ಇವತ್ತಿನ ವಿಜಯಕರ್ನಾಟಕದಲ್ಲಿ ಕನ್ನಡ ಲಿಪಿ ಸುದಾರಣೆಗೆ ಮಾನ್ಯ ಚಿದಾನಂದ ಮೂರ್ತಿಯವರಿಂದ ವಿರೋದ ಬಂದಿದೆ. ಅವರ ಪ್ರಕಾರ ನುಡಿಯರಿಮೆ(ಬಾಶಾವಿಗ್ನಾನ)ಯೇ ಬೇರೆ ಲಿಪಿಯೇ ಬೇರೆ. ನುಡಿಯರಿಮೆಯೇ ಓದು ಏತಕ್ಕಾಗಿ ಮಾಡಲಾಗುತ್ತದೆಯಂದರೆ ನುಡಿಯ ಆಳ ಅಗಲಗಳನ್ನು ಅರಿತ ಅದರಿಂದ ದೊರತ ತಿಳಿವುಗಳನ್ನು ಸಮಾಜದಲ್ಲ ಬಳಸಿಕೊಳ್ಳಲು
ಸಾದ್ಯವೇ ಎಂದು ನೋಡಬೇಕಾಗುತ್ತದೆ. ಇದರಿಂದ ಬರಹದಲ್ಲಿ ಕೆಲವು ಮಾರ್ಪುಗಳನ್ನು ತಂದು ಅದರಿಂದ ಕಲಿಕಯನ್ನು ಉತ್ತಮಪಡಿಸಲಾಗುವುದಾದರೆ ನುಡಿಯರಿಮೆಯ ತಿಳವುಗಳನ್ನು ಲಿಪಿ ಸುದಾರಣೆಗ ಏಕೆ ಬಳಸಿಕೊಳ್ಳಬಾರದು? ಕಲಿಕೆ ಮತ್ತು ಅದರಿಂದ ಕಟ್ಟಿಕೊಳ್ಳಬಹುದಾದ ಬದಕನ್ನು ಹಸನು ಮಾಡಬಹುದಾದರೆ ಲಿಪಿ ಸುದಾರಣೇ ಏಕೆ ಬೇಡ? ಹೆಚ್ಚು ಮಂದಿಯ ಕಲಿಕೆಯನ್ನು ಸುಲಬ ಮಾಡುವ ಲಿಪಿ ಸುದಾರಣೆಯಿಂದ ಆಗುವ ಒಳಿತನ್ನು ನೋಡಿದಾಗ 'ಲಿಪಿ ಸಂಸ್ಕ್ರುತಿ'ಯ ಬಗ್ಗೆ ಏಕೆ ತಲೆ ಕೆಡಿಸಿಕೊಳ್ಳಬೇಕು? ಇಶ್ಹ್ಟಕ್ಕೂ ಸಂಸ್ಕ್ರುತಿಯೆಂಬುದು ನಿಂತ ನೀರಲ್ಲ ಹರಿಯುವ ಹೊಳೆ ಇದ್ದ ಹಾಗೆ.
ನುಡಿಯರಿಮೆಯನ್ನು ಓದಿ ನಾವು ಲಿಪಿಯನ್ನು ಸುದಾರಣೆ ಮಾಡಬೇಕು ಎಂದು ತಿಳಿದುಕೊಂಡಿರುವಾಗ ಅದನ್ನು ಆಚರಣೆಗೆ ತರಲು ಏಕೆ ವಿರೋದ? ನುಡಿ ಮತ್ತು ನಡೆಯಲ್ಲಿ ಯಾಕೆ ಈ ಬೇರೆತನ. ಬಸವಣ್ಣನವರೇ ಒಂದು ವಚನದಲ್ಲಿ ಹೇಳಿರುವಂತೆ "ನುಡಿಯೊಳಗಾಗಿ ನಡೆಯದಿದ್ದವರ ಮೆಚ್ಚನಾ ಕೂಡಲಸಂಗಮದೇವ" ಎಂದು ಹೇಳಿಲ್ಲವೆ?
