ಮಂಗಳವಾರ, ಫೆಬ್ರವರಿ 07, 2012

’ಪ್ರೌಡಶಾಲೆಯವರೆಗೂ ಸಂಸ್ಕೃತ ಕಡ್ಡಾಯ’-- ಬೇಕಾ ?

ಇವತ್ತಿನ ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ’ಪ್ರೌಡಶಾಲೆಯವರೆಗೂ ಸಂಸ್ಕೃತ ಕಡ್ಡಾಯ - ಭೈರಪ್ಪ ಆಗ್ರಹ’ ಎಂಬ ವರದಿಗೆ ಪ್ರತಿಕ್ರಿಯೆ. ಮೊದಲಿಗೆ ಭೈರಪ್ಪನವರು ಹೇಳಿರುವುದು- ’ಭಾರತದ ಜನಜೀವನದ ಭಾಷೆಯಾದ ಸಂಸ್ಕೃತವನ್ನು ಪ್ರೌಢಶಾಲೆಗಳವರೆಗೂ ಕಡ್ಡಾಯಗೊಳಿಸಬೇಕು’ . ಸಂಸ್ಕೃತ ಎಂದಿಗೂ ಜನಜೀವನದ ಭಾಷೆಯಾಗಿರಲಿಲ್ಲ ಬದಲಾಗಿ ಕನ್ನಡ, ತಮಿಳು, ತೆಲುಗು, ಪ್ರಾಕ್ರುತದಂತಹ ಬಾಶೆಗಳು ಜನಜೀವನದ ಬಾಶೆಯಾಗಿತ್ತು, ಇಂದಿಗೂ ಆಗಿವೆ ಎಂಬುದಕ್ಕೆ ಇಂದಿಗೂ ಇವು ಮಾತಿನಲ್ಲಿ ಉಳಿದಿರುವುದೇ ಕಾರಣ. ಹಾಗೆ ನೋಡಿದರೆ ಸಂಸ್ಕ್ರುತ ಒಂದು ಬಾಶೆಯೇ ಅಲ್ಲ ಅದು ಒಂದು ’ಬರಹ’ವಷ್ಟೆ ಎಂದು ನುಡಿಯರಿಗರು ಹೇಳುತ್ತಾರೆ ಯಾಕಂದರೆ ಅದು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ತಾನಾಗಿಯೇ ವರ್ಗಾವಣೆ ಆಗುವುದಿಲ್ಲ. ಆದರೆ ಕನ್ನಡದಂತಹ ನುಡಿಯನ್ನು ತಮ್ಮ ಬೆಳವಣಿಗೆಯ ಅಂಗವಾಗಿ ಮುಂದಿನ ತಲೆಮಾರಿನವರು ಪಡೆಯುತ್ತಿರುತ್ತಾರೆ. ಹೀಗಿರುವಾಗ ಸಂಸ್ಕ್ರುತವನ್ನು ಕಡ್ಡಾಯಮಾಡಬೇಕೆನ್ನುವ ದೋರಣೆ ಎಶ್ಟು ವಯ್-ಗ್ನಾನಿಕ ಎಂಬುದನ್ನು ನಾವು ಯೋಚಿಸಬೇಕಾಗುತ್ತದೆ. ಕೇವಲ ಕೆಲವರಿಗೆ ಸಂಸ್ಕ್ರುತದ ಮೇಲಿನ ಎಮೋಶನಲ್ ನಂಟು ಇರುವುದಕ್ಕೆ ಅದನ್ನು ಎಲ್ಲರಿಗೂ ಕಡ್ಡಾಯ ಮಾಡುವುದು ಎಷ್ಟು ಸರಿ?. ಕನ್ನಡಿಗರ ಏಳಿಗೆಯು ಸಂಸ್ಕ್ರುತ ಇಲ್ಲವೆ ಇಂಗ್ಲಿಶ್ ಕಲಿಯುವುದರಲ್ಲಿಲ್ಲ ಯಾಕಂದರೆ ಇವರಡೂ ಕನ್ನಡಿಗರಿಗೆ ಸ್ವಾಬಾವಿಕವಲ್ಲ.

ಅಲ್ಲದೆ ಭೈರಪ್ಪನವರು ’ಸಂಸ್ಕೃತವನ್ನು ಕನ್ನಡ ವಿರೋಧಿ ಭಾಷೆ ಎಂದು ನೋಡಲಾಗಿದೆ’ ಎಂದು ಹೇಳಿರುವುದರಲ್ಲು ತಪ್ಪು ತಿಳುವಳಿಕೆಯಿದೆ ಯಾಕಂದರೆ ಶ್ರೀವಿಜಯ, ನಯಸೇನ ಮತ್ತು ಆಂಡಯ್ಯ ಇವರೆಲ್ಲರೂ ಆಗಿನ ಕಾಲದಲ್ಲಿ ಕನ್ನಡ ಬರಹದಲ್ಲಿ ಅತೀ ಎನ್ನಿಸುವಷ್ಟು ಸಂಸ್ಕ್ರುತವನ್ನು ಬೆರಸಿರುವುದನ್ನು ಗುರುತಿಸಿ ಅದು ಸರಿಯಲ್ಲ ಎಂದು ಹೇಳಿದ್ದರೆ ಹೊರತು ಯಾರೂ ಸಂಸ್ಕ್ರುತವನ್ನು ವಿರೋದಿಸಿಲ್ಲ. ಯಾವ ಬಾಶೆಯ ಮೇಲೂ ಅನಾದರ ತೋರಿಸುವುದು ಸರಿಯಲ್ಲ; ಹಾಗಂತ ನಮ್ಮದಲ್ಲದ ಬಾಶೆಯನ್ನು ನಾವು ಹೊತ್ತುಕೊಂಡು ಮೆರೆಸಬೇಕಾಗಿಲ್ಲ. ಕನ್ನಡಿಗರು ಸಂಸ್ಕ್ರುತದ ವಿಷಯದಲ್ಲಿ ತಟಸ್ಥ ಧೋರಣೆ ತೋರುತ್ತಾ ಕನ್ನಡದ ಕಸುವನ್ನು ಹೆಚ್ಚಿಸುವ ಕಡೆ ಗಮನ ಕೊಡುವುದು ಈಗ ತುರ್ತಾಗಿ ಆಗಬೇಕಾಗಿರುವುದು ಎಂದು ಹೇಳಬಯಸುತ್ತೇನೆ.

"ಸಂಸ್ಕ್ರುತವನ್ನು ಉಳಿಸುವ ಮೂಲಕ ನಾವು ಆ ಭಾಷೆಯನ್ನು ಉದ್ದಾರ ಮಾಡುತ್ತೇವೆ ಎಂಬ ಬ್ರಮೆಗಿಂತ ಆ ಮೂಲಕ ನಮ್ಮ ಉದ್ಧಾರ ಸಾದ್ಯವಿದೆ ಎಂಬ ಅರಿವಿನೊಂದಿಗೆ ಸಂಸ್ಕ್ರುತದ ಉಳಿವಿಗೆ ಮುಂದಾಗಬೇಕು"
ಮೊದಲಿಗೆ ಭೈರಪ್ಪನವರೇ ಹೇಳಿರುವಂತೆ ದಕ್ಶಿಣ ಬಾರತದ ಬಾಸೆಗಳಿಗೆ ಸಂಸ್ಕ್ರುತ ಮೂಲವಲ್ಲ - ಹೀಗಿರುವಾಗ ನಾವು (ಕನ್ನಡಿಗರು) ಸಂಸ್ಕ್ರುತವನ್ನು ಏಕೆ ಉಳಿಸಬೇಕು? ಅದರಿಂದ ನಮ್ಮ ಉದ್ಧಾರ ಹೇಗ ಆಗುತ್ತೆ? ಬೇಕಾದರೆ ಉತ್ತರ ಬಾರತದವರು ಅದನ್ನು ಉಳಿಸಿಕೊಂದು ಉದ್ದಾರ ಹೊಂದಲಿ. ಈಗಾಗಲೆ ಉತ್ತರಾಕಂಡ ರಾಜ್ಯವು ಸಂಸ್ಕ್ರುತಕ್ಕೆ ಒತ್ತು ಕೊಟ್ಟಿದೆ. ಇಂದು ಬೆಂಗಳೂರಿನಲ್ಲಿರುವ ಹಲವು ಶಾಲೆಗಳಲ್ಲಿ ಕನ್ನಡದಲ್ಲಿ ಮಾತನಾಡುವ ಹಾಗಿಲ್ಲ. ಇಂತಹ ಪರಿಸ್ತಿತಿ ಇರುವಾಗ ನಮ್ಮ ಆದ್ಯತೆ ಕನ್ನಡವನ್ನು ಉಳಿಸಿ ಅದರಿಂದ ಏಳೆಗೆಯೆಡೆಗೆ ಹೋಗಬೇಕೇ ಹೊರತು ಸಂಸ್ಕ್ರುತದೆಡೆಗೆ ಅಲ್ಲ.

ಇವೆಲ್ಲಕ್ಕಿಂತ ಹೆಚ್ಚಾಗಿ ಒಂದು ಮಗುವು ಈಗಾಗಲೆ ಕನ್ನಡ, ಇಂಗ್ಲಿಶ್, ಹಿಂದಿ ಬಾಶೆಗಳನ್ನು ಕಲಿಯಬೇಕಾಗಿದೆ ಅದರ ಮೇಲೆ ಸಂಸ್ಕ್ರುತವನ್ನು ಕಡ್ಡಾಯ ಮಾಡಿ ಹೇರಿದರೆ ಆ ಮಕ್ಕಳ ಗತಿ ಏನು? ಯಾವುದನ್ನು ಸರಿಯಾಗಿ ಕಲಿಯಲು ಬಿಡದೆ ಮಕ್ಕಳನ್ನು ನಾವೇ ಎಡಬಿಡಂಗಿ ಮಾಡಿದಂತೆ ಆಗುವುದಿಲ್ಲವೆ?....ಇದರ ಬಗ್ಗೆ ಬೈರಪ್ಪನವರು ಕೊಂಚ ಉಂಕಿಸಲಿ !!

12 ಕಾಮೆಂಟ್‌ಗಳು:

ಪುಟ್ಟ ಹೇಳಿದರು...

ಹ ಹ ಹ ಹ
ಇವರು ಗಳಿಗೆ ಕನ್ನಡಿಗರು ಬಿಟ್ಟಿ ಸಿಕ್ಕಿದ್ದರೆ ಎಂದು .
ಎಲ್ಲಾ ಭಾಷೆ ಗಳನ್ನೂ ನಮ್ಮ ಮೇಲೆ ಏರುವುದಕ್ಕೆ ನೋಡುತಾರೆ.
ಹೆಚ್ಚಾಗಿ ಪೌರೋಹಿತ್ಯ ವರ್ಗದವರು ಸಂಸ್ಕೃತವನ್ನು ಕನ್ನಡಿಗರ ಮೇಲೆ ಏರಲು ನೋಡುತಿದ್ದರೆ .
ಸಂಸ್ಕೃತ ದ ಮೇಲೆ ಅಷ್ಟೊಂದು ಕಾಳಜಿ ಇದ್ದಾರೆ ರಾಷ್ಟ್ರವ್ಯಾಪಿ ಚಳುವಳಿ ಕೈ ಗೊಳ್ಳಲಿ.

Sunil GR ಹೇಳಿದರು...

Shatavadhani Dr.Ganesh avara ondu kaaryakrama.
"ಸಂಸ್ಕೃತವನ್ನು ಕುರಿತ ಪರ-ವಿರೋಧಗಳ ಅಪಕಲ್ಪನೆಗಳು"

Place:
ಸುಚಿತ್ರ, ಬನಶಂಕರಿ 2ನೆಯ ಹಂತ.

Date:
19 Feb 2012, 6PM (Sunday).

ನೀವೆಲ್ಲರೂ ಆ ಕಾರ್ಯಕ್ರಮಕ್ಕೆ ಬಂದು ಈ ಪ್ರಶ್ನೆಗಳನ್ನ ಗಣೇಶ್ ಅವರಗೆ ಕೇಳಬಹುದು.

ಪಾಂಡುರಂಗ ಕುಂಬಾರ ಹೇಳಿದರು...

ಸುನೀಲ್ ಅವರೇ,,
ಶತಾವಧಾನಿಯವರ ಮೂರ್ನಾಲ್ಕು ಕಾರ್ಯಕ್ರಮಗಳಿಗೆ ಹೋಗಿದ್ದೆ. ಇಲ್ಲೂ ಏನಿರುತ್ತೆ ಅಂತ ಊಹಿಸಬಲ್ಲೆ. ಒಬ್ಬ ಸಂಸ್ಕೃತದಿಂದ ಅನ್ನ ಸಂಪಾದಿಸುತ್ತಿರುವ ಸಂಸ್ಕೃತ ವಿದ್ವಾಂಸರಿಂದ ಕನ್ನಡ ಭಾಷಾ ವಿಜ್ಞಾನ ಏನು, ಕನ್ನಡದ ಬೇರೇನು? ಕನ್ನಡದ ಮಕ್ಕಳ ಕಲಿಕೆಯ ತೊಂದರೆಗಳೇನು, ಕನ್ನಡಕ್ಕೂ ಸಂಸ್ಕೃತಕ್ಕೂ ಇರುವ ನಂಟೇನು ಅನ್ನುವುದರ ವೈಜ್ಞಾನಿಕ ವಿವರಣೆ ಸಿಗುವುದು ಅಂತೆಲ್ಲ ನಿರೀಕ್ಷಿಸಬಹುದು ಅಂತ ನೀವಂದುಕೊಳ್ಳುತ್ತಿರುವುದು ನೀವೆಷ್ಟು ಮುಗ್ದರು ಎಂದು ತೋರಿಸುತ್ತೆ. ನಿಮ್ಮಂತಹ ಮುಗ್ದರ ಭಾವನೆಯೇ ಅವರ ಆಸ್ತಿ. ಹೋಗಿ ಬನ್ನಿ ಒಳ್ಳೆಯದಾಗಲಿ.

ಪಾಂಡುರಂಗ ಕುಂಬಾರ ಹೇಳಿದರು...

ಸಂಸ್ಕೃತ ಮತ್ತು ಕನ್ನಡದ ಬಗ್ಗೆ ಕಾಳಜಿ ಇರುವ ಸುನೀಲ್ ಅವರಿಗೆ ಒಂದಿಷ್ಟು ಪ್ರಶ್ನೆಗಳು:
೧> ಸಂಸ್ಕೃತ ಎಂದಾದರೂ ಜನರು ಮಾತನಾಡುತ್ತಿದ್ದ ಭಾಷೆಯೇ?
೨> ಹೌದು ಅಂತಾದರೆ, ಅದು ಹೇಗೆ ಜನರ ಬಳಕೆಯಿಂದ ಮರೆಯಾಯಿತು?
೩> ಸಂಸ್ಕೃತ ಮರೆಯಾಗಲು ಬ್ರಿಟಿಷರು, ಮೊಘಲರು ಕಾರಣ ಅಂತಾದರೆ, ಅವರು ಬಂದು ಹೋದ ಕಳೆದ ಸಾವಿರ ವರ್ಷದಲ್ಲಿ ಕನ್ನಡ, ತಮಿಳು, ತೆಲುಗುನಂತಹ ಯಾವ ಭಾಷೆಯೂ ಯಾಕೆ ಸತ್ತಿಲ್ಲ? ಹಾಗಿದ್ದರೆ ಅವರು ಬರೀ ಸಂಸ್ಕೃತವೊಂದನ್ನೇ ಗುರಿಯಾಗಿಸಿ ಕೊಂದರೆ?
೪> ಕೊಲ್ಲುವುದು ಅಂದರೆ ಸಂಸ್ಕೃತ ಮಾತನಾಡುತ್ತಿದ್ದವರನ್ನೆಲ್ಲ ಇಲ್ಲವಾಗಿಸಿದರೆ? ಇಲ್ಲವೇ ಅವರನ್ನೆಲ್ಲ ಕಟ್ಟಿ ಹಾಕಿ ಸಂಸ್ಕೃತ ಬಿಟ್ಟು ಇನ್ನಾವುದಾದರೂ ಭಾಷೆ ಮಾತನಾಡುವವರೆಗೂ ಹಿಂಸಿಸಿದರೆ?
೫> ಇಡೀ ದೇಶದಲ್ಲಿ ಯಾವ ಭಾಗದಲ್ಲೂ ಒಂದು ೨೫ ಸಾವಿರ ಜನ ತಾಯ್ನುಡಿಯಾಗಿ ಸಂಸ್ಕೃತ ಮಾತನಾಡುವ ಒಂದಾದರೂ ಊರಿದೆಯೇ? ಹೇಗೆ ಇಡೀ ದೇಶದಿಂದ ಒಮ್ಮೆಲೆ ಮರೆಯಾಗಿ ಹೋಯಿತು? ಬರೀ ಸಾವಿರ ಜನ, ಹತ್ತು ಸಾವಿರ ಜನ ಮಾತನಾಡುವ ಭಾಷೆಗಳು ಈಗಲೂ ಬಳಕೆಯಲ್ಲಿರುವಾಗ ಎಲ್ಲ ಭಾಷೆಗಳ ತಾಯಿ ಎಂದು ತಾವು ಪೂಜಿಸುವ ಸಂಸ್ಕೃತ ಹೇಗೆ ಹೀಗಾಯ್ತು?

ಪಾಂಡುರಂಗ ಕುಂಬಾರ ಹೇಳಿದರು...

೬> ಸಂಸ್ಕೃತದಲ್ಲಿ ಬರೀ ವೇದಗಳೇ ಯಾಕಿವೆ? ಯಾಕೆ ನಮ್ಮ ಜನಪದ ಸಂಸ್ಕೃತಿಯ ಲವಲೇಶವೂ ಇಲ್ಲ? ಯಾಕೆ ಅಣ್ಣಮ್ಮ, ಮಾರಮ್ಮ, ಯಲ್ಲಮ್ಮ, ದ್ಯಾಮವ್ವನಂತಹ ಊರ ದೇವರುಗಳು ಸಂಸ್ಕೃತದಲ್ಲಿಲ್ಲ?
೭> ವರ್ಣಾಶ್ರಮದಂತಹ ನಾಗರೀಕ ಸಮಾಜ, ಪ್ರಜಾಪ್ರಭುತ್ವ ಒಪ್ಪದ ಮೌಲ್ಯಗಳನ್ನು ಸಂಸ್ಕೃತದಲ್ಲಿರುವ ವೇದಗಳು ಯಾಕೆ ಪ್ರತಿಪಾದಿಸಿದವು?
೮> ನೀವು ಹಿಂದು ಧರ್ಮದ ರಕ್ಷಣೆಯ ಬಗ್ಗೆ ತಲೆ ಕೆಡಿಸಿಕೊಂಡಿದ್ದಿರೆಂದು ಬಲ್ಲೆ. ಹಾಗಿದ್ದರೆ ಮಡೆ ಸ್ನಾನ, ಬ್ರಾಹ್ಮಣೇತರರಿಗೆ ಊಟಕ್ಕೆ ಬೇರೆ ಪಂಕ್ತಿ ಇಂತಹ ಸಾಮಾಜಿಕ ಅನಿಷ್ಟಗಳ ಬಗ್ಗೆ ನಿಮ್ಮ ಗುರುಗಳಾದ ಶ.ಗಣೇಶ್ ಅವರು ಎಲ್ಲೂ ಯಾಕೆ ಮಾತಾಡಿಲ್ಲ?
೯> ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗ ಯಾವ ಜಾತಿಯೇ ಇರಲಿ, ಆ ಜಾತಿಗಳ ಮಠಗಳಿಗೆ ಮಠಾಧೀಶರಾಗಿ ಒಬ್ಬ ದಲಿತನನ್ನು ನೇಮಿಸುವ ಬಗ್ಗೆ ನಿಮಗೇನು ಅನ್ನಿಸುತ್ತೆ? ಮಠಗಳ ಕೆಲಸ ಜನರನ್ನು ಧರ್ಮದ ನಂಬಿಕೆಯಡಿ ಸನ್ಮಾರ್ಗದಲ್ಲಿ ನಡೆಸುವುದಲ್ಲವೇ? ಅಂತಹ ಯೋಗ್ಯತೆ ಇರುವವರು ಯಾವ ಜಾತಿಯಾದರೇನು? ಇಂತಹ ಕ್ರಾಂತಿಕಾರಕ ಸಾಮಾಜಿಕ ಸುಧಾರಣೆಗಳನ್ನು ನಿಮ್ಮ ಗುರುಗಳಾದ ಶ.ಗಣೇಶ್ ಅವರು ಯಾಕೆ ಎತ್ತಿಕೊಳ್ಳಬಾರದು?
೧೦> ಸಂಸ್ಕೃತದಲ್ಲಿ ಇಲ್ಲದಿರುವ ಜ್ಞಾನವೇ ಇಲ್ಲ ಅನ್ನುವುದು ನಿಮ್ಮ ಅನಿಸಿಕೆಯೇ? ಹಾಗಿದ್ದಲ್ಲಿ, ಯಾಕೆ ಜನ ಸಂಸ್ಕೃತದ ಬದಲು ಇಂಗ್ಲಿಷ್ ಕಲಿಯಲು ಮುಗಿ ಬೀಳುತ್ತಿದ್ದಾರೆ? ಅಥವಾ ತಾವು ಹೊಟ್ಟೆ ಹೊರೆಯಲು ಕೆಲಸ ಮಾಡುತ್ತಿರುವಲ್ಲಿ ಸಂಸ್ಕೃತದ ಬದಲು ಇಂಗ್ಲಿಷ್ ಯಾಕೆ ಬಳಸುತ್ತಿದ್ದೀರಿ? ಹೀಗೆ ಕೇಳಿದಾಕ್ಷಣ ವೈಯಕ್ತಿಕ ಟೀಕೆ ಅಂದುಕೊಳ್ಳಬೇಡಿ. ಸಂಸ್ಕೃತದಲ್ಲಿರುವುದು ಬಿಡುಗಡೆಯ ವಿದ್ಯೆಗಳೇ ಹೊರತು ಬದುಕಿನ ವಿದ್ಯೆಯಲ್ಲ ಅನ್ನುವುದನ್ನು ಕೊಂಚ ತೆರೆದ ಮನಸ್ಸಿನಿಂದ ಪ್ರಶ್ನಿಸಿಕೊಳ್ಳಿ. ಹೀಗೆ ಪ್ರಶ್ನೆ ಮಾಡಿದ್ದ ನನ್ನನ್ನು ಎಡಪಂಥೀಯ, ಹಿಂದು ವಿರೋಧಿ, ಸಂಸ್ಕೃತ ವಿರೋಧಿ ಆದ್ದರಿಂದ ಸಂಸ್ಕೃತಿ ವಿರೋಧಿ, ದೇಶ ವಿರೋಧಿ, ಕಾಂಗ್ರೆಸ್ ಏಜೆಂಟ್, ಸೋನಿಯಾ ಬಂಟ ಎಂದೆಲ್ಲ ಆರೋಪಿಸಬಹುದು. ಆ ಸ್ವಾತಂತ್ರ್ಯ ನಿಮಗಿದೆ. ಆದರೆ ನಾನೆತ್ತಿರುವ ಪ್ರಶ್ನೆಗಳಿಗೆ ಅಕಾಡೆಮಿಕ್ ಆದ ಮಟ್ಟದಲ್ಲಿ ಉತ್ತರ ಕೊಡುವಿರೆಂದು ನಂಬುವೆ. ಕೊಡದಿದ್ದರೂ ತೊಂದರೆ ಇಲ್ಲ. ನಾನು ನಂಬಿದ್ದೇ ಸರಿ, ಅದನ್ನು ಪ್ರಶ್ನಿಸುವುದು ನಿಂತ ನೆಲವನ್ನೇ ಕುಸಿಯುವಂತಹ ಅಪಾಯ ಅನ್ನುವ ನಿಲುವು ನಿಮ್ಮದಿರಬಹುದು ಎಂದು ಸುಮ್ಮನಾಗುವೆ.

Sunil GR ಹೇಳಿದರು...

ಪಾಂಡುರಂಗ ಅವರೆ,

ನೀವು ಬರೀ ಗಣೇಶರವರ ೩-೪ ಕಾರ್ಯಕ್ರಮಗಳಿಗೆ ಹೋಗಿ ಏನೇನೋ 'ಊಹಿ'ಸುವುದನ್ನು ನೋಡಿದರೆ, ನೀವು ನನಗಿಂತ ಮುಗ್ದರು ಅಂತ ಕಾಣಿಸತ್ತೆ :-).

ನೀವು ಕೇಳಿರೋ ಪ್ರಶ್ನೆಗಳಿಗೆ ಈಗಾಗಲೇ ಎಷ್ಟೋ ಜನರು ಉತ್ತರಿಸಿದ್ದಾರೆ. ನನಗೆ ಯಾವ ಪ್ರಶ್ನೆಯೂ ಹೊಸದು ಎನ್ನಿಸಲಿಲ್ಲ. ನನಗೆ ಹೇಳಿದ 'ತೆರೆದ ಮನಸು' ನಿಮಗೇ ಇಲ್ಲವಾಗಿ ಬೇರೆಯವರ ನಿಲುವುಗಳನ್ನು ಅರಿತಿಲ್ಲವೆಂದು ಭಾವಿಸುವೆ.

ಇಷ್ಟಕ್ಕೂ ಸಂಸ್ಕೃತದ ಬಗ್ಗೆ ಬರೀ ಸಂಸ್ಕೃತ-ದ್ವೇಷಿಗಳಿಗೆ ಮಾತ್ರ 'ಅಪಕಲ್ಪನೆ'ಗಳು ಇರುವುದಿಲ್ಲ. ಸಂಸ್ಕೃತ-ಪ್ರಿಯರಿಗೂ, ಸಂಸ್ಕೃತ-ತಟಸ್ಥರಿಗೂ 'ಅಪಕಲ್ಪನೆ'ಗಳು ಇರುತ್ತವೆ. ನಿಮ್ಮ ೧೦ನೆ ಪ್ರಶ್ನೆ ಸಂಸ್ಕೃತ-ಪ್ರಿಯರ ಒಂದು ಅಪಕಲ್ಪನೆ.

ಇಷ್ಟೆಲ್ಲ ಯಾಕೆ, ಈ ಪ್ರಶ್ನೆಗಳನ್ನ ಅವರಿಗೇ ನೇರವಾಗಿ ಕೇಳೋ ಅವಕಾಶ ಬಂದಿದೆ. ನಿಮಗೆ ಸಮಯವಿದ್ದರೆ ಬಂದು ಕೇಳಿ. ಇಲ್ಲ ನಿಮ್ಮ ಗುಂಪಿನ ಯಾರಾದರೂಬ್ಬರು ಬಂದು ಕೇಳಿದರಾಯಿತು.

ಪಾಂಡುರಂಗ ಕುಂಬಾರ ಹೇಳಿದರು...

ನನ್ನ ಪ್ರಶ್ನೆಗಳಿಗೆ ಎಷ್ಟೋ ಜನರು ಉತ್ತರಿಸಿದ್ದಾರೆ, ಆದರೆ ನಿಮಗೆ ಉತ್ತರಿಸುವ ಯೋಗ್ಯತೆ ಇಲ್ಲ ಅಂತಾಯಿತು. ಇರಲಿ, ನೀವು ಬರೀ ಗಿಳಿಪಾಠ ಮಾಡಿಕೊಂಡು ಓಡಾಡುವವರೇ ಹೊರತು ಸ್ವಂತ ಬುದ್ದಿ ಉಪಯೋಗಿಸುವವರಲ್ಲವೆನೋ ಅನ್ನುವ ಗುಮಾನಿ ಬರುತ್ತಿದೆ.

ಭಾನುವಾರದ ಕಾರ್ಯಕ್ರಮಕ್ಕೆ ಬಂದಿದೆ. ಮತ್ತದೇ ಹಾಡಿದ್ದೇ ಹಾಡೋ.. ಅನ್ನುವ ತರಹವೇ ಇತ್ತು. ಸಕ್ಕರೆ ರುಚಿ ಹೇಳು ಅಂದರೆ ಹೇಳಲಾಗುತ್ತೆಯೇ, ಸಕ್ಕರೆ ತಿಂದವರಿಗೆ ಗೊತ್ತು, ಹಾಗೇ ಸಂಸ್ಕೃತದ ಬಗ್ಗೆ ಏನು ಕೇಳಿದರೂ ಸಂಸ್ಕೃತ ಕಲಿಯದೇ ಗೊತ್ತಾಗಲ್ಲ ಅನ್ನುವಂತಹ ಬುರುಡೆ ಬಿಡುತ್ತಾ ಇದ್ರು.. ವಿದ್ಯೆ ಬುದ್ದಿ ಇರುವ ನಿಮ್ಮಂತಹ ಯುವಕರೇ ಮರುಳಾಗುವಾಗ ಇನ್ನೇನು ಹೇಳಲಾದೀತು..

ಪಾಂಡುರಂಗ ಕುಂಬಾರ ಹೇಳಿದರು...

ಶ.ಗಣೇಶ್ ಅವರೇ ಒಪ್ಪಿರುವಂತೆ ಅವರೊಬ್ಬ ಪಾಲಿಟಿಕಲ್ ಅನಾಲಿಸ್ಟ್ ಆಗಲಿ, ಸೋಶಿಯಾಲಜಿ ಸ್ಕಾಲರ್ ಆಗಲಿ ಅಲ್ಲ. ಅವರಿಗೆ ಗೊತ್ತಿರುವುದು ಬಹು ಭಾಷೆಗಳು. ಸೋಶಿಯಾಲಜಿ ಗೊತ್ತಿಲದಿರುವವರು ಸಮಾಜವನ್ನು, ಸಮಾಜದ ಹಲ ವರ್ಗಗಳನ್ನು, ಅವರ ನುಡಿ, ಅದರಲ್ಲಿರುವ ಬೇರ್ಮೆ,ಅವರ ಮಕ್ಕಳ ಕಲಿಕೆಯ ತೊಡಕುಗಳನ್ನು ಏನು ಅರಿತಿರಬಲ್ಲರು? ನೀವು "Social Changes in Modern India - Mysore Srinivas" ಅವರ ಹೊತ್ತಗೆ ಓದಿ. ನಮ್ಮ ಸಮಾಜ ಹೇಗೆ ನಡೆದುಕೊಂಡು ಬಂದಿದೆ, ಅಲ್ಲಿನ ವರ್ಣಾಶ್ರಮ, ಜಾತಿಗಳ ನಡುವಿನ ತಿಕ್ಕಾಟ ಎಲ್ಲವನ್ನೂ ಇನ್ನಷ್ಟು ಆಳವಾಗಿ ತಿಳಿಯಬಹುದು.

Nagaraja ಹೇಳಿದರು...

Panduranga and Sunil,

ಈ ಹೊತ್ತಿನಲ್ಲಿ ಈ ರೀತಿಯ ಚರ್ಚೆ ಬೇಕಾ? ಇಲ್ಲಿ ಸಂಸ್ಕೃತ ಜನರ ಭಾಷೆ ಹೌದೋ ಅಲ್ಲವೋ ಎಂಬುವುದು ಪ್ರಸ್ತುತ ಅಲ್ಲ ಎಂದು ನನ್ನ ಭಾವನೆ. ಯಾರೋ ಬಿಟ್ಟು ಹೋದ ಆಂಗ್ಲ ಭಾಷೆಯನ್ನು ಅಪ್ಪಿಕೊಂಡಿರುವ ನಾವು ಸಂಸ್ಕೃತವನ್ನು ನಮ್ಮದೆನ್ನಲು ತಪ್ಪೇನು. ನಮ್ಮ ಹಿಂದಿನ ತೆಲೆಮಾರು ಮಾಡಿದ ತಪ್ಪನ್ನು ನಾವೂ ಮುಂದುವರಿಸಿಬೇಕಾ? ನಮ್ಮದು ಅನ್ನೋ ಭಾವನೆ ಮುಖ್ಯ.

ಪಾಂಡುರಂಗ ಕುಂಬಾರ ಹೇಳಿದರು...

ನನಗೆ ಜಗತ್ತಿನ ಎಲ್ಲ ನುಡಿಗಳು ನನ್ನವೇ.. ಎಲ್ಲ ನುಡಿಯಿಂದಲೂ ತೆಗೆದುಕೊಳ್ಳಬೇಕಾದ ಒಳ್ಳೆಯದೆಲ್ಲವೂ ತೆಗೆದುಕೊಳ್ಳಲೇಬೇಕು ಅನ್ನುವ ನಿಲುವು ನನ್ನದು. ಚರ್ಚೆ ನೀವು ತಿಳಿದ ವಿಷಯದ್ದಲ್ಲ. ಚರ್ಚೆ ಇರುವುದು ಎಲ್ಲರೂ ಸಂಸ್ಕೃತ ಕಲಿಯಲೇಬೇಕು ಅನ್ನುವ ಹೇರಿಕೆ ಮನಸ್ಥಿತಿಯ ಬಗ್ಗೆ ಇರುವುದು.

Sunil GR ಹೇಳಿದರು...

ಪಾಂಡುರಂಗರವರೇ,

ನೀವು ನನ್ನ ಮೇಲೆ ಇಷ್ಟೊಂದು personal-attacks ಮಾಡೋದು ನೋಡಿದ್ರೆ ಗೊತ್ತಾಗತ್ತೆ, ನಿಮ್ಮ ಸ್ವಂತ ಬುದ್ಧಿ ಎಷ್ಟೊಂದು ಚುರುಕು ಅಂತ.

ಗಣೇಶ್ ಅವರು ಇನ್ನಾ ಒಂದು ಮಾತು ಹೇಳಿದರು - "ನಿದ್ದೆ ಮಾಡುವವರನ್ನು ಎಬ್ಬಿಸಬಹುದು, ನಿದ್ದೆಯ ನಟನೆ ಮಾಡುವವರನ್ನು ಎಬ್ಬಿಸುವುದಕ್ಕಾಗುವುದಿಲ್ಲ" ಎಂದು. ಅದನ್ನೆ ಸ್ವಲ್ಪ ತಿರುಚಿ - "ಸತ್ಯವಾದಿಗಳಿಗೆ ಉತ್ತರ ಕೊಡಬಹುದು, ಪಲಾಯನವಾದಿಗಳಿಗೆ ಉತ್ತರ ಕೊಡುವುದಕ್ಕಾಗುವುದಿಲ್ಲ" ಎನ್ನಬಹುದೆನೋ :-)

ಸರಿ, ಇನ್ನು ನಾನು ಈ articleಗೆ ಬಂದ ಮುಖ್ಯ ಉದ್ದೇಶ ಶ.ಗಣೇಶ ಅವರ ಕಾರ್ಯಕ್ರಮದ ಬಗ್ಗೆ ತಿಳಿಸಲು. ವಾದ-ಪ್ರತಿವಾದ ಮಾಡುವುದಕ್ಕಲ್ಲ. ಈ ಕಾರ್ಯಕ್ರಮ ನೇರವಾಗಿ ಈ blog-ಲೇಖನಕ್ಕೆ ಸಂಬಂಧಪಟ್ಟಿಲ್ಲದೇ ಇರಬಹುದು, ಆದರೆ ಸ್ವಲ್ಪ off-topic ಆದರೂ ಆಗಿದೆಯೆಂದು ಭಾವಿಸುವೆ.

ಈ ಕಾರ್ಯಕ್ರಮದ recordings ಕೆಳಗಿವೆ.
https://rapidshare.com/files/3275522361/SamskrutaParaViroda_Lecture_Part1.mp3
https://rapidshare.com/files/3039269457/SamskrutaParaViroda_Lecture_Part2.mp3
https://rapidshare.com/files/3950245590/SamskrutaParaViroda_Lecture_Part3.mp3

ಆಸಕ್ತಿ ಇದ್ದವರು ಕೇಳಿ ಪ್ರಯೋಜನವಿದ್ದರೆ ಪಡಿಯಬಹುದು. ಪೂರ್ವಾಗ್ರಹ ಪೀಡಿತರಾಗಿ ಗಣೇಶರವರು ಬುರುಡೆ ಬಿಟ್ರು ಎಂದು ಊಹಾಲೋಕದಲ್ಲೇ ಇದ್ದರೆ ನಾನು ಏನೂ ಮಾಡುವುದಕ್ಕಾಗುವುದಿಲ್ಲ. ವೈಯಕ್ತಿಕವಾಗಿ ನನ್ನ ಕೆಲವು ಪೂರ್ವಾಗ್ರಹಗಳು ದೂರವಾದವು ಎಂದೆ ಹೇಳಬಹುದು.

*************

ಸಾಧ್ಯವಾದಾಗ ನೀವು ಕೊಟ್ಟ ಹೊತ್ತಗೆಯನ್ನು ಓದುವೆ.

ಪಾಂಡುರಂಗ ಕುಂಬಾರ ಹೇಳಿದರು...

ಹೋಗಲಿ ಬಿಡಿ ಸುನೀಲ್ ಅವರೆ,,ನಿಮ್ಮ ನನ್ನ ನಡುವೆ ಯಾಕೆ ಒಡಕು, ಬಿರುಕು.. ನಾನೊಂದು ಹತ್ತು ಪ್ರಶ್ನೆ ಕೇಳಿದ್ದೇನೆ. ಅವುಗಳ ಬಗ್ಗೆ ನಿಮಗೇನು ಅನ್ನಿಸುತ್ತೆ ಅಂತ ತಿಳಿಸಿ. ಮತ್ತೆ ಚರ್ಚಿಸೋಣ.