ಶುಕ್ರವಾರ, ಜೂನ್ 04, 2010

ಗಗನಚುಕ್ಕಿಯ ಹರಿವು, ಚಿಮ್ಮು

ಸತ್ತೇಗಾಲದ ಸೇತುವೆ, ಕಾವೇರಿ ಮತ್ತು ಮಗ್ಗುಲಲ್ಲೇ ಬೆಟ್ಟ

ಗಗನಚುಕ್ಕಿ ಗುಂಡಿಯಲ್ಲಿ ಚಿಮ್ಮುವ ಹನಿ

ಬುಧವಾರ, ಜೂನ್ 02, 2010

ಸಂತ ಕ್ಲಾರದ ಹಕ್ಕಿ



ಇದು ಪಾರಿವಾಳದ ಜಾತಿಗೆ ಸೇರಿದ ಹಕ್ಕಿ ಇರಬಹುದು. ಕ್ಯಾಲಿಪೋರ್ನಿಯಾದ ಸಂತ ಕ್ಲಾರದಲ್ಲಿ ನೋಡಿದ್ದು

ಮೇ ಹೂವು ( May Flower)

ಇದರ ನಿಬ್ಬರವೇನೆಂದರೆ ವರುಶಕ್ಕೆ ಒಮ್ಮೆ ಮಾತ್ರ ಅಂದರೆ ಬರೀ ಮೇ ತಿಂಗಳಲ್ಲಿ ಅರಳುವ ಹೂವು


ಒಲವ ಹಕ್ಕಿ





ಕೆಂಪು ದಾಸವಾಳ(ಗೋಗಿ)

ಚಿತ್ರದುರ್ಗದ ಬಂಡೆಗಳ ಅಂಚಿನ ಡೊಂಕು

ಚಿತ್ರದುರ್ಗದ ಕೋಟೆಯ ಒಂದು ಗೋಡೆ



ಆದರೆ ಪೋಟೊ ತೆಗೆಯುವಾಗ ಕ್ಯಾಮೆರ ಬಗ್ಗಿಸಿದ್ದಿರಿಂದ ಪಿರಮಿಡ್ ತರ ಕಾಣ್ತಾ ಇದೆ.

ಚಿತ್ರದುರ್ಗ ಕೋಟೆಯ ಹೆಬ್ಬಾಗಿಲು

ಚಿತ್ರದುರ್ಗದಲ್ಲಿ ಬಂಡೆಗಳ ನಡುವೆ ಮರ

ಶನಿವಾರ, ಮೇ 29, 2010

ಅಂಕು-ಡೊಂಕಾದ ಇಳಿಜಾರು ದಾರಿ

ಬಾನಿಗೆ ಏಣಿ ?

ಗೋಪಾಲಸ್ವಾಮಿಯ ಬೆಟ್ಟದ ಹಸಿರು ಗುಡ್ಡ

ಬಂಡಿಪುರ ಕಾಡಿನ ಬಗ್ಗೆ ಅರಿಮೆಗಳು

ಬಂಡಿಪುರದಲ್ಲಿ ಆನೆ, ಹಿಂಬದಿಯಲ್ಲಿ ಪೊದೆ

ಈ ಹೂವಿನ ಹೆಸರೇನು ( What is the name of this flower) ?- ಇಕ್ಸೋರ ಕೊಕಿನಿಯಾ



ಹೆಚ್ಚಿನ ಅರಿಮೆಗೆ ಇಲ್ಲಿ ಚಿಟುಕಿಸಿ

ನಸುಗೆಂಪು(ಪಿಂಕ್) ದಾಸವಾಳ (ಗೋಗಿ)



Ka. gōgi Deckanee hemp, Hibiscus cannabinus. Te. gō̃gu, gōnu id.; gōṅgūra leaves of H. cannabinus. DED(S) 1813

ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಇಲ್ಲಿ ಚಿಟುಕಿಸಿ

ಎತ್ತರದ ಕಟ್ಟಡ v/s ಹಸಿರಿನ ಮರ

ಕದ್ರಾ ಅಣೆಕಟ್ಟಿನ ಹಿನ್ನೀರು

ಮರ, ಬಾನು ಮತ್ತು ಜೆಟ್ಟಿನ ಹಾದಿ

ಐಹೊಳೆಯಲ್ಲಿರುವ ಶಿವನ ಗುಡಿಯ ಮೇಲಿರುವ ಕೆತ್ತನೆ

ಐಹೊಳೆಯ ದ್ರಾವಿಡ ಶೈಲಿಯ(South Indian) ಗುಡಿ

ಸಿಂಗಾಪುರದಲ್ಲಿ ಹೊತ್ತು ಮುಳುಗುತ್ತಿರುವುದು

ಇದು ಯಾವ ಹೂವು ಹೇಳುವಿರಾ? --- ಮಳೆ ಲಿಲಿ






ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಇಲ್ಲಿ ಚಿಟುಕಿಸಿ

ಶುಕ್ರವಾರ, ಮೇ 28, 2010

ಪಣಂಬೂರಿನ ಕರೆಯಲ್ಲಿ ಹೊತ್ತು ಮುಳುಗುತ್ತಿರುವುದು

ಪಣಂಬೂರಿನಲ್ಲಿ ನೇಸರನು ಮುಳುಗುತ್ತಿರುವುದು

ಮೋಡವೆಂಬ ಮಬ್ಬಿಗ ನೇಸರನೆಂಬ ಬೆಂಕಿಚೆಂಡನ್ನು ನುಂಗುತ್ತಿರುವುದು

ಬಾದಾಮಿಯ ಹತ್ತಿರವಿರುವ ಬನಶಂಕರಿ ಗುಡಿಯ ಗೋಪುರ

ಬಾದಾಮಿಯ ಹತ್ತಿರವೆ ಸಿಕ್ಕ ಸೂರ್ಯಕಾಂತಿ(ನೇಸರ್ಗದಿರ) ಹೂವು

ಬಾದಾಮಿಯ ಗವಿಗಳ ನಡುವೆ ಇರುವ ಕೆರೆ

ಬಾದಾಮಿಯ ಗವಿಗಳು ಬಾನಿನ ಹಿನ್ನಲೆಯಲ್ಲಿ

ಐಹೊಳೆಯ ದುರ್ಗದ ಗುಡಿ

ಕೂಡಲಸಂಗಮದ ಚೆಲುವಿನ ನೋಟ

ಬುಧವಾರ, ಫೆಬ್ರವರಿ 17, 2010

ನಯಸೇನನ ಸಲೀಸಾದ ಸಾಲುಗಳು

ನಯಸೇನನ ಸಲೀಸಾದ ಸಾಲುಗಳು- ಬಿಡಿ ೩ - ಕೆಡುನುಡಿವ ಕಬ್ಬಿಗರು
ಕಬ್ಬಿಗರು ನಯಸೇನ ಧರ್ಮಾಮೃತಂ ದರ್ಮಾಮ್ರುತಂ ಮಡಕೆ ಅಡಕಿಲ

ನಯಸೇನ ಒಂದು ಕ್ರುತಿಯ ಬಗ್ಗೆ ಕೆಡುನುಡಿವವರ ಬಗ್ಗೆ ಒಳೆ ಅಬಿಪ್ರಾಯ ಮೂಡಿಸಿದ್ದಾನೆ. ಕೆಡುನುಡಿವವರಿಂದಲೇ ಒಂದು ಕ್ರುತಿಯ ಓರೆ-ಕೋರೆಗಳು ಬೆಳಕಿಗೆ ಬರುತ್ತವೆ ಎಂಬುದು ಅವನ ನಂಬುಗೆಯಾಗಿರಬಹುದು.

ಅಡಕಿಲ ಮಡಕೆಗಳಂ ಸ
ಯ್ತಿಡಲಱಿವುವೆ ನಾಯ್ಗಳೊಡೆವುವಲ್ಲದೆ ಕ್ರುತಿಯಂ
ಕಿಡೆನುಡಿವರಲ್ಲದೇಂ ಜಡ
ರೊಡಂಬಡಲ್ತಿದ್ದಿನುಡಿಯಬಲ್ಲರೆ ಕವಿವೋಲ್

ಬಿಡಿಸಿದರೆ,
ಅಡಕಿಲ ಮಡಕೆಗಳಂ ಸಯ್ತ್ ಇಡಲ್ ಅಱಿವುವೆ ನಾಯ್ ಗಳ್ ಒಡೆವುವು ಅಲ್ಲದೆ ಕ್ರುತಿಯಂ ಕಿಡೆನುಡಿವರಲ್ಲದೇಂ ಜಡರ್ ಒಡಂಬಡಲ್ ತಿದ್ದಿ ನುಡಿಯಬಲ್ಲರೆ ಕವಿವೋಲ್

ಹೇಗೆ ನಾಯಿಗಳಿಗೆ ಒಂದರಮೇಲೊಂದರಂತೆ ಮಡಕೆಗಳನ್ನು ಸರಿಯಾಗಿಡಲ್ ಗೊತ್ತಿಲ್ಲದೆ ಅವುಗಳನ್ನು ಒಡೆಯುತ್ತವೊ ಹಾಗೆ ಕ್ರುತಿಯ ಬಗ್ಗೆ ಕೆಟ್ಟ ಮಾತುಗಳಾಡುವವರಲ್ಲದೆ ಜಡರು(ಹೆಚ್ಚು ಮಾತನಾಡದವರು, ಸುಮ್ಮನೆ ಇರುವವರು,ಎಲ್ಲದಕ್ಕೂ ಒಪ್ಪುಗೆ ಸೂಚಿಸುವವರು) ಒಡೆಯಬಲ್ಲರೆ (ತಿದ್ದಿ ನುಡಿಯಬಲ್ಲರೆ)?
ನಾಯಿಗಳಿಂದಲೆ ಮಡಕೆ ಎಶ್ಟು ಗಟ್ಟಿ ಅಂತ ಗೊತ್ತಾಗುವುದು ಹಾಗೆ ಕಿಡುನುಡಿವುವರಿಂದಲೇ ಕ್ರುತಿಯ ಬಗ್ಗೆ ದಿಟವಾದ ಒಳ್ಳೆ ವಿಮರ್ಶೆ ಬರುವುದು.

ಅಡಕಿಲ = ಒಂದರ ಮೇಲೊಂದರಂತೆ
ಒಡಂಬಡು = ಒಪ್ಪು, ಅಂಗೀಕರಿಸು

ಯಾಕೊ ಮೇಲಿನ ಬಿಡಿಸಿಕೆ ಅಶ್ಟು ಸರಿಯಾಗಿಲ್ಲ ಅನ್ಸುತ್ತೆ...:(

---------------------------------
ನಯಸೇನನ ಸಲೀಸಾದ ಸಾಲುಗಳು- ಬಿಡಿ ೪ - ಸಹಜಮಿಲ್ಲದಾತನ ಕಬ್ಬಂ

ನಯಸೇನ ಕಬ್ಬಕ್ಕೆ ಸಹಜತನ ಯಾಕಿರಬೇಕು ಎಂಬುದನ್ನ ಒತ್ತಿ ಹೇಳಲು ಮಳೆ ನೀರು ಮತ್ತು ಪನ್ನೀರು(ಪೊಯ್ನೀರ್) ಎಂಬ ಉಪಮೆಗಳನ್ನು ಬಳಸಿಕೊಂಡು ಚೆನ್ನಾಗಿ ಬಣ್ಣಿಸಿದ್ದಾನೆ. ಸಕ್ಕತ್

ಮೞೆಯಿಲ್ಲದೆ ಪೊಯ್ನೀರಿಂ
ಬೆಳಗುಮೆ ಧರೆ ಮಱುಗಿ ಕುದಿದು ಶಾಸ್ತ್ರದ ಬಲದಿಂ
ದಳಿಪಿಂ ಪೇೞ್ವೊಡಮದು ಕೋ
ಮಳಮಕ್ಕುಮೆ ಸಹಜಮಿಲ್ಲದಾತನ ಕಬ್ಬಂ

ಹೇಗೆ ಮಳೆಯಿಲ್ಲದೆ ಉರಿದು/ಬಿಸಿಯಾಗಿರುವ ದರೆ(ಬುವಿ)ಬರೀ ಎರಚಿದ ನೀರಿನಿಂದ ತಣ್ಣಗಾಗುವುದಿಲ್ಲವೊ ಹಾಗೆ ಕೇವಲ ಶಾಸ್ತ್ರಬಲದ ಚಟಕ್ಕೆ ಬಿದ್ದು(ಎರಚಿದ ನೀರಿನಂತೆ) ಸಹಜತನವನ್ನು(ಮಳೆ) ಕಳೆದುಕೊಂಡ ಕಬ್ಬಿಗನ ಕಬ್ಬ ಕೋಮಳವಾಗುವುದಿಲ್ಲ
ಒಟ್ಟಿನಲ್ಲಿ ಕಬ್ಬಕ್ಕೆ ಸಹಜತನ ಬಲು ಮುಕ್ಯ.

ಮೞೆ = ಮಳೆ
ಪೊಯ್ನೀರ್ = ಎರಚುವ ನೀರು, ಎರಗಿದ ನೀರು
ಮಱುಗಿ = ಉರಿದು, ಬಿಸಿಯಾಗು
ಅಳಿಪಿಂ = ಚಟಕ್ಕೆ ಬಿದ್ದು ಬಯಸು, ನಲ್ಮೆಗೆ ಒಳಗಾಗು

ಗಮನಿಕೆ:
೧) ಈಗಲೂ ನಾವು ಮದುವೆ ಮನೆಗಳಿಗೆ ಹೋದರೆ ಬಾಗಿಲಲ್ಲಿ ಪನ್ನೀರನ್ನು ಎರಚುವ ವಾಡಿಕೆಯಿದೆ. ಅದು ದಿಟವಾಗಲೂ ಪೊಯ್ನೀರ್ ಅಂದರೆ 'ಎರಗುವ ನೀರು'. ಮಾತಿನಲ್ಲಿ ಪೊಯ್ನೀರ್ => ಪನ್ನೀರ್ ಆಗಿದೆ.
೨) ಅಳಿಪು = ಕೂರ್, ಪ್ರೀತಿ, ನಲ್ಮೆ ,ಈ ಹಿಂದೆ 'ಅಳಿಯ' ಪದದ ಬಗ್ಗೆ ಹೇಳಿದ್ದಾಗ ಇದರ ಬಗ್ಗೆ ಹೇಳಿದ್ದೆ.
೩) ಮಱುಗಿ - ಇದನ್ನು ಕವಿರಾಜಮಾರ್ಗದಲ್ಲಿ ಕೂಡ ಬಳಸಲಾಗಿದೆ
ಕವಿರಾಜಮಾರ್ಗ ಬಿಡಿ-೧ , ೫೮ ನೇ ಪದ್ಯ
ತಱಿಸಂದಾ ಸಕ್ಕದಮುಮ
ನಱಿಯದೆ ಕನ್ನಡಮುಮಂ ಸಮಾಸೋಕ್ತಿಗಳೊಳ್
ಕುಱಿತು ಬೆರೆಸಿದೊಡೆ ವಿರಸಂ
ಮಱುಗುವ ಪಾಲ್ಗಳೆಯ ಪನಿಗಳಂ ಬೆರೆಸಿದವೋಲ್

೪)



