ಶನಿವಾರ, ಜನವರಿ 03, 2009

ಮುಸ್ಸಂಜೆಯ ಬಳ್ಳಿ

ಮುಸ್ಸಂಜೆ ಹೊತ್ನಲ್ಲಿ
ಅಂದಚೆಂದದ ಹೂಬಳ್ಳಿ
ನಲಿಯುತ ನಿಂತಿತ್ತು ಬಿಂಕ ಚೆಲ್ಲಿ
'ನಲಿಯುವೆ ಏತಕೆ' ಕೇಳಲು ನಾನಲ್ಲಿ
ತಾಳಲಾರೆ ತಂಗಾಳಿಕಚಗುಳಿ
ಎಂದಾಗ ಆ ಬಳ್ಳಿ ನನ್ನಕೆನ್ನೆಯಲ್ಲಿ ಗುಳಿ

1 ಕಾಮೆಂಟ್‌:

Khavi ಹೇಳಿದರು...

ನೇಸರನ ಕದಿರಿನ ಬಾಣಕ್ಕೆ..

ಚೆಲುವೆ ಇಳೆಯ ಒಲವಿನ ನಾಚಿಕೆ..

ಈರ್ವರ ಮದನದಾಟಕ್ಕೆ ನಲಿಯಿತು, ಅರಳಿತು ಮನ, ಕೆರಳಿತು ಇನಿಯಳ ನೆನಪು...