ಶನಿವಾರ, ಏಪ್ರಿಲ್ 14, 2012

'ದಶಮುಕ’ ಚೆನ್ನಾಗಿದೆ


ಇವತ್ ’ದಶಮುಕ’ ಸಿನಿಮಾ ನೋಡಿದೆ. ಸಿನಿಮಾ ತುಂಬ ಚೆನ್ನಾಗಿದೆ.



ಏನ್ ಚೆನ್ನಾಗಿದೆ:-



೧. ಕತೆ , ಅನಂತನಾಗ್ ಮತ್ತು ಅವಿನಾಶ್ ಅವರ ನಟನೆ



೨. ರವಿಚಂದ್ರನ್ ತಾವು ತೆಗೆದುಕೊಂಡಿರುವ ಪಾತ್ರದಿಂದ ನಿಮಗೆ ಅಚ್ಚರಿ ಮೂಡಿಸುತ್ತಾರೆ.



೩. ಅನಂತ್ ನಾಗ್- ಅಚ್ಯುತ್ ಅವರು ಅಲ್ಲಲ್ಲ್ ಕಚಗುಳಿ ಇಡುತ್ತಾರೆ....



೪. ಚೇತನ್ ಮತ್ತು ಅವರ ಒಡನಟಿ ಅಲ್ಲಲ್ಲಿ ಮನಕ್ಕೆ ತಂಪನ್ನೀಯುತ್ತಾರೆ.



೫. ಮಾತುಗಳು(ಸೂಳುನುಡಿ- dialogue) ಕಚಗುಳಿ ಕೊಡುವದಲ್ಲದೆ ಲಾಜಿಕ್ಕನ್ನು ಎತ್ತಿ ಹಿಡಿಯುತ್ತಾ ಹೋಗುತ್ತದೆ.



೬. ಎಲ್ಲರಿಗೂ ಅವರಿಗೆ ಒಗ್ಗುವ ಪಾತ್ರವನ್ನು ಕೊಡಲಾಗಿದೆ. ಹಾಗಾಗಿ ಸೀನುಗಳು ಸರಾಗವಾಗಿ ಸಾಗುತ್ತವೆ.



೭. ಅಶ್ಟೊಂದು ಪಾತ್ರಗಳನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ ತೂಗಿಸಿಕೊಂಡು ಹೋಗುವುದು ಸುಲಬವಲ್ಲ.. ಹಾಗಾಗಿ ನಿರ್ದೇಶಕರು ಒಳ್ಳೆ ಕೆಲಸ ಮಾಡಿದ್ದಾರೆ ಅಂತ ದಾರಾಳ್ವಾಗಿ ಹೇಳಬಹುದು.



೮. ಕೊನೆಯಲ್ಲಿ ’ಕನ್ನಡ ನುಡಿ’ಯ ಬಗೆಗಿನ ಕಾಳಜಿ ತೋರುವ ಸಿನಿಮಾ ಹೇಗೆ ಕತೆಯನ್ನು ಕನ್ನಡತನಕ್ಕೆ ಜಾಣತನದಿಂದ ಒಗ್ಗಿಸಿದ್ದಾರೆ ಎಂಬುದು ಅರಿವಾದಾಗ ನಿಮಗೆ ಕುಶಿಯಾಗುತ್ತದೆ.



ಕೊನೆಯದಾಗಿ. ಹೇಗೆ ನಾವು ಯಾವುದೇ ವಿಶ್ಯವನ್ನು ನಮ್ಮ ಅನುಬವಗಳಿಂದ ಹೊರತಾಗಿ ನೋಡಬೇಕು ಮತ್ತು ಹಾಗೆ ನೋಡಿದಾಗ ಆ ವಿಶ್ಯಕ್ಕೆ ನ್ಯಾಯ ಒದಗಿಸಬಹುದು ಎಂಬುದು ಈ ಸಿನಿಮಾ ನೋಡಿ ಕಲಿಯಬಹುದು.ತುಂಬಾ ಚೆನ್ನಾಗಿದೆ...ಇದಕ್ಕೆ ಹಲಚುಕ್ಕಿಗಳು****** ..ನೋಡಲೇಬೇಕಾದ ಸಿನಿಮಾ. dont miss it

1 ಕಾಮೆಂಟ್‌:

ಪ್ರಶಾಂತ ಸೊರಟೂರ ಹೇಳಿದರು...

ನಿನ್ನೆ ಚಿತ್ರ ನೋಡಿದ ಬಳಿಕ ನನಗನಿಸಿದ್ದು:
೧) ನೀವು ಹೇಳಿದ ಹಾಗೆ ಒಂದು ಕೋಣೆಯಲ್ಲಿ ಇಡೀ ಚಿತ್ರವನ್ನು ಹಿಡಿದಿಟ್ಟಿದ್ದು, ಕನ್ನಡಕ್ಕೆ ಹೊಸದೆನಿಸುವ ಪ್ರಯತ್ನ.
ಹೀಗೆ ನಿಲ್ಲಿಸಲು ಎದೆಗಾರಿಕೆ ಬೇಕು, ಹೊಸದನ್ನು ಮಾಡುವ ಹುರುಪಿರಬೇಕು, ಅದು ಈ ಚಿತ್ರ ತಂಡಕ್ಕೆ ಇದ್ದಂತಿದೆ.
೨) ಕತೆಯಲ್ಲಿ ಇನ್ನಷ್ಟು ಗಟ್ಟಿತನವಿರಬೇಕಿತ್ತು. ಹಲವು ಕಡೆ ಕತೆ/ಕೊಡುವ ಕಾರಣಗಳು/ಮಾತುಗಳು ಹಿಡಿತ ತಪ್ಪಿದ ಹಾಗೆ ಕಂಡಿತು.
೩) ಚೇತನ್ ಎಂಬ ಕಸುವುಳ್ಳ ನಟನನ್ನು ಕನ್ನಡ ಚಿತ್ರರಂಗ ಇನ್ನೂ ಸರಿಯಾಗಿ ಬಳಸಿಕೊಂಡಿಲ್ಲ. ಈ ಚಿತ್ರ ಇದಕ್ಕೆ ತುಸು ಅವಕಾಶ ಕೊಟ್ಟಿದೆ.
೪) ರವಿಚಂದ್ರನ್, ಮಾಳವಿಕ ನಟನೆ ನನಗೆ ಎಲ್ಲರಿಗಿಂತ ಹಿಡಿಸಿತು.
... ಕನ್ನಡದಲ್ಲಿ ಇಂತಹ ಹೊಸತನದ ಚಿತ್ರಗಳು ಹೆಚ್ಚಾಗಲಿ. ಕನ್ನಡೇತರ ಚಿತ್ರಗಳನ್ನು ಕನ್ನಡವಾಗಿಸುವುದಕ್ಕಿಂತ ತಾವೇ ಕತೆ ಹೆಣೆದರೆ, ಕನ್ನಡಿಗರು ಇನ್ನಷ್ಟು ಮೆಚ್ಚಿಯಾರು.

ಒಳಮಾತು:
ಕತೆಯೊಡತಿಯನ್ನು "ಕನ್ನಡ"ತಿಯಾಗಿಸಿ, ಕನ್ನಡವು ಈಗ ಕುಂಟುತ್ತಿದೆ ಎಂದು ಗಮನಸೆಳೆದದಕ್ಕೆ ಹಲವು ಮೆಚ್ಚುಗೆಗಳು :-)
ಆದರೆ ಚಿತ್ರ ಮೊದಲ್ಗೊಳ್ಳುವಾಗ ಮತ್ತು ಕೊನೆಗೊಳ್ಳುವಾಗ ತೋರಿಸಿದ ಹೆಸರುಗಳು ಬರೀ ಇಂಗ್ಲೀಶನಲ್ಲಿದ್ದವು!
"ದಶಮುಖ"ರು ಕತೆಯೊಡೆಯನ ಕನ್ನಡ ಒಲವನ್ನು ಎತ್ತಿ ತೋರಿಸಿದ ಬಳಿಕ "ನಿರಪರಾಧಿ" ಎಂದು ತೀರ್ಪು ಕೊಟ್ಟರೂ, ಶ್ರೀ ರವಿ ಶ್ರೀವತ್ಸ್ ಅವರ ಹೆಸರು ಕೊನೆಯಲ್ಲಿ ಬರೀ ಇಂಗ್ಲೀಶನಲ್ಲೇ ಇದ್ದುದು,ನಾಯಕ ಇನ್ನೂ "ಅಪರಾಧಿ" ಎನ್ನುವಂತಿತ್ತು, ಕನ್ನಡದ ಬಗ್ಗೆ ಒಲವು ಇಟ್ಟುಕೊಂಡಿದ್ದಕ್ಕೆ.