ಹೊಸಗಾಲದ ಮಾನವನ ಕಂಡುಕೊಳ್ಳುವಿಕೆಗಳಲ್ಲಿ ಬಲು ಅರಿದಾದುದು ಈ ಮಂದಿಯಾಳ್ವಿಕೆ. ಹಲವಾರು ವರುಶಗಳಿಂದ ಮಾನವನು ಪರಿಸರದ ಕಟ್ಟಲೆಯನ್ನೇ ಒಪ್ಪಿಕೊಂಡು ತನ್ನ ಬದುಕನ್ನು ಸಾಗಿಸುತ್ತಿದ್ದ. ಆಮೇಲೆ ಕಾರಣಾಂತರಗಳಿಂದ ಅರಸರಾಳ್ವಿಕೆಯನ್ನು ಒಪ್ಪಿಕೊಳ್ಳಬೇಕಾಯಿತು. ಈಗ ಮಂದಿಯಾಳ್ವಿಕೆಯ ಹೊತ್ತು ಬಂದು ನಿಂತಿದೆ. ಹಾಗಾದರೆ ಪರಿಸರದ ಕಟ್ಟಲೆ, ಅರಸರ ಕಟ್ಟಲೆ ಇವನ್ನೆಲ್ಲ ತೊರೆದು ಮಂದಿಯಾಳ್ವಿಕೆಗೇ ಯಾಕೆ ಮಾನವ ಬಂದು ನಿಂತಿದ್ದಾನೆ? ಮಂದಿಯಾಳ್ವಿಕೆಗೂ ಮುಂಚೆ ಇದ್ದ ಏರ್ಪಾಟುಗಳಲ್ಲಿ ಇದ್ದ ಕೊರತೆಗಳೇನು ಎಂಬುದನ್ನು ಇಲ್ಲಿ ಅರಿತುಕೊಳ್ಳಬೇಕಾಗುತ್ತದೆ.
ಮಾನವನನ್ನೇ ಎತ್ತುಗೆಯಾಗಿ ತೆಗೆದುಕೊಂಡರೆ, ಪರಿಸರದ ಕಟ್ಟಲೆಯಲ್ಲಿ ಸಾಟಿತನ ಇಲ್ಲವಾಗಿದೆ ಯಾಕಂದರೆ ಕೆಲವರು ಹುಟ್ಟಿನಿಂದಲೇ ಒಳ್ಳೆಯ ಮಯ್ ಕಟ್ಟನ್ನು ಪಡೆದುಕೊಂಡಿರುತ್ತಾರೆ; ಕೆಲವರು ಪಡೆದುಕೊಂಡಿರುವುದಿಲ್ಲ. ಇನ್ನು ಕೆಲವರು ಹುಟ್ಟಿನಿಂದಲೇ ಹೆಚ್ಚು ಬುದ್ದಿಶಕ್ತಿಯನ್ನು ಇಲ್ಲವೆ ಸಿರಿತನವನ್ನು ಹೊಂದಿರುತ್ತಾರೆ. ಹಾಗಾಗಿ ಮಯ್ಕಟ್ಟನ್ನು ಹೊಂದಿರುವವರು ಇಲ್ಲವೆ ಬುದ್ದಿಶಕ್ತಿಯನ್ನು ಹೊಂದಿರುವವರು ಇಲ್ಲದಿರುವವರಗಿಂತ ಮುಂದಿರುತ್ತಾರೆ. ಹಾಗಾಗಿ ಪರಿಸರದ ಕಟ್ಟಲೆಯಲ್ಲಿ ಒಬ್ಬರು ಇನ್ನೊಬ್ಬರ ಮೇಲೆ ದಬ್ಬಾಳಿಕೆ ನಡೆಸಬಹುದಾಗಿದೆ ಅಂದರೆ ಇಲ್ಲದವರು ಇರುವವರ ಅಡಿಯಾಳಾಗಿ ಬದುಕಬೇಕಾಗುತ್ತದೆ. ಪರಿಸರದ ಕಟ್ಟಲೆಯಲ್ಲಿ ಇಲ್ಲವೆ ಅರಸರ ಆಳ್ವಿಕೆಯಲ್ಲಿ ಇದು ಎಶ್ಟರ ಮಟ್ಟಿಗೆ ಹೋಗಿತ್ತೆಂದರೆ ಇಲ್ಲದವರು ಇರುವವರ ಅಡಿಯಾಳಾಗಿ ಇರುವುದೇ ಅವರ ದರ್ಮ ಎಂದು ಹೇಳಲಾಗುತ್ತಿತ್ತು!! ಹಾಗಾಗಿ ಇಲ್ಲದವರ ಪಾಡು ಹೇಳತೀರದಾಗಿತ್ತು.
ಮೇಲಿನಿಂದ ತಿಳಿಯುವುದೇನೆಂದರೆ ಪರಿಸರದಾಳ್ವಿಕೆಯಾಗಲಿ , ಅರಸರಾಳ್ವಿಕೆಯಾಗಲಿ ತುಂಬು ಸಾಟಿತನಕ್ಕೆ ಇಂಬು ಕೊಡುವುದಿಲ್ಲ. ಇದೇ ಈ ಏರ್ಪಾಟುಗಳ ಬಲು ದೊಡ್ಡ ಕೊರತೆ. ತುಂಬು ಸಾಟಿತನವಿಲ್ಲದಿದ್ದರೆ ಅಲ್ಲಿ ಇಲ್ಲದವರು ಗವ್ರವದ ಬದುಕನ್ನು ಬಾಳಲಾಗುವುದಿಲ್ಲ. ಹಾಗಾದರೆ ಮಂದಿಯಾಳ್ವಿಕೆ ತುಂಬು ಸಾಟಿತನವನ್ನು ನೀಡುವುದೇ ಎಂಬ ಕೇಳ್ವಿಯು ಮುಂದೆ ಬರುವುದು. ಮಂದಿಯಾಳ್ವಿಕೆ ತುಂಬು ಸಾಟಿತನವನ್ನು ನೀಡದಿದ್ದರು ಆ ಕಡೆಗೆ ಒಂದು ದೊಡ್ಡ ಹೆಜ್ಜೆಯನ್ನು ಇಡುತ್ತದೆ. ಆ ಹೆಜ್ಜೆಯ ನೆರವಿನಿಂದ ಮಂದಿಯಾಳ್ವಿಕೆಯೆಂಬ ಏರ್ಪಾಟನ್ನು ಸರಿಪಡಿಸಿಕೊಳ್ಳುತ್ತಾ ತುಂಬು ಸಾಟಿತನವನ್ನು ಪಡೆಯುವುದು ಹೊಸಗಾಲದ ಮಾನವನ ಮೇಲಿರುವ ಹೊಣೆಯಾಗಿದೆ. ಹಾಗಾಗಿ ಮಾನವ ಸಾಟಿತನವನ್ನು ಅರಸುತ್ತಾ ಇಂದು ಮಂದಿಯಾಳ್ವಿಕೆಯ ಹೊಸ್ತಿಲಲ್ಲಿ ಬಂದು ನಿಂತಿದ್ದಾನೆ. ಹೀಗೆ ಮಂದಿಯಾಳ್ವಿಕೆಗೆ ಬಂದು ನಿಂತಿರುವುದನ್ನು ನೋಡಿದರೆ ಮಾನವ ಹೆಚ್ಚು ಹೆಚ್ಚು ಮಾನವೀಯತೆಯನ್ನು ಮಯ್ಗೂಡಿಸಿಕೊಳ್ಳಬೇಕೆಂಬ ಹುರುಪು ತೋರುತ್ತಿದ್ದಾನೆ ಎಂದು ತಿಳಿಯಬಹುದು.
ಮಂದಿಯಾಳ್ವಿಕೆಯಿಂದ ಎಲ್ಲ ಬಗೆಯ ಮನುಶ್ಯರಿಗೂ ಸಮನಾದ ಗಳಿಕೆಯಿದೆ. ಅವುಗಳೇನೆಂದರೆ
೧. ಹುಟ್ಟಿನಿಂದ ಏನೇ ಪಡೆದುಕೊಂಡರೂ ಎಲ್ಲರಿಗೂ ಒಂದೇ ಮಟ್ಟದ ಸಾಟಿತನ
೨. ಮಂದಿಯೊಲವಿಗೆ ಮನ್ನಣೆ
೩. ಹಲತನಕ್ಕೆ ಮನ್ನಣೆ ಮತ್ತು ಅವುಗಳ ನಡುವೆ ಹೊಂದಾಣಿಕೆಗೆ ಒತ್ತು
೪. ಎಲ್ಲರಿಗೂ ಬೇರು ಮಟ್ಟದ ಈಳಿಗೆ(ಸ್ವಾತಂತ್ರ್ಯ) ಮತ್ತು ಹಕ್ಕುಗಳು ಎತ್ತುಗೆಗೆ: ಯಾವ ಹೆದರಿಕೆಯಿಲ್ಲದೆ ಮಾತನಾಡುವ ಹಕ್ಕು
೫. ಯಾರೇ ಆದರೂ ನೆಮ್ಮದಿಯ ಮೂಲಕ ಮಂದಿಯ ಒಳಿತಿಗೆ ಕೂಡಣದಲ್ಲಿ ಮರ್ಪಾಟುಗಳನ್ನು ತರಬಹುದಾದ ಹಕ್ಕು
ಮಂದಿಯಾಳ್ವಿಕೆ ಹಿಂದಿದ್ದ ಏರ್ಪಾಟುಗಳಲ್ಲಿರುವ ಕೊರತೆಯನ್ನು ನೀಗಿಸುವ ಬರವಸೆಯನ್ನು ತೋರುತ್ತದೆ. ಮಂದಿಯಾಳ್ವಿಕೆಗಿಂತ ಚೆನ್ನಾಗಿರುವ ಏರ್ಪಾಟು ಸದ್ಯಕ್ಕಂತು ಕಾಣುತ್ತಿಲ್ಲ. ಮಂದಿಯಾಳ್ವಿಕೆಯ ಏರ್ಪಾಟನ್ನು ಗಟ್ಟಿಗೊಳಿಸುವುದರ ಮೂಲಕ ಎಲ್ಲರ ಹಿತವನ್ನು ಕಾಪಾಡಬಹುದಾಗಿದೆ. ಹಾಗಾಗಿ ಮಂದಿಯಾಳ್ವಿಕೆಗೆ ಬೆಲೆ ಕೊಡಬೇಕು ಮತ್ತು ಮಂದಿಯಾಳ್ವಿಕೆ ಎಂದರೆ ಅಯ್ದು ವರುಶಕ್ಕೊಮ್ಮೆ ವೋಟು ಕೊಟ್ಟು ಸುಮ್ಮನೆ ಕೂತುಕೊಳ್ಳುವುದಲ್ಲ, ಬದಲಾಗಿ ಮಂದಿಯಾಳ್ವಿಕೆಯ ಚಿಂತನೆಗಳನ್ನು ತಮ್ಮ ದಯ್ನಂದಿನ ಕೆಲಸಗಳಲ್ಲಿ ಜಾರಿಗೆ ತರಬೇಕು.
ಹೆಚ್ಚಿನ ಓದಿಗೆ ಈ ಕೆಳಗಿನ ಹೊತ್ತಗೆಯನ್ನು ಓದಬಹುದು:-
Democracy: 80 Questions and Answers - David Beetham & Kevin Boyle, National Book Trust, India

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