ಬಾಶೆಯ ಬೆಳವಣಿಗೆಯ ದ್ರುಶ್ಟಿಕೋನದಿಂದ ನೋಡಿದರೂ- ಬಾಶೆ ಬೆಳೆಯುವುದು ಹೆಚ್ಚು ಹೆಚ್ಚು ಮಂದಿ ಆ ಬಾಶೆಯ ಬರಹವನ್ನು ಕಲಿತಾಗಲೇ ಅಲ್ಲವೆ? ಲಿಪಿ ಸುದಾರಣೆಯಿಂದ ಕನ್ನಡ ಬರಹವು ಸುಲಬವಾಗುವುದರಿಂದ ಹೆಚ್ಚು ಹೆಚ್ಚು ಮಂದಿ ಚೆನ್ನಾಗಿ ಕನ್ನಡ ಬರಹವನ್ನು ಕಲಿಯಲು ಅನುವಾಗುತ್ತದೆ. ಇದರಿಂದ ಬಾಶೆಯ ಬೆಳವಣಿಗೆ ಕಂಡಿತ ಆಗುತ್ತದೆ.
ಒಂದು ವೇಳೆ ಲಿಪಿ ಸುದಾರಣೆ ಮಾಡದಿದ್ದರೆ ಏನಾಗುತ್ತದೆ ಎಂದು ಯೋಚಿಸಿದರೆ ಎಲ್ಲರು ಕನ್ನಡ ಬರಹವನ್ನು ಚೆನ್ನಾಗಿ ಕಲಿಯಲು ಆಗುವುದಿಲ್ಲ. ಆಗ ಬರಹ ಬಲ್ಲವರು ಮತ್ತು ಬರಹ ಬರದವರು ಎಂಬ ಎರಡು ಗುಂಪುಗಳಾಗಿ ಬರಹಬಲ್ಲವರ ಚಿಂತನೆ ಬರಹಬರದವರ ಚಿಂತನೆಗಿಂತ ಬೇರಾಗಿರುತ್ತದೆ. ಹಾಗಾಗಿ ಸಮಾಜದಲ್ಲಿ ಕಂದಕ ಮೂಡುತ್ತದೆ. ಹೀಗಾಗದಂತೆ ನೋಡಿಕೊಳ್ಳಲು ನಾವು ಲಿಪಿ ಸುದಾರಣೆಗೆ ತೆರೆದುಕೊಳ್ಳಬೇಕಾಗಿದೆ.

4 ಕಾಮೆಂಟ್ಗಳು:
Kannada lipiyannu sudharane andare enu? 'halu' annuva badalu 'aalu' annuvude?
ಸುಧಾರಣೆ ಅಂದ್ರೆ ಏನು ಅಂತ ಹೇಳ್ತೀರಾ? "ಹ", "ಷ", "ಜ್ಞ", "ಋ" ಕಾರಗಳನ್ನು ಮರೆಯುವುದೇ??
ಇದನ್ನೇ ನೀವು ಕನ್ನಡ ಲಿಪಿಯ ಸುಧಾರಣೆ ಎನ್ನುವುದಾದರೆ ಇಂತಹ ಸುಧಾರಣೆಯನ್ನು ಬೆಂಬಲಿಸುವುದು ತಪ್ಪು.
ನಮ್ಮ ಭಾಷೆ ಮತ್ತು ಲಿಪಿಯಲ್ಲಿ "ಹ", "ಷ", "ಜ್ಞ", "ಋ" ಮುಂತಾದ ಅಕ್ಷರಗಳ ಉಪಯೋಗ ಇದೆ. ಇವುಗಳಲ್ಲಿ ಕೆಲವು ತಲುಗು ಮತ್ತು ತಮಿಳಿನಲ್ಲಿ ಇಲ್ಲ. ಅದನ್ನೇ ನೆಪವಾಗಿಟ್ಟುಕೊಂಡು ಲಿಪಿಯ "ಉದ್ಧಾರ" ಮಾಡುವುದು ಬೇಕಿಲ್ಲ. ಇದು ಭಾಷೆಯ ಸೊಗಡು ಮತ್ತು ಅಂದವನ್ನೇ ಕೆಡಿಸುತ್ತದೆ
ಲಿಪಿ ಬದಲಾಯಿಸುವುದರಿಂದಲಾಗಲಿ, ಅಕ್ಷರಗಳಿಗೆ ಕತ್ತರಿ ಹಾಕುವುದರಿಂದಾಗಲಿ, ಭಾಷೆಯ ಸೊಗಡು ಹೆಚ್ಚುವುದೂ ಇಲ್ಲ. ಕಲಿಕೆ ಹೆಚ್ಚುವುದೂ ಇಲ್ಲ. ಅದರ ಬದಲು ನುಡಿಯ ಚರಿತ್ರೆಯನ್ನಷ್ಟು ಅಲ್ಲಗಳೆದಂತಾಗುತ್ತೆ. ಅಷ್ಟೇ.
