ತಿಂಡಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ತಿಂಡಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಜೂನ್ 28, 2011

ಊಟದ ಹಾಡು

ಮಕ್ಕಳಿಗೆ ಊಟದ ಹಾಡು...ಚೆನ್ನಾಗಿರುತ್ತೆ. ನಾನು ಚಿಕ್ಕವನಾಗಿದ್ದಾಗ ಕೇಳಿದ್ದು/ಓದಿದ್ದು.

ಒಂದು ಎರಡು
ಬಾಳೆಲೆ ಹರಡು
ಮೂರು ನಾಕು
ಅನ್ನ ಹಾಕು
ಅಯ್ದು ಆರು
ಬೇಳೆ ಸಾರು
ಏಳು ಎಂಟು
ಪಲ್ಯಕೆ ದಂಟು
ಒಂಬತ್ತು ಹತ್ತು
ಉಂಡೆಲೆ ಎತ್ತು -> ಎಲೆ ಮುದಿರೆತ್ತು (ಈ ಸಾಲು ಸರಿಯಾಗಿದಿಯೋ ಇಲ್ವೊ ಗೊತ್ತಿಲ್ಲ)
ಒಂದರಿಂದ ಹತ್ತು (ಹೀಗಿತ್ತು)
ಊಟದ ಆಟವು ಮುಗಿದಿತ್ತು

ಅಂಕಿಗಳ ಜೊತೆಜೊತೆಗೆ ಒಳ್ಳೆಯ ಊಟದ ಪರಿಚಯವೂ ಮಕ್ಕಳಿಗೆ ಇದರ ಮೂಲಕ ಆಗುತೆ

ಬೆಂಗಳೂರಿನ ತಿಂಡಿಗಳು

ಬನಶಂಕರಿಯ ಎಸ್ಸೆಲ್ವಿ ಮೆತ್ತಗಿರುವ ಅಕ್ಕಿ ಇಡ್ಲಿ ಚೆಂದ
ರಾಗಿಗುಡ್ಡದ ಎಸ್ಸೆಲ್ವಿಯ ರವೆ ಇಡ್ಲಿ ಅಂದ
ಕಾಮಾಕ್ಯದ ’ಮನೆತಿಂಡಿ’ಯ ತೆರೆದ(ಓಪನ್) ದೋಸೆ ಚೆಂದ
ಚಾಮ್ರಾಜ್ ಪೇಟೆಯ ’ಬಿಕೆಬಿ’ಯ ಅಕ್ಕಿ ಇಡ್ಲಿ ಬಲ್ ಮೆದು
ನರಸಿಂಹರಾಜ ಕಾಲೋನಿಯ ಕೊಟ್ಟೂರ್ ಬೆಣ್ಣೆ ಮಸಾಲೆ ಬಲು ಅಂದ
ವಿದ್ಯಾರ್ತಿ ಬವನದ ತುಪ್ಪದ ದೋಸೆ ಚೆಂದ
ಬಸವನಗುಡಿಯ ’ಹಳ್ಳಿತಿಂಡಿ’ಯ ಗಸಗಸೆ ಪಾಯಸ ಬಲ್ ಜೋರು

ಇವೆಲ್ಲಕ್ಕಿಂತ ನಮ್ ಮನೆ ಚಿಬ್ಲು ಇಡ್ಲಿ ಇನ್ನು ಚೆಂದ
ರಾಗಿ ಮುದ್ದೆ ಉಪ್ಪೇಸ್ರು ಬಲು ಮಹದಾನಂದ :)

ಮಂಗಳವಾರ, ಡಿಸೆಂಬರ್ 15, 2009

ಮನೆತಿಂಡಿ -ಕನ್ನಡಿಗರ ತಿಂಡಿ



ಬೆಂಗಳೂರಿನಲ್ಲಿ ದೇವೆಗೌಡ ಪೆಟ್ರೋಲ್ ಬಂಕ್ ಮತ್ತು ಕಾಮಾಕ್ಯ ಸಿನಿಮನೆಗಳ ನಡುವೆ ಈ ’ಮನೆತಿಂಡಿ’ ಹೋಟೆಲು ತಲೆಯೆತ್ತಿದೆ.
ಅಪ್ಪಟ ಕನ್ನಡದ/ಕನ್ನಡಿಗರ ತಿನಿಸುಗಳಾದ ಮನೆ ಉಪ್ಪಿಟ್ಟೂ, ಬೆಣ್ಣೆ ತಟ್ಟೆ ಇಡ್ಲಿ, ಗೋಳಿ ಬಜ್ಜಿ, ಮದ್ದೂರ್ ವಡೆ...ಇನ್ನು ಎಶ್ಟೋಂದು ತಿನಿಸುಗಳು ಸಿಗುತ್ತವೆ. ಹೆಸರಹಲಗೆಯನ್ನ ದೊಡ್ಡದಲ್ಲಿ ಬರೀ ’ಕನ್ನಡ’ದಲ್ಲೆ ಹಾಕಿಸಿ(ಪೋಟೋ ಗಮನಿಸಿ) ಮತ್ತು ’ರುಬ್ಬೋಕಲ್ಲ’ನ್ನೇ ಲೋಗೊ ಮಾಡಿಕೊಂಡು ಅಪ್ಪಟ ಕನ್ನಡ ಸಂಸ್ಕ್ರುತಿಯನ್ನ ಈ ಹೋಟೆಲು ಎತ್ತಿ ಹಿಡಿದಿದೆ ಎಂದು ಹೇಳಿದರೆ ತಪ್ಪಲ್ಲ. ನನಗಂತೂ ತುಂಬ ನಲಿವಾಯಿತು.

ಮನೆತಿಂಡಿ ಸವಿದು ನಾಲಿಗೆಗೆ ಬೆಚ್ಚಗೆ ಮಾಡ್ಕೊಳ್ಳಿ. :)