ಸೋಮವಾರ, ನವೆಂಬರ್ 30, 2009

ಬರತೇಶನ ವಚನಗಳು

ಅರಿವು
-----
ಅರಿವೇ ಗುರುವೆಂದರು ಶರಣರು
ತನ್ನರಿವಿಲ್ಲದೆ ನಿನ್ನರಿವಿಲ್ಲದೆ
ಬಾಳಹೊಳೆ ಹರಿಯಬಲ್ಲುದೇ ಹೇಳು ಬರತೇಶ


ಅರಿವೊಳಗೆ ಸುಳಿವನ್ನಿತ್ತು
ಪರಿವೇ ಇಲ್ಲದೆ ಪರದಾಡಿಸಿ
ಮತ್ತದೆ ನಿಲುವುಗಳನ್ನು ಎಡತಾಕಿಸಿ
ಮೊತ್ತ ಸೊನ್ನೆಯಾಯಿತಲ್ಲೊ ಬರತೇಶ

ಉಂಕು
-----
ಉಂಕಿಸಿದೇ ಇರಲಾರೆ
ಅಂಕು-ಡೊಂಕುಗಳು ತಿದ್ದಲಾರೆ
ಉಂಕು,ಡೊಂಕುಗಳ ನಡುವಿನ
ಸೋಂಕಿಗೆ ಸಿಕ್ಕಿಕೊಂಡೆ ಕಾಣಾ ಬರತೇಶ

2 ಕಾಮೆಂಟ್‌ಗಳು:

ಸುನಿಲ್ ಜಯಪ್ರಕಾಶ್ ಹೇಳಿದರು...

ಉಂಕೀ ಉಂಕೀ
ಬೆಂಕಿಯ ಮಂಕರಿಯೊಳು ಬಿದ್ದು
ಮಂಕುಬೂದಿಯಾದೆ ಕಾಣಾ ಬರತೇಶ

ಸೀತಾರಾಮ. ಕೆ. / SITARAM.K ಹೇಳಿದರು...

ಅದ್ಭುತವಾದ ಊಕ್ತಿಗಳು.