ಅಂದುಕೊಂಡಿದ್ದೆ ನಾನು
ಬರೆದಿದ್ದೆ ಎಲ್ಲವನು
ಅಂದುಕೊಂಡಿದ್ದೆ ನಾನು
ತಿಳಿದಿದ್ದೆ ಎಲ್ಲವನು
ಆಗ ನಾನು ನಾನಾಗಿರಲಿಲ್ಲ
ಅಂದುಕೊಂಡಿದ್ದೆ ನಾನು
ಮಂದಿ ಮೆಚ್ಚಿಹರು ಬರಹವನು
ಅಂದುಕೊಂಡಿದ್ದೆ ನಾನು
ಸುತ್ತಲು ಮುತ್ತುವರು ಎನಗಾಗಿ
ಆಗ ನಾನು ನಾನಾಗಿರಲಿಲ್ಲ
ಅಂದುಕೊಳ್ಳಲು ನಾನು
"ನನ್ನ ನಾ ಅರಿತಿಹೆನೆ?"
ಬಂದನೊಬ್ಬನು ಎಲ್ಲಿಂದಲೊ
ಹೊದ್ದು ಹೊಸ ಪಾಂಗನು
ಆಗಲೂ ನಾನು ನಾನಾಗಿರಲಿಲ್ಲ
ಅಂದುಕೊಂಡೆನು ನಾನು
ಕಲಿಸಿಹೋದನಾ ಅವನು
ನಾನಾಗುವ ಬಗೆಯ
ಆಗ ನಾನು ನಾನಾಗಿರಲಿಲ್ಲ
ಕಂಡುಕೊಂಡೆನು ನಾನು
ಕಂಡಿತ ನಾನಾಗುವ ಬಗೆಯ
ನನಗೆ ನಾನು ಕಲಿಸುವ ಬಗೆಯ
ಆಗ ಅವನು ಅಲ್ಲಿರಲಿಲ್ಲ
ನಾನು ನಾನಾಗಿದ್ದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