ಶನಿವಾರ, ಫೆಬ್ರವರಿ 21, 2009

ಇಂದು ತಾಯ್ನುಡಿ ನಾಳು - ೨೧ ಪೆಬ್ರವರಿ ೨೦೦೯


ಇಂದು ಹಲವು ತಾಯಿನುಡಿಗಳು/ಆಡುನುಡಿಗಳು ಕಣ್ಮರೆ ಆಗಿವೆ/ಆಗುತ್ತಿವೆ. ಇದಕ್ಕೆ ಕೆಲವು ಅಂತೆ ಹೇಳುವ 'ದೊಡ್ಡ'(ಶಿಶ್ಟ) ನುಡಿಗಳು ಓಸುಗರವಾಗಿದೆ.
ಯುನೆಸ್ಕೊ ಇದರ ಬಗ್ಗೆ ಒಂದು ಬರಹ ಹೊರತಂದಿದೆ. ಇಲ್ಲಿಂದ ಪಿಡಿಎಪ್ ಅನ್ನು ಇಳಿಸಿ ನಮ್ಮ ನಾಡಿನಲ್ಲಿ ಕಾಣೆಯಾಗುತ್ತಿರುವ ನುಡಿಗಳ ಬಗ್ಗೆ ತಿಳಿದುಕೊಳ್ಳಬಹುದು.



ಅಲ್ಲಿ ಕೊಟ್ಟಿರುವಂತೆ ನಮ್ಮ ಕನ್ನಡನಾಡಿನಲ್ಲಿರುವ ಕೆಲವು ನುಡಿಗಳು ಇವೆ.
೧. ಕುರುಬ
೨. ಇರುಳ
೩. ತೋಡ (ಊಟಿ ಗುಡ್ಡ ಗಾಡಿನ ನುಡಿ)
೪. ಕೋಟ
೫. ತುಳು
೬. ಕೊಡಗು
೭. ಕೊರಗ
೮. ಬಳ್ಳಾರಿ ( ಈ ತೆರ ನುಡಿ ಇದೆ ಎಂದು ತಿಳಿದಿರಲಿಲ್ಲ)
೯. ಬಡಗ (ಊಟಿ ಗುಡ್ಡಗಾಡಿನ ನುಡಿ)

ಇದರಲ್ಲಿ ಯುನೆಸ್ಕೊದವರು ಹೇಳಿರುವಂತೆ ಕೇವಲ ಕೊಲೊನಿಯಲ್ ನುಡಿಗಳಾದ ಇಂಗಳೀಸ್,ಪ್ರೆಂಚ್,ಸ್ಪಾನಿಶ್ ನುಡಿಗಳು ಇತರೆ ನುಡಿಗಳನ್ನು ನುಂಗಿ ಹಾಕಿದೆ ಎಂದು ಹೇಳಲಾಗುವುದಿಲ್ಲ . ಇದಕ್ಕೆ ಹಲವು ಓಸುಗರಗಳು ಇದ್ದಿರಬೇಕು ಎಂದು ಆಸ್ಟ್ರೇಲಿಯಾದ ಒಬ್ಬ ನುಡಿಯರಿಗರು ಹೇಳಿದ್ದಾರೆ. ಇವುಗಳನ್ನು ಹುಡುಕುವುದೆ ಈ ಯುನೆಸ್ಕೊದವರು ಹಾಕಿಕೊಂಡಿರುವ ಕೆಲಸಗಳು. ಅವುಗಳಲ್ಲಿ ಕೆಲವು ನುಡಿಗಳು ಹಾಳಾಗುವ ಅಂಚಿನಲ್ಲಿವೆ. ಇನ್ನು ಕೆಲವು ಕೆಡುಕಿನ ಹಾದಿಯಲ್ಲಿವೆ. ಇವುಗಳಲ್ಲಿ ಕೊಡಗು, ತುಳು ಗಳ ಅಶ್ಟು ಹದಗೆಟ್ಟಿಲ್ಲ. ಆದರೆ ಇತರೆ ನುಡಿಗಳು ಮಾಡರನಯ್ಸೇಶನ್ ಹೊಳೆಯಲ್ಲಿ ಕೊಚ್ಚುವೋಗುತ್ತಿವೆ.

ಇವಲ್ಲದೆ ಆಂದ್ರ, ಬಿಹಾರ, ಒರಿಸ್ಸಾದ ಹಲವು ಗುಡ್ಡಗಾಡು ನುಡಿಗಳು ಮತ್ತು ಪಾಕಿಸ್ತಾನದಲ್ಲಿರುವ ಒಂದೇ ಒಂದು ದ್ರಾವಿಡ ನುಡಿ ಬ್ರಹೂಯಿ ಕೂಡ ಕೆಡುಕಿನ ದಾರಿ ಹಿಡಿದಿವೆ.

ಕೊನೆಯದಾಗಿ, ಯಾವುದೇ ನುಡಿ ಹಲವು ಗುಟ್ಟುಗಳನ್ನು ತನ್ನೊಳಗೆ ಮತ್ತು ಕೆಲವು ನಡಾವಳಿಗೆ, ಪರಿಸರಕ್ಕೆ ಹತ್ತಿರವಾದ ವಿಶಯಗಳನ್ನು ಅಡಗಿಸಿಕೊಂಡಿರುತ್ತವೆ. ಒಂದು ನುಡಿ ಸತ್ತರೆ ಅದರ ಜೊತೆಗಿರುವ ನಡಾವಳಿ, ಗುಟ್ಟುಗಳು, ಮನಕೆದುಕುವ ಹುರುಪಿನ ಸಂಗತಿಗಳು ಸತ್ತಂತೆ.

ಎಲ್ಲ ನುಡಿಗಳು ಬಾಳಿ ಬದುಕಲಿ ಎಂದು ನಂಬಿ ಬಯ್ಸೋಣ.

3 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಕುರುಬ,ಇರುಳ, ತೋಡ, ಕೋಟ, ಕೊರಗ, ಬಲ್ಲಾರಿ, ಬಡಗ

ಇವಿಷ್ಟು ಕರ್ನಾಟಕದಲ್ಲಿಲ್ಲ. ಇವು ತಮಿಳಿಂದ ಅಳಿವು ಕಾಣುತ್ತಿವೆ.

ತುಳು ಇದಿನ್ನೂ Endangered ಆಗಿಲ್ಲ

ಕೊಡಗು, ಇದೂ ಒಂದು ಕನ್ನಡವೇ. ಇವರ ಜನಸಂಖ್ಯೆ/ಮಂದಿಯೆಣಿಕೆ ಹೆಚ್ಚಿದೆ.

ಅನಾಮಧೇಯ ಹೇಳಿದರು...

ಮಾಯ್ಸ ರವರೇ,

ಕೊರಗ ಭಾಷೆ ಕರ್ನಾಟಕದಲ್ಲೇ ಇರೋದು.. ಇದು ತುಳುವಿನ ಉಪಭಾಷೆ ಎನ್ನಬಹುದು. ಕೊರಗರ ಆಡುಮಾತು.

ಹರಿಜೋಗಿ

ಖವಿ ಹೇಳಿದರು...

ಕುರುಬ ಇದು ತಮಿಳಿನದೆ? ಗೊತ್ತಿಲ್ಲ.. ಇದು ಕುರುಬ ಜನಾಂಗದ ನುಡಿಯೇ? ಆದರೆ ನಮ್ಮ ಕನ್ನಡ ನಾಡಿನ ಕುರುಬರು ಕನ್ನಡದಲ್ಲೇ ಮಾತಾಡೋದು.. ಅವರಿಗೆ ಕುರುಬ ಅನ್ನೋ ನುಡಿ ಇದೆ ಅಂತಾನು ಗೊತ್ತಿಲ್ಲ..