ಗುರುವಾರ, ಆಗಸ್ಟ್ 24, 2017

ಮತ್ತಿತಾಳಯ್ಯನ ಸೂಳ್ನುಡಿಗಳು - ಹೊರಗೆ:ಒಳಗೆ

ಹೊರಗೆ ಎರಡು ಬಗೆದೊಡೆ ಹೆರರಿಗೆ ಕೇಡು
ಒಳಗೆ ಎರಡು ಬಗೆದೊಡೆ ಅರಿವಿಗೆ ಕೇಡು
ಹೊರಗೊಳಗೆ ಎರಡರಲ್ಲೂ ಎರಡು ಬಗೆದೊಡೆ
ತೀರದಂತ ತೊಡರನ್ನೀವ ನಮ್ಮ ಮತ್ತಿತಾಳಯ್ಯ

ಸೋಮವಾರ, ಆಗಸ್ಟ್ 21, 2017

ಮತ್ತಿತಾಳಯ್ಯನ ಸೂಳ್ನುಡಿಗಳು - ಎಚ್ಚರಾಯ್ತ

ಲಿಂಗವೆಂದರೆ ಬರಿಲಿಂಗವಲ್ಲ ಕಾಣಿರಯ್ಯ
ಲಿಂಗವೆಂದರೆ ಅರಿವಿನ ಎಚ್ಚರ ಕಾಣಿರಯ್ಯ
ಲಿಂಗಾಯ್ತನೆಂದರೆ ಲಿಂಗಾಯ್ತನಲ್ಲ ಕಾಣಿರವ್ವ
ಲಿಂಗಾಯ್ತನೆಂದರೆ ಎಚ್ಚರಾಯ್ತ ಕಾಣಿರವ್ವ
ನುಡಿಯಲ್ಲಿ ನಡೆಯಲ್ಲಿ ಎಚ್ಚರವಿಲ್ಲದಿದ್ದೊಡೆ ಮೆಚ್ಚ ನಮ್ಮ #ಮತ್ತಿತಾಳಯ್ಯ
ಎಚ್ಚರಾಯ್ತರ ಸಲೆ ಸಾಕುವನಯ್ಯ

ಮತ್ತಿತಾಳಯ್ಯನ ಸೂಳ್ನುಡಿಗಳು - ಲಿಂಗಾಯ್ತ

ಅರಿವೆಂಬುದೇ ಗುರು
ಅರಿವಿನಿಂದಾದ ಎಚ್ಚರವೇ ಇಶ್ಟಲಿಂಗ
ಅನುಬಾವವೇ ಜಂಗಮ ಇಂತು
ಗುರು-ಲಿಂಗ-ಜಂಗಮವ ತನ್ನೊಳು
ಅರಗಿಸಕೊಳ್ಳಬಲ್ಲಾತನೆ ಲಿಂಗಾಯ್ತ ಕಾಣಾ #ಮತ್ತಿತಾಳಯ್ಯ