ಶನಿವಾರ, ಡಿಸೆಂಬರ್ 25, 2010

ಶಿವ ರಹಸ್ಯ

ಈಗ ತಾನೆ ಶಂ.ಬಾ. ಜೋಶಿಯವರು ಬರೆದಿರುವ ’ಶಿವ ರಹಸ್ಯ’ ಹೊತ್ತಗೆ ಓದಿ ಮುಗಿಸಿದೆ. ಕೆಲವು ಗಮನಿಕೆಗಳು
೧. ಶಿವ = ಶಿಂವ = ಶಿನ್ ವ , ಶಿನ್ ಎಂಬುದು ದ್ರಾವಿಡ ನುಡಿಗಳಲ್ಲಿ ( ಅದರಲ್ಲೊ ಕನ್ನಡದಲ್ಲಿ) ಚಿನ್, ಚೆನ್, ಕೆನ್ ಎಂಬುದರ ಇನ್ನೊಂದು ರೂಪ. ಶಿವ ಅಂದರೆ ಕೆಂಪು, ಚೆನ್ನು, ಒಳ್ಳೇದು, ಬೆಳಗು, ಮಂಗಲಕರ, ಅದಕ್ಕೆ ನಮ್ಮಲ್ಲಿ ಕೆಂಪಣ್ಣ, ಕೆಂಪೇಗೌಡ, ಕೆಂಚಣ್ಣ , ಚಿನ್ನಪ್ಪ, ಚಿನ್ನಸ್ವಾಮಿ, ಚೆನ್ನಪ್ಪ, ಚೆನ್ನಯ್ಯ, ಕೆಂಪಯ್ಯ ಅಂತ ಹೆಸರು ಇಟ್ಕೊತಾರೆ.
೨. ಅದಕ್ಕೆ rudhira (p. 252) [ rudh-irá ] a. red, bloody (AV.1); ವೇದಗಳಲ್ಲಿ ಕೂಡ ಶಿವನನ್ನು ರುದ್ರ (ರುಧಿರ=ಕೆಂಪು) ಅಂತ ಕರೆದಿರುವುದು ಅದಕ್ಕೆ.

೨. ನಾವು ಬಳಸುವ ’ಚೆನ್’ ನಲ್ಲಿ ಹಲವು ಅರಿತಗಳು ಅಡಗಿವೆ. (All meanings are +ve)
ಅ. ಏನ್ ಚೆನ್ನಾಗಿದ್ದೀರ ? ( ಹದುಳವಾಗಿದ್ದೀರ)
ಬ. ಏನ್ ಮದ್ವೆಯಲ್ಲ ಚೆನ್ನಾಗಿ ನಡೀತಾ? ( ಅಂದರ ಮಂಗಲವಾಗಿ ನಡೆಯಿತಾ)
ಕ. ಏನ್ ಚೆನ್ನಾಗಿದಾಳ್ ನೋಡು? ಅಂದರೆ ( ಕೆಂಪಾಗಿ, beautiful ಅಂತ)

೩. ಶಿನ್+ಧೂರ = ಸಿಂದೂರ (ಹೆಂಗಸರು ಹಣೆಯಲ್ಲಿ ಹಾಕಿಕೊಳ್ಳವ ಕುಂಕುಮ=ಕೆನ್+ಕೆನ್)

2 ಕಾಮೆಂಟ್‌ಗಳು:

ಸವಿತೃ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಸವಿತೃ ಹೇಳಿದರು...

ಭರತ

೧.ಶಿವ ನನ್ನು ದಕ್ಷಿಣಮೂಲದ ದೇವರು ಅಂತ ಅನ್ನೋದು ಸಾಮಾನ್ಯ ನಂಬಿಕೆ.
೨. ಷ,ಶ (ಶಿವ) ಅಕ್ಷರಗಳು ದ್ರಾವಿಡದಲ್ಲಿ ಮೂಲತಹ ಇರಲಿಲ್ಲ.

ನನಗೆ ಇವೆರಡೂ ಪರಸ್ಪರ ವಿರೋಧವಾಗಿ ಕಂಡು ಅನುಮಾನವನ್ನು ಉಂಟುಮಾಡಿದ್ದವು. ಈಗ ಅದಕ್ಕೆ ಸಮಜಾಯಿಸಿ ಸಿಕ್ಕಿತು. ನಿನ್ನ ಶಿವ ಪದದ ವ್ರುತ್ಪತ್ತಿ ಸರಿ ಅನಿಸಿತು. ಬರೆಯುತ್ತ ಇರು. ಇನ್ಮುಂದೆ ನಿನ್ನ ಬ್ಲಾಗ್ ಫಾಲ್ಲೋ ಮಾಡ್ತೀನಿ !

ಧನ್ಯವಾದಗಳು