
ನೆನ್ನೆಯ ದಿನ ತುಂಬ ನಲಿವಿನಿಂದ ಕಳೆದೆ, ಯಾಕಂದ್ರೆ ಬಹಳ ದಿನಗಳಿಂದ ತಕಬೇಕು ಅಂದ್ಕೊಂಡಿದ್ದ ಹೊತ್ತಿಗೆಯನ್ನು ತಕೊಂಡಿದ್ದಾಯಿತು, ಸಪ್ನ ಹೊತ್ತಿಗೆಮನೆಗೆ ಹೋಗಿ ’ಕನ್ನಡ ವ್ಯಾಕರಣ ಯಾಕೆ ಬೇಕು?" ಎಂಬ ಹೊತ್ತಿಗೆ ತಗೆದುಕೊಂಡು ಓದಕ್ಕೆ ಸುರು ಮಾಡಿದ್ದಾಯಿತು. ಈ ಹೊತ್ತಿಗೆ, ದೊಡ್ಡವರು ಚಿಕ್ಕವರು ಕನ್ನಡ ವ್ಯಾಕರಣ ತಿಳಿಯುವುದರಿಂದ ಆಗುವ ಬಳಕೆಗಳೇನು ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತದೆ. ಅಲ್ಲದೆ ಯಾವ ತರ ಮಕ್ಕಳಿಗೆ ವ್ಯಾಕರಣ ಕಲಿಸಿದರೆ ಹೆಚ್ಚು ಅನುಕೂಲ ಇವೆಲ್ಲದರ ಬಗ್ಗೆ ಹೊತ್ತಿಗೆಯಲ್ಲಿ ಹೇಳಲ್ಲಾಗಿದೆ. ಕನ್ನಡದ ಮಟ್ಟಿಗೆ ಈ ಹೊತ್ತಿಗೆ ಹೊಸ ತರನಾದದ್ದು ಅನ್ನಬಹುದು.

ಹಾಗೆ ಬರುತ್ತಿರುವಾಗ ನ.ರಾ.ಕಾಲೋನಿಯ ನೆಟ್ಟಕಲ್ಲಪ್ಪ ಸರ್ಕಲ್ ಹತ್ತಿರವೆ ಇರುವ ಶ್ರೀ ಗುರು ಕೊಟ್ಟೊರೇಶ್ವರ ದಾವಣಗೆರೆ ಬೆಣ್ಣೆ ದೋಸೆ ತಿನ್-ಮನೆಗೆ ಹೋಗಿ ಪಡ್ಡು, ಗಿರ್ಮಿಟ್ ಇವುಗಳಿಂದ ನಾಲಿಗೆಯನ್ನು ತಣಿಸಿಕೊಂಡಿದ್ದು ಆಯಿತು. ಇದಲ್ಲದೆ ಅಲ್ಲಿ ಬೆಣ್ಣೆ ದೋಸೆ, ನರ್ಗೀಸ್, ಮಸಾಲೆ ಚಹ, ಮೆಣ್ಸಿನ್ ಕಾಯ್ ಬಜ್ಜಿ ಹಾಗು ಇತರೆ ಬಡಗು ಕರ್ನಾಟಕದ ತಿನಿಸುಗಳು ಸಿಗುತ್ತವೆ.

ಅಲ್ಲಿಂದ ನ.ರಾ.ಕಾಲೋನಿ ಹತ್ತಿರದಲ್ಲೆ ಇರುವ ರಾಮ ಮಂದಿರದ ಹತ್ತಿರವಿರುವ ’ಶ್ರೀನಿವಾಸ ಕಾಪಿ ಸಪ್ಲಯ್ಸ್’ನಲ್ಲಿ ಹಸನಾದ ’ರಾಗಿ ಹುರಿ ಹಿಟ್ಟು’ ತೆಗೆದುಕೊಂಡು ಬಂದು ಬೆಲ್ಲ, ಏಲಕ್ಕಿ ಮತ್ತು ಹಾಲಿನ ಜೊತೆ ಕಲಸಿ.. ಉಂಡೆ ಮಾಡಿ ತಿಂದಾಗ ಹೆನ್ನಲಿವೇ ನಲಿವು.
ಒಟ್ಟಿನಲ್ಲಿ ಕನ್ನಡದ ಓದು, ತಿನಿಸುಗಳು ನನ್ನ ನೆನ್ನೆಯನ್ನು ಸಿರಿವಂತಗೊಳಿಸಿದವು.
1 ಕಾಮೆಂಟ್:
ಇಲ್ಲಿಗೆ ಒಂದು ಸಾರಿ ಭೇಟಿ ನೀಡಬೇಕು ಅನಿಸ್ತಾಯಿದೆ.
ಹೌದು ಇತ್ತೀಚಿಗೆ ಯಾವ ಬರಹವನ್ನು ಬರೆದಿಲ್ಲ ಏಕೆ...
ಕಾಮೆಂಟ್ ಪೋಸ್ಟ್ ಮಾಡಿ