ನನ್ನ ನಲುಮೆಯ ಗೆಳೆಯರೊಬ್ಬರು ಬೇರುದೆನ್ನುಡಿ ಬರೀ ಪರಿಕಲ್ಪನೆ ಅದಕ್ಕೆ ಅಶ್ಟು ತಲೆಮೆ/ಮಹತ್ವ ಕೊಡಬೇಕಾಗಿಲ್ಲ ಅಂತ ಹೇಳಿದ್ದಾರೆ, ಅದಕ್ಕೆ ನಾನು ಈ ಮರುಲಿ/ಉತ್ತರ ಬರೆಯಬೇಕಾಯಿತು.
ನೀವು ಬುಡದೆನ್ನುಡಿ ಬರೀ ಪರಿಕಲ್ಪನೆಯಶ್ಟೆ ಅಂತ ಹೇಳಿದ್ದೀರಿ. ಇದಕ್ಕೆ ನನ್ನಕೊಂಕಿದೆ. ಬುಡದೆನ್ನುಡಿ ಬರೀ ಪರಿಕಲ್ಪನೆಯಲ್ಲದೆ ಅದು ಒಪ್ಪತಕ್ಕಂತಹ ಮತ್ತು ದಿಟಕ್ಕೆ ಹತ್ತಿರವಾದ ಪರಿಕಲ್ಪನೆ(reasonably realistic assumption) ಎಂದು ನಾನು ಹೇಳುತ್ತೇನೆ. ಯಾಕಂದರೆ ಶಂಕರಬಟ್ಟರು ತಮ್ಮ ಹೊತ್ತಿಗೆಯಲ್ಲಿ ಇದರ ಬಗ್ಗೆ ತಿಳಿಯಾಗಿ ಹೇಳಿದ್ದಾರೆ. ಒಂದು ಬುಡಕಟ್ಟಿನ ಮಂದಿ ಈ ನುಡಿಯನ್ನು ಆಡುತ್ತಿದ್ದಿರಬೇಕು, ಆ ಬುಡಕಟ್ಟಿನ ಮಂದಿ ಬೇರೆ ತಾವಿಗೆ/ಜಾಗಕ್ಕೆ ಹೋದಾಗ (ಗುಳೆ ಹೋದಾಗ) ಅವರ ನುಡಿಯಲ್ಲಿ ಕೆಲವು ಮಾರ್ಪುಗಳಾದವು ಯಾಕಂದರೆ ಅವರು ತಮ್ಮ ಬೇರು ನೆಲದ ನಂಟನ್ನು ಕಡಿದುಕೊಂಡಿರಬಹುದು. ಇದಕ್ಕೆ ಇಂದಿಗೂ ಇರುವ ನೀಲಿಬೆಟ್ಟ(ಊಟಿ)ಗಳಲ್ಲಿ ಆಡುವ 'ಬಡಗ'ನುಡಿಯೇ ಒಂದು ಒಳ್ಳೆಯ ಮಾದರಿ.ಈ ಬಡಗ ನುಡಿ ಆಡುವ ಮಂದಿ ಒಂದು ಹೊತ್ತಿನಲ್ಲಿ ಮಯ್ಸೂರಿನಲ್ಲೇ ಇದ್ದರು. ಕೆಲವು ಓಸುಗರಗಳಿಂದ ಅವರು ಮಯ್ಸೂರು ಬಿಟ್ಟು ಊಟಿಗೆ ಹೋಗಿ ನೆಲಸಿದರು ಮತ್ತು ಅದು ಬೆಟ್ಟ-ಗುಡ್ಡವಾದ್ದರಿಂದ ಅವರಿಗೆ ಮಯ್ಸೂರಿನ ನಂಟು ಕಡಿದು ಅವರ ನುಡಿಯಲ್ಲಿಮಾರ್ಪುಗಳಾಗಿ 'ಬಡಗ' ನುಡಿಯಾಯಿತು ಅಂತ ನುಡಿಯರಿಗರು ಹೇಳುತ್ತಾರೆ. ಇದೇ ರೀತಿ ಬೇರುದೆನ್ನುಡಿಯಿಂದ ಕನ್ನಡ, ತುಳು, ತಮಿಳು ....ಹೀಗೆ ಹೊತ್ತಿಂದ ಹೊತ್ತಿಗೆ ಇವು ಬೇರೆ ಸೊಂತ ನುಡಿಯಾಗಿ ಮಾರ್ಪಟ್ಟವು ಎಂದು ಹೇಳುವುದರಲ್ಲಿ ಎಳ್ಳಶ್ಟು ಅಯ್ಬು/ಸಂಶಯ ಬೇಡ.
ಅವೊತ್ತಿನಲ್ಲಿ ಸಕ್ಕದದಲ್ಲಿ ಆದಶ್ಟು ಬರಹಗಳು ಬೇರುದೆನ್ನುಡಿಯಲ್ಲಿ ಬಂದಿಲ್ಲವಾದ್ದರಿಂದ ಕೆಲವರು(ನೀವು ಕೂಡ) ಬೇರುದೆನ್ನುಡಿ ಬರೀ 'ಪರಿಕಲ್ಪನೆ' ಎನ್ನುವುದುಂಟು. ಆದರೆ ಈ ಪರಿಕಲ್ಪನೆಯನ್ನು ಅಲ್ಲಗಳೆಯಲು ಆಗುವುದಿಲ್ಲ/ಆಗಿಲ್ಲ ಮತ್ತು ಈಪರಿಕಲ್ಪನೆಯನ್ನು ನಾವು ಕಡೆಗಣಿಸಲಾಗುವುದಿಲ್ಲ/ಆಗಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