ಶನಿವಾರ, ಆಗಸ್ಟ್ 23, 2008

'ಮಾತಿನ ಒಳಗುಟ್ಟು' ಹೊತ್ತಿಗೆ ಬಗ್ಗೆ

ಹೊತ್ತಿಗೆ : ಮಾತಿನ ಒಳಗುಟ್ಟು
ಬರೆದವರು : ಡಿ.ಎನ್.ಶಂಕರಬಟ್
ಹೊರಪಡಿಸುಗರು: ಬಾಶಾ ಪ್ರಕಾಶನ, ಹೆಗ್ಗೋಡು, ಸಾಗರ
ಇತ್ತೀಚೆಗೆ 'ಮಾತಿನ ಒಳಗುಟ್ಟು' ಹೊತ್ತಿಗೆ ಎಡಬಿಡದೆ ಓದಿ ಮುಗಿಸಿದೆ. ಓದುವಾಗ ಎಲ್ಲೂ ಬಿಟ್ಟುವೋಗಿದಂತೆ ಅನ್ನಿಸಲಿಲ್ಲ. ಒಂದೇ ಉಸಿರಿಗೆ ಓದಿ ಮುಗಿಸಿದೆ. ಈವೊತ್ತಿಗೆಯಲ್ಲಿ ಹಲವು ತಲೆಮೆಯ ವಿಶಯಗಳ ಬಗ್ಗೆ ಅರಿಮೆಯು ಓದುಗನಿಗೆ ಸಿಗುತ್ತದೆ. ಮಾತಿನ ಒಳಗುಟ್ಟನ್ನು ಅರಿತುಕೊಳ್ಳಲು ನಾವು ಎಂಜಿನಿಯರಿಂಗ್ನಲ್ಲಿ ಓದಿರುವುದಕ್ಕಿಂತ ಹೆಚ್ಚು ಓದಿ ಹಲವು ವಿಶಯಗಳ ಬಗ್ಗೆ ಆರಯ್ಯು ಮಾಡಬೇಕಾಗುತ್ತದೆ.
ಶಂಕರಬಟ್ಟರು ಈವೊತ್ತಿಗೆಯಲ್ಲಿ ಮಾತನಾಡಿರುವ ಅಂಶಗಳು:
ಮಾತಿನ ಕಸುವು, ಮಿದುಳಿನ ಮಾತು, ಮಕ್ಕಳು ಮಾತನಾಡುವ/ಕಲಿಯುವ ಬಗೆ, ಮಾತಿನ ಬಗ್ಗೆ ತಪ್ಪು ಅನಿಸಿಕೆಗಳು. ಮಾತು ಹೊರಡುವ ಬಗೆ, ಸನ್ನೆ ನುಡಿಗಳು ಹುಟ್ಟುವ ಬಗೆ. ಮಾತು ಜಾಗಕ್ಕೆ ತಕ್ಕಂತೆ ಬದಲಾಗುವ ತೆರ.

ಇದರಲ್ಲಿ ನಂಗೆ ಇಸ್ಟವಾದುದು ಮಕ್ಕಳು ಮಾತನಾಡುವ/ಕಲಿಯುವ ಬಗೆ ಮತ್ತು ಮಿದುಳಿನ ಮಾತು.
ಮಕ್ಕಳು ತಮ್ಮ ಸುತ್ತಮುತ್ತ ಆಡುವ ನುಡಿಯನ್ನ(ಮೊದಲ ನುಡಿ) ಯಾರು ಹೇಳಿ ಕೊಡದಿದ್ದರೂ ತನ್ನಿಂತಾನೆ ಕಲಿಯುವ ಬಗೆ ದಿಟವಾಗಲು ಅಚ್ಚರಿ. ಮಕ್ಕಳು ದಿಟವಾಗಲು ೧೮ ತಿಂಗಳು ತಾಯಿಯ ಬಸಿರಿನಲ್ಲಿರಬೇಕಂತೆ. ಆದರೆ ಮನುಸ್ಯರ ಮಿದುಳು ಬೆಳೆಯುವಿಕೆಯಿಂದ ಅದು ೯ ತಿಂಗಳಿಗೆ ಆಚೆ ಬರಬೇಕಾಗುತ್ತದೆ. ಮನುಸ್ಯನಿಗೂ ಪ್ರಾಣಿಗಳಿಗೂ ಇರುವ ಮುಕ್ಯ ಬೇರೆತನ ಅಂದರೆ ನಮ್ಮ ಮಿದುಳು ಹೆಚ್ಚು ಬಲಿತಿರುವುದು/ಬೆಳೆದಿರುವುದು. ಈ ಮಕ್ಕಳಿಗೆ(ಕಿವುಡ ಮಕ್ಕಳನ್ನು ಬಿಟ್ಟು) ಯಾರು ಏನು ಹೇಳಿಕೊಟ್ಟರೂ ಅದು ಅವರ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲವಂತೆ. ಅವರು ತಮ್ಮ ಪಾಡಿಗೆ ಒಂದೊಂದೆ ಮಾತಿನ ಮೆಟ್ಟಿಲುಗಳನ್ನ ಏರುತ್ತಾವೋಗುತ್ತಾರಂತೆ. ಆದರೆ ಈ 'ಪೂರ್ತಿ ಕಿವುಡ ಮಕ್ಕಳು' ಬೇರೆ ಮಕ್ಕಳಂತೆ ಮಾತು ಕಲಿಯಲಾರವು ಯಾಕಂದ್ರೆ ಅವಕ್ಕೆ ಯಾವ ನುಡಿಯು ಕಿವಿಗೆ ಬೀಳುವುದಿಲ್ಲ. ಆದರೆ ಅರೆಕಿವುಡ ಮಕ್ಕಳಿಗೆ ಮಸಿನ್ ಹಾಕಿದ್ರೆ ಆವು ಇತರೆ ಮಕ್ಕಳಂತೆ ಮಾತನ್ನ ೨-೩ ವರುಸದಲ್ಲಿ ಕಲಿಯಬಲ್ಲವು. ಆದರೆ ಪೂರ್ತಿ ಕಿವುಡ ಮಕ್ಕಳಿಗೆ 'ಸನ್ನೆ ನುಡಿ'ಯೇ ಗತಿ. ಈ ಸನ್ನೆ ನುಡಿ ಬೆಳೆಯುವುದು ಕೂಡ ಆ ಕಿವುಡು ಮಗು ಇತರೆ ಕಿವುಡು ಮಕ್ಕಳೊಂದಿಗೆ ಬೆರೆತಾಗ ಮಾತ್ರ. ಇಲ್ಲಂದ್ರೆ ಅವಕ್ಕೆ ಬದುಕಿನುದ್ದಕ್ಕೂ ಮಾತು ಹೊರಡಿಸಲಾಗುವುದಿಲ್ಲವಂತೆ. ಈ ಕಿವುಡು 'ಸನ್ನೆ ನುಡಿ' ಹುಟ್ಟುವುದು ಕೂಡ ಒಂದು ಅಚ್ಚರಿಯೇ. ಅಮೇಲೆ ಅಮೆರಿಕಾದಲ್ಲೆ ಒಂದು ಸನ್ನೆ ನುಡಿಯಾದರೆ ಆಪ್ರಿಕಾದಲ್ಲೆ ಒಂದು ಸನ್ನೆನುಡಿಯಿದೆಯಂತೆ.
.....ಮುಂದುವರೆಯುವುದು

ಕಾಮೆಂಟ್‌ಗಳಿಲ್ಲ: