ಬುಧವಾರ, ಅಕ್ಟೋಬರ್ 11, 2017

ಮುಜರಾಯಿ, ಇಲಾಕೆ, ಅಬಕಾರಿ - ಈ ಪದಗಳ ಬೇರುಗಳ ಬೆನ್ನಹತ್ತಿ..


ಅಬಕಾರಿ:-

ಕನ್ನಡದಲ್ಲಿ ಬಳಕೆಯಲ್ಲಿರುವ 'ಅಬಕಾರಿ' ಎಂಬ ಪದದ ಬೇರನ್ನು ಹುಡುಕ ತೊಡಗಿದಾಗ ಹಲವು ವಿಶಯಗಳು ತಿಳಿಯಿತು.
'ಅಬಕಾರಿ' ಎಂಬ ಪದ ಅರೇಬಿಕ್ ಇಂದ ಬಂದದ್ದು ಎಂದು ಜಿ.ವಿ.ಯವರ ನಿಗಂಟಿನಲ್ಲಿ ಕೊಡಲಾಗಿದೆ.
ಅಬಕಾರಿ < ಆಬ್ಕಾರಿ ಹೆಸರುಪದ
(ಅರ) ಹೆಂಡ, ಸಾರಾಯಿ ಮುಂ. ಮಾದಕ ವಸ್ತುಗಳ ತಯಾರಿಕೆ ಮತ್ತು ಆ ಮಾರಾಟದ ಮೇಲೆ ಹಾಕುವ ತೆರಿಗೆ
'ಆಬ್' ಎಂದರೆ ನೀರು ಎಂಬ ಹುರುಳು ಹಳೆ ಪರ್ಶಿಯನಿನಲ್ಲೂ ಕೂಡ ಇದೆ.
ಅಲ್ಲದೆ ಜೆಂಡ್ (ಅವೆಸ್ತಾನ್ ನುಡಿ ಇರಬೇಕು) ಮತ್ತು ಸಂಸ್ಕ್ರುತ ನುಡಿಗಳಲ್ಲಿ ಇದಕ್ಕೆ ಸಾಟಿಯಾದ (ಕಾಗ್ನೇಟ್) 'ಆಪ' ಎಂಬ ಪದ 'ನೀರು' ಎಂಬ ಹುರುಳನ್ನೇ ಹೊಂದಿದೆ.
āb [Old P. āw, Pehl. āp, Zend ap, S. -अप्] s.m. Water

ಸಂಸ್ಕ್ರುತದ ಪದನೆರಕೆಯಿಂದ:-
अप् (p. 20) 3. áp water.
ಹಳೆ ಪರ್ಶಿಯನ್ ಮತ್ತು ಸಂಸ್ಕ್ರುತ ನುಡಿಗಳು ನಂಟನ್ನು ಹೊಂದಿದೆ ಎಂಬುದನ್ನು ಇದರಿಂದ ತಿಳಿಯಬಹುದು.
āb-kār, s.m. A water-carrier; sprinkling (rare); a distiller or seller of spirituous liquors; a drinker of spirituous liquors.—āb-kārī,
ಅಂದರೆ ಆಬ್-ಕಾರ್ ಎಂಬುದರ ಹುರುಳು 'ನೀರು ಒಯ್ಯುವವನು' ಎಂದಾಗುತ್ತದೆ. ಹೀಗೆ ನೀರು ಒಯ್ಯುತ್ತಿದ್ದವರು ಮುಂದೆ ಹೆಂಡವನ್ನು ಒಯ್ಯುವವರಾಗಿರಬಹುದು.

#ಕನ್ನಡದ್ದೇ ಪದ
ಅಬಕಾರಿ ಇಲಾಕೆ (ಅರೇಬಿಕ್/ಪರ್ಶಿಯನ್)= ಹೆಂಡ ತೆರಿಗೆ ಕವಲು (ಕ)

ಇಲಾಕೆ/ಇಲಾಖೆ:-

ಕನ್ನಡದಲ್ಲಿ ಬಳಕೆಯಲ್ಲಿರುವ 'ಇಲಾಖೆ' ಎಂಬ ಪದ ilaaqa ಎಂಬ ಅರೇಬಿಕ್ ಪದದಿಂದ ಬಂದಿದೆ. ಇಲಾಕಾ ಎಂಬ ಪದದಲ್ಲಿರುವುದು q, ಆದರೂ ಕನ್ನಡದಲ್ಲಿ ಇದಕ್ಕೆ ಮಹಾಪ್ರಾಣವಾದ 'ಖ' ಬಳಸಲಾಗುತ್ತದೆ. ಆದರೆ ಎಲ್ಲರೂ ಉಲಿಯುವುದು 'ಇಲಾಕೆ' ಎಂದೇ.
ಇಲಾಖೆ ಹೆಸರುಪದ
(ಅರ) ಆಡಳಿತ ಶಾಖೆ

ಕೆಳಕಂಡ #ಕನ್ನಡದ್ದೇ ಪದಗಳನ್ನು ಬಳಸಬಹುದು
ಇಲಾಕಾ, ಇಲಾಕೆ( ಅರೇಬಿಕ್) = ಆಳ್ಕವಲು, ಆಡಳಿತ ಕವಲು (ಕ)

ಮುಜರಾಯಿ:-

ಮುಜ್ರಾಯಿ - ಇದು ಪರ್ಶಿಯನ್ ಪದವಾದ 'ಮುಜ್ರಾ' ಎಂಬ ಪದದಿಂದ ಬಂದಿದೆ. ಇದಕ್ಕೆ ಕೆಳಕಂಡ ಹುರುಳುಗಳಿರುವುದು.
muj'rā, n. m. 1. Deduction; allowance; a set-off.
mujrā'ī, mujraī, n. m. 1. Remission of revenue
ಪರ್ಶಿಯನ್ ಇಂದ ಉರ್ದುಗೆ ಬಂದು ಅಲ್ಲಿಂದ ಕನ್ನಡಕ್ಕೆ ಬಂದಿರುವುದು. ಕನ್ನಡದಲ್ಲಿ ಈ ಹುರುಳು ಪಡೆದಿದೆ

ಮುಜರಾಯಿ ಹೆಸರುಪದ
ಇಲಾಖೆ (ಹಿಂ) ದೇವಸ್ಥಾನ ಮಠ ಮೊ.ವುಗಳ ದಾನದತ್ತಿಗಳಿಗೆ ಸಂಬಂಧಿಸಿದ ಇಲಾಖೆ

#ಕನ್ನಡದ್ದೇ ಪದ 'ಗುಡಿ' ಬಳಸಬಹುದು.
ಮುಜರಾಯಿ(ಪರ್ಶಿಯನ್) ಇಲಾಕೆ = ಗುಡಿ ಆಳ್ಕವಲು(ಕ) = ಗುಡಿ ಕವಲು (ಕ)

ಕಾಮೆಂಟ್‌ಗಳಿಲ್ಲ: