ನಾನು ಇತ್ತೀಚೆಗೆ ಚಿತ್ರದುರ್ಗಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಕಲ್ಲು - ಕೋಟೆಗಳನ್ನು ಕಣ್ಣಾರೆ ಕಂಡು ಅಚ್ಚರಿಪಟ್ಟೆ. 'ನಾಗರಹಾವು' ಚಿತ್ರದ ದೃಶ್ಯಗಳು ಕಣ್ಣ ಮುಂದೆ ಹಾದು ಹೋದವು.ಆದರೆ ಅಲ್ಲೊಂದು( ಚಿತ್ರದುರ್ಗ ಜಿಲ್ಲೆಯಲ್ಲಿ) ಒಂದು ಸುಂದರ ಕಣಿವೆ ಇದೆ ಎಂದು ನಿರೀಕ್ಷಿಸಿರಲಿಲ್ಲ. ಅದೇ ಮಾರಿಕಣಿವೆ.
ಅದರ ರಮಣೀಯತೆ ಕಂಡವರಿಗೆ ಗೊತ್ತು... ಬಯಲು ನಾಡಿನಲ್ಲೊಂದು ಅದ್ಭುತ ಬೆಟ್ಟ ಗುಡ್ಡಗಳ ಶ್ರೇಣಿ. ನಡುವೆ ಹರಿಯುತಿಹಳು ವೇದವತಿ. ಅದಕ್ಕೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟೆ 'ವಾಣಿವಿಲಾಸ ಸಾಗರ'. ಇದನ್ನು ಸುಮಾರು ೧೮೯೬ರಲ್ಲಿ ಆಗಿನ ಮೈಸೂರು ಮಹಾರಾಣಿಯವರು ಕಟ್ಟಿಸಿದರು ಎಂದು ಓದಿದ ನೆನಪು. ಇದು ಚಿತ್ರದುರ್ಗದಿಂದ ಸುಮಾರು ೪೦ ಕಿ.ಮೀ ಇರಬಹುದು. ಇಲ್ಲಿರುವ ಹಿನ್ನೀರಿನ( ಜಲಾಶಯದ ಹಿಂಭಾಗದ ನೀರು) ವಿಸ್ತಾರವನ್ನು ನಾನು ಇನ್ನೆಲ್ಲು ಕಂಡಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