ಶುಕ್ರವಾರ, ಅಕ್ಟೋಬರ್ 12, 2012

ಹಿಂಗೇರಿಯ ಹುಡುಗರ ಹಾಡು


ಇದು ಇಂಗ್ಲಿಶಿನ ಹಿಂಗೇರಿಯ ಹುಡುಗರ(Backstreet boys) ಹಾಡು. ಇದರ ಬೇರು ಇಂಗ್ಲಿಶ್ ಹಾಡು ಇಲ್ಲಿದೆ

ಒಂಟಿತನವೆಂದರೆ ಏನಂತ ತೋರೆನಗೆ
   ಒಡೆದ ಗುಂಡಿಗೆಗೆ ಹಲವು ಒರೆಗಳು
     ಈ ಕೆನ್ನೊಲವಿನಲ್ಲಿ ನೋಡಲಾರೆ
             ಉಸಿರಾಡಲಾರೆ
ಬಾ ನನ್ನೊಂದಿಗೆ ನಡೆ, ನೋಡೋಣ
ಇರುಳಿನ ಸೊಡರುಗಳು ಬಲುಬೇಗನೆ
  ಅಗುವವೇ ನೇಸರನ ಕದಿರುಗಳು
            ನನ್ನ ತಣಿಸಲು
ನಿನ್ನೆಲ್ಲ ಬಯಕೆಗಳು ಈಡೇರುವವು
       ಅಂತ ಅವು ಹೇಳುತಿವೆ

ಒಂಟಿತನವೆಂದರೆ ಏನಂತ ಹೇಳು ನನಗೆ
    ಈ ಅನಿಸಿನಲ್ಲೇ ನಡೆಯಲೇ?
 ನೀನಿರುವೆಡೆ ನಾನೇಕೆ ಇರಲಾರೆ
 ಎನ್ನೆದೆಯಲೇನೊ ಕಳೆದುಹೋಗಿದೆ.

ಕೊನೆಗೊಳ್ಳದೀ ಬದುಕು ಸಾಗುತ್ತಿರುವುದು
ಕಲ್ಲುಗಳ ಕಣ್ಣು ಗಮನಿಸುತ್ತಿದೆ ತಿರುವುಗಳ
ಎವೆಯಿಕ್ಕದ ನೋಡುತ್ತಿದೆ ಹೇಳದೆ ಏನನ್ನೂ
ಕೊನೆಯಿಲ್ಲದ ಒಲವಿಗೆ ತಪ್ಪರಿವಿನ ದಾರಿಗಳು
            ಅಂಕೆಯಿಲ್ಲ ಈ ಬಾಳಿಗೆ
        ನೀ ಎನ್ನ ಜೊತೆಗಿರುವಿಯಾ?
    ನಿನ್ನೆಲ್ಲ ಬಯಕೆಗಳು ಈಡೇರುವವು
           ಅಂತ ಅವು ಹೇಳುತಿವೆ

ಎನ್ನ ತನ್ಮೆಯೆದೆ ಮಯ್ ಒಪ್ಪಿಸಲು
       ಎಲ್ಲಿಗೂ ಓಡಲಾರೆ
   ಹೋಗುವುದಕ್ಕೆ ಊರಿಲ್ಲ
ನಿನಗೆ ತಿಳಿಯದ ನಾನ್ ಹೇಗೆ
          ಅನುಬವಿಸಲಿ

ಎನ್ನೆದೆಯಿಂದ ಕಳೆದುಹೋದೆ ಎಲ್ಲಿಗೆ
    ಅಲ್ಲಿಗೇಕೆ ಬರಲಾರೆ ನಾನು

5 ಕಾಮೆಂಟ್‌ಗಳು:

ದುರಹಂಕಾರಿ ಹೇಳಿದರು...

ಅನುವಾದ ಸೂಬರ್ರಾಗಿದೆ! :)

shrivatsa prahallada ಹೇಳಿದರು...

chennaagide ... :)

ಪಂಡಿತಾರಾಧ್ಯ ಹೇಳಿದರು...

