ಸಾಮಾನ್ಯವಾಗಿ ಕನ್ನಡದ ಒಟ್ಟುಗಳು ಬೇರೆ ಪದಗಳೊಂದಿಗೆ ಹೇಗೆ ಸೇರಿಕೆ ಆಗುತ್ತದೆ ಎಂಬುದನ್ನು ವಿವರಿಸಲಾಗುತ್ತದೆ. ಅಂದರೆ ಆ ಒಟ್ಟುಗಳು ಈಗಾಗಲೆ ಹೆಸರು ಪದದೊಂದಿಗೋ, ಎಸಕಪದದೊಂದಿಗೋ ಸೇರುವ ಒಲವುಗಳ ಬಗ್ಗೆ ಹೇಳಲಾಗುತ್ತದೆ. ಹೀಗೆ ಸೊಲ್ಲರಿಮೆಯ ಮೂಲಕ ಬೇರೆ ಪದಗಳೊಂದಿಗೆ ಒಟ್ಟುಗಳ ಸೇರಿಕೆಯನ್ನು ವಿವರಿಸಲಾಗುತ್ತದೆ. ಆದರೆ ಈ ವಿವರಣೆ ಹೊಸ ಪದಗಳನ್ನು ಕಟ್ಟುವಾಗ ಯಾವ ಯಾವ ಕುಳ್ಳಿಹ(ಸಂದರ್ಬ)ಗಳಲ್ಲಿ ಯಾವ ಯಾವ ಒಟ್ಟನ್ನು ಬಳಸಬೇಕು ಎಂಬುದರ ಬಗೆಗಿರುವ ಗೊಂದಲವನ್ನು ಕಡಿಮೆ ಮಾಡುವುದಿಲ್ಲ. ಹಾಗಾಗಿ ಹೊಸ ಪದಗಳನ್ನು ಕಟ್ಟುವ ಕೆಲಸ ತೊಡಕಾಗಿಯೇ ಉಳಿಯುತ್ತದೆ.
ಹಾಗಾಗಿ ಹೊಸ ಪದಗಳನ್ನು ಕಟ್ಟುವಾಗ ಒಟ್ಟುಗಳ ಬಳಕೆಯಲ್ಲಿನ ಗೊಂದಲವನ್ನು ಇಲ್ಲದಂತೆ ಮಾಡಲು ಹುರುಳರಿಮೆಯ ಮೊರೆ ಹೋದರೆ ಕಡಿಮೆ ಮಾಡಬಹುದೆಂದು ತೋರುತ್ತದೆ. ಇಲ್ಲಿ ಹುರುಳರಿಮೆಯ ಜೊತೆ ಜೊತೆಗೆ ಕಟ್ಟುತ್ತಿರುವ ಪದದ ಬಳಕೆಯ ಕುಳ್ಳಿಹ(ಸಂದರ್ಬ)ವನ್ನು ಗಮನದಲ್ಲಿಟ್ಟುಕೊಂಡರೆ ಹೊಸದಾಗಿ ಕಟ್ಟುವ ಪದ ಹೆಚ್ಚು ಮಂದಿ ಬಳಸತಕ್ಕುದಾಗುತ್ತದೆ.
ಇಲ್ಲಿ ’ಗಾರ’ ಮತ್ತು ’ಇಗ’ ಎಂಬ ಒಟ್ಟುಗಳನ್ನು ಎತ್ತುಗೆಯಾಗಿ ಬಳಸಲಾಗಿದೆ. ಕನ್ನಡದಲ್ಲಿ ಈಗಾಗಲೆ ’ಗಾರ’ ಎಂಬ ಪದ ಹೇಗೆ ಬಳಕೆಯಲ್ಲಿದೆ ಮತ್ತು ಯಾವ ಯಾವ ಕುಳ್ಳಿಹಗಳಲ್ಲಿ ಬಳಸಲಾಗುತ್ತದೆ ಎಂಬುದನ್ನು ಗಮನಿಸಿ ಈ ತೀರ್ಮೆಗಳಿಗೆ ಬರಲಾಗಿದೆ.
ಹೆಸರು ಪದದೊಂದಿಗೆ 'ಗಾರ' ಎಂಬುದನ್ನು ಬಳಸಲು
೧. ಹೆಸರು ಪದಕ್ಕೆ ಸಂಬಂದಿಸಿದ ಎಸಕವನ್ನು ಮತ್ತೆ ಮತ್ತೆ ಮಾಡುತ್ತಿರಬೇಕು (ಮರುಕಳಿಕೆ-repeatability)
೨. ಹೆಸರು ಪದಕ್ಕೆ ಸಂಬಂದಿಸಿದ ಎಸಕದ ಪರಿಚೆ ಒಂದೇ ತರನಾಗಿರಬೇಕು ( ಒಮ್ಮಿಕೆ-consistency)
೩. ಎಸಕದಲ್ಲಿ ಪಳಗಿಕೆ ಹೊಂದಿರಬೇಕು (ಪಳಗಿಕೆ-experience)
೪. ಕೂಡಣದಲ್ಲಿ ಹೆಸರು ಪದಕ್ಕೆ ಸಂಬಂದಿಸಿದ ಎಸಕವು ಒಂದು ಕಸುಬು/ದುಡಿಮೆಯಾಗಿ ತನ್ನ ಇರ್ಕೆಯನ್ನು(ಸ್ತಾನವನ್ನು) ಪಡೆದಿರಬೇಕು.(ಕಸುಬು-proffession)
ಮೇಲಿನ ನಾಲ್ಕೂ ಬೊಟ್ಟುಗಳಲ್ಲಿ ಯಾವುದಾದರೊಂದು ಇಲ್ಲವೆ ಎಲ್ಲವೂ ಒಪ್ಪುವ ತರದಲ್ಲಿದ್ದಾಗ ’ಗಾರ’ಎಂಬ ಒಟ್ಟನ್ನು ಬಳಸಲು ಬರುತ್ತದೆ.
ಎತ್ತುಗೆಗೆ :-
೧. ಹೂಗಾರ, ಜಲಗಾರ, ಮಣೆಗಾರ(ಮಣಿಹಗಾರ),ಬಳೆಗಾರ - ಈ ಎತ್ತುಗೆಗಳಲ್ಲಿ ಮೇಲಿನ ನಾಲ್ಕೂ ಬೊಟ್ಟುಗಳು ಒಪ್ಪುತ್ತವೆ ಅಂದರೆ ಇಲ್ಲಿ ಹೂಗಾರಿಕೆ, ಜಲಗಾರಿಕೆ, ಮಣೆಗಾರಿಕೆ, ಬಳಗಾರಿಕೆ ಎಂಬುದು ಕೂಡಣದಲ್ಲಿ ಒಂದೊಂದು ಕಸುಬುಗಳಾಗಿ(ದುಡಿಮೆಗಳಾಗಿ) ತಮ್ಮ ಇರ್ಕೆಗಳನ್ನು ಪಡೆದಿವೆ.
೨. ಮಾತುಗಾರ, ಕೆಲಸಗಾರ, ಚಲಗಾರ - ಈ ಎತ್ತುಗೆಗಳಲ್ಲಿ ಮೊದಲ ಮೂರು ಬೊಟ್ಟುಗಳು ಒಪ್ಪುತ್ತವೆ ಆದರೆ ನಾಲ್ಕನೆಯದು ಒಪ್ಪುವುದಿಲ್ಲ ಯಾಕಂದರೆ ಮಾತುಗಾರಿಕೆ,ಕೆಲಸಗಾರಿಕೆ, ಚಲಗಾರಿಕೆ ಇವು ಒಂದೊಂದು ನಿರ್ದಿಶ್ಟ ಕಸುಬು(ದುಡಿಮೆ)ಗಳಾಗಿ ಇರ್ಕೆಗಳನ್ನು ಪಡೆದಿಲ್ಲ ಬದಲಾಗಿ ಯಾವುದೇ ಆಳಿನ ಪರಿಚೆಗಳನ್ನು(character) ಬಣ್ಣಿಸಲು ಈ ಪದಗಳನ್ನು ಬಳಸಲಾಗುತ್ತದೆ.
ಇದಕ್ಕೆ ಹೊರತಾಗಿ ಗಾಣಿಗ, ಲೆಕ್ಕಿಗ, ಉಪ್ಪಲಿಗ, 'ಬಡಿಗ'(>ಬಡಗಿ) ಎಂಬ ಕಸುಬುಗಳೂ ಇವೆ. ಕಸುಬುಗಳಿಗೂ ನಂಟಿರುವ ಪದಗಳಾದರೂ ’ಗಾರ’ ಎಂಬ ಒಟ್ಟನ್ನು ಬಳಸಲಾಗಿಲ್ಲ, ಬದಲಾಗಿ ’ಇಗ’ಎಂಬ ಪದವನ್ನು ಬಳಸಲಾಗಿದೆ.
ಈಗ ’ಇಗ’ ಎಂಬ ಒಟ್ಟಿನ ಬಳಕೆಯ ಎತ್ತುಗೆಗಳ ನೆರವಿನಿಂದ ಬಗ್ಗೆ ನೋಡೋಣ
ಅಡಿಗ (a man of seller's caste)
ಹಾವಾಡಿಗ (a man of snake catcher's caste)
ಕನ್ನಡಿಗ (a man of Kannada country)
ಗವರಿಗ (a man of the basket- and mat-maker caste)
ಸಾಲಿಗ (a weaver caste)
ಸೋಲಿಗ ( soliga tribe)
ಪರಳಿಗ ( paramour)
ಮಾವುಲಿಗ ( hunter tribe)
ಮಾದಿಗ ( cobbler, chuckler)
ಆಡಿಗ ( ಅಲೆಮಾರಿ, ನಟ)
ಈಡಿಗ ( man of the toddy-drawers caste)
ಅಂಬಿಗ ( man who rows a boat, boatman caste)
ಅಗಸಿಗ ( washerman caste)
ಅಳವಿಗ (friend)
ಒಕ್ಕಲಿಗ (husbandman, farmer)
ಕಬ್ಬಿಲಿಗ (boatman, fisherman)
ಕಾಡಿಗ (a troublesome man)
ಕೇಡಿಗ (one who ruins or is ruined)
ಕೊಬ್ಬಿಗ (a proud man)
ಚನ್ನಿಗ a handsome, fine man
ಸಾಲಿಗ a debtor, creditor
ತೋಟಿಗ (ತೋಟಗಾರ) a gardener
ನಾಡಿಗ (village superintendent in the service of a smārta guru)
ಪದುಳಿಗ ( a happy man)
ಹಾದರಿಗ (adulterer)
ಹೊರಬಿಗ (stranger, alien )
ಹೆಣ್ಣಿಗ (impotent man, coward)
ಮಬ್ಬಿಗ (a creature of darkness), Asura or Rākṣasa
ಮೊದಲಿಗ (a chief, headman)
ಬೇಂಟಿಗ( ಬೇಟೆಗಾರ) (hunter)
ಆದರೆ 'ಇಗ', ಎಂಬುದು ಹೆಸರು ಪದದೊಂದಿಗೆ ಎಸಕದ 'ಆಗು'ವಿಕೆಗೆ ಸಂಬಂದಿಸಿದೆ. ಇಲ್ಲಿ ಮತ್ತೆ ಮತ್ತೆ ಮಾಡುವಿಕೆಯು ಕಡ್ಡಾಯವಾಗಿ ಬೇಕಾಗಿಲ್ಲ. ಕನ್ನಡ+ಇಗ= ಕನ್ನಡಿಗ (ಇಲ್ಲಿ ಕನ್ನಡಿಗ ಎಂಬುವಲ್ಲಿ ಕನ್ನಡಿಗನಾಗಿ 'ಹುಟ್ಟು'ವ ಆಗುವಿಕೆ ಇದೆ. ಆದರೆ ಇದುವರೆವಿಗೂ ಕನ್ನಡಗಾರ ಎಂಬ ಬಳಕೆ ಆಗಿಲ್ಲ.
ಮೇಲೆ ಗಾಣಿಗ, ಲೆಕ್ಕಿಗ, ಉಪ್ಪಲಿಗ ಎಂಬುವಲ್ಲಿ ಕೂಡ 'ಕುಲ ಕಸುಬಿ'ನ ನೆರಳು ಕಾಣುತ್ತದೆ. ಇವತ್ತು 'ಗಾಣಿಗ',ಒಕ್ಕಲಿಗ ಕೆಲಸವನ್ನು ಮಾಡದೇ ಇರುವವರಿಗೂ 'ಗಾಣಿಗ', ಒಕ್ಕಲಿಗ ಎಂದು ಗುರುತಿಸುವುದು ಅವರ ಗಾಣಿಗ ಹುಟ್ಟಿನಿಂದಲೇ ಹೊರತು ಗಾಣಿಗತನಕ್ಕೆ ಸಂಬಂದಿಸಿದ ಮಾಡುವಿಕೆಯಿಂದಲ್ಲ. ಕೆಲವು ಎತ್ತುಗೆಗಳಲ್ಲಿ ಗಾರ ಮತ್ತು ಇಗ ಎಂಬ ಎರಡೂ ಒಟ್ಟುಗಳು ಬಳಕೆಯಲ್ಲಿವೆ. ಎತ್ತುಗೆಗೆ: ತೋಟಿಗ-ತೋಟಗಾರ, ಬೇಂಟಿಗ-ಬೇಟೆಗಾರ
ಮೊದಮೊದಲು ಮಾಡುಗತನದ ಕಾರಣದಿಂದ’ಗಾರ’ದಿಂದಲೇ ಸುರುವಾದ ಪದಗಳು ಆಮೇಲೆ ಹುಟ್ಟಿನ ಆಗುವಿಕೆಯಿಂದಾಗಿ’ಇಗ’ಕ್ಕೆ ಮಾರ್ಪಾಟಾಗಿವೆ ಎಂದು ಹೇಳಬಹುದು. ಅದಕ್ಕೆ ಮೇಲಿನ ಎತ್ತುಗೆಗಳೇ ಕಯ್ಗನ್ನಡಿ ಹಿಡಿದಂತೆ ತೋರುತ್ತಿದೆ. ಹಾಗಾಗಿ ಇಗ ಮತ್ತು ಗಾರ ಎಂಬ ಒಟ್ಟುಗಳು ಆಗುವಿಕೆ ಮತ್ತು ಮಾಡುವಿಕೆಗಳ ಮೇಲೆ ನಿಂತಿದೆ ಎಂದು ಹೇಳಬಹುದು