ನಾನು ಈಚೆಗೆ ಒಂದು ಒಳ್ಳೆ ಅಭ್ಯಾಸವನ್ನು ಮಾಡಿದ್ದೇನೆ. ಪ್ರತಿ ಶನಿವಾರ/ಭಾನುವಾರ ಬೆಳಿಗ್ಗೆ ಲಾಲ್ ಬಾಗಿಗೆ ಹೋಗಿ ಅಲ್ಲಿನ ಹಕ್ಕಿಗಳನ್ನು ಸೆರೆ ಹಿಡಿಯುವುದು !!!!...ಅಯ್ಯೊ ಸ್ವಾಮಿ ಕ್ಯಾಮರಾದಲ್ಲಿ ..!! ಅವುಗಳ ಚಲನ-ವಲನ ಕಂಡು ಖುಶಿ ಪಟ್ಟೆ. ಲಾಲ್ ಬಾಗಿನಲ್ಲಿ ಇಷ್ಟೊಂದು ತರ ಹಕ್ಕಿಗಳಿವೆ ಅಂತ ನನಗೆ ಗೊತ್ತಿರಲಿಲ್ಲ......ಇಲ್ಲಿ ತನಕ ಈ ಕೆಳಗಿನವುಗಳನ್ನು ಸೆರೆ ಹಿಡಿದಿದ್ದೇನೆ. ಒಂದು ಬೇಸರವೆಂದರೆ ಇವುಗಳ ಹೆಸರುಗಳು ನನಗೆ ಗೊತ್ತಿಲ್ಲ.....ಬಲ್ಲವರು ತಿಳಿಸಿ
2 ಕಾಮೆಂಟ್‌ಗಳು:
ನಯನ ಮನೋಹರವಾಗಿದೆ,
ಎಲ್ಲಿಂದಲೊ ಬಂದ ಹಕ್ಕಿ ಇಲ್ಲೇಕೆ ಕುಳಿತೆ
ಈ ಹೊಗೆಭರಿತ ಬೆಂಗಳೂರು ನಿನಗೆ ಒಳಿತೆ???
ಹಕ್ಕಿ ಹೇಳಿತು
ಮೋಡ ಮುಚ್ಚಿದರೂ ಚಂದ್ರ ಕಾಣುವನು ಚಂದ
ಹೊಗೆಯಿದ್ದರೂ ಇಲ್ಲಿ ಬಾಳುವದೇ ಅಂದ ;)
ಭಟ್ಟರಿಗೆ,
ನಾನು ಬೆಂಗಳೂರಿನಲ್ಲಿ ಇದ್ದಾಗ 'ಲಾಲ್ ಬಾಗ್' ನಲ್ಲಿ ಚಿಕ್ಕಕೆರೆ ಯಿತ್ತು. ಬಹುಶಃ ಅದು ೧೯೬೫-೬೬ ರಲ್ಲಿ ಅನ್ನಿಸುತ್ತೆ. ನಿಮ್ಮ ಬ್ಲಾಗಿನಲ್ಲಿ ಸೆರೆಹಿಡಿದ ಇಷ್ಟು ಚಂದದ ಹಕ್ಕಿಗಳನ್ನು ನಾನು ಎಂದೂ ನೋಡಿದ ನೆನಪಿಲ್ಲ. ನಮ್ಮ ಅಕ್ಕನವರ ಮನೆ ಚಿಕ್ಕಮಾವಳ್ಳಿಯಲ್ಲಿ ; 'ಲಾಲ್ ಬಾಗ್' ಹತ್ತಿರ್ದಲ್ಲೇ ಇತ್ತು. 'ಕೃಂಬಿಗಲ್ ರೋಡ್' ಎಡವಿದರೂ ಸಾಕು, ನಾನು ನಮ್ಮ ಮನೆಗೆ ಹೋಗಿ ಬೀಳುತ್ತಿದ್ದೆ. ಒಮ್ಮೊಮ್ಮೆ ಉದ್ಯಾನವನದಲ್ಲಿ ಕುಳಿತು ಬೆಳಿಗ್ಯೆ ಅಭ್ಯಾಸವನ್ನೂ ಮಾಡಿದ ನೆನಪು.
'ಕೃಂಬಿಗಲ್ ರೋಡ್'ನ ವಿಶೇಷತೆ ಏನು ಗೊತ್ತಿದೆಯೆ ?
ಚೆನ್ನಾಗಿದೆ ನಿಮ್ಮ ಹವ್ಯಾಸ. ನಿಮ್ಮ 'ಬ್ಲಾಗ್' ಕೂಡ !
ಕಾಮೆಂಟ್ ಪೋಸ್ಟ್ ಮಾಡಿ