ಬುಧವಾರ, ಅಕ್ಟೋಬರ್ 25, 2017

ತಯ್- ತಾಯ್

ಗೆಳೆಯ Mallesh Belavadi Gaviyappa ಅವರು ತಮ್ಮ ಊರಿನ ಬಗ್ಗೆ ಮಾತಾಡುತ್ತಾ 'ಗವಿಯತಯ್ಯನ ಹಾರಯ್ಕೆ' ಎಂಬ ಪದಕಂತೆಯನ್ನು ಬಳಸಿದರು. ಅವರ ಊರಿನಲ್ಲಿ 'ಗವಿಯತಯ್ಯನಿಗೆ' ಗುಡಿ ಕಟ್ಟಲಾಗಿದೆ ಎಂದು ಹೇಳಿದರು.
ಆದರೆ ಅವರು 'ಗವಿಯತಯ್ಯ' ಎಂಬ ಪದದ ಕೊನೆಯಲ್ಲಿ 'ಅಯ್ಯ' ಎಂಬ ಪದವಿದೆ ಎಂದು ಹೇಳಿದರು. ಮೊದಲು ಅದು ಸರಿಯೆನಿಸಿದರೂ ಆಮೇಲೆ ನನಗೆ ಸರಿ ಕಾಣಲಿಲ್ಲ, ಅಲ್ಲದೆ ಬೇರೆ ಏನೊ ಇರಬೇಕೆಂದು ಅನಿಸುತಿತ್ತು. ಯಾಕಂದರೆ,
ಗವಿಯತಯ್ಯ= ಗವಿಯತ+ಅಯ್ಯ
ಎಂದು ಬಿಡಿಸಬೇಕಾಗುತ್ತದೆ. 'ಗವಿಯತ' ಎಂಬುದಕ್ಕೆ ಸರಿಯಾದ ಹುರುಳು ತೋರಲು ಬರುವುದಿಲ್ಲ. ಆದ್ದರಿಂದ
ಗವಿಯ+ತಯ್ಯ = ಗವಿಯತಯ್ಯ
ಎಂದು ಬಿಡಿಸಿ ನೋಡಿದಾಗ 'ತಯ್ಯ' ಎಂಬ ಪದವು ಹೊಮ್ಮಿತು. ತಯ್ಯ ಎಂಬುದು 'ತಯ್' ಎಂಬುದರ ಹೊಸಗನ್ನಡ ರೂಪ ಎಂದು ಹೇಳುವುದಕ್ಕೆ ಅನುವಿದೆ.
ಗವಿಯ+ ತಯ್ = ಗವಿಯತಯ್ ಎಂಬುದೇ ಅದರ ಮೊದಲ ರೂಪವಾಗಿದ್ದು ಆಮೇಲೆ 'ಗವಿಯತಯ್ಯ' ಎಂದಾಗಿರಬಹುದು.
ಇನ್ನು 'ತಯ್' ಎಂಬುದಕ್ಕೆ 'ತಂದೆ' ಎಂಬ ಹುರುಳೇ ಇದೆ. ದಿಟಕ್ಕೂ ತಂದೆ ಎಂಬುದನ್ನು ಬಿಡಿಸಿದರೆ ಸಿಗುವುದು 'ತಯ್'
ತನ್+ತಯ್ = ತನ್-ದಯ್ => ತನ್ದೆ
ತನ್ದೆ ಎಂದರೆ ದಿಟಕ್ಕೂ 'ತನ್ನ ತಯ್'(own father) ಎಂದೇ. ಗವಿಯತಯ್ಯ ಎಂದರೆ ಗವಿಯ ಅಪ್ಪ, ಗವಿಯಪ್ಪ ಎಂಬ ಹುರುಳೇ ಬರುತ್ತದೆ.
ತಯ್ - father
ತಾಯ್ - mother

ಕಾಮೆಂಟ್‌ಗಳಿಲ್ಲ: