ಭಾನುವಾರ, ಜನವರಿ 02, 2011

ಸಲ್ಮೊಱೆ(ಸಲ್ಮೊರೆ) ಅಂದ್ರೇನು?

ಸಲ್ಮೊಱೆ (ಸಲ್+ಮೊಱೆ) - ?

ನಮ್ಮ ಕಡೆ ಈ ಪದ ಬಳಕೆಯಲ್ಲಿದೆ....ಹಿಂದಿನಿಂದಲೂ, ಹೆಣ್ಣು ಮದುವೆಯಾಗುವಾಗ ಈಗಿರುವ ಸಂಬಂಧದ ಒಳಗೆ ಅಂದರೆ ಸೋದರ ಮಾವನನ್ನೊ ಇಲ್ಲವೆ ಸೋದರಮಾವನ/ಸೋದರತ್ತೆ ಮಗನನ್ನೊ ಮದುಯಾಗುವುದುಂಟು. ಇದಕ್ಕೆ ’ಸಲ್ಮೊರೆ ಸರಿಯಾಗಿದೆ’ ಅಂತ ಹೇಳ್ತಾರೆ ಅಂದರೆ ಅವರಲ್ಲಿ ಅಣ್ಣ-ತಂಗಿಯ ಸಂಬಂಧವಿಲ್ಲ ಗಂಡ-ಹೆಂಡಿರಾಗಬಹುದು ಅಂತ ಅರ್ಥ. ಆದರೆ ಹೆಣ್ಣಿಗೆ/ಗಂಡಿಗೆ ದೂರದ ಸಂಬಂಧದವರ ಜೊತೆ ಮದುವೆಯಾಗುವ ಪ್ರಸಂಗ ಒದಗಿ ಬಂದಾಗ ಇದು ಗೋಜಲಾಗುವುದರಿಂದ ಇದನ್ನ ದೊಡ್ಡವರು ಸರಿಯಾಗಿ ಅನಲೈಸ್ ಮಾಡಿ ಆಮೇಲೆ ’ಸಲ್ಮೊರೆ’ ಸರಿಯಾಗಿದಿಯೊ ಇಲ್ಲವೊ ಅಂತ ಹೇಳ್ತಾರೆ.

ಸಲ್ಲುವ ’ಮೊಱೆ’ಯೇ ಸಲ್ಮೊಱೆ. ಅಂದರೆ ’ಸಲ್ಲುವ ನಂಟು’/ಸಲ್ಲುವ ಸಂಬಂಧ/ಒಪ್ಪತಕ್ಕ ಸಂಬಂಧ ಅಂತ ಅರ್ಥ.
( Ka. moṟe a turn, time, (K.2) propriety, virtue; relationship)

’ಮೊಱೆ’ಯ ಬಳಕೆಗಳು
೧. ಅವನು ಮೊಱೆಯಲ್ಲಿ ನನಗೆ ಮೊಮ್ಮಗನಾದರೂ ನನಗಿಂತ ಹೆಚ್ಚು ಬುದ್ದಿವಂತ.
೨. ನಮ್ಮ ಮೊಱೆಯವರಲ್ಲೇ ನಮ್ಮನ್ನು ಕಂಡರೆ ಹೆಚ್ಚು ಹೊಟ್ಟೆಕಿಚ್ಚು.

ಕಾಮೆಂಟ್‌ಗಳಿಲ್ಲ: