ಬುಧವಾರ, ಅಕ್ಟೋಬರ್ 25, 2017

ಹಕ್ಕು

ಕನ್ನಡದಲ್ಲಿ ಬಳಕೆಯಲ್ಲಿರುವ 'ಹಕ್ಕು' ಎಂಬ ಪದವು ಅರೇಬಿಕ್ ಪದವಾದ 'haqq' ಎಂಬ ಪದದಿಂದ ಬಂದಿದೆ. ಅರೇಬಿಕಿನಲ್ಲಿ ಅದರ ಹುರುಳು ಸರಿಯಾದದ್ದು ಎಂದೇ ಇದೆ.
A ḥaqq, vulg. ḥaq adj. Just, proper, right, correct
ಅಲ್ಲದೆ, ಆಮೇಲೆ ಅದಕ್ಕೆ ಈ ಹುರುಳುಗಳು ಬಂದು ಸೇರಿಕೊಂಡಿವೆ ಅನಿಸುತ್ತೆ.
right, title, privilege, claim,
ಇಂಗ್ಲಿಶಿನಲ್ಲೂ, right (ಸರಿ) ಎಂಬುದೇ right ಎಂಬ ಹುರುಳಿನಲ್ಲೂ ಅಂದರೆ 'ಹಕ್ಕು' ಎಂಬ ಹುರುಳಿನಲ್ಲೂ ಬಳಕೆಯಲ್ಲಿದೆ.
ಆದ್ದರಿಂದ #ಕನ್ನಡದ್ದೇ ಪದವನ್ನು ಹೀಗೆ ಉಂಟುಮಾಡಲಾಗಿದೆ:- 'ಸರಿ' ಎಂಬ ಪದಕ್ಕೆ 'ಪು' ಎಂಬ ಒಟ್ಟನ್ನು ಸೇರಿಸಿ ಬಳಕೆ ಮಾಡಲಾಗಿದೆ.
ಹಕ್ಕು (ಅರೇಬಿಕ್) = right(E)= ಸರಿಪು (ಕನ್ನಡ)
ಎತ್ತುಗೆಗೆ:
೧. ಅವನಿಗೆ ಸಿಟ್ಟು ಮಾಡಿಕೊಳ್ಳುವ ಸರಿಪು ಇದೆ ಅಂದರೆ 'ಅವನು ಸಿಟ್ಟು ಮಾಡಿಕೊಳ್ಳುವುದು ಸರಿಯಾಗಿದೆ' ಎಂದೇ ಹುರುಳು.

ತಯ್- ತಾಯ್

ಗೆಳೆಯ Mallesh Belavadi Gaviyappa ಅವರು ತಮ್ಮ ಊರಿನ ಬಗ್ಗೆ ಮಾತಾಡುತ್ತಾ 'ಗವಿಯತಯ್ಯನ ಹಾರಯ್ಕೆ' ಎಂಬ ಪದಕಂತೆಯನ್ನು ಬಳಸಿದರು. ಅವರ ಊರಿನಲ್ಲಿ 'ಗವಿಯತಯ್ಯನಿಗೆ' ಗುಡಿ ಕಟ್ಟಲಾಗಿದೆ ಎಂದು ಹೇಳಿದರು.
ಆದರೆ ಅವರು 'ಗವಿಯತಯ್ಯ' ಎಂಬ ಪದದ ಕೊನೆಯಲ್ಲಿ 'ಅಯ್ಯ' ಎಂಬ ಪದವಿದೆ ಎಂದು ಹೇಳಿದರು. ಮೊದಲು ಅದು ಸರಿಯೆನಿಸಿದರೂ ಆಮೇಲೆ ನನಗೆ ಸರಿ ಕಾಣಲಿಲ್ಲ, ಅಲ್ಲದೆ ಬೇರೆ ಏನೊ ಇರಬೇಕೆಂದು ಅನಿಸುತಿತ್ತು. ಯಾಕಂದರೆ,
ಗವಿಯತಯ್ಯ= ಗವಿಯತ+ಅಯ್ಯ
ಎಂದು ಬಿಡಿಸಬೇಕಾಗುತ್ತದೆ. 'ಗವಿಯತ' ಎಂಬುದಕ್ಕೆ ಸರಿಯಾದ ಹುರುಳು ತೋರಲು ಬರುವುದಿಲ್ಲ. ಆದ್ದರಿಂದ
ಗವಿಯ+ತಯ್ಯ = ಗವಿಯತಯ್ಯ
ಎಂದು ಬಿಡಿಸಿ ನೋಡಿದಾಗ 'ತಯ್ಯ' ಎಂಬ ಪದವು ಹೊಮ್ಮಿತು. ತಯ್ಯ ಎಂಬುದು 'ತಯ್' ಎಂಬುದರ ಹೊಸಗನ್ನಡ ರೂಪ ಎಂದು ಹೇಳುವುದಕ್ಕೆ ಅನುವಿದೆ.
ಗವಿಯ+ ತಯ್ = ಗವಿಯತಯ್ ಎಂಬುದೇ ಅದರ ಮೊದಲ ರೂಪವಾಗಿದ್ದು ಆಮೇಲೆ 'ಗವಿಯತಯ್ಯ' ಎಂದಾಗಿರಬಹುದು.
ಇನ್ನು 'ತಯ್' ಎಂಬುದಕ್ಕೆ 'ತಂದೆ' ಎಂಬ ಹುರುಳೇ ಇದೆ. ದಿಟಕ್ಕೂ ತಂದೆ ಎಂಬುದನ್ನು ಬಿಡಿಸಿದರೆ ಸಿಗುವುದು 'ತಯ್'
ತನ್+ತಯ್ = ತನ್-ದಯ್ => ತನ್ದೆ
ತನ್ದೆ ಎಂದರೆ ದಿಟಕ್ಕೂ 'ತನ್ನ ತಯ್'(own father) ಎಂದೇ. ಗವಿಯತಯ್ಯ ಎಂದರೆ ಗವಿಯ ಅಪ್ಪ, ಗವಿಯಪ್ಪ ಎಂಬ ಹುರುಳೇ ಬರುತ್ತದೆ.
ತಯ್ - father
ತಾಯ್ - mother

ನೆನಪಾಗದೆ ನೆನಪಲ್ಲಿಯೇ ಉಳಿಯಬಲ್ಲೆಯಾ?

'ಕರಿಯ-೨' ಓಡುತಿಟ್ಟದ 'ಅನುಮಾನವೇ ಇಲ್ಲ ಅಬಿಮಾನಿ ನಾನೀಗ' ಎಂಬ ಹಾಡು ಕೇಳಿದಾಗ ನನ್ನೊಳಗೆ ಈ ಹಾಡು ಹುಟ್ಟಿತು.

ಆ ಇನಿತಕ್ಕೆ(tune) ಈ ಸಾಲುಗಳನ್ನು ಹೊಂದಿಸಿ ಹಾಡಿದಾಗ ಚೆನ್ನಾಗಿ ಕೂತುಕೊಳ್ಳುತ್ತದೆ ಅಂತ ಅನ್ನಿಸಿತು.
----------------------------------------------
ನೆನಪಾಗದೆ ನೆನಪಲ್ಲಿಯೇ ಉಳಿಯಬಲ್ಲೆಯಾ?
ಓಲಯ್ಸದೇ ಒಳಗಿಂದಲೇ ಒಲವಾಗಬಲ್ಲೆಯಾ?
----------------------------------------------

ಬಿರುಬಗೆಯವನೇ...

ಸಂಸ್ಕ್ರುತದ ಸೊಲ್ಲನ್ನು ಕನ್ನಡಕ್ಕೆ ತಂದಿದ್ದು ಹೀಗೆ:-
ಬಿರುಬಗೆಯವನೇ, ಎಲರ್ ಬಿರ್ಮೆಯವನೇ
ಅರಿಗೆ ಗೆದ್ದವನೇ, ಜಾಣ್ಮೆಗೆ ದಿಮ್ಮಿದನೇ
ಎಲರಣುಗನೇ, ಮಂಗಗಳ ಮೇಟಿಯೇ
ಸಿರಿಯೆರೆಯನ ಬಳಿಯನೇ, ನಿನ್ನ ಮೊರೆಹೊಗುವೆ


ಬುಧವಾರ, ಅಕ್ಟೋಬರ್ 11, 2017

ಮುಜರಾಯಿ, ಇಲಾಕೆ, ಅಬಕಾರಿ - ಈ ಪದಗಳ ಬೇರುಗಳ ಬೆನ್ನಹತ್ತಿ..


ಅಬಕಾರಿ:-

ಕನ್ನಡದಲ್ಲಿ ಬಳಕೆಯಲ್ಲಿರುವ 'ಅಬಕಾರಿ' ಎಂಬ ಪದದ ಬೇರನ್ನು ಹುಡುಕ ತೊಡಗಿದಾಗ ಹಲವು ವಿಶಯಗಳು ತಿಳಿಯಿತು.
'ಅಬಕಾರಿ' ಎಂಬ ಪದ ಅರೇಬಿಕ್ ಇಂದ ಬಂದದ್ದು ಎಂದು ಜಿ.ವಿ.ಯವರ ನಿಗಂಟಿನಲ್ಲಿ ಕೊಡಲಾಗಿದೆ.
ಅಬಕಾರಿ < ಆಬ್ಕಾರಿ ಹೆಸರುಪದ
(ಅರ) ಹೆಂಡ, ಸಾರಾಯಿ ಮುಂ. ಮಾದಕ ವಸ್ತುಗಳ ತಯಾರಿಕೆ ಮತ್ತು ಆ ಮಾರಾಟದ ಮೇಲೆ ಹಾಕುವ ತೆರಿಗೆ
'ಆಬ್' ಎಂದರೆ ನೀರು ಎಂಬ ಹುರುಳು ಹಳೆ ಪರ್ಶಿಯನಿನಲ್ಲೂ ಕೂಡ ಇದೆ.
ಅಲ್ಲದೆ ಜೆಂಡ್ (ಅವೆಸ್ತಾನ್ ನುಡಿ ಇರಬೇಕು) ಮತ್ತು ಸಂಸ್ಕ್ರುತ ನುಡಿಗಳಲ್ಲಿ ಇದಕ್ಕೆ ಸಾಟಿಯಾದ (ಕಾಗ್ನೇಟ್) 'ಆಪ' ಎಂಬ ಪದ 'ನೀರು' ಎಂಬ ಹುರುಳನ್ನೇ ಹೊಂದಿದೆ.
āb [Old P. āw, Pehl. āp, Zend ap, S. -अप्] s.m. Water

ಸಂಸ್ಕ್ರುತದ ಪದನೆರಕೆಯಿಂದ:-
अप् (p. 20) 3. áp water.
ಹಳೆ ಪರ್ಶಿಯನ್ ಮತ್ತು ಸಂಸ್ಕ್ರುತ ನುಡಿಗಳು ನಂಟನ್ನು ಹೊಂದಿದೆ ಎಂಬುದನ್ನು ಇದರಿಂದ ತಿಳಿಯಬಹುದು.
āb-kār, s.m. A water-carrier; sprinkling (rare); a distiller or seller of spirituous liquors; a drinker of spirituous liquors.—āb-kārī,
ಅಂದರೆ ಆಬ್-ಕಾರ್ ಎಂಬುದರ ಹುರುಳು 'ನೀರು ಒಯ್ಯುವವನು' ಎಂದಾಗುತ್ತದೆ. ಹೀಗೆ ನೀರು ಒಯ್ಯುತ್ತಿದ್ದವರು ಮುಂದೆ ಹೆಂಡವನ್ನು ಒಯ್ಯುವವರಾಗಿರಬಹುದು.

#ಕನ್ನಡದ್ದೇ ಪದ
ಅಬಕಾರಿ ಇಲಾಕೆ (ಅರೇಬಿಕ್/ಪರ್ಶಿಯನ್)= ಹೆಂಡ ತೆರಿಗೆ ಕವಲು (ಕ)

ಇಲಾಕೆ/ಇಲಾಖೆ:-

ಕನ್ನಡದಲ್ಲಿ ಬಳಕೆಯಲ್ಲಿರುವ 'ಇಲಾಖೆ' ಎಂಬ ಪದ ilaaqa ಎಂಬ ಅರೇಬಿಕ್ ಪದದಿಂದ ಬಂದಿದೆ. ಇಲಾಕಾ ಎಂಬ ಪದದಲ್ಲಿರುವುದು q, ಆದರೂ ಕನ್ನಡದಲ್ಲಿ ಇದಕ್ಕೆ ಮಹಾಪ್ರಾಣವಾದ 'ಖ' ಬಳಸಲಾಗುತ್ತದೆ. ಆದರೆ ಎಲ್ಲರೂ ಉಲಿಯುವುದು 'ಇಲಾಕೆ' ಎಂದೇ.
ಇಲಾಖೆ ಹೆಸರುಪದ
(ಅರ) ಆಡಳಿತ ಶಾಖೆ

ಕೆಳಕಂಡ #ಕನ್ನಡದ್ದೇ ಪದಗಳನ್ನು ಬಳಸಬಹುದು
ಇಲಾಕಾ, ಇಲಾಕೆ( ಅರೇಬಿಕ್) = ಆಳ್ಕವಲು, ಆಡಳಿತ ಕವಲು (ಕ)

ಮುಜರಾಯಿ:-

ಮುಜ್ರಾಯಿ - ಇದು ಪರ್ಶಿಯನ್ ಪದವಾದ 'ಮುಜ್ರಾ' ಎಂಬ ಪದದಿಂದ ಬಂದಿದೆ. ಇದಕ್ಕೆ ಕೆಳಕಂಡ ಹುರುಳುಗಳಿರುವುದು.
muj'rā, n. m. 1. Deduction; allowance; a set-off.
mujrā'ī, mujraī, n. m. 1. Remission of revenue
ಪರ್ಶಿಯನ್ ಇಂದ ಉರ್ದುಗೆ ಬಂದು ಅಲ್ಲಿಂದ ಕನ್ನಡಕ್ಕೆ ಬಂದಿರುವುದು. ಕನ್ನಡದಲ್ಲಿ ಈ ಹುರುಳು ಪಡೆದಿದೆ

ಮುಜರಾಯಿ ಹೆಸರುಪದ
ಇಲಾಖೆ (ಹಿಂ) ದೇವಸ್ಥಾನ ಮಠ ಮೊ.ವುಗಳ ದಾನದತ್ತಿಗಳಿಗೆ ಸಂಬಂಧಿಸಿದ ಇಲಾಖೆ

#ಕನ್ನಡದ್ದೇ ಪದ 'ಗುಡಿ' ಬಳಸಬಹುದು.
ಮುಜರಾಯಿ(ಪರ್ಶಿಯನ್) ಇಲಾಕೆ = ಗುಡಿ ಆಳ್ಕವಲು(ಕ) = ಗುಡಿ ಕವಲು (ಕ)

ಬುಧವಾರ, ಏಪ್ರಿಲ್ 05, 2017

ಕನ್ನಡದಲ್ಲಿ ಸಂಸ್ಕ್ರುತ ಪದಗಳ ಬಳಕೆಯಿಂದಾಗುವ ತೊಂದರೆ

ಕನ್ನಡದಲ್ಲಿ ಸಂಸ್ಕ್ರುತ ಪದಗಳನ್ನು ಬಳಸುವುದರಿಂದ ಪದಗಳ ಹಿಂದೆ ಅವಿತು ಮಾತಾಡುವ ಇಲ್ಲವೆ ಬರೆಯುವ ಚಾಳಿ ಹೆಚ್ಚಾಗುತ್ತಿದೆ/ಹೆಚ್ಚಾಗಿದೆ. ಎಶ್ಟೊ ಸಂಸ್ಕ್ರುತ ಪದಗಳನ್ನು ಹಿಂದೆ ಮುಂದೆ ನೋಡದೆ ಕುರುಡು ಕುರುಡಾಗಿ ಬಳಸುವುದರಿಂದ ನಮ್ಮ ಅರಿವಿನ ಅಳವಿಗೆ ನಾವೇ ಮೋಸ ಮಾಡಿಕೊಳ್ಳುತ್ತಿದ್ದೇವೆ ಅಂತ ಅನಿಸುತ್ತದೆ. ಇದು ಬರೀ ಕನ್ನಡ-ಸಂಸ್ಕ್ರುತದ ಕೇಳ್ವಿಯಲ್ಲ ಬದಲಾಗಿ ಕನ್ನಡಿಗರ ಅರಿವಿನ ಕೇಳ್ವಿ. ಅರಿವನ್ನು ಹಿಗ್ಗಿಸಿಕೊಳ್ಳುವ ಕೇಳ್ವಿ.
ಎತ್ತುಗೆಗೆ: 'ಸಯ್-ಪು' ಬದಲು 'ನೀತಿ' ಎಂಬ ಪದ ಬಳಕೆಯಲ್ಲಿದೆ. 'ಸಯ್'(ಸೈ) ಎಂಬ ಪದ ಆಡುನುಡಿಯಲ್ಲಿ 'ಸರಿ'ಯಾಗಿರುವುದಕ್ಕೆ ಬಳಸುವ ಪದ (ಅವನು ಮಾಡಿದ್ದು ಸಯ್, ಅವನ್ ಎಲ್ಲಾದುಕ್ಕು ಸಯ್). ಆದರೆ 'ನೀತಿ' ಎಂಬ ಪದವನ್ನು ಒಡೆದು ತಿಳಿದುಕೊಳ್ಳುವ ಅಳವು ನಮಗಿಲ್ಲ ಯಾಕಂದರೆ ಅದು ಹೆರನುಡಿಯಿಂದ ಬಂದದ್ದು.

ಪಡುವಣದ ಅರಿವಿನರಿಮೆ

ಪಡುವಣದೊಳ್ ಇರ್ ಗುಂಪು
ದೂಸರೊಲವಿಗರೊಂದು ಗುಂಪು
ಪಳಗೊಲವಿಗರೊಂದು ಗುಂಪು
ದೂಸರ್ಬಲ್ಮೆಯೊಂದೇ ಇರುವುದೆಂದು
ಪಳಿಗಿಕೆಯೊಂದೇ ಇರುವುದೆಂದು
ಪರಿಪರಿಯಾಗಿ ಈರ್ವರ್ ಕಿತ್ತಾಡುತಿರಲ್....
ಕಾಂಟನು ಬಂದು ಎರಡೂ ಬಗೆಗಳು
ಉಂಟೆಂದು ಹೇಳಲ್...ಆದರೆ
ದೂಸರ್ ಪಳಗಿಕೆಗೂ ಮಿಗಿಲೆಂದು
ಹೇಳಿ ಅರಿವಿನರಿಮೆಯಂ ಕೂರ್ ಅರುಹಿದನ್

'ಅಸಿ' ಬಗ್ಗೆ

ನಮ್ಮ ಮಯ್ಸೂರಿನ ಕಡೆ ಬಳಕೆಯಲ್ಲಿರುವ 'ವಸಿ'/'ಒಸಿ' ಎಂಬುದು 'ಅಸಿ' ಎಂಬುದರ ಇನ್ನೊಂದು ರೂಪ ಅಂತ ಅನ್ನಿಸುತ್ತಿದೆ.
೧. ಇನ್ನೊಸಿ ಸಾರು ಆಕಿ
೨. ಒಸಿ ಕೆಲಸ ಮಾಡುದ್ರ್ ಆಗ್ದಾ?

Ka. asi, asa thinness, leanness, slenderness, *minuteness* - DED 341

ಪಂಪನು 'ಅಸಿ' ಎಂಬ ಪದ ಬಳಕೆ ಮಾಡಿದ್ದಾನೆ.

'ಅನ್' ಬಗ್ಗೆ

ಹಿಂದೊಮ್ಮೆ, ಹಳಗನ್ನಡದಲ್ಲಿರುವ ಎರಡನೇ ವಿಬಕ್ತಿ 'ಅಮ್' ಅಲ್ಲ, 'ಅನ್' ಎಂಬುದಾಗಿ ಹೇಳಿದ್ದೆ. ಅದಕ್ಕೆ ಇನ್ನಶ್ಟು ನಿಂದರಿಕೆಗಳು 'ಪಂಪ ಬಾರತ' (ಡಿ.ಎಲ್.ನರಸಿಂಹಾಚಾರ್ ಅವರು ಬಿಡಿಸಿರುವುದು) ದಲ್ಲೇ ಸಿಕ್ಕಿತು
ಮನಂ = ಮನಸ್ಸನ್ನು ( ಇಲ್ಲಿ ಮನಂ ಎಂಬುದನ್ನು 'ಮನನ್' ಎಂದು ಓದಬೇಕು. ಮನಮ್ ಎಂದಲ್ಲ)
ತನುವನ್ = ತನುವನ್ನು(ದೇಹವನ್ನು)
ಸಂಸ್ಕ್ರುತದಲ್ಲಿ ಏಕವಚನ ದ್ವಿತೀಯ ವಿಬಕ್ತಿ ಪ್ರತ್ಯಯ 'ಅಮ್' ಎತ್ತುಗೆಗೆ: ಮಾತರಮ್ - ತಾಯಿಯನ್ನು, ಗ್ರಾಮಮ್ - ಹಳ್ಳಿಯನ್ನು
ಸಂಸ್ಕ್ರುತದ 'ಅಮ್' ಅನ್ನುವುದೇ ಕನ್ನಡದಲ್ಲಿದೆ ಎಂಬ ತಪ್ಪು ತಿಳಿವಳಿಕೆಯಿಂದಾಗಿ ಕನ್ನಡದಲ್ಲೂ 'ಅಮ್' ಇದೆ ಎಂದು ಹಬ್ಬಿಸಿದರು
ಹಳೆಗನ್ನಡದ 'ಅನ್' ಎಂಬುದೇ ಹೊಸಗನ್ನಡದಲ್ಲಿ 'ಅನ್ನು' ಆಗಿದೆ