ಭಾನುವಾರ, ಜನವರಿ 04, 2009

ನವಿರುನೇಸರ

ಎಳೆಯ ನವಿರುನೇಸರ
ಬಾನ ತುಂಬಿದ ಕೆಂಗದಿರ
ಈ ಚೆಲುವ ನೋಡಿದಿರಾ?
ಚಳಿಯಕೊಳೆಯ ನೀಗುವ
ಇಳೆಯಬೆಳೆಗೆ ಉಸಿರು ಕೊಡುವ
ಬೆಳ್ಳಂಬೆಳಿಗ್ಗೆಯ ನಲಿಸುವ ಎಲ್ಲವ

1 ಕಾಮೆಂಟ್‌:

ಖವಿ ಹೇಳಿದರು...

ನಿಮ್ಮ ಕಬ್ಬದಾರಿ ಸರಿಯಾದ ಹಾದಿ ಹಿಡಿಯುತ್ತಿದೆ..
ಇದರಲ್ಲಿ ಬೇಂದ್ರೆ ಕಂಪು ಕಾಣ್ತಾ ಇದೆ.. ಹೀಗೆ ಸಾಗಿದರೆ.. ಮನದೊಳಾಡುವ, ನಲಿಯುವ, ಸದಾ ಗುಂಯ್ಗುಡುವ ಕಬ್ಬ ಬರಲು ಬಹಳ ದಿನ ಇಲ್ಲ..

ನೀವು ಮಾದರಿಯಾಗಿ ತೆಗೆದುಕೊಂಡಿದ್ದು.. ಕುವೆಂಪು ಅವರ ಕವನವೇನೊ ಸರಿ.. ಆದರೆ ಅವರದು ಭೋರ್ಗರೆಯುವ ಪ್ರವಾಹದಂತೆ... ಅದು ನಿಮ್ಮ ಕವನಗಳಲ್ಲಿ ನನಗೆ ಕಾಣಿಸ್ತಿಲ್ಲ... ಆದರೆ ಬೇಂದ್ರೆಯವರದು ಕಲಕಲನೆ ಹರಿಯುವ ತಿಳಿನೀರ ಝರಿಯಂತೆ... ಅದು ಇಲ್ಲಿ ಕಂಡು ಬರುತ್ತಿದೆ...

ಬೇಂದ್ರೆಯವರ ಕವನ ತುಸು ಎಡತಾಕಿ...

ಒಟ್ಟಿನಲ್ಲಿ ಈ ಕಬ್ಬ ನನಗೆ ನಲಿವುಂಟು ಮಾಡಿತು...