ಉಪ್ಪಿಲ್ಲದೆ ಕೇಳೊಕ್ಕಳ
ತುಪ್ಪವನೆಱೆದುಣ್ಬೆನೆಂಬೊಡುಂಬುಣಿಸೇಂ ಸ್ವಾ
ದಪ್ಪುದೆ ಸಹಜಂ ತನಗಿನಿ
ಸಪ್ಪೊಡಮಿಲ್ಲದನ ಕವಿತೆ ರುಚಿವಡೆದಪುದೇ

ಇದಿಲ್ಲದ ಇದುಂ
--------
ಕಂಪಿಲ್ಲದ ತುಪ್ಪಮುಂ
ಪೆಂಪಿಲ್ಲದ ಪ್ರಬುತ್ವಮುಂ
ಸ್ನೇಹಮಿಲ್ಲದ ಕೋಡುಂ
ಮೋಹಮಿಲ್ಲದ ಬಾೞುಂ
ಬಕುತಿಯಿಲ್ಲದ ಕೊಂಡಾಟಮುಂ
ಶಕುತಿಯಿಲ್ಲದ ಸೆಣಸುಂ
ಕೋಡಿಲ್ಲದ ಸಿರಿಯುಂ
ನಾಡಿಲ್ಲದರಸುಂ
ಪಲವಿಲ್ಲದ ತೋಟಮುಂ
ಕುಲಮಿಲ್ಲದ ಮಹಿಮೆಯುಂ
ಬಟ್ಟೆಯಿಲ್ಲದ ಪಯಣಮುಂ
ಪಟ್ಟಣಮಿಲ್ಲದ ರಾಜ್ಯಮುಂ
ಕಿಚ್ಚಿಲ್ಲದಡುಗೆಯುಂ
ನೆಚ್ಚಿಲ್ಲದ ಪೆಂಡತಿಯುಂ
ದಯೆಯಿಲ್ಲದ ನೆಗೞ್ತೆಯುಂ
ನಯಮಿಲ್ಲದ ಸೇವೆಯುಂ
ಬಂಡಮಿಲ್ಲದಂಗಡಿಯುಂ
ಗಂಡನಿಲ್ಲದ ಸತಿಯುಂ
ಮೊದಲಿಲ್ಲದ ಪರದುಂ
ಮದಮಿಲ್ಲದಾನೆಯುಂ
ನೀರಿಲ್ಲದೂರುಂ
ಕೇರಿಲ್ಲದ ಮನೆಯುಂ
ಶ್ರುತಮಿಲ್ಲದ ತಪಮುಂ
ತುಪ್ಪವಿಲ್ಲದೂಟಮುಂ
ಸಮಱಿದರುಸನಮಿಲ್ಲದ ದಾನಮುಂ ತಪಮುಂ ಜಪಮುಂ ದರ್ಮಮುಮೊಪ್ಪಲಾರ್ಕುಮೆ?

----
ತಿರಿದಾಕೂಳಂ ನೀರೊಳ್
ಗರಗರನಪ್ಪಂತು ಕರ್ಚಿ ಮೇಣುಂಡಪರೋ
ಪರಿಯೊಳ್ ಮೇಣ್ಮಿಂದಪರೋ
ಮರುಳೀತಂ ಶ್ರವಣರಾವ ತಪಂ ಕಂಡರ್

ಬೇಡಂ ಮಾಣಿಕಮೊಂದಂ
ಕಾಡೊಳ್ ಕಂಡೊರ್ಮೆ ಮೆಲ್ದು ಪಗಿನಲ್ಲೆಂದೀ
ಡಾಡಿದನೆಂಬೀ ನಾಣ್ಣುಡಿ
ನಾಡೆಯುಮೆಸೆದಪುದು ದುರಿತವಶದಿಂದಿವನೊಳ್

ಬಿಡಿಸದರೆ,

ಬೇಡಂ ಮಾಣಿಕಮ್ ಒಂದಂ
ಕಾಡೊಳ್ ಕಂಡ್ ಒರ್ಮೆ ಮೆಲ್ದು ಪಗಿನಲ್ ಎಂದ್
ಈಡಾಡಿದನ್ ಎಂಬ್ ಈ ನಾಣ್ಣುಡಿ
ನಾಡೆಯುಮ್ ಎಸೆದಪುದು ದುರಿತವಶದಿಂದ್ ಇವನೊಳ್

ಪಗಿನ= ಅಂಟು,ರಸ
ಈಡಾಡಿದನ್ = ಬಿಸಾಡಿದನ್
ನಾಡೆಯುಮ್ = ಹೆಚ್ಚಾಗೆ
ಎಸೆದಪುದು = ಕಂಡು ಬರುವುದು.

ಬಿತ್ತರದಿಂ ಕುರುಡಂ ಕ
ಣ್ಬೆತ್ತಂತಿರೆ ರಾಗಮೊದವೆ ಬೆಲೆವೆಣ್ ಪೆಣ್ಣಂ
ಪೆತ್ತಂತಿರೆ ಪಾರ್ವಂ ಮ
ಣ್ಬೆತ್ತಂತಿರೆ ಪಿರಿದು ಸಂತಸಂ ಮಿಗೆ ಮನದೊಳ್

ಎಲ್ಲರಿಗೂ ಗೊತ್ತಿರುವಂತೆ,
ಕುರುಡನೊಬ್ಬನಿಗೆ ಕಣ್ ಬಂದರೆ
ಬೆಲೆವೆಣ್ ಪೆಣ್ಣಂ ಹೆತ್ತಿದರೆ (???)
ಹಾರುವ ಮಣ್ಬೆತ್ತಂತಿರೆ ( ????)
ಅದು ಹಿರಿದಾದ ವಿಶೇಶವಾದ ಸಂತಸ

ಬಾೞೆಯ ಕರ್ಜೂರದ ಕಿ
ತ್ತೀಳೆಯ ಕಂಮರದ ರಂಜಿಪಿಮ್ಮಾವಿನ ಪೇ
ರೀಳೆಯ ನಾರಂಗದ ಕಂ
ಚೀಳೆಯ ತನಿವಣ್ಣನಿಕ್ಕೆ ಮೇಲ್ದಾದರದಿಂ

ತನಿ= ಒಳ್ಳೆಯ, ಚೆನ್ನಾದ
ತನಿವಣ್ಣು = ಒಳ್ಳೆಯ ಹಣ್ಣುಗಳು
ಕಿತ್ತೀಳೆ = ಕಿತ್ತಳೆ
ಕಂಚೀಳೆ = ?
ಕಂಮರ = ?
ಪೇರೀಳೆ = ?
ರಂಜಿಪಿಮ್ = ರಂಜಿಸಿ

ಕುಂದದಿನಿಸಂ ಮನಕೆ ಬಂದುಣಿಸನುಂಡು ಪದ
ಪಿಂದೆ ಪೆಱತೇಂ ಕೆಱೆಗೆ ಪೋಗಿ ತಿಳಿನೀರಂ
ಮಿಂದು ಬಿಡದೂರೊಳಗಣೊಂದುಲಿವ ಮಾತುಗಳ
ದಂದುಗದೊಳಾರ್ತೆಸಗಿ ಕೂರ್ತಿರದೆ ನಿಚ್ಚಂ

ನಸುಗುನ್ನಿ ಮುಟ್ಟದಂತಿರೆ
ಬಸಮಲ್ಲದೆ ತಿಂಬ ಮೆಯ್ಯ ತಿನಿಸಿಂಗಂ ಸಯ್
ರಿಸಲಾರದೆರಡು ಕಯ್ಯಿಂ
ಮಸೈಗಿ ಮನಂಗೆಟ್ಟು ಮರುಳವೊಲ್ತುಱಿಸುತ್ತುಂ


ನಯಸೇನನ ಸಲೀಸಾದ ಸಾಲುಗಳು - ಬಿಡಿ ೮ - ಕೆಟ್ಟವರ/ಸಿತಗರ ಒಡನಾಟ

ಕೆಟ್ಟವರ ಒಡನಾಟವನ್ನು ಬಲ್ ಚೆನ್ನಾಗಿ ಹೋಲಿಕೆಗಳ ಮೂಲಕ ಬಣ್ಣಿಸಿದ್ದಾನೆ.

ಮೊದಲಿಂ ಪಂದಿಗಳೊಡನಾ
ಡಿದ ಕಱುವುಂ ಪಂದಿಯಂತೆ ಪೇಲಂ ತಿಂಗೆಂ
ಬುದು ನಾಣ್ಣುಡಿ ತಾನದು ತ
ಪ್ಪದು ಸಿತಗರ ಕೂಟದಿಂದೆ ಕೆಡದವರೊಳರೇ

ತಿರುಳು: ಹೇಗೆ ಮೊದಲಿಂದಲೂ ಹಂದಿಗಳೊಡನೆ ಆಡಿದ ಕರುವು(ಹಸುವಿನ) ಹಂದಿಯಂತೆ ಹೇಲನ್ನು ತಿನ್ನುವುದು ಹಾಗೆ ಕೆಟ್ಟವರೊಡನೆ(ಸಿತಗರೊಡನೆ) ಇದ್ದವರು ಕೆಡದೆ ಇರುವರೆ?

ಆರಯ್ದು ನೋಡೆ ತೊಱೆಗಳ
ನೀರುಂ ವಾರಿದಿಯ ನೀರ ಪೊರ್ದುಗೆಯಿಂದಂ
ಸಾರಂಗೆಟ್ಟುಪ್ಪಪ್ಪವೊ
ಲಾರುಂ ದುರ್ಜನ ಕೂಟದಿಂದಂ ಕೆಡರೇ

ತಿರುಳು: ಹೇಗೆ ತೊರೆಗಳ ನೀರು ಕಡಲ ನೀರ ಸೇರಿಕೆಯಿಂದ ಉಪ್ಪಾಗುವುದೊ ಹಾಗೆ ಹುಡುಕಿ ನೋಡಿದರೂ ಕೂಡ ಕೆಟ್ಟವರ ಕೂಟದಿಂದ ಕೆಡದೇ ಇರುವವರು ಸಿಗರು.

ಕಡುತಣ್ಪು ಕೆಟ್ಟು ಕಿಚ್ಚಿನೊ
ಳೊಡಗೂಡಿದ ನೀರ್ ಬಳಿಕ್ಕೆ ತೀವ್ರತೆಯಿಂ ಕಯ್
ಸುಡುವಂತೆ ನೋಡೆ ದುರ್ಜನ
ರೊಡಗೂಡಿದ ಮಾನಿಸರ್ಗೆ ಸದ್ಗುಣಮುಂಟೇ

ತಿರುಳು : ಕಡು ತಣ್ಣಗಿರುವ ನೀರು ಬೆಂಕಿಯಿಂದ ಕಾದ ಬಳಿಕ ಕಯ್ ಸುಡುವಂತಾಗುತ್ತದೊ ಹಾಗೆ ದುರ್ಜನರ ಒಡಗೂಡಿದ ಮಾನಿಸರಲ್ಲಿ ಸದ್ಗುಣವಿರಲು ಉಂಟೇ/ಸಾದ್ಯವೆ?


ಪೇಲಂ= ಹೇಲು
ಸಿತಗ = ಕೆಟ್ಟವ, ಜಾರ, ದುಶ್ಟ
ಆರಯ್ದು = ಹುಡುಕಿ, ಅನ್ವೇಶಿಸಿ
ತಣ್ಪು = ತಣ್ಣನೆಯ
ಪೊರ್ದುಗೆ = ಹೊದ್ದುಗೆ, ಹೊದ್ಕೆ,ಸೇರಿಕೆ , ಕೂಟ
ಬಳಿಕ್ಕೆ = ಬಳಿಕ

ಇಲ್ಲಿ ನಯಸೇನ 'ಕೆಟ್ಟು' ಒರೆಯನ್ನು ಚೆನ್ನಾಗಿ ಬಳಸಿದ್ದಾನೆ.
ಕೆಟ್ಟು = ಬಿಟ್ಟು, ಸಾರಂಗೆಟ್ಟು= ಸಾರವನ್ನು ಬಿಟ್ಟು

ಮಂಗಳವಾರ, ಡಿಸೆಂಬರ್ 15, 2009

ಮನೆತಿಂಡಿ -ಕನ್ನಡಿಗರ ತಿಂಡಿ



ಬೆಂಗಳೂರಿನಲ್ಲಿ ದೇವೆಗೌಡ ಪೆಟ್ರೋಲ್ ಬಂಕ್ ಮತ್ತು ಕಾಮಾಕ್ಯ ಸಿನಿಮನೆಗಳ ನಡುವೆ ಈ ’ಮನೆತಿಂಡಿ’ ಹೋಟೆಲು ತಲೆಯೆತ್ತಿದೆ.
ಅಪ್ಪಟ ಕನ್ನಡದ/ಕನ್ನಡಿಗರ ತಿನಿಸುಗಳಾದ ಮನೆ ಉಪ್ಪಿಟ್ಟೂ, ಬೆಣ್ಣೆ ತಟ್ಟೆ ಇಡ್ಲಿ, ಗೋಳಿ ಬಜ್ಜಿ, ಮದ್ದೂರ್ ವಡೆ...ಇನ್ನು ಎಶ್ಟೋಂದು ತಿನಿಸುಗಳು ಸಿಗುತ್ತವೆ. ಹೆಸರಹಲಗೆಯನ್ನ ದೊಡ್ಡದಲ್ಲಿ ಬರೀ ’ಕನ್ನಡ’ದಲ್ಲೆ ಹಾಕಿಸಿ(ಪೋಟೋ ಗಮನಿಸಿ) ಮತ್ತು ’ರುಬ್ಬೋಕಲ್ಲ’ನ್ನೇ ಲೋಗೊ ಮಾಡಿಕೊಂಡು ಅಪ್ಪಟ ಕನ್ನಡ ಸಂಸ್ಕ್ರುತಿಯನ್ನ ಈ ಹೋಟೆಲು ಎತ್ತಿ ಹಿಡಿದಿದೆ ಎಂದು ಹೇಳಿದರೆ ತಪ್ಪಲ್ಲ. ನನಗಂತೂ ತುಂಬ ನಲಿವಾಯಿತು.

ಮನೆತಿಂಡಿ ಸವಿದು ನಾಲಿಗೆಗೆ ಬೆಚ್ಚಗೆ ಮಾಡ್ಕೊಳ್ಳಿ. :)

ಸೋಮವಾರ, ನವೆಂಬರ್ 30, 2009

ಬರತೇಶನ ವಚನಗಳು

ಅರಿವು
-----
ಅರಿವೇ ಗುರುವೆಂದರು ಶರಣರು
ತನ್ನರಿವಿಲ್ಲದೆ ನಿನ್ನರಿವಿಲ್ಲದೆ
ಬಾಳಹೊಳೆ ಹರಿಯಬಲ್ಲುದೇ ಹೇಳು ಬರತೇಶ


ಅರಿವೊಳಗೆ ಸುಳಿವನ್ನಿತ್ತು
ಪರಿವೇ ಇಲ್ಲದೆ ಪರದಾಡಿಸಿ
ಮತ್ತದೆ ನಿಲುವುಗಳನ್ನು ಎಡತಾಕಿಸಿ
ಮೊತ್ತ ಸೊನ್ನೆಯಾಯಿತಲ್ಲೊ ಬರತೇಶ

ಉಂಕು
-----
ಉಂಕಿಸಿದೇ ಇರಲಾರೆ
ಅಂಕು-ಡೊಂಕುಗಳು ತಿದ್ದಲಾರೆ
ಉಂಕು,ಡೊಂಕುಗಳ ನಡುವಿನ
ಸೋಂಕಿಗೆ ಸಿಕ್ಕಿಕೊಂಡೆ ಕಾಣಾ ಬರತೇಶ

ಶನಿವಾರ, ನವೆಂಬರ್ 07, 2009

ತೊರೆದು ನೀ...

ತೊರೆದು ನೀ ಹೋಗದಿರು
ಬರಡೆನ್ನ ಒಡಲು ನೀನಿಲ್ಲದೆ
ಬದುಕ ತುದಿ ಕೂಡಲೆ ಮುಟ್ಟುವೆನು
ತದುಕಬೇಡ ಹೀಗೆ ನಿನ್ನ ಎದೆಗೂಡಿಂದ

ಹಲವು ಅಡತಡೆಗಳನ್ನು ದಾಟಿ
ಒಲಿಸಿ ನಿನ್ನ

ಶನಿವಾರ, ಫೆಬ್ರವರಿ 21, 2009

ಇಂದು ತಾಯ್ನುಡಿ ನಾಳು - ೨೧ ಪೆಬ್ರವರಿ ೨೦೦೯


ಇಂದು ಹಲವು ತಾಯಿನುಡಿಗಳು/ಆಡುನುಡಿಗಳು ಕಣ್ಮರೆ ಆಗಿವೆ/ಆಗುತ್ತಿವೆ. ಇದಕ್ಕೆ ಕೆಲವು ಅಂತೆ ಹೇಳುವ 'ದೊಡ್ಡ'(ಶಿಶ್ಟ) ನುಡಿಗಳು ಓಸುಗರವಾಗಿದೆ.
ಯುನೆಸ್ಕೊ ಇದರ ಬಗ್ಗೆ ಒಂದು ಬರಹ ಹೊರತಂದಿದೆ. ಇಲ್ಲಿಂದ ಪಿಡಿಎಪ್ ಅನ್ನು ಇಳಿಸಿ ನಮ್ಮ ನಾಡಿನಲ್ಲಿ ಕಾಣೆಯಾಗುತ್ತಿರುವ ನುಡಿಗಳ ಬಗ್ಗೆ ತಿಳಿದುಕೊಳ್ಳಬಹುದು.



ಅಲ್ಲಿ ಕೊಟ್ಟಿರುವಂತೆ ನಮ್ಮ ಕನ್ನಡನಾಡಿನಲ್ಲಿರುವ ಕೆಲವು ನುಡಿಗಳು ಇವೆ.
೧. ಕುರುಬ
೨. ಇರುಳ
೩. ತೋಡ (ಊಟಿ ಗುಡ್ಡ ಗಾಡಿನ ನುಡಿ)
೪. ಕೋಟ
೫. ತುಳು
೬. ಕೊಡಗು
೭. ಕೊರಗ
೮. ಬಳ್ಳಾರಿ ( ಈ ತೆರ ನುಡಿ ಇದೆ ಎಂದು ತಿಳಿದಿರಲಿಲ್ಲ)
೯. ಬಡಗ (ಊಟಿ ಗುಡ್ಡಗಾಡಿನ ನುಡಿ)

ಇದರಲ್ಲಿ ಯುನೆಸ್ಕೊದವರು ಹೇಳಿರುವಂತೆ ಕೇವಲ ಕೊಲೊನಿಯಲ್ ನುಡಿಗಳಾದ ಇಂಗಳೀಸ್,ಪ್ರೆಂಚ್,ಸ್ಪಾನಿಶ್ ನುಡಿಗಳು ಇತರೆ ನುಡಿಗಳನ್ನು ನುಂಗಿ ಹಾಕಿದೆ ಎಂದು ಹೇಳಲಾಗುವುದಿಲ್ಲ . ಇದಕ್ಕೆ ಹಲವು ಓಸುಗರಗಳು ಇದ್ದಿರಬೇಕು ಎಂದು ಆಸ್ಟ್ರೇಲಿಯಾದ ಒಬ್ಬ ನುಡಿಯರಿಗರು ಹೇಳಿದ್ದಾರೆ. ಇವುಗಳನ್ನು ಹುಡುಕುವುದೆ ಈ ಯುನೆಸ್ಕೊದವರು ಹಾಕಿಕೊಂಡಿರುವ ಕೆಲಸಗಳು. ಅವುಗಳಲ್ಲಿ ಕೆಲವು ನುಡಿಗಳು ಹಾಳಾಗುವ ಅಂಚಿನಲ್ಲಿವೆ. ಇನ್ನು ಕೆಲವು ಕೆಡುಕಿನ ಹಾದಿಯಲ್ಲಿವೆ. ಇವುಗಳಲ್ಲಿ ಕೊಡಗು, ತುಳು ಗಳ ಅಶ್ಟು ಹದಗೆಟ್ಟಿಲ್ಲ. ಆದರೆ ಇತರೆ ನುಡಿಗಳು ಮಾಡರನಯ್ಸೇಶನ್ ಹೊಳೆಯಲ್ಲಿ ಕೊಚ್ಚುವೋಗುತ್ತಿವೆ.

ಇವಲ್ಲದೆ ಆಂದ್ರ, ಬಿಹಾರ, ಒರಿಸ್ಸಾದ ಹಲವು ಗುಡ್ಡಗಾಡು ನುಡಿಗಳು ಮತ್ತು ಪಾಕಿಸ್ತಾನದಲ್ಲಿರುವ ಒಂದೇ ಒಂದು ದ್ರಾವಿಡ ನುಡಿ ಬ್ರಹೂಯಿ ಕೂಡ ಕೆಡುಕಿನ ದಾರಿ ಹಿಡಿದಿವೆ.

ಕೊನೆಯದಾಗಿ, ಯಾವುದೇ ನುಡಿ ಹಲವು ಗುಟ್ಟುಗಳನ್ನು ತನ್ನೊಳಗೆ ಮತ್ತು ಕೆಲವು ನಡಾವಳಿಗೆ, ಪರಿಸರಕ್ಕೆ ಹತ್ತಿರವಾದ ವಿಶಯಗಳನ್ನು ಅಡಗಿಸಿಕೊಂಡಿರುತ್ತವೆ. ಒಂದು ನುಡಿ ಸತ್ತರೆ ಅದರ ಜೊತೆಗಿರುವ ನಡಾವಳಿ, ಗುಟ್ಟುಗಳು, ಮನಕೆದುಕುವ ಹುರುಪಿನ ಸಂಗತಿಗಳು ಸತ್ತಂತೆ.

ಎಲ್ಲ ನುಡಿಗಳು ಬಾಳಿ ಬದುಕಲಿ ಎಂದು ನಂಬಿ ಬಯ್ಸೋಣ.

ಶುಕ್ರವಾರ, ಜನವರಿ 16, 2009

ಬೆಳಕುನೆಳಲಿನಾಟ

ಎಶ್ಟು ತೋಡಿದರೂ
ಸಿಗಲಿಲ್ಲ ಎನೂ
ಅಗೆಯುತ ಮೊಗೆಯುತ
ಅರಿವಿಗೆ ಬರಲಿಲ್ಲ ದಣಿತ
ಹುಡುಕ ಹೊರಟಿತ್ತು ನೆಮ್ಮದಿ
ಇಳಿದಿತ್ತು ಸುಳಿಯಲ್ಲಿ ಕಾಣದಿ
ಎಡೆಬಿಡದ ಬಾಳಹೋರಾಟ
ಸಾಗಲಿ ಬೆಳಕುನೆಳಲಿನಾಟ

ಸೋಮವಾರ, ಜನವರಿ 12, 2009

ಸುಳ್ಳಿನ ಬೇಲಿ

ಸುಳ್ಳಿನ ಬೇಲಿಯ ಮುಳ್ಳು
ಚುಚ್ಚುವುದೆಂದೆಂದೂ ಸುಳ್ಳಿನ
ಬೇಲಿಗಿಂತ ದಿಟದ
ಬಯಲೇ ಲೇಸು ಕೇಳೆನ್ನ ಬರತೇಶ

ಭಾನುವಾರ, ಜನವರಿ 04, 2009


ನಿನ್ನ ಎತ್ತರ ಬಾನಿನತನಕ
ಯಾವ ಕಲೆಗಾರನ ಕಯ್ಚಳಕ
ಸುತ್ತಿರುವ ಹಸಿರು ಪೂರಕ
ಮಯ್ಯೆಲ್ಲೆಲ್ಲಾ ಎನೋ ಪುಳಕ


ಚಿತ್ರ/ಪಾಪೆ :- ಗೋಪಾಲಸ್ವಾಮಿ ಬೆಟ್ಟದ ಗುಡಿಯ ಹತ್ತಿರ ಇರುವ ಬೆಟ್ಟ-ಗುಡ್ಡ-ಹಸಿರು

ನವಿರುನೇಸರ

ಎಳೆಯ ನವಿರುನೇಸರ
ಬಾನ ತುಂಬಿದ ಕೆಂಗದಿರ
ಈ ಚೆಲುವ ನೋಡಿದಿರಾ?
ಚಳಿಯಕೊಳೆಯ ನೀಗುವ
ಇಳೆಯಬೆಳೆಗೆ ಉಸಿರು ಕೊಡುವ
ಬೆಳ್ಳಂಬೆಳಿಗ್ಗೆಯ ನಲಿಸುವ ಎಲ್ಲವ

ಶನಿವಾರ, ಜನವರಿ 03, 2009

ಗಿಡ-ಮರ

ಹೀರಿ ಇಳೆಯ ಸಾರ
ಎದುರಿಸಿ ಬಿಸಿಲು ಬರ
ನೆನ್ನೆಯ ಗಿಡವಾಗಿದೆ ಮರ
ನೆರಳ ನೀಡುತ ನಿರಂತರ
ನಿನ್ನ ಬಾಳು ಸಾಗಿತು ಈ ತೆರ
ಹೆಸರಾಗಲಿ ಎಂದೆಂದಿಗೂ ನಿನ್ನ ಈ ಅಱ


ಅಱ = Ka. aṟa, aṟu virtue, charity, alms, law, dharma, Yama.? Cf. 405 Ta. āṟu. DED 262.

ಗೆಲುವೆಂಬ ಪಲ

ಚುಚ್ಚಿದರೂ ನುಗ್ಗು ನೂರುಸಲ
ಕೆಚ್ಚಿರಲಿ ಬಗ್ಗುಬಡಿಯುವ ಬಲ
ಕಟ್ಟಿಕೊ ತಾಳ್ಮೆ ಎಲ್ಲಸಲ
ಮೆಟ್ಟಿ ನಿಲ್ಲಲು ಸೋಲ
ಕೊಟ್ಟೆ ಕೊಡುವ ಗೆಲುವೆಂಬ ಪಲ

ಕಡಲಾಟ

ನೋಟದಂಚಿನಾಗೆ ಎನೋ ಮಾಟ
ಕಡಲ್ಬಾನುಗಳ ಮುತ್ತಿಕ್ಕುವ ಆಟ
ನಲಿಯುತಿಹ ಅಲೆಗಳು ತಾಳವಾಕಿತು ತಟತಟ
ಓಡುತಿವೆ ಮೋಡಗಳು ಮುಟ್ಟಲು ಇಳೆಬಾನ್ಕೂಟ

ಮುಸ್ಸಂಜೆಯ ಬಳ್ಳಿ

ಮುಸ್ಸಂಜೆ ಹೊತ್ನಲ್ಲಿ
ಅಂದಚೆಂದದ ಹೂಬಳ್ಳಿ
ನಲಿಯುತ ನಿಂತಿತ್ತು ಬಿಂಕ ಚೆಲ್ಲಿ
'ನಲಿಯುವೆ ಏತಕೆ' ಕೇಳಲು ನಾನಲ್ಲಿ
ತಾಳಲಾರೆ ತಂಗಾಳಿಕಚಗುಳಿ
ಎಂದಾಗ ಆ ಬಳ್ಳಿ ನನ್ನಕೆನ್ನೆಯಲ್ಲಿ ಗುಳಿ

ಶುಕ್ರವಾರ, ಜನವರಿ 02, 2009

ಹಳ್ಳಿ-ಹಾಡು

ಹೆಗಲ ಮ್ಯಾಲೆ ನೇಗಿಲ ಹೊತ್ಕೊಂಡು
ಹೊಂಟ್ಯಾನ ಎನಗಂಡ ಹೊಲದೆಡೆಗೆ
ಹೊತ್ತು ಮುಳುಗೊ ಮುಂದ ಬಾರಪ್ಪ ಮನಿಗೆ

ಹೊಲದಲ್ಲಿ ಸ್ಯಾನೆ ಗೇಮೆ ಅಯ್ತೆಕಣಮ್ಮಿ
ಆಳು ಕಾಳು ಕಡ್ದಿನೆಲ್ಲ ಸಮರಿಯಲು
ಹೊತ್ತು ಮುಳುಗುವುದು ಎನ್ನೊಡತಿ

ಹೊತ್ತು ಮುಳುಗಿದ ಮ್ಯಾಲೆ ಗುಂಡಿಗಿ ನಡಗಯ್ತಿ
ನೀನಿಲ್ಲದ ಮನಿ ಹೂವಿಲ್ಲದ ಗಿಡದಂತಿ
ಲಗೂನ ಮನಿಗೆ ಬಂದ್ಸೇರು ನನಗೆ ನಿನ್ನ ಚಿಂತಿ

ಆಡಾಕ ಆಡ್ಮರಿಗಳು, ನೋಡಾಕ ಹೂದೊಟ
ಕೂಡಿ ಮಾತಾಡಾಕ ನೆರೆಹೊರೆಯವರ ಕೂಟ
ಹಂಗ್ಯಾಕ ಹುಲುಬುತಿ ನಾ ಬರಗಂಟ

ಗದ್ದೆಯ ತೆವರಿಯಲ್ಲಿ ನಲಿಯುತ ಬಂದವಳೆ
ಮುದ್ದೆ ಉಪ್ಪೆಸರು ಹೊತ್ತು ತಂದವಳೆ
ಯಾಕೀಟ್ ತಡವಾಯಿತು ನೀ ಹೇಳೆ

ಮನಿಯಾಗ ಮಗು ಅಳಾಕಹತ್ತಿತ್ತು
ಕಟ್ಟಿದ ಕರುವು ಹಗ್ಗವ ಬಿಡಿಸ್ಕೊಂಡಿತ್ತು
ಮಗುವನ್ನ ಮಲಗಿಸಿ, ಕರುವನ್ನ ಕಟ್ಟಾಕಿ
ಬರಾಕ ಹೊತ್ತಾತು, ಈ ಕೊಂಕು ಮಾತ್ಯಾಕ

ಗುರುವಾರ, ಜನವರಿ 01, 2009

ಕಣ್ ಸನ್ನೆಯಲಿ...

ಕಣ್ ಸನ್ನೆಯಲಿ ನೀ ಕೊಂದುಬಿಡುವೆ
ಎಣಿಸಲು ಆಗದು ನಿನ್ನಾ ಒಲುಮೆ
ಬರೆದು ಕೊಡಲೆ ನನ್ನೆನಾ
ಕಟ್ಟ ಬೇಡ ಇದಕೆ ಬೆಲೆಯ

ತೊರೆದು ಹೋದರೆ ನೀ ನನ್ನ
ಮೊರೆತ ಕೇಳುವರ್ ಯಾರೆನ್ನ
ಬರಿದು ಮಾಡಬೇಡ ಬದುಕ
ತೆರೆದು ನೋಡಬೇಡ ಕೆದುಕಿ

ಪಾರು ಮಾಡೆನ್ನ ಈ ತೊಡರಿಂದ
ಸೊರಗುತಿದೆ ಈ ನನ್ನೊಡಲು
ಎಳಸುತಿದೆ ನಿನ್ನ ಆ ನಗೆಯು
ಬಳಸಬಿಡು ನನ್ನ ಎದೆಯನ್ನು

ಭಾನುವಾರ, ಡಿಸೆಂಬರ್ 28, 2008

ದಾರಿ ತಪ್ಪಿತೆ?

ಕಡಲಹಡಗಲ್ಲಿ ಕುಳಿತು
ನಾಡಗೊಡವೆ ಏತಕೆ
ಪಯಣ ದೂರದೂರಿಗೆಲ್ಲೊ
ಗುರಿಯು ತಪ್ಪಿತೆ?
ಒಂಟಿ ಕಾಲಲಿ ಕುಂಟುವ ಬಯಕೆಯ
ಸೊಂಟ ಮುರಿಯಿತೆ
ನೋವು ಬಿಕ್ಕಳಿಸಿ ನಸುನಗೆಯ
ಮೂಡಿಸಿತೆ
ಸಾವು ಪಕ್ಕದಲಿ ಸಿಕ್ಕಿಬಿಡಲು
ಚಿಂತೆ ಏತಕೆ?

ಶನಿವಾರ, ಡಿಸೆಂಬರ್ 27, 2008

ಹಾಡು ಮತ್ತು ಸಂಗೀತ

ಹಾಡು ಮತ್ತು ಸಂಗೀತ ಒಂದಕ್ಕೊಂದು ಜೊತೆಯಾಗೇ ಬರುವ ನಾವೇ ಕಂಡುಕೊಂಡ ಇತ್ತೀಚೆಗೆ ಹೆಚ್ಚು ಬಳಕೆಯಲ್ಲಿರುವ ಎರಡು ತೆಲೆಮೆಯ ಸರಕುಗಳು. ಆದರೆ ಇವುಗಳಲ್ಲಿ ಬೇರೆಬೇರೆಯಾಗಿ ಗುರುತಿಸಬಲ್ಲ ಹಲ ಅಂಶಗಳ ಬಗ್ಗೆ ನೋಡೋಣ.
ಹಳೇ ಕಾಲದಿಂದಲೂ ನಮ್ಮಲ್ಲಿ ಹಾಡು ಕಟ್ಟುವುದು, ಕುಣಿಯುವುದು ನಮ್ಮ ನಡಾವಳಿಯ ಒಂದು ಚೂರಾಗಿ ಬಂದಿದೆ. ಇದೇ ಈಗ ಬೆಳೆದು ಜನಪದವೆಂಬ ಹೆಮ್ಮರವಾಗಿ ನಮ್ಮ ಇಂದಿನ ಹಾಡು-ಕುಣಿತಕ್ಕೆ ತಳಪಾಯವಾಗಿ ನಿಂತಿದೆ.

"ಕುರಿತೋದದೆಯಂ ಕಾವ್ಯಪ್ರಯೋಗ ಪರಿಣತಮತಿಗಳ್’ - ಹೀಗೆಂದು ಕವಿರಾಜಮಾರ್ಗಕಾರನು ಕನ್ನಡಿಗರಿಗೆ ಹಾಡುಗಬ್ಬ, ಬಾಯಿಗಬ್ಬಗಳ ಬಗ್ಗೆ ಇರುವ ಒಲವನ್ನು ತೋರಿಸಿಕೊಟ್ಟಿದ್ದಾನೆ. ಆದರೆ ಹಾಡು ಎಂಬ ಕಲೆಯ ಬಗೆ ಉಂಟಾಗುವಾಗ, ಉಂಟಾಗುತ್ತಿರುವಾಗ ಅದು ಒಂದು ಮರುಕಳಿಕೆ(rhythm) ಹೊಂದಿಕೊಳ್ಳಬಲ್ಲ ಪದಕಂತೆಗಳಾಗಿ ಹೊರಹೊಮ್ಮುತ್ತಿದ್ದವು. ಆಗ ಈ ಶ್ರುತಿ, ತಾಳ ಇವುಗಳ ಬಗ್ಗೆ ಹಾಡು ಕಟ್ಟುವವರ ಅತವ ಹಾಡುವವರ ಅರಿವಿಲ್ಲದಂತೆ ಅವು ಹಾಡಿನೊಂದಿಗೆ ಬೆರೆತಿರುತ್ತಿದ್ದವು. ಅಂದರೆ ಆಗ 'ಇನಿ'/ಸಂಗೀತ(ನಯಗೊಳಿಸಿದ, ಒಪವೋರಣಗೊಳಿಸಿದ ಹಾಡು ಅಂತ ಇದರ ತಿರುಳಿರಬಹುದು. ಆದರೆ ಈ ತಿರುಳು ಅಶ್ಟು ಸರಿಯಾಗಿಲ್ಲವೆಂದು ಮುಂದೆ ತಿಳಿಸುವೆ) ಎನ್ನುವ ಕಲೆ ಇನ್ನು ಎಳೆಸಾಗಿ ಉಳಿದಿತ್ತು. ಅಂದರೆ ಹಾಡಿನಲ್ಲಿ ಮೊದಲು ಅದರಲ್ಲಿರುವ ಪದಗಳು ಮತ್ತು ಪದಗಳನ್ನು ಕಟ್ಟುವ ಬಗೆ, ಕಟ್ಟುವಾಗ ಹೇಗೆ ಅದನ್ನು ಮರುಕಳಿಸುವ ಬಗೆಯಲ್ಲಿ (ಲಯಬದ್ದ) ಅದನ್ನು ಹೇಳಬಹುದು/ಹಾಡಬಹುದು ಎಂಬುವುದರ ಮೇಲೆ ಹಾಡು ಕಟ್ಟುಗರು ಹಾಡುಗಳನ್ನು ಕಟ್ಟುತ್ತಿದ್ದರು ಎಂದು ಅಯ್ಬಿಲ್ಲದೆ ಹೇಳಬಹುದು. ಹಾಗದರೆ ಹಿಂದಿನಿಂದಲೂ ಹಾಡಿನಲ್ಲಿರುವ ಪದಗಳಿಗೆ( ಸಾಹಿತ್ಯಕ್ಕೆ) ಹೆಚ್ಚು ಒತ್ತೇ ಹೊರತು ಈಗಿನ ಕಾಲದ ಹಾಡಿಗೆ ಬೇಕಾದ ಶ್ರುತಿ, ತಾಳ ಇವುಗಳಲ್ಲ ಎಂದು ಹೇಳುವುದಕ್ಕೆ ಅಡ್ಡಿಯಿಲ್ಲ. ಈ ಮಾತು ಇಂದಿಗೂ ಜನರ ಬಾಯಲ್ಲಿ ನಲಿಯುವ ಹಾಡಿಗಳಿಗೂ ಹೊಂದುತ್ತದೆ ಏಕೆಂದರೆ ಒಂದು ಸಿನಿಮಾಹಾಡು ಮೇಣ್ ಅನಿಸುವಾಡು(ಬಾವಗೀತೆ) ಇವುಗಳಲ್ಲಿ ಹಾಡಿನ ಪದಗಳಿಗೇ ಹೆಚ್ಚು ಮನ್ನಣೆ ಹೊರತು ಸಂಗೀತಕ್ಕಲ್ಲ. ಸಂಗೀತವಿದ್ದರೂ ಅದು ಹಾಡಿನ ಅನಿಸು/ಪದಗಳನ್ನು ಇನ್ನು ಹೆಚ್ಚು ಮೇಲ್ಮೆಗೊಳಿಸುವಂತೆ ಮಾಡಲು ಮಾತ್ರ. ಈಗಲೂ ಹಾಡುಗಳಲ್ಲಿ ಬರುವ ಪದಗಳಲ್ಲಿ ತಪ್ಪುಗಳಾದರೆ ತಟ್ಟನೆ ಮಂದಿ ಅದನ್ನ ಎತ್ತಿ ತೋರಿಸುವರು ಆದರೆ ಶ್ರುತಿ, ತಾಳಗಳಲ್ಲಿ ತಪ್ಪುಗಳಾದರೆ ಹೆಚ್ಚು ಮಂದಿಗೆ ಆ ತಪ್ಪುಗಳನ್ನು ಎತ್ತಿ ತೋರಿಸಲಾಗುವುದಿಲ್ಲ. ಅಂದರೆ ಇಂದಿಗೂ ಹೆಚ್ಚು ಮಂದಿಯ ಮಟ್ಟಿಗೆ ಪದಗಳಿಗೆ ಹೆಚ್ಚು ಬೆಲೆ ಹೊರತು ಶ್ರುತಿ, ತಾಳಕ್ಕಲ್ಲ.
ಇಂದಿಗೂ ಜನಪದ ಹಾಡುಗಳು ಮಂದಿಯ ಮನಸ್ಸಿಗೆ ಹತ್ತಿರವಾಗಿರುವುದು ಇದಕ್ಕೋಸ್ಕರವಾಗಿಯೇ. ಹಾಡು ಕಟ್ಟುವುದು ನಮ್ಮ ಬುಡಕಟ್ಟಿಗೆ ಹೆಚ್ಚು ಪಳಗಿರುವ ಕಲೆ ಆದರೆ ಸಂಗೀತ ಹಾಡು ಕಟ್ಟುವುದಕ್ಕೆ ಹೋಲಿಸಿದರೆ ತೀರ ಇತ್ತೀಚಿನದು. ಅಂತೆ ಹೇಳುವ 'ಶಾಸ್ತ್ರೀಯ ಸಂಗೀತ'ವೆನ್ನುವುದು ಕೆಲವೇ ಮಂದಿಗೆ ಅರ್ತವಾಗುವ ಕಲೆಯಬಗೆ. ಮತ್ತು ಹಲವು ಬಾರಿ ನನಗೆ ಅದು ಕೆಲವೇ ಮಂದಿಗೋಸ್ಕರವಾಗಿಯೇ ಇದೆಯಂದೂ ನನ್ನ ಅಯ್ಬು.
ಕವಿರಾಜಮಾರ್ಗದಲ್ಲಿರುವಂತೆ ಹಾಡುಗಬ್ಬ(ಜನಪದ), ನೋಟಗಬ್ಬ(ಯಕ್ಸಗಾನ, ಬಯಲಾಟ) ಎಂಬೆರೆಡು ಕಲೆಬಗೆಗಳು ಬಹಳ ಹಿಂದಿನ ಕಾಲದಿಂದಲೂ ಬಳಕೆಗೆ ಬಂದಿದೆ.

ಕೊನೆಯದಾಗಿ, ಹಾಡುಗಬ್ಬಗಳು ಜನರಿಂದ ಜನರಿಗಾಗಿ ಜನರಿಗೋಸ್ಕರ ಹುಟ್ಟಿಕೊಂಡ ಕಲೆ. ಇದು 'ಮಂದಿಯಾಳ್ವಿಕೆ' ಯ 'ಅರಿವಿನರಿಮೆ'ಗಳ ಹುರುಪಿಗೆ ಹೊಂದುತ್ತದೆ. ಹಾಗಾಗಿ ಪದಗಳಿಗೆ ಬೆಲೆಕೊಡುವ ಕಲೆಯಬಗೆಗಳು ಬಹಳ ಕಾಲ ಬಾಳುತ್ತವೆ ಎಂದು ಹೇಳಬಹುದು.

ಸಾಲು-ಹೊತ್ತಿಗೆ

ಸಾವಿರ ಸಾವಿರ ಸಾಲುಗಳಲ್ಲಿ
ಅಮ್ಮನಕ್ಕರೆಯ ಬಣ್ಣಿಸಲಾದೀತೇ?
ಹೊಸ ಹೊತ್ತಿಗೆಗಳನ್ನು ಹೊರತಂದರೇನು
ಅರಿವಿನ ಹಸಿವ ತೀರಿಸಲಾದೀತೆ
ಆದರೂ
ಸಾಲುಗಳೂ ಬೇಕು ಹೊತ್ತಿಗೆಗಳೂ ಬೇಕು
ಸಾಗಲು ಪಯಣ ಎಲ್ಲೆಯಿಲ್ಲದೆಡೆಗೆ
ನೆಟ್ಟಿ ನೋಟವ ಇಳೆಬಾನ್ಕೂಡಿನ ಕಡೆಗೆ

ಶುಕ್ರವಾರ, ಡಿಸೆಂಬರ್ 26, 2008

ಒಂದು ಸಿನಿಮಾ ಹಾಡಿನ ತರ...ಈ ಹಾಡು

ನಿನ್ನಂದಕೆ ಸೆರೆಯಾದನೆ..!!

ನಿನ್ನಂದಕೆ ಸೆರೆಯಾದನೆ...ಎ.ಎ.ಎ
ನಿನ್ನಡತೆಗೆ ಮಾರೋದೆನೆ .ಎ.ಎ.ಎ
ಜಾಣೆ ನಿನ್ನ ಕಣ್ಣು
ಹೊಳೆಯುವ ಹೊನ್ನು
ನಿನ್ನ ಬೆಡಗು...ಹೋ.ಹೋ \ಪಲ್ಲವಿ \

ಒಲವ ಮಳೆಯಲಿ ನೆನೆದು
ಚೆಲುವ ಹೊಳೆಯಲಿ ಮಿಂದು
ಪೊರೆಯ ಕಳಚಿ ಪೊಗರು ಮೂಡಿದೆ
ನಿನ್ನ ನಲುಮೆಯ ಸಿರಿಯುಂಡು \ಚರಣ \

ಮಿಡಿವ ನಾಡಿಗೆ ನೆತ್ತರಾದೆ
ಎಳೆವ ಉಸಿರಿಗೆ ಗಾಳಿಯಾದೆ
ಬಡಿವ ಎದೆಗೆ ಸದ್ದಾದೆ
ನನ್ನೊಳೇ ಬೆರೆತೆ ನೀ \ಚರಣ\

ಗುರುವಾರ, ಡಿಸೆಂಬರ್ 25, 2008

ಬೇರೆ ದಾರಿಯಿಲ್ಲ

ಏಳುವುದಕ್ಕೆ ಎಡೆಯಿಲ್ಲ
ಎಡವುದಕ್ಕೆ ಎಲ್ಲೆಯಿಲ್ಲ
ನೆಮ್ಮದಿಯ ಕುರುಹಿಲ್ಲ
ನೇರ ನಡೆಗೆ ಬೆಲೆಯಿಲ್ಲ
ಸುಳ್ಳೇ ಮೆರೆಯುತಿದೆಯಲ್ಲ
ಸಾವೂ ಕೂಡ ದೂರದಲೆಲ್ಲೊ ಇದೆಯಲ್ಲ
ಏನೂ ಮಾಡಲಾಗುತ್ತಿಲ್ಲ

ಮೇಲಿನ ಸಾಲುಗಳು ಪೋಲಾಯಿತಲ್ಲ !! :(
ಏನಾದರೂ ಎದುರಿಸಿದೆ ಬೇರೆ ದಾರಿಯಿಲ್ಲ !

ಶಂಕರಬಟ್ಟರ ಹೊತ್ತಿಗೆಗಳು ಮತ್ತು ಕನ್ನಡ ಸೊಲ್ಲರಿಮೆ

ಇತ್ತೀಚೆಗೆ ಬೆಳಕಿಗೆ ಬಂದಿರುವ ಶಂಕರಬಟ್ಟರ ಹೊತ್ತಿಗೆಗಳು ಕನ್ನಡ ನುಡಿಹುರುಪಿಗರಲ್ಲಿ ಹೊಸ ಉಂಕುಗಳ ಅಲೆ ಎಬ್ಬಿಸಿದೆ ಎಂದು ಹೇಳಬಹುದು. ಇದುವರೆಗೆ ಕನ್ನಡದಲ್ಲಿ ಬಂದ ನುಡಿಯರಿಗರ ಸೊಲ್ಲರಿಮೆ(ವ್ಯಾಕರಣ,grammar)ಯಲ್ಲಿರುವ ಕೊರತೆಗಳು ಮತ್ತು ಗೊಂದಲಗಳನ್ನು ಎತ್ತಿಹಿಡಿಯುವಲ್ಲಿ ಡಾಡಿ.ಎನ್.ಶಂಕರಬಟ್ಟರು ಬಹಳ ಮಟ್ಟಿಗೆ ಗೆದ್ದಿದ್ದಾರೆ. ನಮ್ಮ ನುಡಿಯಲ್ಲಿರುವ ಹಲವು ತಲೆಮೆಯ ವಿಶಯಗಳು ಹಿಂದಿನ ನುಡಿಯರಿಗರಿಗೆ ತಿಳಿಯದೇ ಇರುವುದು ಅಚ್ಚರಿ ಮತ್ತು ಅವರ ಸಕ್ಕದದ(ಸಂಸ್ಕ್ರುತ) ಸೊಲ್ಲರಿಮೆಯ ಕುರುಡು-ಕುರುಡಾಗಿ ಹಿಂಬಾಲಿಸಿರುವುದು ನಾಚಿಕೆಗೇಡು. ಕನ್ನಡಿಗರ ಬಾಯಲ್ಲಿ ಪದಗಳ,ಸೊಲ್ಲುಗಳ ಒಳಯೇರ್ಪಾಡು ಆಳವಾಗಿ ತಿಳಿಯಲು ಶಂಕರಬಟ್ಟರ ಹೊತ್ತಿಗೆಗಳನ್ನು ಓದಬೇಕು. ಒಂದು ತಲೆಮೆಯ ವಿಶಯ ಗೊತ್ತಾಗುವುದು ಕನ್ನಡದಂತ ನುಡಿಯಲ್ಲಿ ಅದರ ಆಡುಗರ ಬಾಯಲ್ಲಿ ಅದು ಹೇಗೆ ನಲಿಯುತ್ತದೆ ಎಂಬುದರ ಮೇಲೆ ಅದರ ಸೊಲ್ಲರಿಮೆ ಉಂಟಾಗುತ್ತದೆಯೆ ಹೊರತು ಬೇರೆ ಯಾವುದೋ ನಂಟಿಲ್ಲದ ನುಡಿ(ಸಕ್ಕದ)ಯಿಂದಲ್ಲ. ಕನ್ನಡದಂತ ನುಡಿ ಎಲ್ಲ ವರ್ಗದವರ ಮಾತಿನಲ್ಲಿ ಹೆಚ್ಚು ಪಳಗಿದ ನುಡಿ ಆದರೆ ಸಕ್ಕದ ಹಾಗಲ್ಲ ಅದು ಹೆಚ್ಚು ಮೇಲ್ವರ್ಗದವರ ಬರಹದಲ್ಲಿ( ಮಾತಿನಲ್ಲಿ ಕಡಿಮೆ)ದ್ದ ನುಡಿ. ಮತ್ತು ಅದರ ಸೊಲ್ಲರಿಮೆ ಪಾಣಿನಿ ಎಂಬ ನುಡಿಯರಿಗನ ಕಟ್ಟಳೆಯ ಮೇಲೆ. ಕನ್ನಡ ಜನರಿಂದ ಜನಪರವಾದ ನುಡಿ ಆದರೆ ಸಕ್ಕದ ಒಬ್ಬ ಸೊಲ್ಲರಿಗನ ಕಟ್ಟಳೆಯ ಮೇಲೆ ನಿಂತ ನುಡಿ. ಇದರಲ್ಲಿ ಯಾವುದು ಹೆಚ್ಚು-ಕಡಿಮೆಯಿಲ್ಲ ಆದರೆ ಹಲವರು ಕನ್ನಡದ ಮೇಲೆ ಸಕ್ಕದದ ಸೊಲ್ಲರಿಮೆಯೆಂಬ 'ಗದಾ ಪ್ರಹಾರ' ಮಾಡುತ್ತಿದ್ದಾರೆ. ಮತ್ತು ಸಕ್ಕದದ ಪದಗಳು ಮತ್ತು ಸೊಲ್ಲರಿಮೆ ಮಾತಿನಲ್ಲಿ ಬಳಸದ ಕನ್ನಡವನ್ನು ಕೀಳು ಎಂಬ ತಪ್ಪು ಅರಿವನ್ನು ಹೊಂದಿದ್ದಾರೆ.

ಕನ್ನಡಿಗರ ಏಳಿಗೆ ದಿಟವಾದ ಕನ್ನಡದ ಏಳಿಗೆಯಿಂದ ಹೊರತು ಸಕ್ಕದದ ಏಳಿಗೆಯಿಂದಲ್ಲ. ಇದನ್ನು ನಾವು ಅರಿಯಬೇಕಿದೆ.

ಬುಧವಾರ, ಡಿಸೆಂಬರ್ 24, 2008

ಬಾಳಿಗೊಂದು ತಿರುಳು

ನಿನ್ನ ಬರುವಿಕೆಯ ಗುಂಗಲ್ಲೇ

ಕಾದು ಬಸವಳಿದೆ ನಾನಿಲ್ಲೇ

ದಟ್ಟ ಇರುಳು ಸುತ್ತೆಲ್ಲ

ಹಗಲುಗನಸು ದಿನವೆಲ್ಲ

ಸಾಗಬೇಕಿದೆ ಬದುಕಿನ ಸೆಲೆ

ಬಾಳಿಗೊಂದು ತಿರುಳು ನಿನ್ನಿಂದಲೆ

ಮಂಗಳವಾರ, ಡಿಸೆಂಬರ್ 23, 2008

ಹಣೆಬರಹ

ಅವಿತು ಕುಳಿತ ಹಣೆಯಬರಹವೆ
ನಿನ್ನ ಮರೆಯಬಾರದೆಂದು
ಆಗಾಗ ನೋವ-ನಲಿವ ಇಣುಕಿಸುವೆ
ಕೆಲವರು ನಿನ್ನ ತಿದ್ದಿ
ಮುಂದೆ ಬಂದು ಆದರು ಮುತ್ಸದ್ದಿ
ತಿದ್ದಲಾರದೆ, ನಿನ್ನ ಮೀರದೆ
ಕಾಲು ಹಿಡಿದರು ಕೆಳಗೆ ಬಿದ್ದಿ
ನೀನು ಏನೇ ಬಗೆದರೂ
ಕೆಚ್ಚೆದೆಗಾರರು ಮೊಗಸದೆ ಬಿಡರು
ನಿನ್ನ ಮೆಟ್ಟಿ ಮುಂದೆ ಬಂದೆ ಬರುವರು

ಸೋಮವಾರ, ಡಿಸೆಂಬರ್ 22, 2008

ಒಡಲು-ಒಡವೆ

ಒಡವೆಗಳ ಗೊಡವೆ
ನಿಂಗೇಕೆ ಚೆಲುವೆ
ಒಡಲಲ್ಲಿ ಒಲುಮೆಯ ಚೆಲುವು
ಒಡನೆಯೆ ಒಡರಿಸುತಿರೆ
ಮನಸುಗಾರರು ನಿನ್ನ ಕಯ್ಸೆರೆ
ನಡೆ ನಿನ್ನ ಮೀರಿ ಮೇರೆ
ಹೆಣ್ತನಕ್ಕೆ ನೀ ಮಾದರಿಯಾಗಿರೆ

ನಡೆ = character, conduct

ಕದ್ದೆ-ಒದ್ದೆ-ಗೆದ್ದೆ

ಬರಲು ನೀನು ಕಣ್ಮುಂದೆ
ನಾನು ಹೋದೆ ನೆನಪ ಹಿಂದೆ

ನನಗೆ ತಿಳಿಯದೆ ನನ್ನೇ ಕದ್ದೆ
ಬಿದ್ದೆ ನಾ ಬಿದ್ದೆ ಬಿದ್ದೆ
ಒಲವಿನ ಒಳಗೆ ನಾ ಒದ್ದೆ ಒದ್ದೆ
ಗೆದ್ದೆ ನೀ ಗೆದ್ದೆ ಗೆದ್ದೆ
ನಲುಮೆಯಿಂದಲೀ ನೀ ಎನ್ನ ಗೆದ್ದೆ

ಶನಿವಾರ, ಡಿಸೆಂಬರ್ 13, 2008

ನಮ್ಮ ನುಡಿ ಚೆನ್ನುಡಿ

ಎರಡಕ್ಕರದ ಅಮ್ಮ
ಕಾಯುವಳು ಎಡಬಿಡದೆ ಎಮ್ಮ
ಎರಡಕ್ಕರದ ನಮ್ಮ ನುಡಿ
ಬದುಕ ಹಸನು ಮಾಡುವ ಕುಡಿ
ಕಲಿ-ನಲಿ ಏನೇ ಆಗಲಿ ಇರಲಿ ನಮ್ಮ ನುಡಿ
ಹಾಡು-ಪಾಡೇ ಆಗಲಿ ಮೊದಲಿರಲಿ ಸವಿನುಡಿ
ಉಸಿರು-ಉಸಿರಲಿ ಬೆಸೆಯಲಿ ನಮ್ಮೀ ಚೆನ್ನುಡಿ

ಶುಕ್ರವಾರ, ಡಿಸೆಂಬರ್ 12, 2008

ಬುಡದೆನ್ನುಡಿ / ಮೂಲದ್ರಾವಿಡದ ಬಗ್ಗೆ

ನನ್ನ ನಲುಮೆಯ ಗೆಳೆಯರೊಬ್ಬರು ಬೇರುದೆನ್ನುಡಿ ಬರೀ ಪರಿಕಲ್ಪನೆ ಅದಕ್ಕೆ ಅಶ್ಟು ತಲೆಮೆ/ಮಹತ್ವ ಕೊಡಬೇಕಾಗಿಲ್ಲ ಅಂತ ಹೇಳಿದ್ದಾರೆ, ಅದಕ್ಕೆ ನಾನು ಈ ಮರುಲಿ/ಉತ್ತರ ಬರೆಯಬೇಕಾಯಿತು.

ನೀವು ಬುಡದೆನ್ನುಡಿ ಬರೀ ಪರಿಕಲ್ಪನೆಯಶ್ಟೆ ಅಂತ ಹೇಳಿದ್ದೀರಿ. ಇದಕ್ಕೆ ನನ್ನಕೊಂಕಿದೆ. ಬುಡದೆನ್ನುಡಿ ಬರೀ ಪರಿಕಲ್ಪನೆಯಲ್ಲದೆ ಅದು ಒಪ್ಪತಕ್ಕಂತಹ ಮತ್ತು ದಿಟಕ್ಕೆ ಹತ್ತಿರವಾದ ಪರಿಕಲ್ಪನೆ(reasonably realistic assumption) ಎಂದು ನಾನು ಹೇಳುತ್ತೇನೆ. ಯಾಕಂದರೆ ಶಂಕರಬಟ್ಟರು ತಮ್ಮ ಹೊತ್ತಿಗೆಯಲ್ಲಿ ಇದರ ಬಗ್ಗೆ ತಿಳಿಯಾಗಿ ಹೇಳಿದ್ದಾರೆ. ಒಂದು ಬುಡಕಟ್ಟಿನ ಮಂದಿ ಈ ನುಡಿಯನ್ನು ಆಡುತ್ತಿದ್ದಿರಬೇಕು, ಆ ಬುಡಕಟ್ಟಿನ ಮಂದಿ ಬೇರೆ ತಾವಿಗೆ/ಜಾಗಕ್ಕೆ ಹೋದಾಗ (ಗುಳೆ ಹೋದಾಗ) ಅವರ ನುಡಿಯಲ್ಲಿ ಕೆಲವು ಮಾರ್ಪುಗಳಾದವು ಯಾಕಂದರೆ ಅವರು ತಮ್ಮ ಬೇರು ನೆಲದ ನಂಟನ್ನು ಕಡಿದುಕೊಂಡಿರಬಹುದು. ಇದಕ್ಕೆ ಇಂದಿಗೂ ಇರುವ ನೀಲಿಬೆಟ್ಟ(ಊಟಿ)ಗಳಲ್ಲಿ ಆಡುವ 'ಬಡಗ'ನುಡಿಯೇ ಒಂದು ಒಳ್ಳೆಯ ಮಾದರಿ.ಈ ಬಡಗ ನುಡಿ ಆಡುವ ಮಂದಿ ಒಂದು ಹೊತ್ತಿನಲ್ಲಿ ಮಯ್ಸೂರಿನಲ್ಲೇ ಇದ್ದರು. ಕೆಲವು ಓಸುಗರಗಳಿಂದ ಅವರು ಮಯ್ಸೂರು ಬಿಟ್ಟು ಊಟಿಗೆ ಹೋಗಿ ನೆಲಸಿದರು ಮತ್ತು ಅದು ಬೆಟ್ಟ-ಗುಡ್ಡವಾದ್ದರಿಂದ ಅವರಿಗೆ ಮಯ್ಸೂರಿನ ನಂಟು ಕಡಿದು ಅವರ ನುಡಿಯಲ್ಲಿಮಾರ್ಪುಗಳಾಗಿ 'ಬಡಗ' ನುಡಿಯಾಯಿತು ಅಂತ ನುಡಿಯರಿಗರು ಹೇಳುತ್ತಾರೆ. ಇದೇ ರೀತಿ ಬೇರುದೆನ್ನುಡಿಯಿಂದ ಕನ್ನಡ, ತುಳು, ತಮಿಳು ....ಹೀಗೆ ಹೊತ್ತಿಂದ ಹೊತ್ತಿಗೆ ಇವು ಬೇರೆ ಸೊಂತ ನುಡಿಯಾಗಿ ಮಾರ್ಪಟ್ಟವು ಎಂದು ಹೇಳುವುದರಲ್ಲಿ ಎಳ್ಳಶ್ಟು ಅಯ್ಬು/ಸಂಶಯ ಬೇಡ.
ಅವೊತ್ತಿನಲ್ಲಿ ಸಕ್ಕದದಲ್ಲಿ ಆದಶ್ಟು ಬರಹಗಳು ಬೇರುದೆನ್ನುಡಿಯಲ್ಲಿ ಬಂದಿಲ್ಲವಾದ್ದರಿಂದ ಕೆಲವರು(ನೀವು ಕೂಡ) ಬೇರುದೆನ್ನುಡಿ ಬರೀ 'ಪರಿಕಲ್ಪನೆ' ಎನ್ನುವುದುಂಟು. ಆದರೆ ಈ ಪರಿಕಲ್ಪನೆಯನ್ನು ಅಲ್ಲಗಳೆಯಲು ಆಗುವುದಿಲ್ಲ/ಆಗಿಲ್ಲ ಮತ್ತು ಈಪರಿಕಲ್ಪನೆಯನ್ನು ನಾವು ಕಡೆಗಣಿಸಲಾಗುವುದಿಲ್ಲ/ಆಗಿಲ್ಲ.

