ಶನಿವಾರ, ಸೆಪ್ಟೆಂಬರ್ 15, 2012

ಆಡುನುಡಿಯ ಬೇರ್ಮೆಗಳು

ಈ ನಂಜನಗೂಡು, ಗುಂಡ್ಲುಪೇಟೆ, ಚಾಮರಾಜನಗರ, ಮಳವಳ್ಳಿ, ಮದ್ದೂರು ತಾಲ್ಲೂಕಿನ ಹಳ್ಳಿಗಳಲ್ಲಿ ಪದದ ಕೊನೆಯಲ್ಲಿ ಬರುವ "ಳ’ ಕಾರ ಬಿದ್ದು ಹೋಗಿದೆ.

ತಿಂಗಳು => ತಿಂಗ ( ಇತ್ತೀಚೆಗೆ ಕಂಡುಕೊಂಡಿದ್ದು ಇದೇ ರೀತಿ ದೂರದ ’ಕೊಡಗು ನುಡಿಯಲ್ಲೂ ತಿಂಗ ಅನ್ನುತ್ತಾರೆ ಅಂತ DED ನೋಡಿದ ಮೇಲೆ ತಿಳಿಯಿತು - Koḍ. tiŋga month.)

ಅವಳು => ಅವ ( ಹಾಗಾಗಿ ಅವನು ಎಂಬುದು ’ಅಂವ’/ಅಮ ಆಗುತ್ತದೆ)
ಬಂದಳು => ಬಂದ ( ಹಾಗಾಗಿ ಬಂದನು ಎಂಬುದು ಬಂದಂ, ಇಲ್ಲಿ ’ದಂ’ ಒಂದು ದ+ವಿಚಿತ್ರ ಮೂಗುಲಿ)
ಮಗಳು => ಮಗ ( ಹಾಗಾಗಿ ಮಗ ಎಂಬುದು ಮಗಂ, ಇಲ್ಲಿ ’ಗಂ’ ಎಂಬುದು ಗ+ವಿಚಿತ್ರ ಮೂಗುಲಿ)
ಹೋದಳು => ವಾದ ( ಹಾಗಾಗಿ ಹೋದನು ಎಂಬುದು ವಾದಂ, ಇಲ್ಲಿ ’ದಂ’ ಎಂಬುದು ದ+ವಿಚಿತ್ರ ಮೂಗುಲಿ)

ಆದರೆ ಇದು ಕೆಲವು ಕಡೆ ಆಗಿಲ್ಲ. ಅಂದರೆ ’ಳ’ಕಾರದ ಮುಂಚೆ ’ರ’ಕಾರ ಬಂದಿದ್ದರೆ ಅಲ್ಲಿ ’ರ’ಕಾರವು ಬಿದ್ದು ಹೋಗಿ ಇಮ್ಮಡಿ "ಳ"ಕಾರವಾಗಿದೆ

ಹೊರಳು => ವೊಳ್ಳು/ಒಳ್ಳು ( ಹೊರಳು ನಾಮಪದ (<ದೇ. ಪೊರಳು) ತಿರುವು, ಬಾಗು ಬದಲಾವಣೆ ಒಂದು ಬಗೆಯ ತಿರುಗುವ ಯಂತ್ರ)
ನೆರಳು => ನೆಳ್ಳು
ಕರಳು => ಕಳ್ಳು
ಉರುಳು => ಉಳ್ಳು
ತರಳು => ತಳ್ಳು
ಅರಳು => ಅಳ್ಳು/ಅಳ್
ಬೆರಳು => ಬೆಳ್ಳು

4 ಕಾಮೆಂಟ್‌ಗಳು:

Kiran Batni ಹೇಳಿದರು...

ನೆರಳು = ನೆಳಲು ಮುಂತಾಗಿ ಬರವಣಿಗೆಯಲ್ಲೂ ಇದೆ.

kalsakri ಹೇಳಿದರು...

ಭರತರೆ
." ’ಳ’ಕಾರದ ಮುಂಚೆ ’ರ’ಕಾರ ಬಂದಿದ್ದರೆ ಅಲ್ಲಿ ’ರ’ಕಾರವು ಬಿದ್ದು ಹೋಗಿ ಇಮ್ಮಡಿ "ಳ"ಕಾರವಾಗಿದೆ

ಹೊರಳು => ವೊಳ್ಳು/ಒಳ್ಳು ( ಹೊರಳು ನಾಮಪದ ( ನೆಳ್ಳು
ಕರಳು => ಕಳ್ಳು
ಉರುಳು => ಉಳ್ಳು
ತರಳು => ತಳ್ಳು
ಅರಳು => ಅಳ್ಳು/ಅಳ್
ಬೆರಳು => ಬೆಳ್ಳು"

ಇದು ಕೇವಲ"ಈ ನಂಜನಗೂಡು, ಗುಂಡ್ಲುಪೇಟೆ, ಚಾಮರಾಜನಗರ, ಮಳವಳ್ಳಿ, ಮದ್ದೂರು ತಾಲ್ಲೂಕಿನ ಹಳ್ಳಿಗಳಲ್ಲಿ" ಅಲ್ಲ , ಬಹುಶಃ ಎಲ್ಲೆಡೆ ಇದ್ದೀತು . ಧಾರವಾಡದ ಸುತ್ತ ಮುತ್ತಲಂತೂ ಹೀಗೆ ಇದೆ.

Unknown ಹೇಳಿದರು...

kalsakri

ನಿಮ್ಮ ಮಾಹಿತಿಗೆ ನನ್ನಿ

ಬರತ್

ನಚಿಕೇತ ಹೇಳಿದರು...

ಮಾಹಿತಿ ಉಪಯುಕ್ತವಾಗಿದೆ.. ಮೆಚ್ಚಿದ್ದೀನಿ.