ಬುಧವಾರ, ಸೆಪ್ಟೆಂಬರ್ 12, 2007

ಸೊಡರು-ಎಲರು

ಹೊತ್ತಿತೊ ಬಾಳಲ್ಲಿ ನಲಿವಿನ ಸೊಡರು

ಕುಣಿಯಿತು ಆ ಬೆಳಕಲ್ಲಿ ಪೊಗರು

ಬಂದಿತು ಎಡರುಗಳ ಎಲರು

ನಂದಿಹೋಗುವುದೆ ನಲಿವಿನ ಸೊಡರು

ಯಾರಿಲ್ಲವೇ ಪೊರೆವವರು

-----
ಸೊಡರು = ದೀವಿಗೆ
ಪೊಗರು = ಜಂಬ
ಎಲರು = ಗಾಳಿ

'ಬ' ಕಾರದ ಚುಟುಕಗಳು

ಬಾ ಬಾನಂಗಳದ ಬಾನ್ದೊರೆಯೆ

ಬಸವಳಿದಿಹೆನು ಬೆಂಗದಿರನ ಬೇಗೆಯಲಿ

ಬಗ್ಗಿಹೆನು ಬಾಳಿನ ಬೇನೆಗಳಲಿ

ಬುವಿಗಿಳಿದು ಬಳಿ ಬಂದು

ಬಡಿದೆಚ್ಚರಿಸು ಬದುಕನು ಬೇಗ

ಬೆಸುಗೆಯ ಬೆಸೆಯಿಸು

-----
ಮೇಲಿನ ಪದ್ಯದಲ್ಲಿ ಎಲ್ಲ ಪದಗೊಳು 'ಬ'ಯಿಂದ ಸುರುವಾಗುತ್ತವೆ.

ಮಂಗಳವಾರ, ಸೆಪ್ಟೆಂಬರ್ 11, 2007

ಅಲ್ಲಿಂದ ಇಲ್ಲಿಗೆ

ಅಲ್ಲಿಂದ ಇಲ್ಲಿಗೆ ಬಂದೆ
ನಲಿವ ಹುಡುಕುತ್ತಾ
ಮುಸುಕಾದ ನುಲಿದುಕೊಂಡಿರುವ
ದಾರಿಗಳಲ್ಲಿ ಓಡುವುದಿರಲಿ
ನಡೆಯುವುದೇ ಎಡರು.
ಆದರೂ ಸುಳ್ಳು ನಲಿವ ನಂಬಿ
ನಡೆಯಬೇಕು ಬಾಳ ಪಯಣ ಸಾಗಿಸಲು
ಒಮ್ಮೊಮ್ಮೆ ಹಿಂತಿರುಗಿ ನೋಡಿದಾಗ
"ಒಹ್ ಏಸು ನಲಿವಿತ್ತು" ಅನ್ನುತ್ತಿತ್ತು
ಆದರೂ ನಡೆಯುತಿದೆ ಉಸಿರು ಬಾಳಿನತ್ತ ಮೊಗವಿಟ್ಟು
ಸಾವಿನಿಂದ ತಪ್ಪಿಸಿಕೊಳ್ಳಲು