ್ಕೆ ’ತಣ್ಣಿ’ ಎನ್ನುತ್ತಾರೆ. ಆದರೆ ತಿರುವಳ್ಳುವವರು ಬಳಸುವುದು ’ನೀರ್’ ಎಂದೇ.

ಹಿಂದೆ ತಿಳಿಸಿದಂತೆ ಮತ್ತಶ್ಟು ಸಿಕ್ಕ ಪದಗಳು:-
೪. ಕೆಯ್/ಗೆಯ್(ಮಾಡು) - ತಿರುವಳ್ಳುವರ್ ಬಳಸುವುದು ಇದಕ್ಕೆ ಸಾಟಿಯಾದ ತಮಿಳು ರೂಪ 'ಶೆಯ್'( ತೆಲುಗಿನ ಚೆಯ್/ಚೆಯ್ಯಿ). ತಪ್ಪಿಯೂ ತಿರುವಳ್ಳುವರ್ ಇವತ್ತಿನ ತಮಿಳಿನಲ್ಲಿ ಬಳಸುವ 'ಪಣ್' ಬಳಸುವುದೇ ಇಲ್ಲ. ಆದರೆ ಕನ್ನಡದಲ್ಲಿ ಇಂದಿಗೂ 'ಗೆಯ್',ಗೆಯ್ಮೆ, ಕೇಮೆ(ಕ್ಯಾಮೆ) ಬಳಸಲಾಗುತ್ತಿದೆ.
೫. ತಿನ್, ಉಣ್ - ತಿರುವಳ್ಳುವರ್ 'ತಿನ್' ಒಮ್ಮೆ ಮತ್ತು 'ಉಣ್' ಎಂಬುದನ್ನು ಹಲವು ಕಡೆ ಬಳಸಿದ್ದಾರೆ. ಇವತ್ತಿನ ತಮಿಳಿನಲ್ಲಿ 'ಸಾಪಟ್' ಹೆಚ್ಚಾಗಿ ಬಳಕೆಯಲ್ಲಿದೆ. ಆದರೆ ಕನ್ನಡದಲ್ಲಿ 'ಉಂಡ್ಯ', ತಿಂದ್ಯ, ಉಣ್ಣು (> ಊಟ), ತಿನ್ನು(>ತಿಂಡಿ, ತಿನಿಸು) ಬಳಕೆಗಳು ಹೆಚ್ಚಾಗಿ ಬಳಕೆಯಲ್ಲಿವೆ.

3 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ನೀವು ಗಮನಿಸಿದ್ದು ನಿಜವಾಗಿದೆ. ಆದರೆ, ಮುಂಚೆ ಕನ್ನಡ ತಮಿಳಿನಲ್ಲೆರಡರಲ್ಲೂ "ಮನೆ" ಪದಗಳು ಬಳಕೆಯಲ್ಲಿದ್ದು ಬಳಿಕ ಕನ್ನಡದಲ್ಲಶ್ಟೇ ಆ ಪದ ಉಳಿದು, "ವೀಡು"ಪದ ತಮಿಳಿನಲ್ಲಿ ಹೆಚ್ಚು ಬಳಕೆಗೆ ಬಂದಿರಲೂಬಹುದು. ಮಕ್ಕಳ್ ಪದವೂ ಹಾಗೆ ಆಗಿರಬಹುದು. ಬಳಕೆಯ ಹುರುಳು ಬೇರೆಬೇರೆಯಾಗಿರಬಹುದು.
ಇನ್ನು "ಗೇಯ್ " ಪದ, ತಮಿಳಿನಲ್ಲಿ ಇಂದೂ "ಶೆಯ್" ಆಗೇ ಉಳಿದಿದೆ ಎಂದೆನಿದುತ್ತೆ. "ಎಂದ ಶೆಯ್ಯುಂ" - "ಏನು ಮಾಡುವುದು/ಗೇಯುವುದು?" . "ಪಣ್" ಎಂಬುವುದೂ ಅದೇ ಹುರುಳಲ್ಲಿ ಬಳಕೆಯಲ್ಲಿದೆ ..

ಅನಾಮಧೇಯ ಹೇಳಿದರು...

ನೀವು ಗಮನಿಸಿದ್ದು ನಿಜವಾಗಿದೆ. ಆದರೆ, ಮುಂಚೆ ಕನ್ನಡ ತಮಿಳಿನಲ್ಲೆರಡರಲ್ಲೂ "ಮನೆ" ಪದಗಳು ಬಳಕೆಯಲ್ಲಿದ್ದು ಬಳಿಕ ಕನ್ನಡದಲ್ಲಶ್ಟೇ ಆ ಪದ ಉಳಿದು, "ವೀಡು"ಪದ ತಮಿಳಿನಲ್ಲಿ ಹೆಚ್ಚು ಬಳಕೆಗೆ ಬಂದಿರಲೂಬಹುದು. ಮಕ್ಕಳ್ ಪದವೂ ಹಾಗೆ ಆಗಿರಬಹುದು. ಬಳಕೆಯ ಹುರುಳು ಬೇರೆಬೇರೆಯಾಗಿರಬಹುದು.
ಇನ್ನು "ಗೇಯ್ " ಪದ, ತಮಿಳಿನಲ್ಲಿ ಇಂದೂ "ಶೆಯ್" ಆಗೇ ಉಳಿದಿದೆ ಎಂದೆನಿದುತ್ತೆ. "ಎಂದ ಶೆಯ್ಯುಂ" - "ಏನು ಮಾಡುವುದು/ಗೇಯುವುದು?" . "ಪಣ್" ಎಂಬುವುದೂ ಅದೇ ಹುರುಳಲ್ಲಿ ಬಳಕೆಯಲ್ಲಿದೆ ..

Bharath Kumar ಹೇಳಿದರು...

In Tamil, there is 'manai' (cognate of 'mane' in Kannada), but its not in use in spoken version(at least I haven't seen or heard yet). That's all I am saying

From Dravidian Etymological Dictionary.

For example, PDr *k- is palatalized in Tamil before front vowels (an approximate statement); Tamil, therefore, in many forms has the initial phoneme c- when the reconstructed PDr form would have k-.

From the following its evident Kannada preseves ProtoDravidian's (PDr) *k- as it is whereas Tamil has switched to 'c-'

Kannada - Tamil - English
kEri - cEri - Street
kesar - cEru - mud/mire
kiru - ciru - small
kivi - cevi - ear
kedar - citar - to scatter
kere - cirai - to shave
kela - cil - some/few
kem- - cem- - red
kettu - cettu - to chisel
kEre - cErai - ratsnake
kenne - cennai - cheek
kemmu - cerumu - to cough
kera - ceruppu - sandal/slipper
keccal - ceruttal - udder
keral - cirattu - to become angry
key - cey - wet field
key - cey - to do

http://dsalsrv02.uchicago.edu/cgi-bin/philologic/showrest_?conc.6.2.25728.0.69.burrow

However, when 'k' is followed by pattern, switching to 'c-' doesn't happen in Tamil.

Kannada - Tamil - English
kēḷ - kēḷ - to ask, to hear

Here ē is front vowel
ḷ is a retroflex