ಈಗ ಱ , ೞ ಗಳನ್ನು ಬಿಡಲಿಲ್ಲವೇ ಅನ್ನುವ ಪ್ರಶ್ನೆ ನೀವು ಕೇಳುವಿರಿ ಅಂತ ಗೊತ್ತು. ಇದು ಕಳೆದು ೬೦೦ ರಿಂದ ೧೦೦೦ ವರ್ಷ ಆಗಿದೆ. ಅದನ್ನ ಮತ್ತೆ ಅಲ್ಲಗಳೆದು, ಅವುಗಳನ್ನು ಸೇರಿಸುವುದೂ ತೊಡಕಿನ ಸಮಾಚಾರವೇ.
ಅಬ್ಬಾ...!!! ಕನ್ನಡದಲ್ಲಿರೋ ೬೪ (೫೪ ಅಕ್ಷರ + ೧೦ ಅಂಕಿ) ಚಿನ್ಹೆಗಳನ್ನು ನೆನಪಿನಲ್ಲಿಡೋಕ್ಕೆ ಆಗದಿರುವಷ್ಟು ಕರ್ನಾಟಕದ "ಒಂದು ವರ್ಗದ ಜನ" ದಡ್ಡರು ಅಂತ ನಂಬೋದು ಸ್ವಲ್ಪ ಕಷ್ಟನೇ (ನಿಮ್ಮ ನಂಬಿಕೆ ಸತ್ಯಾನಾ ಅಂತ ಆ ವರ್ಗದ ಜನರೇ ಹೇಳಬೇಕು). ಹ್ಮೂಂ, ನಂಬೋಣ ಬಿಡಿ. "ಆ ವರ್ಗ"ದ ಜನರಿಗೆಲ್ಲಾ ಇಂಗ್ಲಿಷ್ ಕಲಿಸಿಬಿಡಿ... ಅಲ್ಲಿ ಇರೋದು ೨೬ರೇ ಅಕ್ಷರ! English akshara upayOgisi kannadana Etara baredre Aytu. bAlA sulabhavAgi kaleebahudu.. alwA? ಸುಮ್ಮನೆ ಸಾವಿರಾರು ವರ್ಷದಿಂದ ಬೆಳೆದು ಬಂದ ಕನ್ನಡದ ಹೆಮ್ಮರೆವನ್ನು ಕಡಿಯುವ ಬದಲು "ಆ ವರ್ಗದ" ಜನಿರಿಗಾಗೇ ಬೇರೇ ಮರ ನೆಟ್ಟರೂ ಆಯಿತು. ಆದ್ರೆ ಆ ಹೊಸ ಮರಕ್ಕೆ ಕನ್ನಡ ಹೆಸರಿಡುವುದು ಬೇಡ. ಮತ್ತೊಂದು ವಿಷಯ, ಆ ಹೊಸ ಮರದ ಮೇಲಿರುವವರಿಗೆ ಕನ್ನಡ ಸಾಹಿತ್ಯ ಓದಲು ಸಾಧ್ಯವಾಗೋದಿಲ್ಲ (ಯಾಕಂದ್ರೆ ಅವರು ಆ ಅಕ್ಷರಗಳನ್ನು ಕಲಿತೇ ಇರೋದಿಲ್ಲ!). ಸರಿ, ಆಮೇಲೆ ಮತ್ತೊಂದು ಘೋಷಣೆ. ಕನ್ನಡದ ಸಾಹಿತ್ಯವನ್ನೆಲ್ಲಾ ಹೊಸ ಭಾಷೆಗೆ ಅನುವಾದ ಮಾಡೋಣ ಅಂತ...
ಬೇಕಾ ಇವೆಲ್ಲಾ? ಮಕ್ಕಳನ್ನ ಶಾಲೆಗೆ ಕಳ್ಸಿದ್ರೆ ಅವು ಯಾವ ವರ್ಗದಿಂದ ಬಂದಿದ್ರೂ ಶಿಕ್ಷಕರು ಕನ್ನಡದ ಎಲ್ಲಾ ಅಕ್ಷರಗಳನ್ನೂ ಕಲಿಸ್ತಾರೆ....
ಕಾಮೆಂಟ್ ಪೋಸ್ಟ್ ಮಾಡಿ