ಮೊನ್ನೆ ಕನ್ನಡ ಪ್ರಭದಲ್ಲಿ ಚಂದ್ರಶೇಖರ ಕಂಬಾರರ ಬಗೆಗೆ ಮೂಡಿ ಬಂದ ವರದಿಯೊಂದರ ಬಗ್ಗೆ ನನ್ನ ಪ್ರತಿಕ್ರಿಯೆ:-
"ಬಾರತೀಯರು, ರಾಶ್ಟ್ರೀ ಯ ವಿಷಯಗಳು ಬಂದಾಗ ಹಿಂದಿ ಬಳಸಬೇಕು ಎಂಬುದು"-
ಹೀಗೆ ಹೇಳುವುದರಿಂದ ರಾಷ್ಟ್ರೀಯ ವಿಷಯಗಳನ್ನು ಕನ್ನಡದಲ್ಲಿ ಹೇಳಲಾಗದು ಎಂಬ ಕೀಳರಿಮೆಯನ್ನು ನಾವೇ ಕನ್ನಡದಲ್ಲಿ ಬಿತ್ತಿದಂತಾಗುವುದಿಲ್ಲವೆ? ಭಾರತದಲ್ಲಿದ್ದು, ಕನ್ನಡಿರಾಗಿದ್ದುಕೊಂಡು ಮತ್ತು ಕನ್ನಡದ ಹಿರಿಮೆಯನ್ನು ಬಲ್ಲ ಕನ್ನಡಿಗರು ಹಿಂದಿಯಲ್ಲಿ ಸಂವಹನ ಮಾಡುವುದು ಇಂಗ್ಲಿಶಿನಲ್ಲಿ ಸಂವಹನ ಮಾಡಿದಶ್ಟೆ ಕ್ರುತ್ರಿಮ ಮತ್ತು ಕೀಳ್ತನವಾಗುವುದಿಲ್ಲವೆ?. ಯಾವ ತರದಲ್ಲಿ ನೋಡಿದರೂ ಕನ್ನಡಕ್ಕಿಂತ ಹಿಂದಿ ಮಿಗಿಲಲ್ಲ. ಯಾವುದೇ ವಿಶಯವಲ್ಲಾಗಲಿ ಇಂತಹ ನುಡಿಯನ್ನು ಬಳಸಬೇಕೆಂದು ಹೇಳುವುದು ಮಂದಿಯಾಳ್ವಿಕೆಯ ಬಯಕೆಗಳಿಗೆ ವಿರೋಧವಾಗಿದೆ.
ಇನ್ನು ಶ್ರೀ ಸಿದ್ದಲಿಂಗ ಪಟ್ಟಣಶೆಟ್ಟಿಯವರು ಮುಂದೆ ಹೋಗಿ ಕನ್ನಡ ಸಾಹಿತ್ಯದ ಪ್ರಚಾರಕ್ಕೆ ಕನ್ನಡಿಗರು ಹಿಂದಿಯನ್ನು ಸಂವಹನ ಭಾಷೆಯಾಗಿ ಸ್ವೀಕರಿಸಲೇಬೆಕು ಎಂದು ಹೇಳಿದ್ದಾರೆ. ಹಿಂದಿಗೂ ಹಲವು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿವೆ. ಹಿಂದಿ ಸಾಹಿತ್ಯದ ಪ್ರಚಾರಕ್ಕಾಗಿ ಹಿಂದಿಗರು ಕನ್ನಡ ಕಲಿಯುತ್ತಿದಾರೆಯೆ? ನಾವೇ ಏಕೆ ಹಿಂದಿ ಕಲಿಯಬೇಕು? ಇಶ್ಟಕ್ಕೂ ಇಂತಹ ಸಾಹಿತ್ಯ ಪ್ರಚಾರಕ್ಕಾಗಿ ಹಿಂದಿ ಕಲಿಯಬೇಕಿರುವ ಕನ್ನಡಿಗರ ಎಣಿಕೆ ಎಶ್ಟಿರಬೇಕು? ತೀರ ಕಡಿಮೆ ಜನಕ್ಕೆ ಬೇಕಾದ ಈ ಅವಶ್ಯಕತೆಗೆ ಇಡೀ ಕನ್ನಡಿಗರೇ ಏಕೆ ಹಿಂದಿಯನ್ನು ಸ್ವೀಕರಿಸಬೇಕು? ಒಂದು ವೇಳೆ ಹೀಗೆ ಸ್ವೀಕರಿಸಿದರೆ ಕನ್ನಡಿಗರಿಗೆ ಮತ್ತು ಕನ್ನಡಕ್ಕೆ ಇದರಿಂದ ಆಗುವ ತೊಂದರೆಗಳ ಬಗ್ಗೆ ಇವರು ಚಿಂತಿಸಿದ್ದಾರೆಯೆ?
ಈ ಎಲ್ಲ ಕೇಳ್ವಿಗಳಿಗೆ ಉತ್ತರ ಹುಡುಕಲು ಹೊರಟಾಗ ಸಿಗುವುದು ಈ ಉತ್ತರಗಳು
* ೦.೦೧% ಮಂದಿಗೆ ಬೇಕಾದ ಈ ಸಾಹಿತ್ಯದ ಅನುವಾದದ ಕೆಲಸಕ್ಕೆ ಎಲ್ಲ ಕನ್ನಡಿಗರು ಹಿಂದಿಯನ್ನು ಸಂವಹನ ಬಾಶೆಯಾಗಿ ಒಪ್ಪುವುದು ಎಂದೂ ವೈಗ್ನಾಕವಲ್ಲ.
* ಈ ರೀತಿ ಸಂವಹನ ಬಾಶೆಯಾಗಿ ಹಿಂದಿ ನುಸುಳಿದರೆ ಇದರಿಂದ ಕನ್ನಡಕ್ಕೆ, ಕನ್ನಡಿಗರಿಗೆ ಮುಂದೆ ಅಪಾಯ ಕಾದಿದೆ. ಯಾಕಂದರೆ ಹಿಂದಿಯನ್ನು ಕನ್ನಡಿಗರು ಒಪ್ಪಿದರೆ ಇದು ತಂಡತಂಡವಾಗಿ ಹಿಂದಿಗರ ವಲಸೆಗೆ ಕಾರಣವಾಗಿ
ಕನ್ನಡಿಗರ ತಮ್ಮ ನಾಡಿನಲ್ಲೇ ತಬ್ಬಲಿಗಳಾಗಬಹುದು.
* ಈವತ್ತಿಗೂ ಉತ್ತರಬಾರತದಲ್ಲಿ ದಕ್ಶಿಣ ಬಾಶೆಗಳನ್ನು ಕಲಿಸಲಾಗುತ್ತಿಲ್ಲ. ಎಶ್ಟೊ ಉತ್ತರ ಬಾರತೀಯರಿಗೆ ದಕ್ಶಿಣ ಬಾಶೆಗಳ ಪರಿಚಯವೇ ಇಲ್ಲ. ನಾವೇ(ಕನ್ನಡಿಗರೇ) ಯಾಕೆ ಮೇಲೆ ಬಿದ್ದು ಹಿಂದಿ ಕಲಿತು ಅವರಿಗೆ (ಹಿಂದಿಗರಿಗೆ) ಅನುಕೂಲ ಮಾಡಿಕೊಡಬೇಕು.
* ಹಿಂದಿಯನ್ನು ಸಂವಹನ ಬಾಶೆಯಾಗಿ ಒಪ್ಪಿದರೆ ಕರ್ನಾಟಕದಲ್ಲಿ ಹಿಂದಿಗರು ಬಂದು "ನಿಮಗೆ ಹೇಗಿದ್ದರೂ ಹಿಂದಿ ಗೊತ್ತಿದೆಯಲ್ಲ, ಕರ್ನಾಟಕದಲ್ಲೂ ಹಿಂದಿಯಲ್ಲೇ ಮಾತನಾಡಿ" ಅಂದರೆ ಮುಗೀತು. ಅಲ್ಲಿಗೆ ಕನ್ನಡ, ಕರ್ನಾಟಕ ಅಳಿದು ಹಿಂದಿ ನಾಡಾಗುವುದರಲ್ಲಿ ಎರಡು ಮಾತಿಲ್ಲ.
ಕನ್ನಡಿಗರೆಲ್ಲರೂ ಹಿಂದಿಯನ್ನು(ಸಂವಹನಕ್ಕೆ)ಒಪ್ಪಬೇಕೆನ್ನುವುದು ಕನ್ನಡ ವಿರೋದಿ ನಿಲುವಲ್ಲದೆ ಮಂದಿಯಾಳ್ವಿಕೆಯ ವಿರೋಧಿ ನಿಲುವು ಕೂಡ ಎಂಬುದನ್ನು ಮಹನೀಯರು ಕನ್ನಡಿಗರು ಇನ್ನಾದರೂ ಅರಿಯಲಿ.
2 ಕಾಮೆಂಟ್ಗಳು:
ಚಂದ್ರಶೇಖರ್ ಕಂಬಾರ್ ಅವರನ್ನು ಆಂದ್ರಪ್ರದೇಶದ ಯಾವುದಾದರೂ ದೊಡ್ಡ ಸಂಘಟನೆಗಳು ಅಥವಾ ಸರ್ಕಾರಿ ಅಂಗ ಸಂಸ್ಥೆಗಳು ಕರೆದು "ಶಾಲೂ ಒದ್ದಿಸಿ ಗೌರವಿಸಿ ಯಾವುದಾದರು ಒಂದು ಹೆಸರಿನ ಪ್ರಶಸ್ತಿ ಕೊಟ್ಟು" ಫೋಟೋ ತೆಗೆಸಿ ಕೈಗೆ ಮೈಕು ಕೊಟ್ಟರೆ ಅವರು ಏನು ಹೇಳಬಹುದೆಂದು ಕೇಳಿದಾಗ ನನ್ನ ಗೆಳೆಯನೊಬ್ಬ ಕಂಬಾರರನ್ನು ಅನುಕರಿಸುತ್ತಾ ಹೇಳಿದ :-
"ಎಲ್ಲ ಕನ್ನಡಿಗರು ಬ್ರಾತೃತ್ವ ಬೆಳೆಸಿಕೊಳ್ಳುವ ಸಲುವಾಗಿ ತೆಲುಗು ಮಾತನಾಡುವುದನ್ನು ಕಲಿತುಕೊಳ್ಳಬೇಕು. ತೆಲುಗು ಕೂಡ ಕನ್ನಡದಂತೆ ಇರುವುದರಿಂದ ಕಲಿಯಲು ಬಹಳ ಸುಲಭ. ಆಗ ಅಕ್ಕ ಪಕ್ಕದ ಮನೆಯವರ ಜೊತೆ ಬೆರೆತು ಮಾತಾಡಬಹುದು, ಎರಡು ರಾಜ್ಯಗಳು ಎರಡು ಮನೆಗಳಂತೆ, ಎರಡೂ ಕಡೆಯ ಜನರು ಅಣ್ಣ ತಮ್ಮಂದಿರಂತೆ ಜೀವನ ಮಾಡಬಹುದು, ಜೊತೆಗೆ ನಮ್ಮ ಸಾಹಿತ್ಯವನ್ನು ಅವರಿಗೆ ತೆಲುಗಿನಲ್ಲಿ ಓದಿ ಹೇಳುವ ಮೂಲಕ ಕನ್ನಡ ಸಾಹಿತ್ಯವನ್ನು ಬೆಳೆಸಬಹುದು. ದಯವಿಟ್ಟು ತೆಲುಗು ಕಲಿತು ಪಕ್ಕದ ಮನೆಯವರ ಜೊತೆ ಬೆರೆಯಿರಿ. ಜೈ ಕರ್ನಾಟಕ ಮಾತೆ."
ಇವರನ್ನ ನೋಡ್ತಾ ಇದ್ರೆ, ತೇಜಸ್ವಿಯ ನೆನಪು ಎಷ್ಟೊಂದು ಬರುತ್ತೆ, ಯಾವ ಪ್ರಶಸ್ತಿ, ಸನ್ಮಾನಕ್ಕೂ ಹೋಗದೆ, ಯಾರ ಮುಲಾಜಿಗೂ ಒಳಗಾಗದೆ ಕನ್ನಡದ ಬಗ್ಗೆ ತುಂಬಾ practical ಆಗಿ ಯೋಚಿಸಿ ಅದರಂತೆ ಬದುಕಿದರು. ದಶಕಗಳ ಹಿಂದೇನೆ ಕನ್ನಡ ಸಾಫ್ಟ್ವೇರ್ ಮಾಡಿ ನಾವು ಮುಂದಕ್ಕೆ ಹೋಗ್ಬೇಕು ಇಲ್ಲಾಂದ್ರೆ ಕನ್ನಡ ಉಳಿಯೋದಿಲ್ಲ, ನಾವು ಉದ್ದಾರ ಆಗಲ್ಲ ಅಂತ ಎಚ್ಚರಿಸಿದರು.
ಒಂದೈದು ನಿಮಿಷ ಕೂತ್ಕೊಂಡು ಯೋಚಿಸಿದರೆ ನಮಗೇ ಅರ್ಥ ಅಗೋ ಸರಳ ವಿಷಯ...ಜ್ನಾನಪೀಠದಲ್ಲಿ ಕೂತಿರೋರಿಗೆ ಅರ್ಥ ಆಗದೆ ಹೋಯ್ತಾ?
-ಗಿರೀಶ್ ಕಾರ್ಗದ್ದೆ.
ಕಾಮೆಂಟ್ ಪೋಸ್ಟ್ ಮಾಡಿ