ಭಾನುವಾರ, ಡಿಸೆಂಬರ್ 26, 2010

ಆಂಜನೇಯನ /ಅಂಜಿನಯ್ಯನ ಕತೆ

ಇತ್ತೀಚೆಗೆ ನಾನು ಕಂಡುಕೊಂಡ ಒಂದು ಸಂಗತಿ:=

ಕೇಳ್ವೆ: ’ಆಂಜನೇಯ’ನ ವ್ಯುತ್ಪತ್ತಿ ಹೇಗೆ ಹೇಳುವುದು?
ಉತ್ತರ: ಆಂಜನೇಯ ಅನ್ನುವುದು ಕರ್ನಾಟಕದಲ್ಲಿ ಹೆಚ್ಚು ಕೇಳಿ ಬರುವ ಪದ. ಬೇರೆ ಕಡೆ ಬಜರಂಗ ಬಲಿ, ಹನುಮಾನ್ ಅಂತೆಲ್ಲ ಹೇಳ್ತಾರೆ... ಆದರೆ ಕರ್ನಾಟಕದಲ್ಲಿ ಆಂಜನೇಯನೇ ಯಾಕೆ? ಸಂಸ್ಕ್ರುತದ ಪ್ರಕಾರ anjaneya (p. 038) [ âñganeya ] m. son of Añganâ, Ha numat.

(http://dsal.uchicago.edu/cgi-bin/romadict.pl?query=anjaneya&display=simple&table=macdonell)

ಇದಕ್ಕೆ ಕನ್ನಡದ ವ್ಯುತ್ಪತ್ತಿ ಹೇಳಬಹುದು:-

ನಮ್ಮ ಕನ್ನಡಿಗರಲ್ಲಿ (ನಾನು ಚಿಕ್ಕಂದಿನಲ್ಲಿ ಕಂಡ ಹಾಗೆಯೇ) ಇರುವ ಒಂದು ನಂಬಿಕೆ ಇದೆ (ಮೂಡ ನಂಬಿಕೆ ಅಂತ ಕೆಲವರ ಅನ್ನಬಹುದು....ಇರಲಿ) ...ಮಕ್ಕಳಿಗೆ ಹುಶಾರ ತಪ್ಪಿದ್ರೆ(ಜ್ವರ ಬಂದರೆ) ’ಓಹ್ ಅವನು ಹೆದರಿಕೊಂಡಿದ್ದಾನೆ ಮೈಸೂರಿನಲ್ಲಿರುವ ಕೋಟೆ ಆಂಜನೇಯನಗುಡಿಗೆ ಕರ್ಕಂಡ್ ಹೋಗಿ ಎಲ್ಲಾ ಸರಿಯಾಗುತ್ತೆ’ ಅಂತ ಹಿರಿಯರು ಅದರಲ್ಲೂ ಹೆಂಗಸರು ಅಂತಿದ್ರು...ಹೀಗೆ ಕರ್ನಾಟಕದ ಬೇರೆ ಬೇರೆ ಊರುಗಳಲ್ಲಿ ಈ ರೀತಿಯ ನಂಬಿಕೆ ಇದೆ/ಇರಬಹ್ದು. ಅಂದರೆ ’ಅಂಜಿಕೆ’/’ಅಂಜು’ - ಇದನ್ನು ಹೋಗಲಾಡಿಸುವನೇ ಅಂಜಿನ+ ಅಯ್ಯ = ಅಂಜಿನಯ್ಯ ಈಗ ಇದನ್ನೇ ಸಕ್ಕದಿಸಿದರೆ ’ಆಂಜನೇಯ’ ಆಗಿರಬಹುದು ಅಂತ ನನ್ನ ಎಣಿಕೆ.

ಹಾಗೆಯೇ ಶಿವನಿಗೆ ...ನಂಜಿನ ಅಯ್ಯ => ನಂಜಯ್ಯ ( ನಂಜುಂಡೇಶ್ವರ) ಅಂತಾರೆ ..ನಂಜನಗೂಡಿನಲ್ಲಿ ನಂಜಯ್ಯನ ಗುಡಿ ಇದೆ.

ಕೊಸರು: ಈಗಲೂ ಬೆಂಗಳೂರಿನಲ್ಲಿ ’ಗಾಳಿ’ ಆಂಜನೇಯನ ಗುಡಿ ಇದೆ.

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಮಕ್ಕಳಿಗೆ "ಅಂಜನ" / "ತಾಯತ" ಹಾಕುಸ್ಕೊಂಡ್ ಬರ್ಬೇಕು ಎನ್ನುವಂತಹ ಮಾತುಗಳನ್ನು ನಾನು ಕೇಳಿದ್ದೇನೆ.