ಶನಿವಾರ, ಡಿಸೆಂಬರ್ 25, 2010

ಕಂನಡ

ಶಂ.ಬಾ.ಜೋಶಿಯವರು ಕನ್ನಡ ಪದದ ಬಗ್ಗೆ ಮಾತಾಡುತ್ತ....ಕನ್ನರು,ಕಣ್ಣರು ನುಡಿ ಕಂನುಡಿ, ನಾಡು ಕಂನಾಡು/ಕಂನಡ ಅಂತ ಹೇಳಿದ್ದಾರೆ. ಅಲ್ಲದೆ ಕಂನಡ ಎಂಬುದನ್ನ ಹೆಚ್ಚು ಸರಿಯಾಗಿ ತಮಿಳಿನಲ್ಲಿ ಬರೆಯಬಹುದು ಯಾಕಂದರೆ ತಮಿಳಿನಲ್ಲಿ ’ಣ’, ’ನ’ ನಡುವೆ ಇರುವ್ ಇನ್ನೊಂದ್ ’ನ’(கன்னட) ಕಾರ ಇದೆ. ಇಲ್ಲಿ ’ண்’ ಎಂಬ ’ನ’ಕಾರ ’ಕಂನಡ’ದಲ್ಲಿರುವ ’ಂ’ಗಿಂತ ಸೊಲ್ಪ ಬೇರೆ ತರದ ಉಲಿಕೆEdit


Hamsanandi ! - ಮೇಲಿನ ಟಿಪ್ಪಣಿಯಲ್ಲಿ ಹಲವು ತಪ್ಪುಗಳಿವೆ, ಮತ್ತು ಕನ್ನಡ ಅನ್ನುವ ಪದವನ್ನು ತಮಿಳು ಲಿಪಿಯಲ್ಲಿ (ಕನ್ನಡಕ್ಕಿಂತ) ಸರಿಯಾಗಿ ಬರೆಯಬಹುದು (ಅದು ಸರಿಯೇ ಇದ್ದರೆ, ನನಗೆ ಸರಿ ಕಂಡಿಲ್ಲ), ಎಂದು ತಿಳಿಸಿ ಹೇಳುತ್ತಿಲ್ಲ.

೧) ತಮಿಳಿನಲ್ಲಿ ಎರಡು ’ನ’ ಕಾರಗಳು ಬರವಣಿಗೆಯಲ್ಲಿದ್ದರೂ, ಅವುಗಳ ಉಚ್ಚಾರಣೆಯಲ್ಲಿ ಯಾವ ಬದಲಾವಣೆಯೂ ಇಲ್ಲ.

೨) ಈ ಎರಡು ’ನ’ ಕಾರಗಳು (ன ಮತ್ತು ந ) ಇವೆರಡೂ, ಒಂದು ಪದದಲ್ಲಿ ನ-ಕಾರ ಎಲ್ಲಿ ಬಂದಿದೆ ಅನ್ನುವುದರ ಮೇಲೆ ನಿಂತಿರುತ್ತವೆ. (ಹಿಂದೆ ಇದಕ್ಕೆ ಬೇರೆ ಕಾರಣಗಳಿದ್ದಿರಬಹುದು, ಉಚ್ಚಾರವೂ ಬೇರೆಯಾಗೇ ಇದ್ದಿರಬಹುದು - ಆದರೆ ಇಂದಿನ ತಮಿಳಿನಲ್ಲಿ ಇಲ್ಲ); ಪದವೊಂದರ ಮೊದಲು ಬರುವ ನ-ಕಾರವು ಯಾವಾಗಲೂ ந ಆಗಿದ್ದು, ನಡುವೆ ಬರುವ ನ ಕಾರಗಳು ன ಮತ್ತು ந ಈ ಎರಡೂ ಆಗಿರಬಹುದು (ಹೆಚ್ಚಾಗಿ ன ಬರುತ್ತೆ). ಯಾವ ಕಡೆ ந, ಯಾವ ಕಡೆ ன ಅನ್ನುವುದು ಸುಮಾರು ರೂಢಿಯಿಂದ ಬರುತ್ತೆ. ಉದಾ: ನಂದನಂ -> ನನ್ದನಮ್ ಈ ಪದವನ್ನ ತಮಿಳಿನಲ್ಲಿ நந்தனம் ಹೀಗೆ ಬರೆಯಲಾಗುತ್ತೆ.

೩) ண் ಅನ್ನುವುದು ನ ಕಾರವೇ ಅಲ್ಲ, ಣ ಕಾರ.

ಇನ್ನೊಂದು ಸಂಗತಿ ಎಂದರೆ ತಮಿಳಿನ ಕೆಲವು ಒಳನುಡಿಗಳಲ್ಲಿ, ಆರ್ಕಾಟು, ಚೆನ್ನೈ ಮೊದಲಾದ ಉತ್ತರ ಭಾಗಗಳಲ್ಲಿ (ನನ್ನ ಅನುಭವಕ್ಕೆ ಬಂದಂತೆ) ನ ಮತ್ತು ಣ ಕಾರಗಳನ್ನ ಒಮ್ಮೊಮ್ಮೆ ಅದಲು ಬದಲಿಸಿ ಹೇಳುವುದೂ (ಉದಾ: ಮನ್ನನ್ <-> ಮಣ್ಣನ್, ಕಣ್ಣನ್ <--> ಕನ್ನನ್ ) ಮತ್ತು ಅದರ ಕಾಗುಣಿತವನ್ನು ಹೇಳುವಾಗ ಅದನ್ನು ಹೆಸರಿಸಲು ಮೂರು ಸುಳಿ ನ, ಎರಡು ಸುಳಿ ನ ಎಂದು ಹೇಳುವುದುಂಟು.
Bharath Kumar - ಹಂಸಾನಂದಿ....ನನಗೆ ನೆನಪಿದ್ದಶ್ಟು ಇಲ್ಲಿ ಹಾಕಿದ್ದೇನೆ...ನಿಮ್ಮ ಕಮೆಂಟ್ ನೋಡಿದ ಮೇಲೆ ಗೊಂದಲವಾಗಿದೆ.ಇವತ್ ಮತ್ತೆ ಶಂ.ಬಾ..ಹೊತ್ತಗೆ ನೋಡಿ ಅಲ್ಲಿರುವುದನ್ನು ಇಲ್ಲಿ ಹಾಕುತ್ತೇನೆ

Bharath Kumar - ಚಾ.ನಗದರಲ್ಲೂ ...’ನ’ಕಾರಕ್ಕೆ ’ಣ’ಕಾರ ಬಳಸ್ತಾರೆ.... ಬನ್ನಿ ಬದಲು ಬಣ್ಣಿ.....ಪುನ(ಪುನಃ) ಬದಲು ’ಪುಣವಿ’( ಅಂದ್ರೆ ಮತ್ತೆ),

Bharath Kumar - @hamsanandi....ಶಂ.ಬಾ. ಅವರ ಕನ್ನಡದ ನೆಲೆ ಎಂಬ ಹೊತ್ತಗೆಯ ೬೮ನೇ ಪುಟದಲ್ಲಿ ಹೀಗಿದೆ.
"...ನ ಮತ್ತು ಣ ಗಳೆರಡಕ್ಕೊ ತಮ್ಮ ಹಕ್ಕನ್ನು ಹೇಳಲು ಅವಕಾಶವಿರುವ ಬೇರೊಂದು ಅಕ್ಶರವು ಮೊದಲು ಆ ಸ್ಥಳದಲ್ಲಿರಬೇಕು. ಹಾಗಾದರೆ ಆ ಅಕ್ಶರವು ಯಾವುದು? ತಮಿಳಿನ ನೆರವಿನಿಂದ ಇದನ್ನು ಗೊತ್ತುಪಡಿಸಬಹುದಾಗಿದೆ. ತಮಿಳಿನಲ್ಲಿ ನ ಮತ್ತು ಣ ಗಳ ಹೊರತು ಇನ್ನೂ ಒಂದು ಅನುನಾಸಿಕಾಕ್ಶರವುಂಟು. ಅವರು ಅದನ್ನು ன ಹೀಗೆ ಬರೆದು ತೋರಿಸುವರು. ಇದನ್ನು ಹೇಗೆ ಉಚ್ಚರಿಸುವರೆಂದು ಕೇಳಲು ಉಭಯಭಾಷಾವಿಶಾರದರಾದ ಪ್ರೊ. ಚೆನ್ನಕೇಶವ ಅಯ್ಯಂಗಾರ್ಯರು ನಕಾರದಂತೆ ಎಂದು ತಿಳಿಸಿದರು. ಸ್ಪಶ್ಟವಾಗಿ ಅಲ್ಲದ್ದಿದ್ದರೂ ன ದ ಒಲವು ಣ ಕಾರದ ಕಡೆಗೂ ಕೆಲಮಟ್ಟಿಗೆ ಇರಬೇಕೆಂದು ಸಂದೇಹ. ನನಗೆ ಇನ್ನು ಇದೇ ಸಂದೇಹ. ಉಚ್ಚಾರದಲ್ಲಿ ಹೆಚ್ಚು ಕಡಿಮೆ ಇಲ್ಲದಿದ್ದರೆ ನ-ಣಗಳಿರುವಾಗ ಮತ್ತೆ ன் ಕಾರದ ಅವಶ್ಯಕವೇನು? ನ ಮತ್ತು ಣ ಕಾರಗಳಿಂದ ತೋರಿಸಲು ಆಗದ ಆವುದೊ ಒಂದು ವಿಶಿಷ್ಟ ಉಚ್ಚಾರವನ್ನು ಸೂಚಿಸುವುದಕ್ಕಾಗಿಯೆ ன் ಕಾರವು ತಲೆದೋರಿರಬೇಕಲ್ಲವೆ? ಹಳೆಗನ್ನಡದ ಱ ಮತ್ತು ೞ ಕಣ್ಮರೆಯಾದಂತೆ ಇಂದು ನ,ಣ ಮತ್ತು ன ಕಾರಗಳಿಲ್ಲಿದ್ದ ಸೂಕ್ಶ್ಮ ಉಚ್ಚಾರ ಬೇಧವು ಮರೆತುಹೋಗರಬೇಕು.

Bharath Kumar - ಶಂ.ಬಾ. ಅವರ ಕನ್ನಡದ ನೆಲೆ ಎಂಬ ಹೊತ್ತಗೆಯ ೬೯ನೇ ಪುಟದಲ್ಲಿ ಹೀಗಿದೆ
"..ತಮಿಳಿನಲ್ಲಿಯ ன் ಅವರ್ಗೀಯ ನ ಕಾರವು ಶಬ್ದದ ಆದಿಯಲ್ಲಿ ಬರುವುದಿಲ್ಲ. ಆದುದರಿಂದ ಕನ್ನಡದೊಳಗಿನ ಬಿಂದುವಂತೆ(ಂ) ತಮಿಳ ನಕಾರದ ಉಚ್ಚಾರವೂ ಇರಬೇಕೆಂದನಿಸುತ್ತಿದೆ. ಏಕೆಂದರೆ, ಬಿಂದುವು ಶಬ್ದದ ಆರಂಬದಲ್ಲಿ ಬರುವುದೇ ಸಾಧ್ಯವಿಲ್ಲ. ಇನ್ನೂ ಒಂದು ವಿಶೇಶ. ಹಲವೆಡೆಗಳಲ್ಲಿ ತಮಿಳಿನಲ್ಲಿಯೂ ಶಬ್ದದ ಕೊನೆಗೆ ’ನ್’ ಎಂಬುದು ಯಾವುದೊಂದು ಅಕ್ಶರಕ್ಕೆ ಆದೇಶವಾಗಿ ಬರುವುದುಂಟು. ಆದುದರಿಂದ, ಕಂನಡ-ಕಂನಾಡು ಇದರೊಳಗಿನ ಪೂರ್ವಪದವಾದ ಕನ್-ಕನ್ನ ಎಂಬ ಜನಾಂಗವಾಚಕ ಶಬ್ದದ ಕೊನೆಯ ಅಕ್ಶರವು ಯಾವುದಾದರೂ ಒಂದು ಅಕ್ಶರಕ್ಕೆ ಆದೇಶವಾಗಿ ಬಂದಿರಬಹುದೆ? "

ಅವರ ಪ್ರಕಾರ ಸದ್ಯಕ್ಕೆ ’ಕನ್ನಡ’ ತಪ್ಪು ...ಆದರೆ ಕಂನಡ = கன்னட ಎರಡೂ ಸರಿ

ಕನ್ನಡದ "ಂ’ = ತಮಿಳಿನ ன்

ಕಾಮೆಂಟ್‌ಗಳಿಲ್ಲ: