ನಯಸೇನನ ಸಲೀಸಾದ ಸಾಲುಗಳು- ಬಿಡಿ ೩ - ಕೆಡುನುಡಿವ ಕಬ್ಬಿಗರು
ಕಬ್ಬಿಗರು ನಯಸೇನ ಧರ್ಮಾಮೃತಂ ದರ್ಮಾಮ್ರುತಂ ಮಡಕೆ ಅಡಕಿಲ
ನಯಸೇನ ಒಂದು ಕ್ರುತಿಯ ಬಗ್ಗೆ ಕೆಡುನುಡಿವವರ ಬಗ್ಗೆ ಒಳೆ ಅಬಿಪ್ರಾಯ ಮೂಡಿಸಿದ್ದಾನೆ. ಕೆಡುನುಡಿವವರಿಂದಲೇ ಒಂದು ಕ್ರುತಿಯ ಓರೆ-ಕೋರೆಗಳು ಬೆಳಕಿಗೆ ಬರುತ್ತವೆ ಎಂಬುದು ಅವನ ನಂಬುಗೆಯಾಗಿರಬಹುದು.
ಅಡಕಿಲ ಮಡಕೆಗಳಂ ಸ
ಯ್ತಿಡಲಱಿವುವೆ ನಾಯ್ಗಳೊಡೆವುವಲ್ಲದೆ ಕ್ರುತಿಯಂ
ಕಿಡೆನುಡಿವರಲ್ಲದೇಂ ಜಡ
ರೊಡಂಬಡಲ್ತಿದ್ದಿನುಡಿಯಬಲ್ಲರೆ ಕವಿವೋಲ್
ಬಿಡಿಸಿದರೆ,
ಅಡಕಿಲ ಮಡಕೆಗಳಂ ಸಯ್ತ್ ಇಡಲ್ ಅಱಿವುವೆ ನಾಯ್ ಗಳ್ ಒಡೆವುವು ಅಲ್ಲದೆ ಕ್ರುತಿಯಂ ಕಿಡೆನುಡಿವರಲ್ಲದೇಂ ಜಡರ್ ಒಡಂಬಡಲ್ ತಿದ್ದಿ ನುಡಿಯಬಲ್ಲರೆ ಕವಿವೋಲ್
ಹೇಗೆ ನಾಯಿಗಳಿಗೆ ಒಂದರಮೇಲೊಂದರಂತೆ ಮಡಕೆಗಳನ್ನು ಸರಿಯಾಗಿಡಲ್ ಗೊತ್ತಿಲ್ಲದೆ ಅವುಗಳನ್ನು ಒಡೆಯುತ್ತವೊ ಹಾಗೆ ಕ್ರುತಿಯ ಬಗ್ಗೆ ಕೆಟ್ಟ ಮಾತುಗಳಾಡುವವರಲ್ಲದೆ ಜಡರು(ಹೆಚ್ಚು ಮಾತನಾಡದವರು, ಸುಮ್ಮನೆ ಇರುವವರು,ಎಲ್ಲದಕ್ಕೂ ಒಪ್ಪುಗೆ ಸೂಚಿಸುವವರು) ಒಡೆಯಬಲ್ಲರೆ (ತಿದ್ದಿ ನುಡಿಯಬಲ್ಲರೆ)?
ನಾಯಿಗಳಿಂದಲೆ ಮಡಕೆ ಎಶ್ಟು ಗಟ್ಟಿ ಅಂತ ಗೊತ್ತಾಗುವುದು ಹಾಗೆ ಕಿಡುನುಡಿವುವರಿಂದಲೇ ಕ್ರುತಿಯ ಬಗ್ಗೆ ದಿಟವಾದ ಒಳ್ಳೆ ವಿಮರ್ಶೆ ಬರುವುದು.
ಅಡಕಿಲ = ಒಂದರ ಮೇಲೊಂದರಂತೆ
ಒಡಂಬಡು = ಒಪ್ಪು, ಅಂಗೀಕರಿಸು
ಯಾಕೊ ಮೇಲಿನ ಬಿಡಿಸಿಕೆ ಅಶ್ಟು ಸರಿಯಾಗಿಲ್ಲ ಅನ್ಸುತ್ತೆ...:(
---------------------------------
ನಯಸೇನನ ಸಲೀಸಾದ ಸಾಲುಗಳು- ಬಿಡಿ ೪ - ಸಹಜಮಿಲ್ಲದಾತನ ಕಬ್ಬಂ
ನಯಸೇನ ಕಬ್ಬಕ್ಕೆ ಸಹಜತನ ಯಾಕಿರಬೇಕು ಎಂಬುದನ್ನ ಒತ್ತಿ ಹೇಳಲು ಮಳೆ ನೀರು ಮತ್ತು ಪನ್ನೀರು(ಪೊಯ್ನೀರ್) ಎಂಬ ಉಪಮೆಗಳನ್ನು ಬಳಸಿಕೊಂಡು ಚೆನ್ನಾಗಿ ಬಣ್ಣಿಸಿದ್ದಾನೆ. ಸಕ್ಕತ್
ಮೞೆಯಿಲ್ಲದೆ ಪೊಯ್ನೀರಿಂ
ಬೆಳಗುಮೆ ಧರೆ ಮಱುಗಿ ಕುದಿದು ಶಾಸ್ತ್ರದ ಬಲದಿಂ
ದಳಿಪಿಂ ಪೇೞ್ವೊಡಮದು ಕೋ
ಮಳಮಕ್ಕುಮೆ ಸಹಜಮಿಲ್ಲದಾತನ ಕಬ್ಬಂ
ಹೇಗೆ ಮಳೆಯಿಲ್ಲದೆ ಉರಿದು/ಬಿಸಿಯಾಗಿರುವ ದರೆ(ಬುವಿ)ಬರೀ ಎರಚಿದ ನೀರಿನಿಂದ ತಣ್ಣಗಾಗುವುದಿಲ್ಲವೊ ಹಾಗೆ ಕೇವಲ ಶಾಸ್ತ್ರಬಲದ ಚಟಕ್ಕೆ ಬಿದ್ದು(ಎರಚಿದ ನೀರಿನಂತೆ) ಸಹಜತನವನ್ನು(ಮಳೆ) ಕಳೆದುಕೊಂಡ ಕಬ್ಬಿಗನ ಕಬ್ಬ ಕೋಮಳವಾಗುವುದಿಲ್ಲ
ಒಟ್ಟಿನಲ್ಲಿ ಕಬ್ಬಕ್ಕೆ ಸಹಜತನ ಬಲು ಮುಕ್ಯ.
ಮೞೆ = ಮಳೆ
ಪೊಯ್ನೀರ್ = ಎರಚುವ ನೀರು, ಎರಗಿದ ನೀರು
ಮಱುಗಿ = ಉರಿದು, ಬಿಸಿಯಾಗು
ಅಳಿಪಿಂ = ಚಟಕ್ಕೆ ಬಿದ್ದು ಬಯಸು, ನಲ್ಮೆಗೆ ಒಳಗಾಗು
ಗಮನಿಕೆ:
೧) ಈಗಲೂ ನಾವು ಮದುವೆ ಮನೆಗಳಿಗೆ ಹೋದರೆ ಬಾಗಿಲಲ್ಲಿ ಪನ್ನೀರನ್ನು ಎರಚುವ ವಾಡಿಕೆಯಿದೆ. ಅದು ದಿಟವಾಗಲೂ ಪೊಯ್ನೀರ್ ಅಂದರೆ 'ಎರಗುವ ನೀರು'. ಮಾತಿನಲ್ಲಿ ಪೊಯ್ನೀರ್ => ಪನ್ನೀರ್ ಆಗಿದೆ.
೨) ಅಳಿಪು = ಕೂರ್, ಪ್ರೀತಿ, ನಲ್ಮೆ ,ಈ ಹಿಂದೆ 'ಅಳಿಯ' ಪದದ ಬಗ್ಗೆ ಹೇಳಿದ್ದಾಗ ಇದರ ಬಗ್ಗೆ ಹೇಳಿದ್ದೆ.
೩) ಮಱುಗಿ - ಇದನ್ನು ಕವಿರಾಜಮಾರ್ಗದಲ್ಲಿ ಕೂಡ ಬಳಸಲಾಗಿದೆ
ಕವಿರಾಜಮಾರ್ಗ ಬಿಡಿ-೧ , ೫೮ ನೇ ಪದ್ಯ
ತಱಿಸಂದಾ ಸಕ್ಕದಮುಮ
ನಱಿಯದೆ ಕನ್ನಡಮುಮಂ ಸಮಾಸೋಕ್ತಿಗಳೊಳ್
ಕುಱಿತು ಬೆರೆಸಿದೊಡೆ ವಿರಸಂ
ಮಱುಗುವ ಪಾಲ್ಗಳೆಯ ಪನಿಗಳಂ ಬೆರೆಸಿದವೋಲ್
೪)
ಉಪ್ಪಿಲ್ಲದೆ ಕೇಳೊಕ್ಕಳ
ತುಪ್ಪವನೆಱೆದುಣ್ಬೆನೆಂಬೊಡುಂಬುಣಿಸೇಂ ಸ್ವಾ
ದಪ್ಪುದೆ ಸಹಜಂ ತನಗಿನಿ
ಸಪ್ಪೊಡಮಿಲ್ಲದನ ಕವಿತೆ ರುಚಿವಡೆದಪುದೇ
ಇದಿಲ್ಲದ ಇದುಂ
--------
ಕಂಪಿಲ್ಲದ ತುಪ್ಪಮುಂ
ಪೆಂಪಿಲ್ಲದ ಪ್ರಬುತ್ವಮುಂ
ಸ್ನೇಹಮಿಲ್ಲದ ಕೋಡುಂ
ಮೋಹಮಿಲ್ಲದ ಬಾೞುಂ
ಬಕುತಿಯಿಲ್ಲದ ಕೊಂಡಾಟಮುಂ
ಶಕುತಿಯಿಲ್ಲದ ಸೆಣಸುಂ
ಕೋಡಿಲ್ಲದ ಸಿರಿಯುಂ
ನಾಡಿಲ್ಲದರಸುಂ
ಪಲವಿಲ್ಲದ ತೋಟಮುಂ
ಕುಲಮಿಲ್ಲದ ಮಹಿಮೆಯುಂ
ಬಟ್ಟೆಯಿಲ್ಲದ ಪಯಣಮುಂ
ಪಟ್ಟಣಮಿಲ್ಲದ ರಾಜ್ಯಮುಂ
ಕಿಚ್ಚಿಲ್ಲದಡುಗೆಯುಂ
ನೆಚ್ಚಿಲ್ಲದ ಪೆಂಡತಿಯುಂ
ದಯೆಯಿಲ್ಲದ ನೆಗೞ್ತೆಯುಂ
ನಯಮಿಲ್ಲದ ಸೇವೆಯುಂ
ಬಂಡಮಿಲ್ಲದಂಗಡಿಯುಂ
ಗಂಡನಿಲ್ಲದ ಸತಿಯುಂ
ಮೊದಲಿಲ್ಲದ ಪರದುಂ
ಮದಮಿಲ್ಲದಾನೆಯುಂ
ನೀರಿಲ್ಲದೂರುಂ
ಕೇರಿಲ್ಲದ ಮನೆಯುಂ
ಶ್ರುತಮಿಲ್ಲದ ತಪಮುಂ
ತುಪ್ಪವಿಲ್ಲದೂಟಮುಂ
ಸಮಱಿದರುಸನಮಿಲ್ಲದ ದಾನಮುಂ ತಪಮುಂ ಜಪಮುಂ ದರ್ಮಮುಮೊಪ್ಪಲಾರ್ಕುಮೆ?
----
ತಿರಿದಾಕೂಳಂ ನೀರೊಳ್
ಗರಗರನಪ್ಪಂತು ಕರ್ಚಿ ಮೇಣುಂಡಪರೋ
ಪರಿಯೊಳ್ ಮೇಣ್ಮಿಂದಪರೋ
ಮರುಳೀತಂ ಶ್ರವಣರಾವ ತಪಂ ಕಂಡರ್
ಬೇಡಂ ಮಾಣಿಕಮೊಂದಂ
ಕಾಡೊಳ್ ಕಂಡೊರ್ಮೆ ಮೆಲ್ದು ಪಗಿನಲ್ಲೆಂದೀ
ಡಾಡಿದನೆಂಬೀ ನಾಣ್ಣುಡಿ
ನಾಡೆಯುಮೆಸೆದಪುದು ದುರಿತವಶದಿಂದಿವನೊಳ್
ಬಿಡಿಸದರೆ,
ಬೇಡಂ ಮಾಣಿಕಮ್ ಒಂದಂ
ಕಾಡೊಳ್ ಕಂಡ್ ಒರ್ಮೆ ಮೆಲ್ದು ಪಗಿನಲ್ ಎಂದ್
ಈಡಾಡಿದನ್ ಎಂಬ್ ಈ ನಾಣ್ಣುಡಿ
ನಾಡೆಯುಮ್ ಎಸೆದಪುದು ದುರಿತವಶದಿಂದ್ ಇವನೊಳ್
ಪಗಿನ= ಅಂಟು,ರಸ
ಈಡಾಡಿದನ್ = ಬಿಸಾಡಿದನ್
ನಾಡೆಯುಮ್ = ಹೆಚ್ಚಾಗೆ
ಎಸೆದಪುದು = ಕಂಡು ಬರುವುದು.
ಬಿತ್ತರದಿಂ ಕುರುಡಂ ಕ
ಣ್ಬೆತ್ತಂತಿರೆ ರಾಗಮೊದವೆ ಬೆಲೆವೆಣ್ ಪೆಣ್ಣಂ
ಪೆತ್ತಂತಿರೆ ಪಾರ್ವಂ ಮ
ಣ್ಬೆತ್ತಂತಿರೆ ಪಿರಿದು ಸಂತಸಂ ಮಿಗೆ ಮನದೊಳ್
ಎಲ್ಲರಿಗೂ ಗೊತ್ತಿರುವಂತೆ,
ಕುರುಡನೊಬ್ಬನಿಗೆ ಕಣ್ ಬಂದರೆ
ಬೆಲೆವೆಣ್ ಪೆಣ್ಣಂ ಹೆತ್ತಿದರೆ (???)
ಹಾರುವ ಮಣ್ಬೆತ್ತಂತಿರೆ ( ????)
ಅದು ಹಿರಿದಾದ ವಿಶೇಶವಾದ ಸಂತಸ
ಬಾೞೆಯ ಕರ್ಜೂರದ ಕಿ
ತ್ತೀಳೆಯ ಕಂಮರದ ರಂಜಿಪಿಮ್ಮಾವಿನ ಪೇ
ರೀಳೆಯ ನಾರಂಗದ ಕಂ
ಚೀಳೆಯ ತನಿವಣ್ಣನಿಕ್ಕೆ ಮೇಲ್ದಾದರದಿಂ
ತನಿ= ಒಳ್ಳೆಯ, ಚೆನ್ನಾದ
ತನಿವಣ್ಣು = ಒಳ್ಳೆಯ ಹಣ್ಣುಗಳು
ಕಿತ್ತೀಳೆ = ಕಿತ್ತಳೆ
ಕಂಚೀಳೆ = ?
ಕಂಮರ = ?
ಪೇರೀಳೆ = ?
ರಂಜಿಪಿಮ್ = ರಂಜಿಸಿ
ಕುಂದದಿನಿಸಂ ಮನಕೆ ಬಂದುಣಿಸನುಂಡು ಪದ
ಪಿಂದೆ ಪೆಱತೇಂ ಕೆಱೆಗೆ ಪೋಗಿ ತಿಳಿನೀರಂ
ಮಿಂದು ಬಿಡದೂರೊಳಗಣೊಂದುಲಿವ ಮಾತುಗಳ
ದಂದುಗದೊಳಾರ್ತೆಸಗಿ ಕೂರ್ತಿರದೆ ನಿಚ್ಚಂ
ನಸುಗುನ್ನಿ ಮುಟ್ಟದಂತಿರೆ
ಬಸಮಲ್ಲದೆ ತಿಂಬ ಮೆಯ್ಯ ತಿನಿಸಿಂಗಂ ಸಯ್
ರಿಸಲಾರದೆರಡು ಕಯ್ಯಿಂ
ಮಸೈಗಿ ಮನಂಗೆಟ್ಟು ಮರುಳವೊಲ್ತುಱಿಸುತ್ತುಂ
ನಯಸೇನನ ಸಲೀಸಾದ ಸಾಲುಗಳು - ಬಿಡಿ ೮ - ಕೆಟ್ಟವರ/ಸಿತಗರ ಒಡನಾಟ
ಕೆಟ್ಟವರ ಒಡನಾಟವನ್ನು ಬಲ್ ಚೆನ್ನಾಗಿ ಹೋಲಿಕೆಗಳ ಮೂಲಕ ಬಣ್ಣಿಸಿದ್ದಾನೆ.
ಮೊದಲಿಂ ಪಂದಿಗಳೊಡನಾ
ಡಿದ ಕಱುವುಂ ಪಂದಿಯಂತೆ ಪೇಲಂ ತಿಂಗೆಂ
ಬುದು ನಾಣ್ಣುಡಿ ತಾನದು ತ
ಪ್ಪದು ಸಿತಗರ ಕೂಟದಿಂದೆ ಕೆಡದವರೊಳರೇ
ತಿರುಳು: ಹೇಗೆ ಮೊದಲಿಂದಲೂ ಹಂದಿಗಳೊಡನೆ ಆಡಿದ ಕರುವು(ಹಸುವಿನ) ಹಂದಿಯಂತೆ ಹೇಲನ್ನು ತಿನ್ನುವುದು ಹಾಗೆ ಕೆಟ್ಟವರೊಡನೆ(ಸಿತಗರೊಡನೆ) ಇದ್ದವರು ಕೆಡದೆ ಇರುವರೆ?
ಆರಯ್ದು ನೋಡೆ ತೊಱೆಗಳ
ನೀರುಂ ವಾರಿದಿಯ ನೀರ ಪೊರ್ದುಗೆಯಿಂದಂ
ಸಾರಂಗೆಟ್ಟುಪ್ಪಪ್ಪವೊ
ಲಾರುಂ ದುರ್ಜನ ಕೂಟದಿಂದಂ ಕೆಡರೇ
ತಿರುಳು: ಹೇಗೆ ತೊರೆಗಳ ನೀರು ಕಡಲ ನೀರ ಸೇರಿಕೆಯಿಂದ ಉಪ್ಪಾಗುವುದೊ ಹಾಗೆ ಹುಡುಕಿ ನೋಡಿದರೂ ಕೂಡ ಕೆಟ್ಟವರ ಕೂಟದಿಂದ ಕೆಡದೇ ಇರುವವರು ಸಿಗರು.
ಕಡುತಣ್ಪು ಕೆಟ್ಟು ಕಿಚ್ಚಿನೊ
ಳೊಡಗೂಡಿದ ನೀರ್ ಬಳಿಕ್ಕೆ ತೀವ್ರತೆಯಿಂ ಕಯ್
ಸುಡುವಂತೆ ನೋಡೆ ದುರ್ಜನ
ರೊಡಗೂಡಿದ ಮಾನಿಸರ್ಗೆ ಸದ್ಗುಣಮುಂಟೇ
ತಿರುಳು : ಕಡು ತಣ್ಣಗಿರುವ ನೀರು ಬೆಂಕಿಯಿಂದ ಕಾದ ಬಳಿಕ ಕಯ್ ಸುಡುವಂತಾಗುತ್ತದೊ ಹಾಗೆ ದುರ್ಜನರ ಒಡಗೂಡಿದ ಮಾನಿಸರಲ್ಲಿ ಸದ್ಗುಣವಿರಲು ಉಂಟೇ/ಸಾದ್ಯವೆ?
ಪೇಲಂ= ಹೇಲು
ಸಿತಗ = ಕೆಟ್ಟವ, ಜಾರ, ದುಶ್ಟ
ಆರಯ್ದು = ಹುಡುಕಿ, ಅನ್ವೇಶಿಸಿ
ತಣ್ಪು = ತಣ್ಣನೆಯ
ಪೊರ್ದುಗೆ = ಹೊದ್ದುಗೆ, ಹೊದ್ಕೆ,ಸೇರಿಕೆ , ಕೂಟ
ಬಳಿಕ್ಕೆ = ಬಳಿಕ
ಇಲ್ಲಿ ನಯಸೇನ 'ಕೆಟ್ಟು' ಒರೆಯನ್ನು ಚೆನ್ನಾಗಿ ಬಳಸಿದ್ದಾನೆ.
ಕೆಟ್ಟು = ಬಿಟ್ಟು, ಸಾರಂಗೆಟ್ಟು= ಸಾರವನ್ನು ಬಿಟ್ಟು