ಬ್ಲಾಗು, ವೈಭವ, ಕಾಮೆಂಟ್ ಲಿಪಿ ಸುಧಾರಣೆ ಇವೆಲ್ಲ ಕನ್ನಡ ಪದಗಳೆ?
ಕನ್ನಡದಲ್ಲಿ ಬಳಕೆಯಲ್ಲಿರುವವವು. ಇವನ್ನು ಬಳಸೊಣ.
ಬಳಕೆಯಲ್ಲಿರುವ ಕನ್ನಡ ಪದಗಳನ್ನು ಉಳಿಸಿಕೊಳ್ಳೋಣ.

ಬಳಕೆ ಇಲ್ಲದ, ಬಳಕೆ ತಪ್ಪಿದವನ್ನು ಅವುಗಳ ಪಾಡಿಗೆ ಬಿಡೋಣ.
ಗಾಂಚಲಿ ಬಿಡಿ ಕನ್ನಡ ಮಾತಾಡಿ ಎನ್ನುವ ಪರಿಭಾಷೆ ಬಳಸಲೇ ಬೇಕೆಂದಿಲ್ಲ. ನಾವು ಬಳಸಿ ಬಳಸುವವರನ್ನು ಬೆಂಬಲಿಸಿದರೆ ಆಯಿತು.

ಪಂಡಿತಾರಾಧ್ಯ ಹೇಳಿದರು...

ವೆಬ್+ಲಾಗ್ ಬ್ಲಾಗ್ ಇದರ ಅರ್ಥವನ್ನು ಕನ್ನಡದಲ್ಲಿ ಬರುವ ಪದವನ್ನು ಮಾಡಿ ಜಾಲ+ದಿಚರಿ = ಜಾಲಚರಿ.
ಕಮೆಂಟ್ ಅನಿಸಿಕೆ
ಇನ್ನಷ್ಟು ಚೆನ್ನಾಗಿ ಬರೆಯುವುದು
ನಿಮಗೆ ಕನ್ನಡ ಬಿಟ್ಟರೆ ಬೇರೆ ಭಾಷೆಯೇ ಗೊತ್ತಿಲ್ಲದಿದ್ದರೆ ನಿಮ್ಮ ಅನಿಸಿಕೆಗಳನ್ನು ಹೇಗೆ ನೇರವಾಗಿ ಕನ್ನಡದಲ್ಲಿ ಹೇಳುತ್ತಿದ್ದಂತೆ ಈಗಲೂ ಹೇಳಿ. ತಲೆಯಲ್ಲಿ ಬೇರೆ ಭಾಷೆಯ ಪದ ಇರಿಸಿಕೊಂಡು ಅದನ್ನು ಹಾಗೇ ಕನ್ನಡದಲ್ಲಿ ಹೇಳಬಯಸುವುದರಿಂದ ಅದು ಕನ್ನಡಕ್ಕೆ ಹೊರತಾಗಿರುತ್ತದೆ. ಹೀಗೆ ಮಾಡುವುದರಿಂದ ಆದಷ್ಟೂ ಕಡಿಮೆ ಬೇರೆ ಪದಗಳನ್ನು ಬಳಸಿ ಕನ್ನಡದಲ್ಲಿಯೇ ಮಾತನಾಡಲು ಬರುತ್ತದೆ. ಏಡು(ವರ್ಷ)ಅಕ್ಷರ(ಬರಿಗೆ)ನನ್ನಿ(ದನ್ಯವಾದ?)ಕೇಳ್ವಿ(ಪ್ರಶ್ನೆ) ಇಂಥ ಎಡವಟ್ಟುಗಳು ಇಲ್ಲವಾಗುತ್ತವೆ.

ವಿವೇಕ್ ಶಂಕರ್ ಹೇಳಿದರು...

ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಿಮ್ಮ ಕನ್ನಡದ ಅರಿತ ತುಂಬಾ ಚೆನ್ನಾಗಿದೆ.