ಗುರುವಾರ, ಡಿಸೆಂಬರ್ 11, 2008

ಬಾವಿನೀರು

ಕೊಳದ ನೀರು ಕಯ್ಗೆಟುಗುದಲ್ಲದೆ
ಬಾವಿಯ ನೀರು ಕಯ್ಗೆಟುಗುವುದೇ
ಮಯ್ಯನ್ನು ರಾಟೆಯಂತೆ ತಿರುಗಿಸಿ
ಮನಸ್ಸನ್ನು ಹಗ್ಗದ್ದಂತ ಕಟ್ಟಿ
ಬಕುತಿಯೆಂಬ ಬಿಂದಿಗೆಗೆ ನಿನ್ನ
ತುಂಬಿದರೆ ಮೆಚ್ಚೆಯಾ ನೀ ಬರತೇಶ

ದುಡಿ ದುಡಿ ದುಡಿ

ದುಡಿ ದುಡಿ ದುಡಿ
ಗೊಡ್ಡು ಹಿಡಿಯುವವರೆಗೂ
ಸಡ್ಡು ಹೊಡೆಯುವ ಕೆಚ್ಚಿರುವವರೆಗೂ
ದುಡ್ಡು ಕೂಡುವವರೆಗೂ
ಕೂಡಿಟ್ಟ ದುಡ್ಡೇ ನೆರವಿಗೂ
ದುಡಿಮೆ ನಿಂತು ಸಾಯುವವರೆಗೂ !

ನನ್ನಲ್ಲಿ ನಾನಿರಲಿಲ್ಲ

ನಾನಲ್ಲಿದ್ದರೂ ಅಲ್ಲಿರಲಿಲ್ಲ
ಎಲ್ಲೊ ಹೋಗಿತ್ತೊ ಮನಸು
ಕಾಣುತ್ತಿತ್ತೇನೊ ಕನಸು, ಗೊತ್ತಿಲ್ಲ!!
ಹೊರಗೆಲ್ಲ ಬರೀ ಸುಳ್ಳು
ಒಳಗಿನ ಸುಳಿವು ತಿಳಿಯಲಿಲ್ಲ
ನನ್ನಲ್ಲಿ ನಾನಿರಲಿಲ್ಲ, ಹೀಗೆ ಬದುಕೆಲ್ಲ

ಕಣ್ಣಂಚಿನ ಮಿಂಚು

ಕಣ್ಣಂಚಿನ ಮಿಂಚಾಗಿ ಬಂದೆ
ಕಣ್ಣಿಂದ ಬರುವ ಹನಿಯಾಗದಿರು
ಕಣ್ಣಲ್ಲಿ ಕಣ್ಣಿಟ್ಟು ಕಾಯುವೆ ನಿನ್ನ
ಓ ನಲುಮೆಯ ನಲ್ಲೆ
ನೀನಿಲ್ಲದ ಈ ಬಾಳೊಲ್ಲೆ
ನೀ ನಗುತಿರು ನನ್ನ ಸಾಲುಗಳಲ್ಲೆ

ಬುಧವಾರ, ಡಿಸೆಂಬರ್ 10, 2008

ಮುಗಿಯದ ಸಾಲುಗಳು

ಒಮ್ಮೊಮ್ಮೆ ಎಶ್ಟು ಮೊಗಸಿದರೂ ಸಾಲುಗಳು
ಬರುವುದೇ ಇಲ್ಲ
ಬಂದರೂ ನೆಱೆಗೊಳ್ಳುವುದಿಲ್ಲ
ನೆಱೆಗೊಂಡರೂ ತಿರುಳು ಒಪ್ಪವಾಗುವುದಿಲ್ಲ
ಅದಕ್ಕೆ ಹಲವು ಸಾಲುಗಳು
ಮುಗಿಯದೆ ಅರೆ-ಬರೆಯಾಗಿ ಬೀದಿಮಕ್ಕಳಂತೆ
ನಿಂತಿರುತ್ತವೆ ಯಾರಿಗೂ ಬೇಡವಾಗಿ

ನೆಱೆ= ಪೂರ್ಣ= complete
ಮೊಗಸು= ಪ್ರಯತ್ನ= try

ತಿಂಗಳ ಬೆಳಕು

ಕಂಗಳ ಒಳಗೆ ತಿಂಗಳ ಬೆಳಕು
ನಲ್ಲೆಯ ಒಲವು ಬದುಕಿಗೆ ಬೇಕು
ನೋವುಗಳ ಬಲು ದೂರ ನೂಕು
ಸವಿನೆನಪುಗಳು ಬದುಕಲು ಸಾಕು
ಬಾಳಿದು ನಿಂದು ನೀನೆ ಮುಕ್ಕು !! :)

ಶನಿವಾರ, ಆಗಸ್ಟ್ 23, 2008

'ಮಾತಿನ ಒಳಗುಟ್ಟು' ಹೊತ್ತಿಗೆ ಬಗ್ಗೆ

ಹೊತ್ತಿಗೆ : ಮಾತಿನ ಒಳಗುಟ್ಟು
ಬರೆದವರು : ಡಿ.ಎನ್.ಶಂಕರಬಟ್
ಹೊರಪಡಿಸುಗರು: ಬಾಶಾ ಪ್ರಕಾಶನ, ಹೆಗ್ಗೋಡು, ಸಾಗರ
ಇತ್ತೀಚೆಗೆ 'ಮಾತಿನ ಒಳಗುಟ್ಟು' ಹೊತ್ತಿಗೆ ಎಡಬಿಡದೆ ಓದಿ ಮುಗಿಸಿದೆ. ಓದುವಾಗ ಎಲ್ಲೂ ಬಿಟ್ಟುವೋಗಿದಂತೆ ಅನ್ನಿಸಲಿಲ್ಲ. ಒಂದೇ ಉಸಿರಿಗೆ ಓದಿ ಮುಗಿಸಿದೆ. ಈವೊತ್ತಿಗೆಯಲ್ಲಿ ಹಲವು ತಲೆಮೆಯ ವಿಶಯಗಳ ಬಗ್ಗೆ ಅರಿಮೆಯು ಓದುಗನಿಗೆ ಸಿಗುತ್ತದೆ. ಮಾತಿನ ಒಳಗುಟ್ಟನ್ನು ಅರಿತುಕೊಳ್ಳಲು ನಾವು ಎಂಜಿನಿಯರಿಂಗ್ನಲ್ಲಿ ಓದಿರುವುದಕ್ಕಿಂತ ಹೆಚ್ಚು ಓದಿ ಹಲವು ವಿಶಯಗಳ ಬಗ್ಗೆ ಆರಯ್ಯು ಮಾಡಬೇಕಾಗುತ್ತದೆ.
ಶಂಕರಬಟ್ಟರು ಈವೊತ್ತಿಗೆಯಲ್ಲಿ ಮಾತನಾಡಿರುವ ಅಂಶಗಳು:
ಮಾತಿನ ಕಸುವು, ಮಿದುಳಿನ ಮಾತು, ಮಕ್ಕಳು ಮಾತನಾಡುವ/ಕಲಿಯುವ ಬಗೆ, ಮಾತಿನ ಬಗ್ಗೆ ತಪ್ಪು ಅನಿಸಿಕೆಗಳು. ಮಾತು ಹೊರಡುವ ಬಗೆ, ಸನ್ನೆ ನುಡಿಗಳು ಹುಟ್ಟುವ ಬಗೆ. ಮಾತು ಜಾಗಕ್ಕೆ ತಕ್ಕಂತೆ ಬದಲಾಗುವ ತೆರ.

ಇದರಲ್ಲಿ ನಂಗೆ ಇಸ್ಟವಾದುದು ಮಕ್ಕಳು ಮಾತನಾಡುವ/ಕಲಿಯುವ ಬಗೆ ಮತ್ತು ಮಿದುಳಿನ ಮಾತು.
ಮಕ್ಕಳು ತಮ್ಮ ಸುತ್ತಮುತ್ತ ಆಡುವ ನುಡಿಯನ್ನ(ಮೊದಲ ನುಡಿ) ಯಾರು ಹೇಳಿ ಕೊಡದಿದ್ದರೂ ತನ್ನಿಂತಾನೆ ಕಲಿಯುವ ಬಗೆ ದಿಟವಾಗಲು ಅಚ್ಚರಿ. ಮಕ್ಕಳು ದಿಟವಾಗಲು ೧೮ ತಿಂಗಳು ತಾಯಿಯ ಬಸಿರಿನಲ್ಲಿರಬೇಕಂತೆ. ಆದರೆ ಮನುಸ್ಯರ ಮಿದುಳು ಬೆಳೆಯುವಿಕೆಯಿಂದ ಅದು ೯ ತಿಂಗಳಿಗೆ ಆಚೆ ಬರಬೇಕಾಗುತ್ತದೆ. ಮನುಸ್ಯನಿಗೂ ಪ್ರಾಣಿಗಳಿಗೂ ಇರುವ ಮುಕ್ಯ ಬೇರೆತನ ಅಂದರೆ ನಮ್ಮ ಮಿದುಳು ಹೆಚ್ಚು ಬಲಿತಿರುವುದು/ಬೆಳೆದಿರುವುದು. ಈ ಮಕ್ಕಳಿಗೆ(ಕಿವುಡ ಮಕ್ಕಳನ್ನು ಬಿಟ್ಟು) ಯಾರು ಏನು ಹೇಳಿಕೊಟ್ಟರೂ ಅದು ಅವರ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲವಂತೆ. ಅವರು ತಮ್ಮ ಪಾಡಿಗೆ ಒಂದೊಂದೆ ಮಾತಿನ ಮೆಟ್ಟಿಲುಗಳನ್ನ ಏರುತ್ತಾವೋಗುತ್ತಾರಂತೆ. ಆದರೆ ಈ 'ಪೂರ್ತಿ ಕಿವುಡ ಮಕ್ಕಳು' ಬೇರೆ ಮಕ್ಕಳಂತೆ ಮಾತು ಕಲಿಯಲಾರವು ಯಾಕಂದ್ರೆ ಅವಕ್ಕೆ ಯಾವ ನುಡಿಯು ಕಿವಿಗೆ ಬೀಳುವುದಿಲ್ಲ. ಆದರೆ ಅರೆಕಿವುಡ ಮಕ್ಕಳಿಗೆ ಮಸಿನ್ ಹಾಕಿದ್ರೆ ಆವು ಇತರೆ ಮಕ್ಕಳಂತೆ ಮಾತನ್ನ ೨-೩ ವರುಸದಲ್ಲಿ ಕಲಿಯಬಲ್ಲವು. ಆದರೆ ಪೂರ್ತಿ ಕಿವುಡ ಮಕ್ಕಳಿಗೆ 'ಸನ್ನೆ ನುಡಿ'ಯೇ ಗತಿ. ಈ ಸನ್ನೆ ನುಡಿ ಬೆಳೆಯುವುದು ಕೂಡ ಆ ಕಿವುಡು ಮಗು ಇತರೆ ಕಿವುಡು ಮಕ್ಕಳೊಂದಿಗೆ ಬೆರೆತಾಗ ಮಾತ್ರ. ಇಲ್ಲಂದ್ರೆ ಅವಕ್ಕೆ ಬದುಕಿನುದ್ದಕ್ಕೂ ಮಾತು ಹೊರಡಿಸಲಾಗುವುದಿಲ್ಲವಂತೆ. ಈ ಕಿವುಡು 'ಸನ್ನೆ ನುಡಿ' ಹುಟ್ಟುವುದು ಕೂಡ ಒಂದು ಅಚ್ಚರಿಯೇ. ಅಮೇಲೆ ಅಮೆರಿಕಾದಲ್ಲೆ ಒಂದು ಸನ್ನೆ ನುಡಿಯಾದರೆ ಆಪ್ರಿಕಾದಲ್ಲೆ ಒಂದು ಸನ್ನೆನುಡಿಯಿದೆಯಂತೆ.
.....ಮುಂದುವರೆಯುವುದು

ಶನಿವಾರ, ಜುಲೈ 26, 2008

ಅಣ್ಣೆಗನ್ನಡದ ಒರೆಗಳು

ಹಲಸಿಗ - doctor
ಬಾೞ್ದಲೆ - ಪ್ರಾಣ
ಹಯ್ - ಮಗು, ಶಿಶು ಹಯ್ಕಳು - ಮಕ್ಕಳು
ಹಮ್ಮು - ಗರ್ವ
ಹದಿಟೆ - ಪ್ರತಿಶ್ಟೆ
ಸೇದು - pull
ಹೂದಿಂಗಳು - ವಸಂತ ಮಾಸ
ಸಡ್ಡಕ - ಹೆಂಡತಿಯ ಸೋದರಿಯ ಗಂಡ
ವಾರಡಿ - ಓರೆ, ಓರಡಿ , ಬಾಗಿರುವುದು
ವಾಡಿಕೆ - ರೂಡಿ
ಮೊೞ್ಗು = ಬಾಗು,
ಬಗ್ಗುಮಗಿಲ್ - ಮೊಗಳ್, ಗೋಡೆ
ಬೀೞಕ್ಕರ - ವ್ಯಂಜನ
ಬೀಕಲ್ - ಅಂತಿಮ
ಬಿಸಿಗಣ್ಣಣುಗ - ವೀರಬದ್ರ
ಕಬ್ಬುವಿಲ್ಲ - ಮನ್ಮತಬಿಲ್ಲುಂ
ಬೆಱಗು - ಅತ್ಯಾಶ್ಚರ್ಯ
ಬಿಜ್ಜೆವೆಣ್ - ಸರಸ್ವತಿ
ಬಿಕ್ಕು - ದೀರ್ಗಶ್ವಾಸ
ಕೊಪ್ಪರ - ಹೆಗಲ ಕೊನೆ
ಕುಮ್ಬಿಡು - ನಮಸ್ಕರಿಸು
ಕುರ್ಚಿ - ಒಂದು ಅಂಗ ಕಡಿಯಲ್ಪಟ್ಟವನು, ಮಾದರಿ ಮೂಗುರ್ಚಿ = ಮೂಗು ತುಂಡಾದವನು
ಕುಲಿ - ಕೊಲ್ಲುವವನು (killer)
ಕುಸುರಿ - ಚಾತುರ್ಯ
ತಂಗದಿರ - ಚಂದ್ರ
ಕುಳಿರ್ವೆಟ್ಟ - ಹಿಮಾಲಯ
ಕುಳಿರ್ವೆಟ್ಟಣುಗಿ - ಗಿರಿಜೆ
ಕುಳೆರ್ವೆಳಗ - ಹಿಮಾಂಶು
ಕೆತ್ತು - ನಡುಗು
ಕೆೞವ - ಮುದುಕ
ಕೊತ್ತಿ - ಬೆಕ್ಕು , ಮಾರ್ಜಾಲ
ಅರಚಿಕೊಳ್ಳುವಿಕೆ - ಹರಾಜು, auction
ಅದ್ದಿಗ - ಅದ್ಯಕ್ಶ

ಕವಿರಾಜಮಾರ್ಗದಲ್ಲಿ ಮಾತಱಿವಂ, ನಿಪುಣಂ, ಜಾಣಂ ಮತ್ತು ಬಲ್ಲಂ

[ಸಂಪದದಲ್ಲಿ ಬರೆದದ್ದು]


ಕುಱಿತಂತು ಪೆಱರ ಬಗೆಯಂತೆಱೆದಿರೆ ಪೆಱರ್ಗಱಿಪಲಾರ್ಪವಂಮಾತಱಿವಂಕಿಱಿದಱೊಳೆ ಪಿರಿದುಮರ್ತಮನಱಿಪಲ್ ನೆಱೆವಾತನಾತನಿಂದಂನಿಪುಣಂ

ತಿರುಳು: ಮೇಲೆ ತಿಳಿಸಿದ ಬೇರೆಯವರ(ಕಬ್ಬಿಗರ) ಬಗೆಯನ್ನ(ಕಬ್ಬದ,ಮಾತಿನ) ಬಿಡಿಸಿ ಮತ್ತೆ ಬೇರೆಯವರಿಗೆ ಅರುಹಲಾಗುವವನು ಮಾತಱಿವಂ(ನ್)/ವಾಗ್ಮಿ(speaker) ಕಡಿಮೆ ಪದಗಳನ್ನು ಬಳಸಿ ಅದರಲ್ಲಿ ಹಿರಿದಾದ ವಸ್ತು,ವಿಶಯವನ್ನ ತುಂಬಿ ಅರುಹಲಾಗುವವನು ನಿಪುಣಂ(ನ್)


ನುಡಿಯಂ ಛಂದದೊಳೊಂದಿರೆತೊಡರ್ಚಲಱಿವಾತನಾತನಿಂದಂ ಜಾಣಂತಡೆಯದೆ ಮಹಾದ್ವಕ್ರುತಿಗಳನೊಡರಿಸಲಾರ್ಪಾತನೆಲ್ಲರಿಂದಂ ಬಲ್ಲಂ


ತಿರುಳು: ನುಡಿಯೊಳಗೆ ಚಂದಸ್ಸನ್ನು ಹೊಂದಿಸಿ(ತೊಡರ್ಸಿ) ಬರೆಯಲು ಅಱಿತವನು ಜಾಣಂ(ನ್), ಕೂಡಲೆ ಹೆಗ್ಗಬ್ಬಗಳನ್ನು ಹುಟ್ಟಿಸು(ಒಡರಿಸು)ವವನು ಎಲ್ಲರಿಗಿಂತ ಬಲ್ಲಂ(ನ್)/ಪಂಡಿತ

ಮಡಿವ ಬಯಕೆ ಮತ್ತು ಕನಸು

[ಸಂಪದದಲ್ಲಿ ಬರೆದದ್ದು]

ಮಡಿಯಲೆಳೆಸುವ ಮನದ ಬಯಕೆಯು
ಆಗಾಗ ರೆಕ್ಕೆ ಕಟ್ಟಿಕೊಂಡು ಹೆಬ್ಬಯಕೆಯ ಹೆಗಲೇರಿದಾಗ
ಮಯ್ ಕೂಡ ಓಗೊಟ್ಟು ತೊತ್ತಾಗುವುದ ಕಂಡು
ದೂರ ನಿಂತು ನಗುತಿದೆ ಕನಸು, "ನನಸಾಗುವೆಯಾ ಬಯಕೆ" ಎಂದು

ಮಲಯ್ ಮಾದಪ್ಪ, ಕವಿರಾಜಮಾರ್ಗ ಮತ್ತು ಕನ್ನಡತನ

[ಸಂಪದದಲ್ಲಿ ಬರೆದದ್ದು, ಈ ಬರಹ ಡಾ ಡಿ.ಎನ್.ಶಂಕರಬಟ್ಟರ 'ಹೊಸಬರಹ'ದಲ್ಲಿದೆ]

ಈ ಹಿಂದೆ ಕವಿರಾಜಮಾರ್ಗ ಮತ್ತು ಕಂಸಾಳೆ ಇವುಗಳ ಬಗ್ಗೆ ಇಲ್ಲಿ ಬ್ಲಾಗಿದ್ದೆ.
ನಮ್ಮ ಮಯ್ಸೂರು,ಮಂಡ್ಯ, ಚಾಮರಾಜನಗರ, ರಾಮನಗರ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಹೆಚ್ಚು ಮಂದಿಗಳಿಂದ ಪೂಜಿಸಿಕೊಳ್ಳುವ, ಜನಪದರ ಒಲುಮೆಯ ದೇವ ಈ ಮಾದಪ್ಪ. ಒಕ್ಕಲಿಗರು, ಲಿಂಗಾಯಿತರು, ಉಪ್ಪಾಲಿಗರು, ಕುರುಬರು,ಹಾಲುಮತದವರು ಮತ್ತು ದಲಿತರು ಹೀಗೆ ಎಲ್ಲ ಜಾತಿಗಳ ಜನರು ಈ ಮಾದಪ್ಪನ ಒಕ್ಕಲು. ಬೆಂಗಳೂರಿನಿಂದ ಮದ್ದೂರು, ಮಳವಳ್ಳಿ,ಕೊಳ್ಳೆಗಾಲ, ಹನೂರುಗಾಣೆ ಹೋಗಿ ಮಲಯ್ ಮಾದಪ್ಪನ ಬೆಟ್ಟವನ್ನ ತಲುಪಬಹುದು. ಕವಿರಾಜಮಾರ್ಗದಲ್ಲಿ ಹೇಳಿರುವಂತೆ ಕನ್ನಡಿಗರು 'ಕಾವ್ಯ ಪ್ರಯೋಗ ಪರಿಣಿತಮತಿಗಳ್' ಎನ್ನುವುದು ಅಕ್ಕರಕ್ಕರವೂ ದಿಟ ಅನ್ನುವುದು ಮಾದಪ್ಪನ ಮೇಲೆ ಕಟ್ಟಿರುವ ಜನಪದ ಹಾಡುಗಳು(ಕಂಸಾಳೆ ಹಾಡುಗಳು) ಕೇಳಿದರೆ ನಮಗೆ ಅರಿವಾಗುತ್ತದೆ. ಯಾಕಂದ್ರೆ ಈ ಪದಗಳನ್ನು ಕಟ್ಟಿರುವವರು ಹೆಚ್ಚೇನು ಓದಿದವರಲ್ಲ ಅತವ ಬೇರೆ ಹಳೆಗನ್ನಡ/ನಡುಗನ್ನಡ ಕಬ್ಬಿಗರಂತೆ ಸಕ್ಕದ, ಪಾಗದಗಳನ್ನು ಕಲಿತವರೂ ಅಲ್ಲ. ಹಾಗಾಗಿ ಈ ಜನಪದ ಹಾಡುಗಳಲ್ಲಿ ನಮಗೆ ದಿಟವಾದ ಕನ್ನಡದ ಸೊಗಡು ಕಾಣಲು ಸಿಗ್ತದೆ.
ಡಾ. ಕೇಶವನ್ ಪ್ರಸಾದ್ ಎಂಬುವರು ಸಂಪಾದಿಸಿರುವ 'ಮಲಯ್ ಮಾದೇಶ್ವರ'ಎಂಬ ಹೊತ್ತಿಗೆಯ ಮುನ್ನುಡಿಯಲ್ಲಿ ಡಾ.ಚಂದ್ರಶೇಕರ ಕಂಬಾರರು "ಮಾದೇಶ್ವರ ಕಾವ್ಯವನ್ನು ಬುಡಕಟ್ಟು ಕಬ್ಬಕ್ಕೆ ಸೇರಿಸಿ ಅದರಿಂದ ಕನ್ನಡ ನಡಾವಳಿ/ಸಂಸ್ಕ್ರುತಿಯನ್ನು ಹುಡುಕುವ ಕೆಲಸಕ್ಕೆ ನಾವು ಕಯ್ ಹಾಕಿದ್ದೇವೆ. ಕಾಡು ಮತ್ತು ನಾಡಿನ ಹತ್ತಾರು ಜನವರ್ಗಗಳು ಪೂಜಿಸುವ ದೇವರು ಮತ್ತು ಆ ದೇವರ ಮೇಲೆ ಕಟ್ಟಿರುವ ಪದಗಳು ನೂರಾರು. ಇದುವರಗೆ ಕಡೆಣಿಕೆಗೆ ಗುರಿಯಾದ ಈ ಬುಡಕಟ್ಟಿನ ಸಂಸ್ಕ್ರುತಿ ಕೂಡ ಸಿರಿವಂತ ಎಂಬುದನ್ನು, ಮತ್ತು ಅದು ನಮ್ಮ ಹಿರಿಯರ ನುಡಿಯನ್ನು,ಅರಿವನ್ನು ಮತ್ತು ಪರಂಪರೆಯನ್ನು ಕಾಪಾಡಿಕೊಂಡು ಬಂದಿವೆ ಎಂಬುದನ್ನು ನಾವು ತಿಳಿಯುತ್ತೇವೆ." ಎಂದಿದ್ದಾರೆ.
ಇದು 'ಪಿನ್ ಲಾಂಡಿನ ಬಾಯಿಗಬ್ಬದಶ್ಟೆ ದೊಡ್ಡದು' ಎಂಬುದು ಹಾ.ಮಾ.ನಾಯಕರ ಮಾತು. " ಈ ಹಿರಿಗಬ್ಬದಲ್ಲಿ ಬರುವ ಒಳ್ಳೆ ವಿಶಯಗಳು ಎಲ್ಲ ಕಾಲಕ್ಕೂ ಒಪ್ಪುವಂತದು ಹಾಗು ಅಲ್ಲಿನ ಪರಿಸರದ ಬಗ್ಗೆ ಅರಿವು, ಸಾಮಾಜಿಕ ತಿಳುವಳಿಕೆ ಹಾಗು ಮನಸ್ಸಿನ ಹರಹುಗಳು ಇಂದಿಗೂ ಒಪ್ಪುವಂತವು. ಓರ್ವ, ಕೆಟ್ಟ ವೆವಸ್ತೆಯನ್ನು ಇದಿರಿಸಿ ಒಟ್ಟಾರೆ ಸಾಮಾಜಿಕ ಅರಿವನ್ನು ತೋರಿಸಿ ವಸ್ತು-ಸ್ತಿತಿಯ ಅರಿವುಂಟು ಮಾಡುತ್ತಾನೆ' ಎನ್ನುತ್ತಾರೆ ಕೇಶವನ್ ಪ್ರಸಾದ್ ಅವರು.
ಇಲ್ಲಿ ಇನ್ನೊಂದು ಮುಕ್ಯವಾದ ಅಂಶ. ಮಾದೇಶ್ವರ, ಜುಂಜಪ್ಪ, ಮಯ್ಲಾರ ಮತ್ತು ಮಂಟೇಸಾಮಿಯಂತ ಶರಣರು ಕೆಳವರ್ಗದವರ ಇರುವಿಕೆಯನ್ನು ಮತ್ತೆ ಬಲಪಡಿಸುವ ಮತ್ತು ತಮ್ಮದೇ ಆದ ಸಂಸ್ಕ್ರುತಿಯನ್ನು ಕಟ್ಟುವ ಉದ್ದೇಶ ಇವರದಾಗಿತ್ತು ಅನ್ನಿಸ್ತದೆ. ಬೇಡರು, ಕಾಡು ಕುರುಬರು, ಸೋಲಿಗರೆಂಬ ಬುಡಕಟ್ಟು ಮಂದಿಯೆ ಮಾದಪ್ಪನ ಸೇವಕರು. ಅವರ ಉದ್ದೇಶಕ್ಕೆ ದುಡಿದವ ಮಾದೇಶ್ವರ.ಮಲಯ್ ಮಾದೇಶ್ವರ ನ ಮೇಲೆ ಕಟ್ಟಿರುವ ಪದಗಳನ್ನೆಲ್ಲ ಕೂಡಿಸಿದರೆ ಅದು ರಾಮಾಯಣ, ಮಾಬಾರತದಂತೆ ಒಂದು ಹಿರಿಗಬ್ಬ ಎನಿಸಿಕೊಳ್ಳುವದರಲ್ಲಿ ಎರಡು ಮಾತಿಲ್ಲ. ಅದನ್ನು oral epic ಎಂದೇ ಅರಯ್ಯುಗಾರರು ಹೇಳುತ್ತಾರೆ.
ಇನ್ನೊಂದು ನಿಬ್ಬರದ ಸಂಗತಿಯಂದರೆ ಈ ಮಾದಪ್ಪನ ಬೆಟ್ಟಕ್ಕೆ ಗಡಿಯಲ್ಲಿರುವ ತಮಿಳುನಾಡಿನ ಮಂದಿಯೂ ಬರುತ್ತಾರೆ. ಆದರೆ ತಮಿಳಿನಲ್ಲಿ ಮಾದಪ್ಪನ ಬಗ್ಗೆ ಪದಗಳು/ಕಬ್ಬಗಳು ಸಿಕ್ಕಿರುವುದು ತೀರ ಕಡಿಮೆ. ಹಾಗಾದರೆ ಮಾದಪ್ಪನ ಬೆಟ್ಟಕ್ಕೆ ಈಗಲು ತಮಿಳುನಾಡಿನಿಂದ ಬರುವವರು ಒಂದಾನೊಂದು ಕಾಲದಲ್ಲಿ ಕನ್ನಡದವರೇ ಆಗಿರಬೇಕು. ಹಾಗಾಗಿ ಕನ್ನಡ ಜನರು ಮತ್ತು ಕನ್ನಡ ನಾಡು ಕಾವೇರಿಯಿಂದ ಆಚೆಗೂ ಹರಡಿದ್ದಿರಬಹುದು(ಕವಿರಾಜಮಾರ್ಗಕಾರನು ಕನ್ನಡ ನಾಡಿನ ತೆಂಕಣದ ಎಲ್ಲೆಯನ್ನು ಸರಿಯಾಗಿ ಗುರುತ್ಸಿಲ್ಲ ಎಂಬ ವಾದಕ್ಕೆ ಇನ್ನಶ್ಟು ಬಲ ಬರುತ್ತದೆ - ಈ ವಾದದ ಬಗ್ಗೆ ಒಂದು ಹೊತ್ತಿಗೆಯನ್ನು ನಾನು 'ಅಂಕಿತ'ದಲ್ಲಿ ನೋಡಿದೆ).
ಡಿಎಲ್ ಅಯ್ ನಲ್ಲಿ ಮಾದಪ್ಪನ ಬಗ್ಗೆ ಹೊತ್ತಿಗೆಯಿದೆ.http://www.new.dli.ernet.in/scripts/FullindexDefault.htm?path1=/data/upload/0028/112&first=1&last=395&barcode=2040100028107
ಈ ಹೊತ್ತಿಗೆಯ ಪುಟ ೧೨ ರಲ್ಲಿ ಹೀಗಿದೆ. "..ಸೇಲಂ ಜಿಲ್ಲೆಯ ಕೆಲವು ಊರುಗಳನ್ನು ಸುತ್ತಿ ಕೇಳಲಾಗಿ ಮಾದಪ್ಪನ ಬಗ್ಗೆ ಕತೆ ಹೇಳುವವರು ಯಾರೂ ಇಲ್ಲ ಎಂಬ ಉತ್ತರ ದೊರೆಯಿತು. ಆದರೆ ದರ್ಮಪುರಿಯ ಕೆಲವು ಪ್ರದೇಶಗಳಲ್ಲಿ ಮಾದಪ್ಪನ ಹಾಡು ಹಾಡುವ ಕೆಲವು ಬಕುತರಿದ್ದಾರೆ ಎಂಬುದು ತಿಳಿಯಿತು. ಉಡುಕು ವಾದ್ಯವನ್ನು ಬಳಸಿಕೊಂಡು ಕನ್ನಡದವರೇ ತಮಿಳು ನಾಡಿಗೆ ಸೇರಿಕೊಂಡು ತಮಿಳಿನಲ್ಲಿ ಪದ್ಯ ಕಟ್ಟಿ ತಮ್ಮದೇ ಆದ ದಾಟಿಯಲ್ಲಿ ಹಾಡುವರೆಂದೆನಿಸುತ್ತದೆ. ಏನೇ ಇರಲಿ ತಮಿಳಿನ ಜನಪದ ಸಾಹಿತ್ಯದಲ್ಲಿ ಮಾದೇಶ್ವರರ ಕತೆಗಳಿಲ್ಲ ಎಂಬುದು ನಿಕ್ಕುವವಾಯಿತು...".
ಕೊ.ಕೊ: ಈಗ 'ಸಯ್ಕೊ' ಸಿನಿಮಾದ ರಗು ದೀಕ್ಸಿತ್ ರವರ ಹಾಡು 'ನಿನ್ನ ಪೂಜೆಗೆ ಬಂದೆ ಮಾದೇಸ್ವರ, ಇವರ ಕರುಣದಿ ಕಾಯೋ ಮಾದೇಸ್ವರ' ಸಿಕ್ಕಾಪಟ್ಟೆ ಹಿಟ್ ಆಗಿದೆ.

ಬುಧವಾರ, ಸೆಪ್ಟೆಂಬರ್ 12, 2007

ಸೊಡರು-ಎಲರು

ಹೊತ್ತಿತೊ ಬಾಳಲ್ಲಿ ನಲಿವಿನ ಸೊಡರು

ಕುಣಿಯಿತು ಆ ಬೆಳಕಲ್ಲಿ ಪೊಗರು

ಬಂದಿತು ಎಡರುಗಳ ಎಲರು

ನಂದಿಹೋಗುವುದೆ ನಲಿವಿನ ಸೊಡರು

ಯಾರಿಲ್ಲವೇ ಪೊರೆವವರು

-----
ಸೊಡರು = ದೀವಿಗೆ
ಪೊಗರು = ಜಂಬ
ಎಲರು = ಗಾಳಿ

'ಬ' ಕಾರದ ಚುಟುಕಗಳು

ಬಾ ಬಾನಂಗಳದ ಬಾನ್ದೊರೆಯೆ

ಬಸವಳಿದಿಹೆನು ಬೆಂಗದಿರನ ಬೇಗೆಯಲಿ

ಬಗ್ಗಿಹೆನು ಬಾಳಿನ ಬೇನೆಗಳಲಿ

ಬುವಿಗಿಳಿದು ಬಳಿ ಬಂದು

ಬಡಿದೆಚ್ಚರಿಸು ಬದುಕನು ಬೇಗ

ಬೆಸುಗೆಯ ಬೆಸೆಯಿಸು

-----
ಮೇಲಿನ ಪದ್ಯದಲ್ಲಿ ಎಲ್ಲ ಪದಗೊಳು 'ಬ'ಯಿಂದ ಸುರುವಾಗುತ್ತವೆ.

ಮಂಗಳವಾರ, ಸೆಪ್ಟೆಂಬರ್ 11, 2007

ಅಲ್ಲಿಂದ ಇಲ್ಲಿಗೆ

ಅಲ್ಲಿಂದ ಇಲ್ಲಿಗೆ ಬಂದೆ
ನಲಿವ ಹುಡುಕುತ್ತಾ
ಮುಸುಕಾದ ನುಲಿದುಕೊಂಡಿರುವ
ದಾರಿಗಳಲ್ಲಿ ಓಡುವುದಿರಲಿ
ನಡೆಯುವುದೇ ಎಡರು.
ಆದರೂ ಸುಳ್ಳು ನಲಿವ ನಂಬಿ
ನಡೆಯಬೇಕು ಬಾಳ ಪಯಣ ಸಾಗಿಸಲು
ಒಮ್ಮೊಮ್ಮೆ ಹಿಂತಿರುಗಿ ನೋಡಿದಾಗ
"ಒಹ್ ಏಸು ನಲಿವಿತ್ತು" ಅನ್ನುತ್ತಿತ್ತು
ಆದರೂ ನಡೆಯುತಿದೆ ಉಸಿರು ಬಾಳಿನತ್ತ ಮೊಗವಿಟ್ಟು
ಸಾವಿನಿಂದ ತಪ್ಪಿಸಿಕೊಳ್ಳಲು

ಸೋಮವಾರ, ಆಗಸ್ಟ್ 27, 2007

ಸಂಚಿ ಹೊನ್ನಮ್ಮನ ಹದಿಬದೆಯ ಧರ್ಮದ ಸಾಲುಗಳು

ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ
ಪೆಣ್ಣಲ್ಲವೆ ಪೊರೆದವಳು
ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು
ಕಣ್ಣು ಕಾಣದ ಗಾವಿಲರು

ಭಾನುವಾರ, ಏಪ್ರಿಲ್ 08, 2007

ಚುಟುಕ: ಊರಿನ/ಸಾರಿನ ನೆನಪು

ಉಪ್ಪುನೀರ ಮೇಲೆ ಹಾರಿದರೂ
ಮರೆಯಲಿಲ್ಲ ಊರು
ಏರಿದರೂ ಪ್ಲೇನು, ಕಾರು
ಮರೆಯಲಿಲ್ಲ ಮನೆಯ ಸಾರು

ಭಾನುವಾರ, ಮಾರ್ಚ್ 18, 2007

ಹತ್ತಿರ-ದೂರ

ಭಾರ ಮನಸ್ಸುಗಳ ನಡುವಿನ
ಅಂತರ
ಬಲು ದೂರ ದೂರ
ಒಲವ ಚೆಲ್ಲುವ ಮನವು ಚಿಮ್ಮುವುದು
ನಿರಂತರ
ಕಾರಂಜಿಯ ತರ
ತರುವುದು ಹೃದಯಗಳ
ಹತ್ತಿರ ಹತ್ತಿರ...

ಮಂಗಳವಾರ, ಮಾರ್ಚ್ 13, 2007

ಸೇಬು- ತರಂಗ



ಸೇಬಿನಿಂದ ನೀರಿನಲ್ಲಿ ತರಂಗ ಎಬ್ಬಿಸಿ ...ಬರುವ ಹನಿಗಳ ಕ್ಲಿಕ್ಕಿಸುವ ಹುಚ್ಚು ಆಸೆ ಈ ರೀತಿ ಕೊನೆಗೊಂಡಿತು

ಶನಿವಾರ, ಮಾರ್ಚ್ 03, 2007

ಬೆಳಕಿನ ಎಳೆ ( optic fibre) - 1

(ಕನ್ನಡದಲ್ಲೆ ವಿಙ್ಞಾನದ ವಿಷಯಗಳ ಬಗ್ಗೆ ಕಡಿಮೆ ಲೇಖನಗಳಿವೆ ಎಂಬ ಕೂಗಿದೆ. ಲೇಖನಗಳನ್ನು ಸ್ವಲ್ಪ ಮಟ್ಟಿಗಾದರೂ ಹೆಚ್ಚಿಸೋಣವೆಂಬ ಆಸೆಯಿಂದ ಇದನ್ನು ಬರೆಯುತ್ತಿದ್ದೇನೆ. ಈ ತಲೆಬರಹದ ವಿಷಯದಲ್ಲಿ ನಾನು ಪರಿಣತ ಅಲ್ಲ. ಆದರೆ ನನ್ನ ವೃತ್ತಿ ಜೀವನದಿಂದ ನಾನು ಕಲಿತಿರುವ ಕೆಲವು ವಿಚಾರಗಳನ್ನು ಕಟ್ಟಿ ಕೊಡುವ ಪ್ರಯತ್ನ ಮಾಡುತ್ತಿದ್ದೇನೆ. ಇಲ್ಲಿ ಕೆಲವು ತಪ್ಪುಗಳಿದ್ದರೆ ದಯವಿಟ್ಟು ತಿದ್ದಿ)


ಪರಿಚಯ
-------
ನಮಗೆಲ್ಲರಿಗೂ ಗೊತ್ತಿರುವ ಹಾಗೆ ಅತಿ ಹೆಚ್ಚು ಮಾಹಿತಿಯನ್ನು ಕೊಂಡೊಯ್ಯುವುದು ಬೆಳಕಿನ ಎಳೆಗಳ ಹೆಗ್ಗಳಿಕೆ. ಈ ಅಂಶವೇ ದೂರ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟು ಮಾಡಿದೆ.ಏಕೆಂದರೆ ಮಾಹಿತಿಯನ್ನು ಬೆಳಕನ್ನಾಗಿ ಮಾರ್ಪಡಿಸಿ ನಂತರ ಅದನ್ನು ಈ ಎಳೆಗಳ ಮೂಲಕ ಕಳಿಸುವುದು(ತಾಮ್ರದ ತಂತಿಗಳಲ್ಲಿ ಮಾಹಿತಿಯನ್ನು ವಿದ್ಯುತ್ ಸಂಕೇತಗಳನ್ನಾಗಿ ಮಾರ್ಪಡಿಸಿ ಕಳಿಸಲಾಗುತ್ತದೆ) ಇದರ ತಂತ್ರಙ್ಞಾನದ ಮುಲಭೂತ ಕ್ರಿಯೆ. ಬೆಳಕು ಒಂದು ವಿದ್ಯುತ್ಕಾಂತ ತರಂಗ (ಒಂದು ಮೀಮಾಂಸೆಯ ಪ್ರಕಾರ..ಇನ್ನೊಂದು ಮೀಮಾಂಸೆಯ ಪ್ರಕಾರ ಬೆಳಕು ಕಣಗಳಿಂದಾಗಿದೆ ಎಂದು- particle theory.).

ಬೆಳಕು ಹೇಗೆ ಎಳೆಯೊಳಗೆ ಪ್ರವಹಿಸುತ್ತವೆ?
---------------------------------
ಇದು ಬೆಳಕಿನ 'ಸಂಪೂರ್ಣ ಆಂತರಿಕ ಪ್ರತಿಫಲನ'(ಸಂ ಆ ಪ್ರ)[Total Internal Reflection-TIR]ಎಂಬ ನಡವಳಿಕೆಯ ಮೇಲೆ ಆಧಾರಿತವಾಗಿದೆ. 'ಸಂ ಆ ಪ್ರ' ಬೆಳಕಿನ ಬಹು ಮುಖ್ಯವಾದ ವಕ್ರೀಬವನವೆಂಬ ಕ್ರಿಯೆಯ ಒಂದು ವಿಶೇಷ ಸಂಗತಿ. ಈ ಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಬೆಳಕಿನ ಎಳೆಗಳನ್ನು ತಯಾರಿಸಲಾಗುತ್ತದೆ. ಎಳೆಯ ಒಂದು ತುದಿಯಲ್ಲಿ ಬೆಳಕಿನ ಮೂಲವನ್ನು ಒಂದು ನಿರ್ದಿಷ್ಟ ಕೋನದಲ್ಲಿ ಇಟ್ಟರೆ, ಆ ಮೂಲದಿಂದ ಬರುವ ಬೆಳಕಿನ ಕಿರಣಗಳು ಒಂದು ನಿರ್ದಿಷ್ಟ ಕೋನದಲ್ಲಿ ಎಳೆಯ ಒಳಗೋಡೆಗೆ ಬಡಿದರೆ ಅದು ಪ್ರತಿಫಲಿಸಿ ಮತ್ತದೆ ಒಳಗೋಡೆಗೆ ಅದೇ ನಿರ್ದಿಷ್ಟ ಕೋನದಲ್ಲಿ ಬಡಿದರೆ ಮತ್ತೆ ಪ್ರತಿಫಲಿಸುತ್ತದೆ.ಹೀಗೆ ಈ ಕ್ರಿಯೆ ನಿರಂತರವಾಗಿ ನಡೆಯುತ್ತಾ ಬೆಳಕಿನ ಕಿರಣ ಎಳೆಯ ಮತ್ತೊಂದು ತುದಿಯನ್ನು ಮುಟ್ಟುತ್ತದೆ.
ನಮಗೆ ಗೊತ್ತಿರುವ ಹಾಗೆ ಬಿಳಿ ಬೆಳಕಿನಲ್ಲಿ ಎಲ್ಲ ಬಣ್ಣದ ಬೆಳಕು ಅಡಕವಾಗಿದೆ(ನ್ಯೂಟನ್ ನ ಪ್ರಸಿದ್ಧವಾದ ಪ್ರಿಸ್ಮ್ ಪ್ರಯೋಗವನ್ನು ಙ್ನಾಪಿಸಿಕೊಳ್ಳಿ) ಆದ್ದರಿಂದ ನಾವು ಮಾಹಿತಿಯನ್ನು ಬೇರೆ ಬೇರೆ ಬಣ್ಣದ ಬೆಳಕನ್ನಾಗಿ ಮಾರ್ಪಡಿಸಿ ಅವುಗಳೆಲ್ಲವನ್ನು ಒಂದೇ ಎಳೆಯಲ್ಲಿ ಸಮಾಂತರವಾಗಿ ಕಳಿಸಬಹುದು. ಪ್ರತಿ ಬಣ್ಣವು ತನ್ನದೆ ಆದ ತರಂಗಾಂತರ(wavelength)ವನ್ನು ಹೊಂದಿರುತ್ತವೆ.ಇದರಿಂದ ಪ್ರತಿ ಬಣ್ಣದಿಂದ ಮಾಹಿತಿಯನ್ನು ತೆಗೆಯುವುದು ಕಷ್ಟದ ವಿಚಾರವೇನಲ್ಲ. ಅವುಗಳ ತರಂಗಾಂತರದ ಆಧಾರದ ಮೇಲೆ ಯಾವ ಮಾಹಿತಿ ಯಾವ ಬಣ್ಣದ ಮೂಲಕ ಕಳಿಸಲಾಯಿತು ಎಂಬುದನ್ನು ನಿರ್ದಿಷ್ಟವಾಗಿ ಹೇಳಬಹುದು.

ಬೆಳಕು v/s ವಿದ್ಯುತ್
----------------
ಬೆಳಕಿನ ಮೂಲಕ ಮಾಹಿತಿಯನ್ನು ಕಳಿಸುವುದರಿಂದ ಹಲವು ಲಾಭಗಳಿವೆ
೧) ತಾಮ್ರದ ತಂತಿಗಿಂತ ಹೆಚ್ಚು ಹೆಚ್ಚು ಮಾಹಿತಿಯನ್ನು ಬೆಳಕಿನ ಎಳೆಗಳಲ್ಲಿ ಕಳುಹಿಸಬಹುದು (ಹೇಗೆ ಎಂದು ಮೇಲೆ ತಿಳಿಸಲಾಗಿದೆ)
೨) ಮಾಹಿತಿಯು ಬೆಳಕಿನ ರೂಪದಲ್ಲಿರುವುದರಿಂದ ಅನಿರೀಕ್ಷಿತ ವಿದ್ಯುತ್ಕಾಂತ ಮಂಡಲದ ಹಸ್ತಕ್ಷೇಪ(Electro-Magnetic interference-EMI)ದ ಪ್ರಭಾವಕ್ಕೆ ಒಳಪಡುವುದಿಲ್ಲ. ಇದರಿಂದ ಮಾಹಿತಿಯ ಸಮಗ್ರತೆಗೆ ಧಕ್ಕೆಯಾಗುವುದಿಲ್ಲ. ಆದರೆ ತಾಮ್ರದ ತಂತಿಯಲ್ಲಿ ಹರಿಯುವ ಮಾಹಿತಿ EMI ನಿಂದ ಪ್ರಭಾವಿತಗೊಂಡು ಮಾಹಿತಿಯ ಸಮಗ್ರತೆಯು ಹಾಳಾಗುತ್ತದೆ.

(ಭಾಗ -೨ ನಿರೀಕ್ಷಿಸಿ )