ಒಡನಾಡಿ ಹೂವುಗಳ
ಕೂಡಿ ನಲಿದು ನಗಲಾಗಲಿಲ್ಲ
ತಡವಾಗಿ ಅರಳಿದ ಹೂವು
ಬೇಡವಾದೆ ನಾನು
ಹೆಣ್ಣಿನ ತುರುಬ ಏರಲಿಲ್ಲ
ಕಣ್ಣಿಗೆ ಮಿಗೆ ತಂಪೆರೆಯಲಿಲ್ಲ
ತಡವಾಗಿ ಅರಳಿದ ಹೂವು
ಬೇಡವಾದೆ ನಾನು
ಬಂಡನೀಯಲಿಲ್ಲ ಮೊರೆವ ದುಂಬಿಗೆ
ಕಂಡವರೊಯ್ಯಲಿಲ್ಲ ಸಲುವ ಗುಡಿಗೆ
ತಡವಾಗಿ ಅರಳಿದ ಹೂವು
ಬೇಡವಾದೆ ನಾನು
ಬಿಸುಡಿದರು ಮಸಣದೊಳು
ಹಿಸುಕಿದರು ಕಸದಂತೆ ಕಾಲಲಿ
ತಡವಾಗಿ ಅರಳಿದ ಹೂವು
ಬೇಡವಾದೆ ನಾನು
ಮಣ್ಣಲ್ಲಿ ಮಣ್ಣಾದೆ ಕೊಳೆತು
ಹಣ್ಣಾಗಲು ಬೆಳೆವ ಮರದಲ್ಲಿ
ತಡವಾದರೇನು ಅರಳಲು
ಕೊಡಲಿಲ್ಲವೆ ನಾ ನನ್ನ ಕೊಡುಗೆ!!
1 ಕಾಮೆಂಟ್:
emperor casino: 100% up to €500 bonus, 100 FS + €600
Emperor Casino gives a 100% up to €500 bonus, 100 FS 제왕카지노 + €600 deposit bonus + 400 FS. Play Now. Deposit €500 free to play. Rating: 5 바카라사이트 · Review by Shootercasino 바카라
ಕಾಮೆಂಟ್ ಪೋಸ್ಟ್ ಮಾಡಿ